Homeಕರ್ನಾಟಕಮತಕ್ಕಾಗಿ ದಲಿತರನ್ನು ಒಡೆಯಲಾಗುತ್ತಿದೆ: ಶ್ರೀನಿವಾಸ ಪ್ರಸಾದ್ ಆತಂಕ

ಮತಕ್ಕಾಗಿ ದಲಿತರನ್ನು ಒಡೆಯಲಾಗುತ್ತಿದೆ: ಶ್ರೀನಿವಾಸ ಪ್ರಸಾದ್ ಆತಂಕ

- Advertisement -
- Advertisement -

“ಕೇವಲ ಮತಗಳಿಗಾಗಿ ದಲಿತರನ್ನು ಒಡೆದು ಆಳಲಾಗುತ್ತಿದೆ” ಎಂದು ಚಾಮರಾಜನಗರ ಬಿಜೆಪಿ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ಇದೆಲ್ಲ ಒಡೆದು ಆಳುವ ನೀತಿ. ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದ್ದರು. ಈಗ ವೋಟಿಗಾಗಿ ಒಡೆದು ಆಳುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ತೀರ್ಮಾನ ಕೈಗೊಂಡ ನಂತರ ಒಳಮೀಸಲಾತಿ ಚರ್ಚೆಯು ಮುನ್ನೆಲೆಗೆ ಬಂದಿದೆ. ಎಡಗೈ, ಬಲಗೈ ಪಂಗಡ ಎಂದು ದಲಿತರಲ್ಲಿ ಒಡಕು ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಈ ನಡೆಯು ಮತ್ತೆ ಹಿಂದಕ್ಕೆ ಹೋಗುವ ಚಲನೆಯಂತಿದೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಎಚ್ಚರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಮ್ಮಲ್ಲಿ ಎಡಗೈ, ಬಲಗೈ ಅಂತೆಲ್ಲ ಇದೆ. ನಾನು ಎಲ್ಲವನ್ನೂ ಹತ್ತಿರದಿಂದ ನೋಡಿದ್ದೇನೆ. ಅಂತಹ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ. ಅದೆಲ್ಲವನ್ನೂ ದೂರ ಇಟ್ಟು ಒಟ್ಟಿಗೆ ಇರಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

“ಮತಕ್ಕೋಸ್ಕರ ಜನರನ್ನು ಆಕರ್ಷಿಸಲು ಅಸ್ಪೃಶ್ಯತೆ ನಿವಾರಣೆಯ ಮಾತುಗಳನ್ನಾಡುವುದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಿದ್ದೇನೆ. ಇಂತಹ ವಿಚಾರಗಳನ್ನು ಅರಿಯದೆ ಕುಳಿತ್ತಿಲ್ಲ” ಎಂದು ಹೇಳಿದ್ದಾರೆ.

“ದೇಶದ ದಲಿತರ ಸ್ಥಿತಿಗತಿಯನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದೇನೆ. ಇವತ್ತಿಗೂ ಹಳ್ಳಿಗಳಲ್ಲಿ ಪ್ರತ್ಯೇಕ ಕಾಲೋನಿಗಳಿವೆ. ನಗರದ ಸ್ಲಂಗಳಲ್ಲಿ ದಲಿತರು ಜೀವನ ನಡೆಸುತ್ತಿದ್ದಾರೆ. ಶಿಕ್ಷಣ, ಸಂಪತ್ತು, ಅಧಿಕಾರ ಇಲ್ಲದ ಈ ಸಮೂಹವನ್ನು ಯಾವ ರೀತಿ ಮುನ್ನೆಲೆಗೆ ತರಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದೇನೆ” ಎಂದು ತಿಳಿಸಿದ್ದಾರೆ.

“ಅಸ್ಪೃಶ್ಯತೆ ಮಾನಸಿಕ ಕಾಯಿಲೆ. ಹಿಂದೂ ಧರ್ಮ ಒಪ್ಪಿಕೊಳ್ಳುವುದೆಂದರೆ ಅಸಮಾನತೆ ಒಪ್ಪಿಕೊಂಡಂತೆ. ಜಾತೀಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶಾಂತಿ, ನೆಮ್ಮದಿ, ಸಹಬಾಳ್ವೆಗಾಗಿ ಅಂಬೇಡ್ಕರ್‌ ತೋರಿದ ಬುದ್ಧ ಮಾರ್ಗದಲ್ಲಿ ನಡೆಯಬೇಕು” ಎಂದು ಸಲಹೆ ನೀಡಿದ್ದಾರೆ.

“ದಲಿತರಲ್ಲಿ ಇರುವ ಆಂತರಿಕ ಶತ್ರುಗಳನ್ನೂ ದೂರ ಮಾಡಬೇಕು. ಕುಡಿತ ಬಿಡಿ, ದುಡಿಯುವ ಜನ ದುಡ್ಡು ಉಳಿಸಿಕೊಳ್ಳಿ. ಸರ್ಕಾರವೇ ಉಚಿತ ಶಿಕ್ಷಣ ಕೊಡುತ್ತಿದೆ; ಮಕ್ಕಳನ್ನು ಶಾಲೆಗೆ ಸೇರಿಸಿ. ಐದಾರು ಮಕ್ಕಳು ಬೇಡ, ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ.

ಅಭಿವೃದ್ಧಿಗಿಂತ ಕೇವಲ ಮತಕ್ಕಾಗಿ ರಾಜಕಾರಣಿಗಳಿಂದ ದಲಿತರನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಇದು ಬ್ರಿಟಿಷರು ಅನುಸರಿಸುತ್ತಿದ್ದ ಒಡೆದಾಳುವ ನೀತಿಗಿಂತ ಅತ್ಯಂತ ಅಪಾಯಕಾರಿಯಾಗಿದೆ. ದಲಿತರ ಒಗ್ಗಟ್ಟು ಮುರಿಯಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?

