Homeಮುಖಪುಟದೂರದರ್ಶನದಲ್ಲಿ ಇಂದಿನಿಂದ ರಾಮಾಯಣ - ಮಹಾಭಾರತ ಪ್ರಸಾರ: ಪರ ವಿರೋಧದ ಪ್ರತಿಕ್ರಿಯೆ

ದೂರದರ್ಶನದಲ್ಲಿ ಇಂದಿನಿಂದ ರಾಮಾಯಣ – ಮಹಾಭಾರತ ಪ್ರಸಾರ: ಪರ ವಿರೋಧದ ಪ್ರತಿಕ್ರಿಯೆ

ರಾಮಾಯಣ ಮತ್ತು ಮಹಾಭಾರತ ಜೊತೆಗೆ ಟಿಪ್ಪುಸುಲ್ತಾನ್ ಕೂಡ ಪ್ರಸಾರ ಮಾಡ್ಬೇಕಿತ್ತು. ಅದು ನಮ್ಮ ಬಾಲ್ಯದ ನೆನಪಿನೊಂದಿಗೆ ಬೆಸೆದುಕೊಂಡಿರುವ ಧಾರಾವಾಹಿ ಎಂದು ಕನ್ನಡದ ಯುವ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ದೂರದರ್ಶನ ಮತ್ತು ಡಿಡಿ ಭಾರತಿ ಇಂದಿನಿಂದ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳನ್ನು ಕ್ರಮವಾಗಿ ಪ್ರಸಾರ ಮಾಡಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಬೇಡಿಕೆಯ ನಂತರ ರಾಷ್ಟ್ರೀಯ ಪ್ರಸಾರ ದೂರದರ್ಶನವು ದೇಶಾದ್ಯಂತ ಹಾಗು ವಿದೇಶಗಳಲ್ಲಿ ತನ್ನ ಪ್ರೇಕ್ಷಕರಿಗೆ ‘ರಾಮಾಯಣ’ ಮತ್ತು ‘ಮಹಾಭಾರತ’ ಮಹಾಕಾವ್ಯಗಳ ಧಾರವಾಹಿಯನ್ನು ಮರಳಿ ತರುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಧ್ಯೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಮಾನಂದ್ ಸಾಗರ್ ನಿರ್ದೇಶನದ ‘ರಾಮಾಯಣ’ ಮತ್ತು ಬಿ.ಆರ್.ಚೋಪ್ರಾ ನಿರ್ದೇಶನದ ‘ಮಹಾಭಾರತ್’ ಪ್ರಸಾರವನ್ನು ಕೋರಿದ್ದರು. ಮೂರು ದಿನಗಳ ಹಿಂದೆ ಪ್ರಸಾರ್ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ಅವರು “ಇದರ ಮೇಲೆ ಕೆಲಸ ನಡೆಯುತ್ತಿದೆ” ಎಂದು ಹೇಳಿದ್ದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಜಾವಡೇಕರ್ ಟ್ವೀಟ್ ಮಾಡಿ “ಮಹಾಭಾರತ ಮತ್ತು ರಾಮಾಯಣ ನೋಡಲು ಇಂದು ಮತ್ತು ಪ್ರತಿದಿನ ಡಿಡಿ ನ್ಯಾಷನಲ್ ಹಾಗೂ ಡಿಡಿ ಭಾರತಿಗೆ ದಯವಿಟ್ಟು ಟ್ಯೂನ್ ಮಾಡಿ” ಎಂದು ಹೇಳಿದ್ದಾರೆ.

 

“ಡಿಡಿ ಅಧಿಕಾರಿಗಳ ಸಮರ್ಪಿತ ತಂಡವು ನಿನ್ನೆಯಿಂದ ರಾತ್ರಿಯಿಡೀ ಅವರ ಮನೆ ಮತ್ತು ಕುಟುಂಬಗಳಿಂದ ದೂರವಿದ್ದು ಈ ಕೆಲಸ ಮಾಡಿದರು. ವೀಕ್ಷಕರ ಅಪಾರ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಿದ ಇಡೀ ತಂಡಕ್ಕೆ ಧನ್ಯವಾದ ಸಲ್ಲಿಸಲು ಮಹಾಕಾವ್ಯಗಳನ್ನು ವೀಕ್ಷಿಸಿ” ಎಂದು ಅವರು ಮನವಿ ಮಾಡಿದ್ದಾರೆ.

