ರಾಜ್ಯದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದು ಅದರಲ್ಲೂ ಆರ್. ಆರ್. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಅಂತರದಲ್ಲಿ ಗೆದ್ದಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಕೊನೆಯವರೆಗೂ ಪೈಪೋಟಿ ಕೊಟ್ಟರೂ 13 ಸಾವಿರ ಮತಗಳ ಅಂತರದಲ್ಲಿ ಸೋತು, ಬಿಜೆಪಿ ಅಭ್ಯರ್ಥಿ ಡಾ. ಸಿ. ಎಂ. ರಾಜೇಶ್ ಗೌಡ ವಿಜಯ ಪತಾಕೆ ಹಾರಿಸಿದ್ದಾರೆ.
ಶಿರಾದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಬಿ. ಸತ್ಯನಾರಾಯಣ 35,982 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ 61,573 ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಡಾ. ಸಿ. ಎಂ. ರಾಜೇಶ್ ಗೌಡ 74,522 ಮತಗಳನ್ನು ಪಡೆದು ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಿದೆ.
ಇದನ್ನೂ ಓದಿ: Bihar Election Results: ಮುನ್ನಡೆಯುತ್ತಿರುವ NDA; ಮಹಾಘಟಬಂಧನ್‌ಗೆ ಹಿನ್ನಡೆ!
ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ವಿ. 10,251 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಕುಸುಮಾ ಹೆಚ್. 67,798 ಮತಗಳನ್ನು ಪಡೆದಿದ್ದು, ಮಾಜಿ ಕಾಂಗ್ರೆಸಿಗ ಬಿಜೆಪಿ ಅಭ್ಯರ್ಥಿ ಮುನಿರತ್ನ ಬರೋಬ್ಬರಿ 1,25,734 ಮತಗಳನ್ನು ಪಡೆದು ತಾನು ಯಾವ ಪಕ್ಷದಲ್ಲಿದ್ದರೂ ಗೆಲ್ಲಬಲ್ಲೆ ಎಂದು ಸಾಧಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳಾದ ಡಾ. ರಾಜೇಶ್ ಗೌಡ ಮತ್ತು ಶ್ರೀ ಮುನಿರತ್ನ ಅವರಿಗೆ ಅಭಿನಂದನೆಗಳು. ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಯ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸಿದ ಎರಡೂ ಕ್ಷೇತ್ರಗಳ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳಾದ ಡಾ. ರಾಜೇಶ್ ಗೌಡ ಮತ್ತು ಶ್ರೀ ಮುನಿರತ್ನ ಅವರಿಗೆ ಅಭಿನಂದನೆಗಳು. ಬಿಜೆಪಿಯ ಅಭಿವೃದ್ಧಿ ಕಾರ್ಯಸೂಚಿಯ ಮೇಲೆ ವಿಶ್ವಾಸವಿಟ್ಟು ಆಶೀರ್ವದಿಸಿದ ಎರಡೂ ಕ್ಷೇತ್ರಗಳ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. @BJP4Karnataka pic.twitter.com/qKJ1HxbDEm
— B.S. Yediyurappa (@BSYBJP) November 10, 2020
ಇದನ್ನೂ ಓದಿ: ಬಿಜೆಪಿ ರಾಜ್ಯದ ಜನತೆಗೆ ಸ್ಪಂದಿಸಿದ್ದಕ್ಕೆ ಉಪಚುನಾವಣೆಯಲ್ಲಿ ಗೆದ್ದಿದೆ: ಎಚ್.ಡಿ ಕುಮಾರಸ್ವಾಮಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆರ್. ಆರ್ ನಗರ, ಶಿರಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ದುಡಿದಿರುವ ಕಾರ್ಯಕರ್ತರು, ಮುಖಂಡರು ಸೇರಿದಂತೆ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಆರ್ ಆರ್ ನಗರ, ಶಿರಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣೀಕೃತರಾಗಿರುವ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ, ಮುಖಂಡರಿಗೆ, ಮತದಾರ ದೇವರಿಗೆ ಧನ್ಯವಾದಗಳು.#KarnatakaBypollResults #BJP
— Nalinkumar Kateel (@nalinkateel) November 10, 2020
ನವೆಂಬರ್ 3 ರಂದು ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು, ಹಾಗೂ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ಅಕ್ಟೋಬರ್ 28 ರಂದು ಚುನಾವಣೆ ನಡೆದಿತ್ತು.
ಇದನ್ನೂ ಓದಿ:ತಡರಾತ್ರಿಯವರೆಗೆ ಎಣಿಕೆ ಮುಂದುವರಿಯುತ್ತದೆ. ಸರ್ಕಾರ ನಮ್ಮದೆ: RJD ವಿಶ್ವಾಸ


