Homeಮುಖಪುಟವಿಜ್ಞಾನ ಸಂಶೋಧನೆ ಮತ್ತು ಭಾರತದ ಜಾತಿ ವ್ಯವಸ್ಥೆ

ವಿಜ್ಞಾನ ಸಂಶೋಧನೆ ಮತ್ತು ಭಾರತದ ಜಾತಿ ವ್ಯವಸ್ಥೆ

- Advertisement -
- Advertisement -

ಕಳೆದ ವಾರ ನನ್ನ ಸ್ನೇಹಿತರೊಬ್ಬರು ಭಾರತದಲ್ಲಿನ ವಿಜ್ಞಾನ ಸಂಶೋಧನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ಬಹುತೇಕ ಸಂಶೋಧನೆಗಳು ಕಡತಗಳ ಹೊಟ್ಟೆ ತುಂಬಿಸುವುದಕ್ಕಾಗಿಯೇ ನಡೆಯುತ್ತವೆ, ಬಡ್ತಿ ಪಡೆಯಲು ಮಾಡಲಾಗುತ್ತದೆ ಮತ್ತು ನಮ್ಮ ದೇಶದ ಅಗತ್ಯಗಳಿಗೂ ಅವಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು. ನನ್ನ ಸ್ನೇಹಿತ ಸ್ವತಃ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ, ದೊಡ್ಡ ಬಯೋಟೆಕ್ನಾಲಜಿ ಕಂಪನಿಯನ್ನು ನಡೆಸುತ್ತಿದ್ದಾರೆ. ಒಂದು ವಿಶೇಷ ರೀತಿಯ ಮೆಂಬ್ರೇನ್ ತಯಾರಿಕೆಯಲ್ಲಿ ಅವರ ಕಂಪನಿಯು ವಿಶ್ವದ ಮೂರು ದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಗಾಂಧಿ ಕುಟುಂಬಕ್ಕೆ ಸೇರಿದವರು, ದೇಶಕ್ಕೆ ಸೇವೆ ಸಲ್ಲಿಸುವ ಮನೋಭಾವ ಮತ್ತು ರಾಷ್ಟ್ರೀಯ ಸ್ವಾಭಿಮಾನದ ಕಲ್ಪನೆ ಅವರಲ್ಲಿದೆ. ಹಾಗಾಗಿ ಅವರಿಗೂ ಟೀಕೆ ಮಾಡುವ ಹಕ್ಕು ಇದೆ. ಕೆಲ ಕಾಲ ಭಾರತದ ವಿಜ್ಞಾನಿಗಳು ವಿದೇಶಗಳ ನಕಲು ಮಾಡುವುದನ್ನು ಬಿಟ್ಟು ತಮ್ಮ ಆದ್ಯತೆಯ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು ಮತ್ತು ಭಾರತದ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ತಯಾರಿಸಬೇಕು, ನಮ್ಮ ಅಗತ್ಯಕ್ಕೆ ತಕ್ಕದಾದ ಆವಿಷ್ಕಾರಗಳನ್ನು ಮಾಡಬೇಕು ಎಂದರು.

ಕಾಕತಾಳೀಯವೆಂಬಂತೆ ಕಳೆದ ವಾರ ವಿಶ್ವದ ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕ ’ನೇಚರ್‌’ನಲ್ಲಿ ಭಾರತೀಯ ವಿಜ್ಞಾನದಲ್ಲಿ ಅಸ್ಪೃಶ್ಯತೆಯ ಕುರಿತು ಮಹತ್ವದ ಲೇಖನ ಪ್ರಕಟವಾಗಿತ್ತು. ಅಂಕುರ್ ಪಲಿವಾಲ್ ಅವರ ಈ ಲೇಖನದ ಶೀರ್ಷಿಕೆ ’ಭಾರತದ ಜಾತಿ ವ್ಯವಸ್ಥೆಯು ವಿಜ್ಞಾನದಲ್ಲಿ ವೈವಿಧ್ಯತೆಯನ್ನು ಹೇಗೆ ಮಿತಿಗೊಳಿಸುತ್ತದೆ’ ಎಂದಾಗಿತ್ತು. ಲೇಖನವನ್ನು ಆರು ಚಾರ್ಟ್‌ಗಳ ಸುತ್ತ ಹೆಣೆಯಲಾಗಿದೆ; ಇದು ಭಾರತದ ವೈಜ್ಞಾನಿಕ ಬೋಧನೆ ಮತ್ತು ಸಂಶೋಧನಾ ಸಂಸ್ಥೆಗಳ ಜಾತಿ ಸಂಯೋಜನೆಯ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತದೆ. ಇದನ್ನು ಭಾರತದ ವಿರುದ್ಧ ಪಾಶ್ಚಾತ್ಯರ ಪಿತೂರಿ ಎಂದು ಭಾವಿಸಬೇಡಿ. ಎಲ್ಲಾ ಅಂಕಿಅಂಶಗಳನ್ನು ಭಾರತ ಸರ್ಕಾರದ ಅಧಿಕೃತ ಮೂಲದಿಂದ ತೆಗೆದುಕೊಳ್ಳಲಾಗಿದೆ. ’ನೇಚರ್’ ನಿಯತಕಾಲಿಕವು ಪ್ರಪಂಚದಾದ್ಯಂತ ಪ್ರಮುಖ ದೇಶಗಳ ವಿಜ್ಞಾನಿಗಳ ಸಾಮಾಜಿಕ ಹಿನ್ನೆಲೆಯನ್ನು ಪರಿಶೋಧಿಸುವ ಸರಣಿಯ ಭಾಗವಾಗಿದೆ ಈ ಲೇಖನ. ಈ ಸರಣಿಯ ಅಡಿಯಲ್ಲಿ, ಅಮೆರಿಕ, ಯುರೋಪ್ ಮತ್ತು ಇತರ ದೇಶಗಳಲ್ಲಿ ವಿಜ್ಞಾನದಲ್ಲಿ ಕಪ್ಪು ವರ್ಣದವರು ಮತ್ತು ಅಲ್ಪಸಂಖ್ಯಾತರ ಕೊರತೆ ಇರುವುದೂ ಎದ್ದು ಕಾಣುತ್ತಿದೆ.

ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ, ಬುಡಕಟ್ಟು ಮತ್ತು ಇತರ ಹಿಂದುಳಿದ ಜಾತಿಗಳ ವಿಜ್ಞಾನಿಗಳು ಎಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಈ ಲೇಖನ ತೋರಿಸುತ್ತದೆ. ಭಾರತದ ಜನಸಂಖ್ಯೆಯಲ್ಲಿ ದಲಿತ ಸಮುದಾಯದ ಪ್ರಮಾಣ 16.6% ಮತ್ತು ಬುಡಕಟ್ಟು ಸಮುದಾಯದ ಪ್ರಮಾಣ 8.6%ರಷ್ಟಿದೆ. ಹಿಂದುಳಿದ ವರ್ಗಗಳು ಅಥವಾ ಒಬಿಸಿಗಳನ್ನು ಇದಕ್ಕೆ ಸೇರಿಸಿದರೆ, ಈ ಮೂರು ವಂಚಿತ ವರ್ಗಗಳ ಒಟ್ಟು ಜನಸಂಖ್ಯೆಯು ದೇಶದ 70ರಿಂದ 75% ರಷ್ಟಿದೆ. ಅಂದರೆ ಸಾಮಾನ್ಯ ವರ್ಗದ (ಮೇಲ್ಜಾತಿ ಹಿಂದೂಗಳು, ಮುಂದುವರಿದ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಇತ್ಯಾದಿ) ಜನಸಂಖ್ಯೆಯು 25ರಿಂದ 30%ಕ್ಕಿಂತ ಹೆಚ್ಚಿಲ್ಲ.