‘ರಾಮಾಯಣ’ ಮೊದಲ ಬಾರಿಗೆ ದೂರದರ್ಶನದಲ್ಲಿ 1987 ರಲ್ಲಿ ಪ್ರಸಾರವಾಯಿತು ಮತ್ತು ದೇಶಾದ್ಯಂತ ಭಾರಿ ವೀಕ್ಷಕರನ್ನು ಹೊಂದಿತ್ತು. ಇದರಲ್ಲಿ ಶ್ರೀರಾಮನ ಪಾತ್ರದಲ್ಲಿ ಅರುಣ್ ಗೋವಿಲ್ ಮತ್ತು ಸೀತಾ ಪಾತ್ರದಲ್ಲಿ ದೀಪಿಕಾ ಚಿಖಲಿಯಾ, ಹನುಮಂತನ ಪಾತ್ರದಲ್ಲಿ ದಾರಾ ಸಿಂಗ್, ಮಂಥಾರ ಪಾತ್ರದಲ್ಲಿ ಲಲಿತಾ ಪವಾರ್, ವಿಜಯ್ ಅರೋರಾ ಇಂದ್ರಜಿತ್ ಪಾತ್ರದಲ್ಲಿ, ಅರವಿಂದ ತ್ರಿವೇದಿ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಸಾಗರ್ ಆರ್ಟ್ಸ್ ತೆರೆಗೆ ತಂದಿತ್ತು. ಹಾಗೆಯೆ ‘ಮಹಾಭಾರತ’ ಮೊದಲ ಬಾರಿಗೆ 1988 ರಲ್ಲಿ ಪ್ರಸಾರವಾಯಿತು, ಇದು ಅನೇಕ ನಟರನ್ನು ಅಪ್ರತಿಮ ಸ್ಥಾನಮಾನವನ್ನು ಗಳಿಸುವಂತೆ ಮಾಡಿತು.

ಇದೇ ಸಂದರ್ಭದಲ್ಲಿ ಸಚಿವರ ಈ ಕ್ರಮಕ್ಕೆ ಅಷ್ಟೇ ವಿರೋಧವೂ ಸಹ ವ್ಯಕ್ತವಾಗಿದೆ. ನಮಗೆ ಸದ್ಯಕ್ಕೆ ಬೇಕಿರುವುದು ಕೊರೊನಾ ಪರೀಕ್ಷಾ ಕಿಟ್‌ಗಳು, ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು, ಉತ್ತಮ ಆಸ್ಪತ್ರೆಗಳಾಗಿವೆ. ಸರ್ಕಾರ ಇದರ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಅನಿವಾರ್ಯವಲ್ಲದರ ಕಡೆ ಗಮನಕೊಡುತ್ತಿದೆ ಎಂದು ಹಲವರು ದೂರಿದ್ದಾರೆ.

ಮತ್ತೊಂದು ನಿರುಪಯುಕ್ತ ಗ್ಯಾಂಗ್ ಇದು. ಯಾರಾದರೂ ರಾಮಾಯಣ ಮಹಾಭಾರತ ನೋಡಲು ಬಯಸಿದರೆ ಅವರು ಯಾವಾಗಲೂ ಯುಟ್ಯೂಬ್‌ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದು.
ಬಡವರು ಬಳಲುತ್ತಿದ್ದಾರೆ ಮತ್ತು ಪ್ರಧಾನ ಮಂತ್ರಿ ಕ್ಷೇತ್ರದಲ್ಲಿ ಮಕ್ಕಳು ಹುಲ್ಲು ತಿನ್ನುತ್ತಿದ್ದಾರೆ ಎಂಬುದನ್ನು ನೆನಪಿಡಿ. ನಿಮ್ಮ ಅಶ್ಲೀಲ ಹಿಂದುತ್ವ ಆರಾಧನೆಯನ್ನು ನಿಲ್ಲಿಸಿ ಎಂದು ಸೈಯದ್ ವಾಸನ್‌ ಮೈಕಲ್‌ ಎಂಬುವವರು ಆಗ್ರಹಿಸಿದ್ದಾರೆ.

ರಾಮಾಯಣ ಮತ್ತು ಮಹಾಭಾರತ ಜೊತೆಗೆ ಟಿಪ್ಪುಸುಲ್ತಾನ್ ಕೂಡ ಪ್ರಸಾರ ಮಾಡ್ಬೇಕಿತ್ತು. ಅದು ನಮ್ಮ ಬಾಲ್ಯದ ನೆನಪಿನೊಂದಿಗೆ ಬೆಸೆದುಕೊಂಡಿರುವ ಧಾರಾವಾಹಿ ಎಂದು ಕನ್ನಡದ ಯುವ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೀಸಲಾತಿ ಹೇಳಿಕೆ: ಆಧಾರ ಸಹಿತ ಸಾಬೀತುಪಡಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲು

0
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂಬ ಹೇಳಿಕೆಯನ್ನು ಆಧಾರ ಸಹಿತ ಸಾಬೀತುಪಡಿಸಬೇಕು. ಇಲ್ಲದಿದ್ದರೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ...