ದೇಶದ 14 ರಾಜ್ಯಗಳ 30 ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ವಿಧಾನಸಭಾ ಉಪಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಈ ಫಲಿತಾಂಶಗಳನ್ನು ಪಕ್ಷವಾರು ಆಧಾರಲ್ಲಿ ನೋಡಿದರೆ ಮೂವತ್ತು ಸ್ಥಾನಗಳಲ್ಲಿ ಅತೀ ದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರ ಹೊಮ್ಮಿದೆ. ಅದು 8 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಜೆಪಿಗೆ ಏಳು ಸ್ಥಾನಗಳು ದಕ್ಕಿದರೆ, ಪಶ್ಚಿಮ ಬಂಗಾಳದಲ್ಲಿ ಎಲ್ಲಾ ನಾಲ್ಕು ಸ್ಥಾನಗಳು ಟಿಎಂಸಿಯ ಪಾಲಾಗಿದೆ.
ಒಟ್ಟು ಉಪಚುನಾವಣೆಯ ಫಲಿತಾಂಶ ಹೀಗಿದೆ
1. ಆಂಧ್ರಪ್ರದೇಶ
ಬದ್ವೇಲ್ ಕ್ಷೇತ್ರ – ವೈಎಸ್‌ಆರ್ ಕಾಂಗ್ರೆಸ್
ಕ್ಷೇತ್ರವು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿತ್ತು. ಉಪಚುನಾವಣೆಯಲ್ಲಿ ತನ್ನಲ್ಲೇ ಉಳಿಸಿಕೊಂಡಿದೆ.
2. ಅಸ್ಸಾಂ
ಭನಾನಿಪುರ್ – ಬಿಜೆಪಿ
ಗೋಸಾಯಿಗಾಂವ್ – ಯುಪಿಪಿಎಲ್ – (ಬಿಜೆಪಿ ಮೈತ್ರಿ ಪಕ್ಷ)
ಮರಿಯಾನಿ – ಬಿಜೆಪಿ
ತಮುಲ್‌ಪುರ್ – ಯುಪಿಪಿಎಲ್ – (ಬಿಜೆಪಿ ಮೈತ್ರಿ ಪಕ್ಷ)
ಥೌರಾ – ಬಿಜೆಪಿ
ಬಿಜೆಪಿ ಗೆದ್ದ ಮೂರು ಕ್ಷೇತ್ರಗಳಲ್ಲಿ ಎರಡು ಕಾಂಗ್ರೆಸ್‌ನ ಹಿಡಿತದಲ್ಲಿದ್ದ ಕ್ಷೇತ್ರಗಳಾಗಿದ್ದು, ಒಂದು ಕ್ಷೇತ್ರ AIUDF ಹಿಡಿತದಲ್ಲಿದ್ದವು. ಯುಪಿಪಿಎಲ್ ಗೆದ್ದ ಎರಡು ಕ್ಷೇತ್ರಗಳಲ್ಲಿ ಒಂದು ತನ್ನದೇ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಮತ್ತೊಂದನ್ನು ಬೇರೆ ಪಕ್ಷದಿಂದ ತನ್ನ ತೆಕ್ಕೆಗೆ ಪಡೆದು ಕೊಂಡಿದೆ.
ಇದನ್ನೂ ಓದಿ: ನಾನೇಕೆ ಆರ್ ಎಸ್ ಎಸ್ ತೊರೆದೆ ಸರಣಿ; ದೇಶಕ್ಕಾಗಿ ಸಂಘದ ಸಖ್ಯ ಬಿಟ್ಟೆ!
3. ಬಿಹಾರ
ಕುಶೇಶ್ವರ ಆಸ್ಥಾನ – JDU
ತಾರಾಪುರ – JDU
ಕುಶೇಶ್ವರ ಆಸ್ಥಾನ ಮತ್ತು ತಾರಾಪುರದಲ್ಲಿ ಕ್ಷೇತ್ರಗಳಲ್ಲಿ ಜೆಡಿಯು ತನ್ನ ಸ್ಥಾನ ಉಳಿಸಿಕೊಂಡಿದೆ.
4. ಹರಿಯಾಣ
ಎಲ್ಲೇನಾಬಾದ್ – INLD ತನ್ನದೇ ಕ್ಷೇತ್ರವನ್ನು ಮತ್ತೇ ಗೆದ್ದುಕೊಂಡಿದೆ.
5. ಹಿಮಾಚಲ ಪ್ರದೇಶ
ಅರ್ಕಿ – ಕಾಂಗ್ರೆಸ್
ಫತೇಪುರ್ – ಕಾಂಗ್ರೆಸ್
ಜುಟ್ಟಬ್ – ಕಾಂಗ್ರೆಸ್
ಅರ್ಕಿ ಮತ್ತು ಫೆತೇಪುರ್‌ನಲ್ಲಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದರೆ, ಜುಟ್ಟಬ್‌ನಲ್ಲಿ ಹೊಸದಾಗಿ ಕ್ಷೇತ್ರವನ್ನು ಗೆದ್ದುಕೊಂಡಿದೆ.
