Homeಮುಖಪುಟತಡರಾತ್ರಿಯವರೆಗೆ ಎಣಿಕೆ ಮುಂದುವರಿಯುತ್ತದೆ. ಸರ್ಕಾರ ನಮ್ಮದೆ: RJD ವಿಶ್ವಾಸ

ತಡರಾತ್ರಿಯವರೆಗೆ ಎಣಿಕೆ ಮುಂದುವರಿಯುತ್ತದೆ. ಸರ್ಕಾರ ನಮ್ಮದೆ: RJD ವಿಶ್ವಾಸ

ಸದ್ಯದ ವರದಿಗಳ ಪ್ರಕಾರ ಎನ್‌ಡಿಎ 128 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಮಹಾಘಟಬಂಧನ್ 104 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಸರಳ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ.

- Advertisement -
- Advertisement -

ಬಿಹಾರದ 243 ವಿಧಾನಸಭಾ ಸ್ಥಾನಗಳ ಮತ ಎಣಿಕೆ ಇತರ ಯಾವುದೇ ವಿಧಾನಸಭಾ ಚುನಾವಣಾ ಎಣಿಕೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಇಂದು ಮಧ್ಯಾಹ್ನ ಚುನಾವಣಾ ಆಯೋಗ ತಿಳಿಸಿದೆ. ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಅನುಸರಿಸಲು ಬೂತ್‌ಗಳ ಸಂಖ್ಯೆ ಹೆಚ್ಚಿಸಿದ್ದರಿಂದ ಇವಿಎಂಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಈ ವರ್ಷ 55 ಸ್ಥಳಗಳಲ್ಲಿ ಎಣಿಕೆ ನಡೆಸಲಾಗುತ್ತಿದೆ. ಹಾಗಾಗಿ ಈವರೆಗೆ ಕೇವಲ ಒಂದು ಕೋಟಿ ಮತಗಳನ್ನು ಎಣಿಸಲಾಗಿದೆ ಎಂದು ಆಯೋಗ ಹೇಳಿದೆ.

ಅಂಚೆ ಮತಪತ್ರಗಳಿಂದ ಬೆಳಿಗ್ಗೆ 8 ಗಂಟೆಗೆ ಎಣಿಕೆ ಪ್ರಾರಂಭವಾಯಿತು. ಆರಂಭಿಕ ಹಂತದಲ್ಲಿ ತೇಜಶ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಮುನ್ನಡೆ ಸಾಧಿಸಿತ್ತು. ಆದರೆ ನಂತರದ ಎಣಿಕೆಗಳಲ್ಲಿ ಮಹಾಘಟಬಂಧನ್‌ಗೆ ಹಿನ್ನೆಡೆಯಾಗಿ ಎಎನ್‌ಡಿಎ ಈಗ ಬಹುಮತಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎ ಮುನ್ನಡೆ ಸಾಧಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಈ ಬದಲಾವಣೆ ಹೇಗೆ ಸಾಧ್ಯ? ಈ ತಿರುವಿನ ಹಿಂದೆ ‘ಇವಿಎಂ ವಂಚನೆ’ ನಡೆದಿದೆಯೇ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.

ಈ ನಡುವೆ ಆರ್‌ಜೆಡಿ ಮಾತ್ರ ಸರ್ಕಾರ ತಮ್ಮದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. “ಆರಂಭಿಕ ಸುತ್ತಿನ ಎಣಿಕೆಯಲ್ಲಿ ಎನ್‌ಡಿಎ ಸ್ಪಷ್ಟ ಮುನ್ನಡೆ ಸಾಧಿಸಿದ್ದರೂ ಸಹ, ನಾವು ಬಿಹಾರದಲ್ಲಿ ಹೊಸ ಸರ್ಕಾರ ರಚಿಸುವ ಭರವಸೆ ಇದೆ. ತಡರಾತ್ರಿಯವರೆಗೆ ಎಣಿಕೆ ಮುಂದುವರಿಯುತ್ತದೆ. ನಮ್ಮ ಸರ್ಕಾರ ದೃಢ ಪಟ್ಟಿದೆ. ಬಿಜೆಪಿ ಬದಲಾಯಿಸಲು ಜನ ಮತ ಹಾಕಿದ್ದಾರೆ. ಎಣಿಕೆ ಮುಗಿಯುವವರೆಗೂ ಎಲ್ಲಾ ಅಭ್ಯರ್ಥಿಗಳನ್ನು ಎಣಿಕೆ ಕೇಂದ್ರಗಳಲ್ಲಿ ಇರಲು ಕೇಳಲಾಗುತ್ತಿದೆ” ಎಂದು ಪಕ್ಷವು ಟ್ವೀಟ್ ಮಾಡಿದೆ.

ಸದ್ಯದ ವರದಿಗಳ ಪ್ರಕಾರ ಎನ್‌ಡಿಎ 128 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಮಹಾಘಟಬಂಧನ್ 104 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಸರಳ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ.


ಇದನ್ನೂ ಓದಿ: ಬಿಹಾರ; ಎನ್‌ಡಿಎ ಗೆದ್ದರೂ, ನಿತೀಶ್ ಮುಖ್ಯಮಂತ್ರಿ ಪಟ್ಟ ಬಿಜೆಪಿ ಕೈಯಲ್ಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...