Homeಮುಖಪುಟಕದನ ವಿರಾಮ ಒಪ್ಪದಿದ್ದರೆ ವ್ಯಾಪಾರ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ; ಮೋದಿ ಒಪ್ಪಿಕೊಂಡಿದ್ದೇಕೆ? ವ್ಯಾಪಾರಿಗಳು ಯಾರು?

ಕದನ ವಿರಾಮ ಒಪ್ಪದಿದ್ದರೆ ವ್ಯಾಪಾರ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ; ಮೋದಿ ಒಪ್ಪಿಕೊಂಡಿದ್ದೇಕೆ? ವ್ಯಾಪಾರಿಗಳು ಯಾರು?

- Advertisement -
- Advertisement -

ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾಗಿ ಹೇಳಿಕೊಂಡಿದ್ದ ಟ್ರಂಪ್, ಸೋಮವಾರ ಹೊಸದಾಗಿ, ವ್ಯಾಪಾರ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ ಕಾರಣಕ್ಕೆ ಉಭಯ ದೇಶಗಳು ಒಪ್ಪಂದಕ್ಕೆ ಒಪ್ಪಿಕೊಂಡವು ಎಂದು ಹೇಳಿದ ನಂತರ ದೇಶದಾದ್ಯಂತ ಭಾರತದ ಸಾರ್ವಭೌಮತೆಯ ಬಗ್ಗೆ ವಿವಾದಗಳು ಎದ್ದಿವೆ. ಈ ಬಗ್ಗೆ ವಿಪಕ್ಷಗಳು ಸೇರಿದಂತೆ ಹೋರಾಟಗಾರರು ಪ್ರಧಾನಿ ಮೋದಿಗೆ ಸ್ಪಷ್ಟನೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ವ್ಯಾಪಾರಿಗಳ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ದೇಶದ ಸಾರ್ವಭೌಮತೆಯನ್ನು, ದೇಶದ ಗೌರವವನ್ನು ಮತ್ತೊಂದು ದೇಶದ ಮುಂದೆ ಕಳೆದುಕೊಳ್ಳುವುದು ಸರಿಯೆ ಎಂದು ಪ್ರಶ್ನಿಸಿದ್ದಾರೆ. ಕದನ ವಿರಾಮ ಒಪ್ಪದಿದ್ದರೆ

ಪಹಲ್ಗಾಮ್ ದಾಳಿಯು ಪಾಕಿಸ್ತಾನ ಪ್ರೇರಿತ ಎಂದು ಹೇಳಿಕೊಂಡಿದ್ದ ಭಾರತ, ಆಪರೇಷನ್ ಸಿಂಧೂರವನ್ನು ನಡೆಸಿ ನೆರೆಯ ದೇಶದ 9 ಭಯೋತ್ಪಾದಕ ಕೇಂದ್ರಗಳನ್ನು ನಾಶ ಮಾಡಿದ್ದಾಗಿ ತಿಳಿಸಿತ್ತು. ಇದರ ನಂತರ ಉಭಯ ದೇಶಗಳ ನಡುವೆ ನಾಲ್ಕು ದಿನಗಳ ಕಾಲ ನಡೆದ ಮಿಲಿಟರಿ ಸಂಘರ್ಷದಲ್ಲಿ ಭಾರತದ ಹಲವಾರು ನಾಗರಿಕರು ಮತ್ತು ಸೈನಿಕರು ಮೃತಪಟ್ಟಿದ್ದರು. ಅದಾಗ್ಯೂ, ಶನಿವಾರ ಕದನ ವಿರಾಮಕ್ಕೆ ಉಭಯ ದೇಶಗಳು ಒಪ್ಪಿಕೊಂಡಿದೆ ಎಂದು ಭಾರತ ಘೋಷಿಸುವ ಮುಂಚೆಯೆ, ಕದನ ವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು.

