Homeಮುಖಪುಟ21 ದಿನ ಲಾಕ್‌ಡೌನ್‌ : ಸಾಲದ ಭಯಕ್ಕೆ ಆಂಧ್ರದ ದಂಪತಿ ಆತ್ಮಹತ್ಯೆ

21 ದಿನ ಲಾಕ್‌ಡೌನ್‌ : ಸಾಲದ ಭಯಕ್ಕೆ ಆಂಧ್ರದ ದಂಪತಿ ಆತ್ಮಹತ್ಯೆ

- Advertisement -
- Advertisement -

ಕೊರೊನಾ ಮುನ್ನೆಚ್ಚರಿಕೆಯ ಕಾರಣಕ್ಕಾಗಿ ಘೋಷಿಸಲಾಗಿರುವ 21 ದಿನ ಲಾಕ್‌ಡೌನ್‌‌ನಿಂದಾಗಿ ಸಾಲ ತೀರಿಸಲಾಗದ ಭಯಕ್ಕೆ ಆಂಧ್ರಪ್ರದೇಶದ ದಂಪತಿಗಿಳಿಬ್ಬರು ಆತ್ಮಹತ್ಯೆ ಮಾಡಿಕೊಡಿರುವ ದುರ್ಘಟನೆ ಶುಕ್ರವಾರ ಜರುಗಿದೆ.

ಆಟೋ ಚಾಲಕನಾದ ಸತೀಶ್‌ (38) ಮತ್ತು ಆಕೆಯ ಪತ್ನಿ ವೀರವೆಂಕಟಲಕ್ಷ್ಮಿ (35) ಇವರೇ ಆತ್ಮಹತ್ಯೆಗೊಳಗಾದ ದುರ್ದೈವಿಗಳಾಗಿದ್ದು, ಈ ಘಟನೆಯು ಆಂಧ್ರಪ್ರದೇಶದ ತರ‍್ಪು ಗೋದಾವರಿ ಜಿಲ್ಲಾ ರಾಜ ಮಹೇಂದ್ರವರಂನಲ್ಲಿ ನಡೆದಿದೆ.

ಪೋಲೀಸರ ಹೇಳಿಕೆಯ ಪ್ರಕಾರ ಬಾಬಾನಗರಕ್ಕೆ ಸೇರಿದ ಸತೀಶ್‌ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನಿಗೆ ನರಗಳಿಗೆ ಸಂಬಂಧಿಸಿದ ಕಾಯಿಲೆ ಇತ್ತು. ಆತನ ಪತ್ನಿ ವೆಂಕಟಲಕ್ಷ್ಮಿಯವರ ಕಿಡ್ನಿ ಸಹ ಹಾಳಗಿದ್ದವು. ಇಬ್ಬರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೊಂದು ಕಡೆ ಫೈನಾನ್ಸ್ ಸಾಲದಿಂದ ಆಟೋ ಖರೀದಿಸಿದ್ದು, ಅದರ ಕಂತುಗಳನ್ನು ಕಟ್ಟಲು ಕಷ್ಟಪಡುವ ಸಂದರ್ಭ ನಿರ್ಮಾಣವಾಗಿತ್ತು. ಇದೇ ಸಮಯಕ್ಕೆ ಕೊರೊನಾ ವೈರಸ್‌ನಿಂದ ಲಾಕ್‌ಡೌನ್ ಆದ ಕಾರಣ ಅವರಿಗೆ ದುಡಿಮೆಯೇ ಇಲ್ಲದಂತೆ ಆಗಿದೆ. ಈ ವೇಳೆ ಸಾಲ ತೀರಿಸಲು ಆಗದೆ, ಮತ್ತೊಂದೆಡೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುಲು ಸಾಧ್ಯವಾಗದೇ ಮಧ್ಯರಾತ್ರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಮನೆಹತ್ತಿರವೇ ಕಸದಲ್ಲಿ ಸುಟ್ಟು ಹೋಗಿದ್ದ ಶವಗಳನ್ನು ನೋಡಿ ಸ್ಥಳೀಯರು ಪೋಲಿಸರಿಗೆ ದೂರು ನೀಡಿದ್ದಾರೆ. ಘಟನೆಯ ಸ್ಥಳದಲ್ಲಿ ಸಿಕ್ಕ ಡೆತ್‌ ನೋಟ್‌ನಲ್ಲಿ, ಆರ್ಥಿಕ ಸಮಸ್ಯೆಗಳೊಂದಿಗೆ ಕೊರೊನಾ ಲಾಕ್‌ಡೌನ್ ಇಂದ ದುಡಿಮೆ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಇದರ ಕುರಿತು ಸತೀಶ್‌ ಸಹೋದರ ವೆಂಕಟ್‌ರಾವ್‌ರವರನ್ನು ವಿಚಾರಿಸಿದಾಗ ಅವರು ಆರ್ಥಿಕ ಸಮಸ್ಯೆಗಳಿಂದ ತುಂಬಾ ಕಷ್ಟ ಅನುಭವಿಸುತ್ತಿದ್ದರು ಎಂದು ಹೇಳಿದ್ದಾರೆ. ಪೋಲಿಸರು ಅನುಮಾನಸ್ಫದ ಸಾವು ಎಂದು ಕೇಸು ದಾಖಲಿಸಿಕೊಂಡಿದ್ದಾರೆ.

ಆರ್‌ಬಿಐ ಸಾಲ ಮರುಪಾವತಿ ಕಂತುಗಳನ್ನು ಮೂರು ತಿಂಗಳು ಮುಂದೂಡಿರುವ ವಿಚಾರ ಅವರಿಗೆ ತಿಳಿದಿತ್ತೆ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಬಡವರಿಗೆ ಶಕ್ತಿ ತುಂಬುವ ಕೆಲಸಗಳು ಸರ್ಕಾರದ ಕಡೆಯಿಂದ ಜರುಗಬೇಕು ಎಂಬು ಒತ್ತಾಯಗಳು ಕೇಳಿಬಂದಿವೆ.

ಸರ್ಕಾರ ಕೊರೊನಾ ವೈರಸ್ ಹರಡದಂತೆ ಲಾಕ್‌ಡೌನ್ ಮಾಡಿರುವುದು ಸರಿ. ಆದರೆ ಬೇರೆ ದೇಶಗಳಲ್ಲಿ ಇರುವ ಶ್ರೀಮಂತರನ್ನು ವಿಮಾನದಲ್ಲಿ ಕರೆತರುವಂತೆ ನಿರ್ಗತಿಕರು, ದಿನಗೂಲಿಗಳು, ಸಾಲ ಮಾಡಿಕೊಂಡು ತಮ್ಮ ಬದುಕು ಕಟ್ಟಿಕೊಳ್ಳುತ್ತಿರುವವರು ಎಲ್ಲರ ಬದುಕು ಲಾಕ್ ಡೌನ್ ಆಗದಂತೆ ಎಚ್ಚರವಹಿಸಬೇಕಿದೆ. ಸರ್ಕಾರಿ ಆಧಿಕಾರಿಗಳನ್ನು ಹೆಚ್ಚು ಹೆಚ್ಚು ಬಡವರ ಜೀವನ ಅಸ್ಥವ್ಯಸ್ಥ ಆಗದಂತೆ ನೋಡಿಕೊಳ್ಳುವಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಾಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...