“ಬಿಲ್ಕಿಸ್ ಬಾನೋ ಪ್ರಕರಣದ 11 ಅಪರಾಧಿಗಳು 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡುಬಂದಿದೆ ಮತ್ತು ಕೇಂದ್ರ ಸರ್ಕಾರವು ಅಪರಾಧಿಗಳ ಬಿಡುಗಡೆಗೆ ಅನುಮೋದನೆ ನೀಡಿದೆ” ಎಂದು ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೈದಿಗಳಿಗೆ ನೀಡಲಾದ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಗುಜರಾತ್ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. “ಪೊಲೀಸ್ ವರಿಷ್ಠಾಧಿಕಾರಿ, ಸಿಬಿಐ, ಮುಂಬೈ ವಿಶೇಷ ಅಪರಾಧ ವಿಭಾಗ ಮತ್ತು ವಿಶೇಷ ಸಿವಿಲ್ ನ್ಯಾಯಾಧೀಶರು (ಸಿಬಿಐ), ಗ್ರೇಟರ್ ಬಾಂಬೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್” ಕಳೆದ ವರ್ಷದ ಮಾರ್ಚ್‌ನಲ್ಲಿ ಕೈದಿಗಳ ಬಿಡುಗಡೆಯನ್ನು ವಿರೋಧಿಸಿತ್ತು.
The affidavit filed by the Gujarat Govt shows that SP, CBI, SCB, Mumbai and Special Judge(CBI) Mumbai opposed the remission of convicts’ sentence. MHA recommended premature release of #BilkisBano case convicts. pic.twitter.com/yHihJZwSJ3
— Live Law (@LiveLawIndia) October 17, 2022
ಗೋಧ್ರಾ ಉಪ ಕಾರಾಗೃಹದ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಸಿಬಿಐ ಅಧಿಕಾರಿಯು, “ಇಲ್ಲಿನ ಅಪರಾಧವು ಘೋರ ಮತ್ತು ಗಂಭೀರವಾಗಿದೆ. ಆದ್ದರಿಂದ ಅವರನ್ನು ಅಕಾಲಿಕವಾಗಿ ಬಿಡುಗಡೆ ಮಾಡಲಾಗುವುದಿಲ್ಲ. ಅವರಿಗೆ ಯಾವುದೇ ವಿನಯವನ್ನು ನೀಡಲಾಗುವುದಿಲ್ಲ” ಎಂದು ಹೇಳಿದ್ದರು.
ಮುಂಬೈನಲ್ಲಿ ವಿಚಾರಣೆ ನಡೆಸಲಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರದ 2008ರ ನೀತಿ ಅನ್ವಯವಾಗಬೇಕು ಎಂದು ಸಿವಿಲ್ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು.
“ಇಲ್ಲಿನ ಎಲ್ಲಾ ಆರೋಪಿಗಳು ಅಮಾಯಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳೆಂದು ಕಂಡುಬಂದಿದೆ. ಅಪರಾಧಿಗಳಿಗೆ ಸಂತ್ರಸ್ತರು ಶತ್ರುಗಳಾಗಿರಲಿಲ್ಲ ಅಥವಾ ಸಂತ್ರಸ್ತೆಯೊಂದಿಗೆ ಯಾವುದೇ ಸಂಬಂಧವೂ ಇರಲಿಲ್ಲ. ಸಂತ್ರಸ್ತರು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಮಾತ್ರ ಅಪರಾಧ ಎಸಗಲಾಗಿದೆ. ಈ ವೇಳೆ ಅಪ್ರಾಪ್ತ ಮಕ್ಕಳನ್ನೂ ಬಿಡಲಿಲ್ಲ. ಇದು ಮಾನವೀಯತೆಯ ವಿರುದ್ಧದ ಅಪರಾಧದ ಅತ್ಯಂತ ಕೆಟ್ಟ ರೂಪವಾಗಿದೆ. ಇದು ಸಮಾಜದ ಆತ್ಮಸಾಕ್ಷಿಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಸಿವಿಲ್ ನ್ಯಾಯಾಧೀಶರು ಹೇಳಿದ್ದರು.