ಈಗ ಇದಕ್ಕೆ ಹೋಲಿಸಿ, ದೇಶದ ಪ್ರತಿಷ್ಠಿತ ವೈಜ್ಞಾನಿಕ ಸಂಸ್ಥೆಗಳ ಸ್ಥಿತಿಯನ್ನು ನೋಡಿ. ’ನೇಚರ್’ ನಿಯತಕಾಲಿಕದ ಈ ಲೇಖನವು ನಾವು ಉನ್ನತ ಶಿಕ್ಷಣದ ಮೆಟ್ಟಿಲುಗಳನ್ನು ಏರುತ್ತಿದ್ದಂತೆ ದಲಿತ, ಬುಡಕಟ್ಟು ಮತ್ತು ಹಿಂದುಳಿದ ಸಮುದಾಯಗಳ ಉಪಸ್ಥಿತಿಯು ಕುಗ್ಗುತ್ತಿದೆ ಎಂದು ತೋರಿಸುತ್ತದೆ. ಕಾಲೇಜುಗಳಲ್ಲಿನ ಎಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಿತ ಕೋರ್ಸ್‌ಗಳಲ್ಲಿ (ಬಿಎಸ್‌ಸಿ, ಎಂಜಿನಿಯರಿಂಗ್ ಅಥವಾ ಡಾಕ್ಟರೇಟ್ ಇತ್ಯಾದಿ) ಒಬಿಸಿ ವಿದ್ಯಾರ್ಥಿಗಳ ಸಂಖ್ಯೆ ಅವರ ಜನಸಂಖ್ಯೆಗಿಂತ ಸ್ವಲ್ಪ ಕಡಿಮೆಯಿದ್ದರೆ, ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳ ಸಂಖ್ಯೆ ಅವರ ಜನಸಂಖ್ಯೆಯ ಅರ್ಧದಷ್ಟಿದೆ. ಸ್ನಾತಕೋತ್ತರ ಪದವಿಯಲ್ಲಿ (ಎಂಎಸ್‌ಸಿ ಮತ್ತು ಎಂಟೆಕ್ ಇತ್ಯಾದಿ) ಈ ಅನುಪಾತ ಇನ್ನಷ್ಟು ಕಡಿಮೆಯಾಗುತ್ತದೆ. ಆದರೆ ಈ ಡಿಗ್ರಿಗಳಿಂದ ಆಗುವುದು ಏನೂ ಇಲ್ಲವಾದರೂ, ವಿಜ್ಞಾನದಲ್ಲಿ ಸಂಶೋಧನೆ ಅಥವಾ ಬೋಧನೆಗೆ ಪಿಎಚ್‌ಡಿ ಅಗತ್ಯವಾಗಿದೆ. ದೇಶದ ಅತ್ಯಂತ ಹೆಸರಾಂತ ವಿಜ್ಞಾನ ಸಂಸ್ಥೆಗಳಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಉನ್ನತ ರ್‍ಯಾಂಕಿಂಗ್ ಹೊಂದಿರುವ ಐಐಟಿ) ಇರುವ ಪಿಎಚ್‌ಡಿ ವಿದ್ಯಾರ್ಥಿಗಳ ಹಿನ್ನೆಲೆಯನ್ನು ನಾವು ನೋಡಿದರೆ, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ಜಾತಿಗಳ ಅನುಪಾತವು ಅವರ ಜನಸಂಖ್ಯೆಗೆ ಇರಬೇಕಾದ ಪಾಲಿಗಿಂತ ಅರ್ಧ ಅಥವಾ ಅದಕ್ಕಿಂತ ಕಡಿಮೆಯಾಗುತ್ತದೆ. ಸಾಮಾನ್ಯ ಅಥವಾ ಮೇಲ್ವರ್ಗದ ಜಾತಿಗಳ ಅನುಪಾತವು ಅವರ ಜನಸಂಖ್ಯೆಗೆ ಇರಬೇಕಾದ ಪಾಲಿಗಿಂತ ಡಬಲ್ ಅಥವಾ 60 ಪ್ರತಿಶತಕ್ಕಿಂತ ಹೆಚ್ಚಿದೆ.

ಇಂತಹ ವೈಜ್ಞಾನಿಕ ಸಂಸ್ಥೆಗಳ ಪ್ರೊಫೆಸರ್ ಅಥವಾ ವಿಜ್ಞಾನಿಗಳ ಸ್ಥಾನಕ್ಕೆ ತಲುಪುತ್ತ ಈ ಅಸಮಾನತೆಯ ವಿಷಮತೆಯು ಇನ್ನಷ್ಟು ತೀವ್ರತೆಯನ್ನು ಮುಟ್ಟುತ್ತದೆ.

