ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರವು ‘ಜಾತಿ ಸಮೀಕ್ಷೆ’ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಹೇಳಿದ್ದಾರೆ. ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ತಾನು ಇನ್ನೂ ಅದನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಜಾತಿ ಸಮೀಕ್ಷೆ ಇನ್ನೂ ಓದಿಲ್ಲ
“ಈ ವಿಚಾರ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಕೆಲಸವನ್ನು ಮಾಡುತ್ತದೆ. ಇದನ್ನು ಕೇಂದ್ರ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರವು ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸುತ್ತದೆ. ಈ ವರದಿಯನ್ನು ನಾನು ನೋಡಿಲ್ಲ. ಈ ವಿಷಯವನ್ನು ರಾಜ್ಯ ಸರ್ಕಾರಕ್ಕೆ ಬಿಡಲಾಗಿದೆ” ಎಂದು ಖರ್ಗೆ ಕಲಬುರ್ಗಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವರದಿಗೆ ಬರುತ್ತಿರುವ ವಿರೋಧದ ಬಗ್ಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “(ವಿರೋಧ) ಇರಬಹುದು. ನಾನು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ” ಎಂದು ಅವರು ಹೇಳಿದ್ದಾರೆ. ವರದಿಯನ್ನು ಜಾತಿ ಗೊಂದಲದಂತೆ ಬಿಂಬಿಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ವಿಶೇಷ ಸಭೆಯು ಗುರುವಾರ ವಿವಾದಾತ್ಮಕ ‘ಜಾತಿ ಜನಗಣತಿ’ಯ ಬಗ್ಗೆ ಚರ್ಚಿಸಲಿದೆ.
ವಿವಿಧ ಸಮುದಾಯಗಳು, ವಿಶೇಷವಾಗಿ ಕರ್ನಾಟಕದ ಎರಡು ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರು, ಈ ಸಮೀಕ್ಷೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು “ಅವೈಜ್ಞಾನಿಕ” ಎಂದು ಕರೆದಿದ್ದಾರೆ. ಜೊತೆಗೆ ಅದನ್ನು ತಿರಸ್ಕರಿಸಿ ಹೊಸ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸಮಾಜದ ವಿವಿಧ ವರ್ಗಗಳಿಂದ ಕೂಡ ಆಕ್ಷೇಪಣೆಗಳು ವ್ಯಕ್ತವಾಗಿವೆ ಮತ್ತು ಆಡಳಿತಾರೂಢ ಕಾಂಗ್ರೆಸ್‌ನೊಳಗಿಂದಲೆ ಇದರ ಪರ ವಿರೊಧ ಧ್ವನಿಗಳು ಕೇಳಿಬರುತ್ತಿವೆ. ಅಹಿಂದ ಶಾಸಕರು ಇದರ ಪರವಾರಿ ಮಾತನಾಡಿದರೆ, ಬಲಿಷ್ಠ ಸಮುದಾಯವು ಇದರ ವಿರುದ್ಧ ಧ್ವನಿಯೆತ್ತಿವೆ. ಜಾತಿ ಸಮೀಕ್ಷೆ ಇನ್ನೂ ಓದಿಲ್ಲ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹಿಂದೆಂದೂ ಕಂಡರಿಯದ ‘ವಂಚನೆ’ಯ ಮೂಲಕ ಮಹಾರಾಷ್ಟ್ರ ಚುನಾವಣೆ ಬಿಜೆಪಿ ಗೆದ್ದಿದೆ: ಮಲ್ಲಿಕಾರ್ಜುನ ಖರ್ಗೆ
ಹಿಂದೆಂದೂ ಕಂಡರಿಯದ ‘ವಂಚನೆ’ಯ ಮೂಲಕ ಮಹಾರಾಷ್ಟ್ರ ಚುನಾವಣೆ ಬಿಜೆಪಿ ಗೆದ್ದಿದೆ: ಮಲ್ಲಿಕಾರ್ಜುನ ಖರ್ಗೆ