ರಾಜಕೀಯ ನಿವೃತ್ತಿ ಕುರಿತು ಮಾತನಾಡಿರುವ ಅವರು, “2024ಕ್ಕೆ ನನ್ನ ರಾಜಕೀಯ ಜೀವನಕ್ಕೆ 50 ವರ್ಷಗಳು ತುಂಬುತ್ತವೆ. ಇನ್ನು ಒಂದೂವರೆ ವರ್ಷಕ್ಕೆ ಸಂಸದ ಸ್ಥಾನದ ಅವಧಿಯೂ ಮುಕ್ತಾಯವಾಗುತ್ತದೆ. ಅಲ್ಲಿಗೆ ನಾನು ರಾಜಕೀಯ ಮತ್ತು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ” ಘೋಷಿಸಿದ್ದಾರೆ.

“1997ರಲ್ಲಿ ಜನತಾ ಪಕ್ಷದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದೆ. ನಂತರ 1980ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದೆ. ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ” ಎಂದಿದ್ದಾರೆ.

ಸಿದ್ದಲಿಂಗಯ್ಯನವರ ಹಾಡಿಗೆ ಕಣ್ಣೀರು: ಕವಿ ಸಿದ್ದಲಿಂಗಯ್ಯನವರು ರಚಿಸಿರುವ ನಾಡನಡುವಿನಿಂದ ಸಿಡಿದ ನೋವಿನ ಕೂಗೆ ಹಾಡನ್ನು ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರ ತಂಡ ಹಾಡುತ್ತಿರುವಾಗ ವಿ.ಶ್ರೀನಿವಾಸಪ್ರಸಾದ್ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಹಾಡು ಮುಗಿಯುವ ತನಕವೂ ಅವರು ಕಣ್ಣೀರು ಸುರಿಸಿದ್ದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಕರ್ನಾಟಕದ ಪ್ರಜ್ಞಾವಂತ ರಾಜಕಾರಣಿಗಳಲ್ಲಿ ಒಬ್ಬರಾದ ಶ್ರೀನಿವಾಸ ಪ್ರಸಾದ್, ಬಿ.ಜೆ.ಪಿ.ಗೆ ಹೋಗಿ ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಈಗ ಅವರು ಏನು ಹೇಳಿದರೂ, ಅದು ರೈಲು ಹೋದಮೇಲೆ ಕರೀದಿಸಿದ ಟಿಕೆಟ್ ನಂತೆ.

  2. Yes, very s Prasad for acquiring some position he has left the ideologies of Ambedkar and become a minister in bjp ,now he is recalling his memory which is of no use ,his followers would do the same and are doing it ,All Dalit leaders are inching towards bjp and rss it’s a sin particularly for Dalits to join and support brahmanism once they were belittling all sudras , what sort of a person this Prasad is,no face value for him now,at least if he is repenting now let him tell his followers to support congress irrespective of what congress did or not ( it’s his individual perception that congress didn’t do anything to his community ppl ) it’s congress which gave a voice with human touch a lot and moral strength to these communities against the wishes of upper caste’s, if not they would have to stitch and polish boots still not had bjp ruled hope community would support in future 🙏👏

  3. ದಲಿತ ಎಂಬುದನ್ನು ತಮ್ಮ ಅಧಿಕಾರದ ಮೆಟ್ಟಿಲುಗಳನ್ನಾಗಿ ಉಪಯೋಗಿಸಿ ಕೊಂಡು ಅಧಿಕಾರ ಅನುಭವಿಸುವವರೆಗೆ ದಲಿತರ ಬಗೆಗಿನ ಕಾಳಜಿಯು ನೇಪತ್ಯಕ್ಕೆ ಸರಿದಿರುತ್ತದೆ. ಶ್ರೀನಿವಾಸ್ ಪ್ರಸಾದ್ ರವರಂತ ನಾಯಕರುಗಳು ಈಗಲೂ ಅಷ್ಟೇ ಅಧಿಕಾರ ರಾಜಕಾರಣ ಬಿಟ್ಟು ನಿಜವಾದ ದಲಿತ ಕಾಳಜಿಯನ್ನು ಮುಂದಿಟ್ಟುಕೊಂಡು ದಲಿತರನ್ನು ಒಗ್ಗೂಡಿಸಿ, ಏಕತೆಯನ್ನು ಮೂಡಿಸಿ, ಅವರು ಅನುಭವಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಸಮಾನತೆಯನ್ನು ಮನವರಿಕೆ ಮಾಡಿಕೊಟ್ಟು ಜಾಗ್ರತಾರಾಗಲು ಹಾಗೂ ಯಾವೊಂದು ಪಕ್ಷಗಳ ಸವಿ ಮಾತಿಗೆ ಮರುಳಾಗದಂತೆ ಎಚ್ಚರಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು. ತಪ್ಪಿದಲ್ಲಿ ದಲಿತರನ್ನು ದಿಕ್ಕುತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಆತುರದಲ್ಲಿದ್ದಾರೆ ರಾಜಕಾರಣಿಗಳು.

  4. Mr Prasad u have misused the community for ur personnel gains by joining hands with hindutva and communal organisations, what morality u have to speak now for Dalits, u have followed brahmanya by joining hands with RSS affiliate to bjp for enjoying power , better u have announced to quit but it is so late any how Ambedkar bless with his ideologies to be inculcated in u to spread secular inclusive society in order to have peace in the country 👌👏

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...