ಈ ಸಂಶೋಧನೆಯು ಆರ್‌ಟಿಐ ಮೂಲಕ ಎಲ್ಲಾ ಸಂಸ್ಥೆಗಳಿಂದ ಮಾಹಿತಿಯನ್ನು ಪಡೆದುಕೊಂಡು, ಉನ್ನತ ವೈಜ್ಞಾನಿಕ ಸಂಸ್ಥೆಗಳ ಬೋಧಕರ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ ಇದ್ದರೂ, ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಪ್ರಮಾಣವು ಶೇ.10ಕ್ಕಿಂತ ಕಡಿಮೆ ಇದೆ ಎಂದು ಗುರುತಿಸಿದೆ. ಕೆಲವೆಡೆ ಉಪನ್ಯಾಸಕರ ಸಂಖ್ಯೆಗಳಲ್ಲಿ ಶೇ.10ಕ್ಕಿಂತ ಹೆಚ್ಚಿದ್ದರೂ ಪ್ರೊಫೆಸರ್‌ನಂತಹ ಉನ್ನತ ಹುದ್ದೆಗೆ ಏರುತ್ತಲೇ ದಲಿತರು, ಆದಿವಾಸಿಗಳು, ಹಿಂದುಳಿದವರ ಸಂಖ್ಯೆ ನಗಣ್ಯವಾಗುತ್ತದೆ. ಅಷ್ಟೇ ಅಲ್ಲ, ವಿಜ್ಞಾನದ ಫಂಡಿಂಗ್‌ನ ಪ್ರಮುಖ ಯೋಜನೆಗಳಲ್ಲಿಯೂ ಮೇಲ್ಜಾತಿ ಅಭ್ಯರ್ಥಿಗಳು 80% ಸೀಟುಗಳನ್ನು ಪಡೆಯುತ್ತಾರೆ. ಇದರರ್ಥ ವಿಜ್ಞಾನ ಕ್ಷೇತ್ರದಲ್ಲಿ, ದೇಶದ ಜನಸಂಖ್ಯೆಯ 80% ಜನರಿಗೆ 20% ಅಥವಾ ಅದಕ್ಕಿಂತ ಕಡಿಮೆ ಸ್ಥಾನ ಸಿಗುತ್ತದೆ ಹಾಗೂ 20% ಜನಸಂಖ್ಯೆಯು 80% ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ದೇಶದ ವಂಚಿತ ಸಮಾಜಗಳ ಮೇಲೆ ಈ ಅಸಮಾನತೆಯ ಪರಿಣಾಮವು ಸ್ಪಷ್ಟವಾಗಿದೆ.

ಇದನ್ನೂ ಓದಿ: ಭಾರತದ ವಿಜ್ಞಾನ ಕ್ಷೇತ್ರದಲ್ಲಿ ದಲಿತರಿಗಿಲ್ಲ ಹೆಚ್ಚಿನ ಪ್ರಾತಿನಿಧ್ಯ: ‘ನೇಚರ್‌’ ವರದಿ

ಆದರೆ ಇದು ಭಾರತದ ವೈಜ್ಞಾನಿಕ ಸಂಶೋಧನೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆಯೇ ಎಂಬುದು ನಿಜವಾದ ಪ್ರಶ್ನೆ. ಸಮಾಜದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳ ಶೋಧವು ಸಮಾಜದ ಮೂರನೇ ಒಂದು ಭಾಗಕ್ಕೆ ಮಾತ್ರ ಸೀಮಿತವಾದಲ್ಲಿ, ನಿಸ್ಸಂಶಯವಾಗಿ ದೇಶವು ಶ್ರೇಷ್ಠ ಪ್ರತಿಭೆಗಳಿಂದ ವಂಚಿತವಾಗುತ್ತದೆ. ಅಷ್ಟೇ ಅಲ್ಲ, ಇಂದು ನಾವು ಯಾರನ್ನು ವಂಚಿತ ಸಮಾಜ ಎಂದು ಕರೆಯುತ್ತಿದ್ದೇವೆಯೋ, ಅವರು ನಮ್ಮ ಸಮಾಜದ ಎಲ್ಲಾ ರೀತಿಯ ಜ್ಞಾನದ ಮೂಲವಾಗಿದ್ದಾರೆ: ಕೃಷಿ ಜ್ಞಾನ, ಬಟ್ಟೆ ನೇಯ್ಗೆಯ ಜ್ಞಾನ, ಚರ್ಮದ ವಸ್ತುಗಳ ರಚನೆಯ ಜ್ಞಾನ, ಕರಕುಶಲ ಕೌಶಲ್ಯ, ಉಪಕರಣಗಳನ್ನು ತಯಾರಿಸುವ ಜ್ಞಾನ, ಔಷಧ ತಯಾರಿಕೆಯ ಜ್ಞಾನ, ಔಷಧೀಯ ಸಸ್ಯಗಳ ಜ್ಞಾನ ಇತ್ಯಾದಿ. ನಮ್ಮ ದೇಶದ ಇಂತಹ ಜ್ಞಾನವುಳ್ಳ ವರ್ಗವನ್ನು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯಿಂದ ವಂಚಿತರನ್ನಾಗಿಸುವ ಮೂಲಕ ನಾವು ಅವರಿಗೆ ಮಾತ್ರವಲ್ಲದೆ ನಮ್ಮ ದೇಶ ಮತ್ತು ವಿಜ್ಞಾನಕ್ಕೂ ಹಾನಿ ಮಾಡಿದ್ದೇವೆ.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...