Homeಮುಖಪುಟಬುಲ್ಲಿ ಬಾಯ್ ವಿವಾದ: ಎಸಗಿದ ಕೃತ್ಯಕ್ಕೆ ಯಾವುದೇ ಪಶ್ಚಾತಾಪ ವ್ಯಕ್ತಪಡಿಸದ ಆರೋಪಿ- ಮೂಲಗಳು

ಬುಲ್ಲಿ ಬಾಯ್ ವಿವಾದ: ಎಸಗಿದ ಕೃತ್ಯಕ್ಕೆ ಯಾವುದೇ ಪಶ್ಚಾತಾಪ ವ್ಯಕ್ತಪಡಿಸದ ಆರೋಪಿ- ಮೂಲಗಳು

- Advertisement -
- Advertisement -

ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಲು ಬಳಸುತ್ತಿದ್ದ ‘ಬುಲ್ಲಿ ಬಾಯ್‌’ ಆ್ಯಪ್‌ನ ಹಿಂದಿನ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಪೊಲೀಸ್ ವಿಚಾರಣೆ ವೇಳೆ ತಾನು ಮಾಡಿರುವ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ತಾನು ಮಾಡಿರುವುದು ಸರಿಯಾಗಿದೆ ಎಂದು ಭಾವಿಸಿದ್ದಾರೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

21 ವರ್ಷದ ಆರೋಪಿ ನೀರಜ್ ಬಿಷ್ಣೋಯ್, ಭೋಪಾಲ್‌ನ ಇನ್‌ಸ್ಟಿಟ್ಯೂಟ್‌ನಲ್ಲಿ ಎರಡನೇ ವರ್ಷದ ಬಿಟೆಕ್ ವಿದ್ಯಾರ್ಥಿಯಾಗಿದ್ದು, ದೆಹಲಿ ಪೊಲೀಸರು ಗುರುವಾರ (ಜ.6) ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ  21 ವರ್ಷದ ವಿದ್ಯಾರ್ಥಿ ಮಯಾಂಕ್ ರಾವಲ್, 19 ವರ್ಷದ ಶ್ವೇತಾ ಸಿಂಗ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ಎಂಬುವವರನ್ನು ಬಂಧಿಸಲಾಗಿದೆ. 

ಮೈಕ್ರೋಸಾಫ್ಟ್ ಒಡೆತನದ ಗಿಟ್‌ಹಬ್‌ನಲ್ಲಿ ಹೋಸ್ಟ್ ಮಾಡಲಾದ ಬುಲ್ಲಿ ಬಾಯ್‌ ಅಪ್ಲಿಕೇಶನ್ ರಚಿಸಲು ಬಳಸಿದ ಸಾಧನವನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿಸಿದ ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೂಲದ ಯುವಕನ ಬಂಧನ: ಏನಿದು ಬುಲ್ಲಿ ಬಾಯ್ ಪ್ರಕರಣ?

ಇನ್ನು ಆರೋಪಿ ಬಿಷ್ಣೋಯ್ ರಚಿಸಿದ ಟ್ವಿಟರ್ ಹ್ಯಾಂಡಲ್‌ನನ್ನು ಡಿಜಿಟಲ್ ಕಣ್ಗಾವಲು ಮೂಲಕ ಪತ್ತೆಹಚ್ಚಲಾಗಿದ್ದು ಖಾತೆಯನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಮುಂಬೈ ಪೊಲೀಸರನ್ನು ಅಪಹಾಸ್ಯ ಮಾಡಲು ಬಳಸಿದ @giyu44 ಟ್ವಿಟರ್‌ ಹ್ಯಾಂಡಲ್ ಅನ್ನು ಸಹ ಬಿಷ್ಣೋಯ್ ರಚಿಸಿದ್ದರು. ಅದರಲ್ಲಿ ಮುಂಬೈ ಪೊಲೀಸರನ್ನು “ಸ್ಲಂಬೈ ಪೋಲೀಸ್” ಎಂದು ಉಲ್ಲೇಖಿಸಿದ್ದರು.

ಏನಿದು ಬುಲ್ಲಿ ಬಾಯ್..?

ಗಿಟ್ ಹಬ್ ಪ್ಲಾಟ್‌ಫಾರ್ಮ್ ಮೂಲಕ ರಚನೆಗೊಂಡ ಮೊಬೈಲ್ ಅಪ್ ಬುಲ್ಲಿ ಬಾಯ್. ಇದರಲ್ಲಿ ದುಷ್ಕರ್ಮಿಗಳು ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಅಸಭ್ಯ ಕಮೆಂಟ್‌ಗಳನ್ನು ಮಾಡಲಾಗುತ್ತಿತ್ತು. ಅಲ್ಲದೆ ಬೇರೆಯವರು ಸಹ ಇದೇ ಮಾಡುವಂತೆ ಪ್ರಚೋದನೆ ನೀಡಲಾಗುತ್ತಿತ್ತು. ಆ ಮೂಲಕ ಟ್ವಿಟರ್‌ನಲ್ಲಿ #BulliBai ಎಂಬ ಹ್ಯಾಷ್ ಟ್ಯಾಗ್‌ ಅನ್ನು ಟ್ರೆಂಡಿಂಗ್ ಮಾಡಲಾಗುತ್ತಿತ್ತು. ಈ ಮುಂಚೆ ಸುಲ್ಲಿ ಡೀಲ್ ಎಂಬ ಆಪ್ ಮೂಲಕ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂಬ ಕಮೆಂಟ್ ಮಾಡುವು ಮೂಲಕ ಅವಮಾನ ಮಾಡಲಾಗುತ್ತಿತ್ತು. ಕೆಲವೊಮ್ಮೆ ಧಾರ್ಮಿಕವಾಗಿ ಹೀಯಾಳಿಸಲು ಇದನ್ನು ಬಳಸಿಕೊಳ್ಳಲಾಗಿತ್ತು. ಅದೇ ರೀತಿ ಬುಲ್ಲಿ ಬಾಯ್ ನಲ್ಲಿಯೂ ಕೂಡ 100 ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಪ್ರಕಟಿಸಿ ಮಾರಾಟಕ್ಕಿದ್ದಾರೆ ಎಂದು ಪ್ರಕಟಿಸಿದಾಗ ಅದರಲ್ಲಿ ಒಬ್ಬ ಖ್ಯಾತ ಮುಸ್ಲಿಂ ಪತ್ರಕರ್ತೆಯ ಫೋಟೊ ಸಹ ಪ್ರಕಟಿಸಲಾಗಿತ್ತು. ಇಂದಿನ ನಿಮ್ಮ ಬುಲ್ಲಿ ಬಾಯ್ ಇವರು ಎಂದು ಮಹಿಳೆಯರ ಫೋಟೊಗಳನ್ನು ಅಪ್‌ಲೋಡ್ ಮಾಡಿ ಅದರ ಕೆಳಗೆ ಹರಾಜಿಗಿಡಲಾಗಿದೆ ಎಂದು ಬರೆದು ವಿಕೃತಿ ಮೆರೆಯಲಾಗುತ್ತಿತ್ತು. ಪತ್ರಕರ್ತರೊಬ್ಬರು ದೆಹಲಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು.


ಇದನ್ನೂ ಓದಿ: ’ಬುಲ್ಲಿ ಬಾಯ್’ ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಬಂಧನ: ದೆಹಲಿ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...