ಅದಾಗ್ಯೂ, ಈ ವೇಳೆ ಕೂಡಾ ಭಾರತದ ಸಾರ್ವಭೌಮತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಅದರ ನಂತರ ಸೋಮವಾರ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಲಾಗಿರುವ ವಿಡಿಯೊದಲ್ಲಿ ಅಮೆರಿಕೆ ಅಧ್ಯಕ್ಷ ಉಭಯ ದೇಶಗಳಿಗೆ ವ್ಯಾಪಾರ ಬೇಕೆಂದರೆ ಯುದ್ಧ ನಿಲ್ಲಿಸಿ ಎಂದು ಹೇಳಿದ ನಂತರ ಅವು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು ಎಂದು ಹೇಳಿದ್ದಾರೆ. ಈ ಹೇಳಿಕೆಯ ನಂತರ ಭಾರತ ಸಾರ್ವಭೌಮತೆಯ ಬಗ್ಗೆ ದೇಶದಾದ್ಯಂತ ಪ್ರಶ್ನೆಗಳು ಎದ್ದಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳನ್ನು ದ್ವಿಪಕ್ಷೀಯ ಒಪ್ಪಂದದ ಮೂಲಕ ಸಾಧ್ಯವಿಲ್ಲವೆ ಎಂದು ವಿಪಕ್ಷಗಳು ಕೇಳಿದ್ದು, ಅದಕ್ಕಾಗಿ ಮತ್ತೊಂದು ದೇಶದ ಮಧ್ಯಸ್ಥಿಕೆ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ

ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವಿನ ವ್ಯಾಪಾರ ಸಂಬಂಧಗಳು ವಿಶ್ವದ ಅತಿದೊಡ್ಡ ಆರ್ಥಿಕ ಸಂಬಂಧಗಳಲ್ಲಿ ಒಂದಾಗಿದೆ. ಇದು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರದ ಮೂಲಕ ಗುಣಾತ್ಮಕವಾಗಿ ಬೆಳೆಯುತ್ತಿದೆ. 2023ರಲ್ಲಿ, ಭಾರತ-ಅಮೆರಿಕ ಒಟ್ಟು ವ್ಯಾಪಾರವು ಸರಕು ಮತ್ತು ಸೇವೆಗಳಲ್ಲಿ $191 ಬಿಲಿಯನ್‌ಗೆ ತಲುಪಿದೆ. ಇದರಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತು $118 ಬಿಲಿಯನ್ ಮತ್ತು ಆಮದು $73 ಬಿಲಿಯನ್ ಆಗಿತ್ತು.

ಅಮೆರಿಕಾದಲ್ಲಿ ಭಾರತೀಯ ಕಂಪನಿಗಳಿಂದ ಒಟ್ಟು ವಿದೇಶಿ ನೇರ ಹೂಡಿಕೆ (FDI) $40 ಬಿಲಿಯನ್‌ಗಿಂತ ಹೆಚ್ಚಾಗಿದೆ. ಅಮೆರಿಕಾದಲ್ಲಿ ಭಾರತದ 163 ಕಂಪನಿಗಳು ಒಟ್ಟು $40 ಬಿಲಿಯನ್ ಹೂಡಿಕೆಯನ್ನು ಮಾಡಿದೆ.

ಪ್ರಮುಖ ಸರಕುಗಳು: ಭಾರತವು ಅಮೆರಿಕಕ್ಕೆ ಔಷಧಗಳು, ಜವಳಿ, ರತ್ನಗಂಬಳಿಗಳು, ಮಾಹಿತಿ ತಂತ್ರಜ್ಞಾನ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳನ್ನು ರಫ್ತು ಮಾಡುತ್ತದೆ. ಅಮೆರಿಕದಿಂದ ಭಾರತಕ್ಕೆ ವಿಮಾನಯಾನ ಉತ್ಪನ್ನಗಳು, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳು ಮತ್ತು ತೈಲ-ಗ್ಯಾಸ್ ಆಮದಾಗುತ್ತವೆ.