6. ಕರ್ನಾಟಕ
ಹಾನಗಲ್ – ಕಾಂಗ್ರೆಸ್
ಸಿಂದಗಿ – ಬಿಜೆಪಿ
ಕರ್ನಾಟಕದಲ್ಲಿ ಬಿಜೆಪಿ ವಶದಲ್ಲಿ ಇದ್ದ ಹಾನಗಲ್ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಂಡರೆ, ಜೆಡಿಎಸ್ ವಶದಲ್ಲಿದ್ದ ಸಿಂದಗಿಯನ್ನು ಬಿಜೆಪಿ ಗೆದ್ದುಕೊಂಡಿದೆ.
7. ಮಧ್ಯಪ್ರದೇಶ
ಜೋಬತ್ – ಬಿಜೆಪಿ
ಪೃಥ್ವಿಪುರ – ಬಿಜೆಪಿ
ರಾಯಗಾಂವ್ – ಕಾಂಗ್ರೆಸ್
ಜೋಬತ್ ಮತ್ತು ಪೃಥ್ವಿಪುರ ಕ್ಷೇತ್ರವನ್ನು ಬಿಜೆಪಿ ಬೇರೆ ಪಕ್ಷದಿಂದ ವಶಪಡಿಸಿಕೊಂಡರೆ, ಕಾಂಗ್ರೆಸ್ ರಾಯಗಾಂವ್ ಕ್ಷೇತ್ರವನ್ನು ಅನ್ನು ಹೊಸದಾಗಿ ಗೆದ್ದುಕೊಂಡಿದೆ.
8. ಮಹಾರಾಷ್ಟ್ರ
ದೆಗ್ಲೂರ್ – ಕಾಂಗ್ರೆಸ್
ಈ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿದೆ.
9. ಮೇಘಾಲಯ
ಮಾವ್‌ಫ್ಲಾಂಗ್ – ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ
ಮೌರಿಂಗ್‌ಕೆಂಗ್ – ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ
ರಾಜಬಾಲಾ – ನ್ಯಾಶನಲ್ ಪೀಪಲ್ಸ್ ಪಾರ್ಟಿ
10. ಮಿಜೋರಾಂ
ಟುಯಿರಿಯಲ್ – ಮಿಜೋ ನ್ಯಾಶನಲ್ ಫ್ರಂಟ್
ಬೇರೆ ಪಕ್ಷದಿಂದ ಕ್ಷೇತ್ರವನ್ನು ಗೆದ್ದುಕೊಂಡಿದೆ.
11. ನಾಗಾಲ್ಯಾಂಡ್
ಶಮ್ಟೋರ್ – ನ್ಯಾಶನಲಿಸ್ಟಿಕ್ ಡೆಮಾಕ್ರಟಿಕ್ ಪ್ರೊಗ್ರೇಸಿವ್ ಪಾರ್ಟಿ
ಅವಿರೋಧ ಆಯ್ಕೆ!
12. ರಾಜಸ್ಥಾನ
ಧರಿಯಾವಾಡ – ಕಾಂಗ್ರೆಸ್
ವಲ್ಲಭನಗರ – ಕಾಂಗ್ರೆಸ್
ಇಲ್ಲಿ ಕಾಂಗ್ರೆಸ್ ಒಂದು ತನ್ನದೇ ಕ್ಷೇತ್ರನ್ನು ಉಳಿಸಿಕೊಂಡು, ಮತ್ತೊಂದು ಕ್ಷೇತ್ರವನ್ನು ಬೇರೆ ಪಕ್ಷದಿಂದ ವಶಕ್ಕೆ ಪಡೆದಿದೆ.
13. ತೆಲಂಗಾಣ
ಹುಜೂರಾಬಾದ್ – ಬಿಜೆಪಿ
ಟಿಆರ್‌ಎಸ್ ಪಕ್ಷದಿಂದ ಬಿಜೆಪಿಯು ಈ ಕ್ಷೇತ್ರವನ್ನು ಗೆದ್ದುಕೊಂಡಿದೆ.
14. ಪಶ್ಚಿಮ ಬಂಗಾಳ
ದೀನ್‌ಹಟಾ – ಟಿಎಂಸಿ
ಗೋಸಾಬ – ಟಿಎಂಸಿ
ಖಾರ್ದಹೊ – ಟಿಎಂಸಿ
ಶಾಂತಿಪುರ – ಟಿಎಂಸಿ
ಇಲ್ಲಿ ಎರಡು ಕ್ಷೇತ್ರಗಳನ್ನು ಟಿಎಂಸಿ ತನ್ನದೇ ಕ್ಷೇತ್ರವನ್ನು ಗೆದ್ದುಕೊಂಡು, ಮತ್ತೆರೆಡು ಕ್ಷೇತ್ರವನ್ನು ಬಿಜೆಪಿಯಿಂದ ಗೆದ್ದುಕೊಂಡಿದೆ.
ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ದಾದ್ರ ನಗರ ಹಾವೇಲಿಯ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಶಿವಸೇನೆ ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಕಂಡಿವೆ.
ಇದನ್ನೂ ಓದಿ; ’ಪಂಜಾಬ್ ಲೋಕ್ ಕಾಂಗ್ರೆಸ್’: ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಸ ಪಕ್ಷ