ಆದರೆ ಮೇ 13, 2022ರಂದು ಸುಪ್ರೀಂಕೋರ್ಟ್ ಅಪರಾಧಿಗಳಲ್ಲಿ ಒಬ್ಬರು ಸಲ್ಲಿಸಿದ ಮನವಿಯನ್ನು ಪರಿಶೀಲಿಸುತ್ತಾ, “ಸೂಕ್ತ ಸರ್ಕಾರ” ತೆಗೆದುಕೊಳ್ಳಲು ಸರ್ಕಾರಕ್ಕೆ ತಿಳಿಸಿತ್ತು.
ಗುಜರಾತ್ ಸರ್ಕಾರದ ಅಫಿಡವಿಟ್‌ನಲ್ಲಿ 1992ರ ನೀತಿಯನ್ನು ಉಲ್ಲೇಖಿಸಲಾಗಿದೆ. “ಈ ನೀತಿಯ ಪ್ರಕಾರ ಜೈಲಿನ ಇನ್ಸ್‌ಪೆಕ್ಟರ್ ಜನರಲ್ ರವರು ಅಪರಾಧಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಜಿಲ್ಲಾ ಪೊಲೀಸ್ ಅಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್, ಜೈಲು ಅಧೀಕ್ಷಕರು ಮತ್ತು ಸಲಹಾ ಮಂಡಳಿ ಸಮಿತಿಯ ಅಭಿಪ್ರಾಯವನ್ನು ಪಡೆಯುವುದು ಕಡ್ಡಾಯವಾಗಿದೆ. ಅದರ ನಂತರ, ಜೈಲಿನ ಇನ್ಸ್‌ಪೆಕ್ಟರ್ ಜನರಲ್ ಅವರು ನಾಮಮಾತ್ರ ಪಟ್ಟಿಯ ಪ್ರತಿ ಮತ್ತು ತೀರ್ಪಿನ ಪ್ರತಿಯೊಂದಿಗೆ ತಮ್ಮ ಅಭಿಪ್ರಾಯವನ್ನು ನೀಡುವುದಕ್ಕಾಗಿ ಸರ್ಕಾರಕ್ಕೆ ಶಿಫಾರಸನ್ನು ಕಳುಹಿಸಲು ಕಡ್ಡಾಯ. ಇದಲ್ಲದೆ ಅಕಾಲಿಕ ಬಿಡುಗಡೆಯ ಅರ್ಜಿಯ ಪರಿಗಣನೆಯ ಸಮಯದಲ್ಲಿ ಜೈಲ್ ಸಲಹಾ ಮಂಡಳಿಯು 1992ರ ನೀತಿಯನ್ನು ಅನುಸರಿಸುತ್ತದೆ” ಎಂದು ಸರ್ಕಾರ ತಿಳಿಸಿದೆ.
ಸರ್ಕಾರವು ಹಲವಾರು ಅಧಿಕಾರಿಗಳ ಅಭಿಪ್ರಾಯವನ್ನು ಕೇಳಿದ ಬಳಿಕ ನಿರ್ಧಾರ ಪ್ರಕಟಿಸಿರುವುದಾಗಿ ತಿಳಿಸಿದೆ. ಪೊಲೀಸ್ ಸೂಪರಿಂಟೆಂಡೆಂಟ್, ಸಿಬಿಐ, ವಿಶೇಷ ಅಪರಾಧ ವಿಭಾಗ (ಮುಂಬೈ); ಗ್ರೇಟರ್ ಬಾಂಬೆಯ ವಿಶೇಷ ಸಿವಿಲ್ ನ್ಯಾಯಾಧೀಶರು (CBI), ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್; ದಾಹೋದ್ ಪೊಲೀಸ್ ಸೂಪರಿಂಟೆಂಡೆಂಟ್; ದಾಹೋದ್‌ನ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ; ಗೋಧ್ರಾ ಉಪ-ಜೈಲಿನ ಜೈಲ್ ಸೂಪರಿಂಟೆಂಡೆಂಟ್, ಜೈಲು ಸಲಹಾ ಸಮಿತಿ; ಅಹಮದಾಬಾದ್ ಜೈಲುಗಳ ಹೆಚ್ಚುವರಿ ಡೈರೆಕ್ಟರ್ ಜನರಲ್ ಅವರ ಅಭಿಪ್ರಾಯಗಳನ್ನು ಬಿಡುಗಡೆಯ ಮೊದಲು ಕೇಳಲಾಗಿದೆ. ಮೊದಲ ಇಬ್ಬರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಅವರ ಬಿಡುಗಡೆಗೆ ಶಿಫಾರಸು ಮಾಡಿದ್ದಾರೆ ಎಂದು ಸರ್ಕಾರ ಹೇಳಿದೆ.
ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಾಗಿರುವುದರಿಂದ, ರಾಜ್ಯವು ತನ್ನ ಶಿಫಾರಸನ್ನು ಕೇಂದ್ರಕ್ಕೆ ಸಲ್ಲಿಸಿದೆ. “ಕೇಂದ್ರವು 11 ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ” ಎಂದು 11.07.2022ರ ಪತ್ರವನ್ನು ಅಫಡವಿಟ್‌ನಲ್ಲಿ ಸಲ್ಲಿಸಲಾಗಿದೆ.
“…ರಾಜ್ಯ ಸರ್ಕಾರವು ಎಲ್ಲಾ ಅಭಿಪ್ರಾಯಗಳನ್ನು ಪರಿಗಣಿಸಿದೆ. 11 ಕೈದಿಗಳು ಜೈಲಿನಲ್ಲಿ 14 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯನ್ನು ಪೂರ್ಣಗೊಳಿಸಿರುವುದರಿಂದ ಮತ್ತು ಅವರ ನಡವಳಿಕೆ ಉತ್ತಮವಾಗಿದೆ ಎಂದು ಕಂಡುಬಂದ ಕಾರಣ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದೆ.
ಸರ್ಕಾರವು ತನ್ನ 1992ರ ನೀತಿಯ ಪ್ರಕಾರ ಕೈದಿಗಳನ್ನು ಬಿಡುಗಡೆ ಮಾಡಿದೆ ಹೊರತು, ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಕೈದಿಗಳಿಗೆ ನೀಡಿದ ಉಪಶಮನದ ನಿರ್ಣಯದಿಂದ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಗೋಧ್ರಾ ನಂತರದ ಗಲಭೆಗಳ ಸಂದರ್ಭದಲ್ಲಿ ದಹೋದ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನಲ್ಲಿ ಮಾರ್ಚ್ 3, 2002 ರಂದು ಜನಸಮೂಹದಿಂದ ಹತ್ಯೆಗೀಡಾದ 14 ಮಂದಿಯಲ್ಲಿ ಬಿಲ್ಕಿಸ್ ಅವರ ಮೂರು ವರ್ಷದ ಮಗಳು ಸಲೇಹಳೂ ಸೇರಿದ್ದರು. ಆ ಸಮಯದಲ್ಲಿ ಬಿಲ್ಕಿಸ್ ಗರ್ಭಿಣಿಯಾಗಿದ್ದರು.
ಈ ವರ್ಷದ ಆಗಸ್ಟ್ 15ರಂದು ಗುಜರಾತ್ ಸರ್ಕಾರವು 2008ರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಪ್ರಕರಣದ ಎಲ್ಲಾ 11 ಅಪರಾಧಿಗಳನ್ನು ಬಿಡುಗಡೆ ಮಾಡಿತು.
ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಶಿಕ್ಷಣತಜ್ಞೆ ರೂಪ್ ರೇಖಾ ವರ್ಮಾ, ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಬಿಲ್ಕಿಸ್ ಬಾನೋ ಪ್ರಕರಣದ ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ ಎರಡು ಅರ್ಜಿಗಳ ಆಧಾರದಲ್ಲಿ ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಕೇಂದ್ರ ಸರ್ಕಾರದ ಅನುಮತಿ ಇಲ್ಲದೆಯೇ ಕ್ರಮ ಜರುಗಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.



ಇದಕ್ಕಿಂತಲೂ ದುಃಕಕರವಾದ ಮತ್ತು ಹೀನಾಯವಾದ ಸಂಗತಿ ಮತ್ತೊಂದು ಇರಲಾರದು. ಪ್ರಬುತ್ವ ಜಾತಿ, ಜನಾಂಗ, ದರ್ಮಗಳ ನಡುವೆ ತಾರತಮ್ಯವನ್ನು ಮಾಡಬಾರದು.
Ppl can’t expect more than this from Modi