ಸೇವೆಗಳು: ಭಾರತದ ಐಟಿ ಮತ್ತು ಸಾಫ್ಟ್‌ವೇರ್ ಸೇವೆಗಳು, ವಿಶೇಷವಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಿಂದ, ಅಮೆರಿಕದ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 2022ರಲ್ಲಿ, ಭಾರತದ ಸೇವಾ ರಫ್ತು ಅಮೆರಿಕಕ್ಕೆ $32 ಬಿಲಿಯನ್‌ಗಿಂತ ಹೆಚ್ಚಿತ್ತು.

ವಿದೇಶಿ ನೇರ ಹೂಡಿಕೆ (FDI):

ಅಮೆರಿಕವು ಭಾರತದಲ್ಲಿ ಅತಿದೊಡ್ಡ ವಿದೇಶಿ ಹೂಡಿಕೆದಾರರಲ್ಲಿ ಒಂದಾಗಿದೆ, 2000-2023ರ ನಡುವೆ $61 ಬಿಲಿಯನ್‌ಗಿಂತ ಹೆಚ್ಚಿನ FDI ಹರಿದುಬಂದಿದೆ. ಅಮೆರಿಕದ ಕಂಪನಿಗಳಾದ ಗೂಗಲ್, ಅಮೆಜಾನ್, ಮತ್ತು ಟೆಸ್ಲಾ ಭಾರತದಲ್ಲಿ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿವೆ. ಭಾರತೀಯ ಕಂಪನಿಗಳಾದ ಟಾಟಾ, ರಿಲಯನ್ಸ್, ಮತ್ತು ಇನ್ಫೋಸಿಸ್ ಅಮೆರಿಕದಲ್ಲಿ ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ.

ಅಮೆರಿಕಾದಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಮಾಡಿರುವವರು ಯಾರು?

ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿಗಳಾದ ಗೌತಮ್ ಅದಾನಿ (ಅದಾನಿ ಗ್ರೂಪ್) ಮತ್ತು ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್) ಅಮೆರಿಕದಲ್ಲಿ ಅತ್ಯಂತ ಹೆಚ್ಚು ಹೂಡಿಕೆ ಮಾಡಿರುವ ಭಾರತೀಯ ಉದ್ಯಮಿಗಳಾಗಿದ್ದಾರೆ. ಈ ಇಬ್ಬರು ಉದ್ಯಮಿಗಳ ಕಂಪನಿಗಳು ಶಕ್ತಿ, ಮೂಲಸೌಕರ್ಯ, ತಂತ್ರಜ್ಞಾನ, ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿವೆ.

ಗೌತಮ್ ಅದಾನಿ (ಅದಾನಿ ಗ್ರೂಪ್):

ಅದಾನಿ ಗ್ರೂಪ್ 2024ರಲ್ಲಿ ಅಮೆರಿಕದಲ್ಲಿ $10 ಬಿಲಿಯನ್ (ಸುಮಾರು ₹83,000 ಕೋಟಿ) ಹೂಡಿಕೆಯ ಯೋಜನೆಯನ್ನು ಘೋಷಿಸಿತ್ತು. ಇದು ಶಕ್ತಿ (ವಿಶೇಷವಾಗಿ ಹಸಿರು ಶಕ್ತಿ) ಮತ್ತು ಮೂಲಸೌಕರ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಹೂಡಿಕೆಯು ಭಾರತೀಯ ಕಂಪನಿಗಳು ಅಮೆರಿಕಾದಲ್ಲಿ ಮಾಡಲಾದ ಒಟ್ಟು $40 ಬಿಲಿಯನ್ ಹೂಡಿಕೆಯಲ್ಲಿ ಸುಮಾರು 25% ಪಾಲನ್ನು ಹೊಂದಿದೆ.

ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್):

ವಾಸ್ತವದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ನೇರ ಹೂಡಿಕೆಯ ನಿಖರ ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ ಎಂದು ವರದಿಗಳು ಹೇಳುತ್ತವೆ. ಅದಾಗ್ಯೂ ಅಂದಾಜಿನ ಪ್ರಕಾರ, ಅಮೆರಿಕಾದಲ್ಲಿ ಭಾರತೀಯರು ಹೂಡಿಕೆ ಮಾಡಿರುವ ಒಟ್ಟು ಮೊತ್ತದ 10-15% ಪಾಲಿನಷ್ಟಿದೆ ಎನ್ನಲಾಗಿದೆ.

