ತಮಿಳುನಾಡಿನ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ ಬಹುನಿರೀಕ್ಷಿತ ತೀರ್ಪು ಬುಧವಾರ ಹೊರಬಿದ್ದಿದ್ದು, ಕೊಯಮತ್ತೂರಿನ ಮಹಿಳಾ ವಿಶೇಷ ನ್ಯಾಯಾಲಯವು ಎಲ್ಲಾ ಒಂಬತ್ತು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ. ದುಷ್ಕರ್ಮಿಗಳ ಗುಂಪೊಂದು ಮಹಿಳೆಯರನ್ನು ಹುಸಿ ಸ್ನೇಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದ ಈ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. 2019 ರ ಪೊಲ್ಲಾಚಿ ಲೈಂಗಿಕ
ನ್ಯಾಯಮೂರ್ತಿ ನಂದಿನಿ ದೇವಿ ನೇತೃತ್ವದ ಮಹಿಳಾ ಪೀಠವು, ಆರೋಪಿಗಳಾದ ತಿರುನಾವುಕರಸು, ಸಬರೀಶನ್, ವಸಂತ ಕುಮಾರ್, ಸತೀಶ್, ಮಣಿವಣ್ಣನ್, ಹರನ್‌ಪಾಲ್, ಬಾಬು, ಅರುಳನಂತಮ್ ಮತ್ತು ಅರುಣ್ ಕುಮಾರ್ ಅವರನ್ನು ಕಾನೂನಿನ ಬಹು ವಿಭಾಗಗಳ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ. ನ್ಯಾಯಾಲಯವು ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಸಂತ್ರಸ್ತರೊಬ್ಬರು ಕಳ್ಳತನದ ದೂರನ್ನು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿತ್ತು. ತನಿಖೆಯ ವೇಳೆ ಇದು ದೊಡ್ಡ ಸಂಘಟಿತ ಲೈಂಗಿಕ ದೌರ್ಜನ್ಯ ಎಂದು ತಿಳಿದುಬಂದಿತ್ತು. ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ವೀಡಿಯೊಗಳು ವೈರಲ್ ಆದ ನಂತರ, ಆಗಿನ ಆಡಳಿತಾರೂಢ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ವಿರುದ್ಧ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ನಡೆದಿದ್ದವು.
ಜೊತೆಗೆ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಇತರ ವಿರೋಧ ಪಕ್ಷಗಳು ಈ ವಿಷಯದ ಬಗ್ಗೆ ಒಟ್ಟುಗೂಡಿ ಹೋರಾಟ ಮಾಡಿದ್ದರಿಂದ ರಾಜಕೀಯ ಚರ್ಚೆಯನ್ನೂ ಹುಟ್ಟುಹಾಕಿತ್ತು. ಪ್ರಕರಣವು ನ್ಯಾಯ ಮತ್ತು ಮಹಿಳಾ ಸುರಕ್ಷತೆಗಾಗಿ ವ್ಯವಸ್ಥಿತ ಸುಧಾರಣೆಯನ್ನು ಸರ್ಕಾರಕ್ಕೆ ಒತ್ತಾಯಿಸಿದ್ದವು.
ಆರಂಭದಲ್ಲಿ ಪ್ರಕರಣವನ್ನು ನಿರ್ವಹಿಸುತ್ತಿದ್ದ ಅಪರಾಧ ತನಿಖಾ ಇಲಾಖೆಯು ಸಾರ್ವಜನಿಕ ಒತ್ತಡದ ನಂತರ ಅದನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಿತ್ತು.
ವಿಚಾರಣೆಯ ಉದ್ದಕ್ಕೂ, ಸರ್ಕಾರಿ ವಕೀಲರು 50 ಕ್ಕೂ ಹೆಚ್ಚು ಸಾಕ್ಷಿಗಳು, 200 ಕ್ಕೂ ಹೆಚ್ಚು ದಾಖಲೆಗಳು ಮತ್ತು 400 ಡಿಜಿಟಲ್ ಸಾಕ್ಷ್ಯಗಳನ್ನು ಹಾಜರುಪಡಿಸಿದ್ದರು. ಎಂಟು ಸಂತ್ರಸ್ತರು ಸಾಕ್ಷ್ಯ ಹೇಳಲು ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಮತ್ತು ಆರೋಪಿಗಳು 50 ಪ್ರಶ್ನೆಗಳಿಗೆ ಲಿಖಿತವಾಗಿ ಪ್ರತಿಕ್ರಿಯಿಸಿದ್ದರು. 2019 ರ ಪೊಲ್ಲಾಚಿ ಲೈಂಗಿಕ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಕ್ಸಲರೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿ: ಕೇಂದ್ರ ಸರ್ಕಾರಕ್ಕೆ ಭಾರತ್ ಬಚಾವೋ ಆಂದೋಲನ ಒತ್ತಾಯ
ಕೇಂದ್ರವು ನಕ್ಸಲರೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಬೇಕು: ಭಾರತ್ ಬಚಾವೋ ದೆಹಲಿ ಭೇಟಿ ವರದಿ