ಮುಖೇಶ್ ಅಂಬಾನಿಯ ರಿಲಯನ್ಸ್‌ ಸಂಸ್ಥೆಯು ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ ವ್ಯವಹಾರಗಳನ್ನು ನಡೆಸುತ್ತಿದೆ. ಕಂಪನಿಯು ಅಮೆರಿಕದಿಂದ $33 ಬಿಲಿಯನ್ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದು, ಶಕ್ತಿ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ ಎನ್ನಲಾಗಿದೆ. Jio Platforms ಮೂಲಕ ಡಿಜಿಟಲ್ ಸೇವೆಗಳು ಮತ್ತು ಟೆಕ್ ಆವಿಷ್ಕಾರಗಳನ್ನು, ರೀಟೇಲ್ ಮತ್ತು ಇ-ಕಾಮರ್ಸ್ ವಿಭಾಗಗಳಲ್ಲಿ ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ.

ಇತರ ಗಮನಾರ್ಹ ಭಾರತೀಯ ಕಂಪನಿಗಳ ಹೂಡಿಕೆ:

ಅದಾನಿ ಮತ್ತು ಅಂಬಾನಿ ಮಾತ್ರವಲ್ಲದೆ ಭಾರತದ ಇತರ ಕಂಪನಿಗಳು ಕೂಡಾ ಅಮೆರಿಕದಲ್ಲಿ ಗಣನೀಯ ಹೂಡಿಕೆ ಮಾಡಿವೆ:

  • ಟಾಟಾ ಗ್ರೂಪ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ಮೂಲಕ $20 ಬಿಲಿಯನ್ಗಿಂತ ಹೆಚ್ಚಿನ ವಿಲೀನ-ಸ್ವಾಧೀನ (M&A) ಒಪ್ಪಂದಗಳನ್ನು ಮಾಡಿಕೊಂಡಿದೆ.
  • ಆದಿತ್ಯ ಬಿರ್ಲಾ ಗ್ರೂಪ್: 2025ರಲ್ಲಿ ಟೆಕ್ಸಾಸ್‌ನಲ್ಲಿ $50 ಮಿಲಿಯನ್ ಹೂಡಿಕೆಯೊಂದಿಗೆ ಎಪಾಕ್ಸಿ ರೆಸಿನ್ ಉತ್ಪಾದನಾ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ.
  • ಒಯೊ: 2025ರಲ್ಲಿ ಅಮೆರಿಕದ G6 ಹಾಸ್ಪಿಟಾಲಿಟಿಯ ಡಿಜಿಟಲ್ ಆಸ್ತಿಗಳಲ್ಲಿ $10 ಮಿಲಿಯನ್ (₹86.69 ಕೋಟಿ) ಹೂಡಿಕೆ ಘೋಷಿಸಿದೆ.
  • ಜಯ್ ಚೌಧರಿ (Zscaler): ಜಯ್ ಚೌಧರಿ ಅವರ Zscaler ಕಂಪನಿಯು ಸೈಬರ್‌ಸೆಕ್ಯುರಿಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಅವರ ಆಸ್ತಿಯ ಮೌಲ್ಯ $9.37 ಬಿಲಿಯನ್ ಆಗಿದೆ. ಕದನ ವಿರಾಮ ಒಪ್ಪದಿದ್ದರೆ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  2019 ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ | ಎಲ್ಲಾ ಒಂಬತ್ತು ಆರೋಪಿಗಳು ದೋಷಿಗಳು ಎಂದು ತೀರ್ಪು

2019 ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ | ಎಲ್ಲಾ ಒಂಬತ್ತು ಆರೋಪಿಗಳು ದೋಷಿಗಳು ಎಂದು ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...