Homeಮುಖಪುಟಐಸಿಎಂಆರ್ ಎಷ್ಟು ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸುತ್ತೀರಿ? ತೆಲಂಗಾಣ ಆರೋಗ್ಯ ಸಚಿವರ ಪ್ರಶ್ನೆ

ಐಸಿಎಂಆರ್ ಎಷ್ಟು ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸುತ್ತೀರಿ? ತೆಲಂಗಾಣ ಆರೋಗ್ಯ ಸಚಿವರ ಪ್ರಶ್ನೆ

- Advertisement -
- Advertisement -

ನಿಮ್ಮ ಐಸಿಎಂಆರ್ ಎಷ್ಟು ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸುತ್ತಿದೆ ನೀವು ಅದರ ಬಗ್ಗೆ ಯೋಚಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ತೆಲಂಗಾಣ ರಾಜ್ಯ ಆರೋಗ್ಯ ಸಚಿವ ಈತಲಾ ರಾಜೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು 1000 ವೆಂಟಿಲೇಟರ್‌ಗಳನ್ನು ಕೇಳಿದ್ದೇವೆ ಆದರೆ ನೀವು ನಮಗೆ ಕೇವಲ 50 ಮಾತ್ರ ನೀಡಿದ್ದೀರಿ. ಪ್ರಧಾನಮಂತ್ರಿಗಳ ಆದೇಶದ ಮೇರೆಗೆ ನಮಗೆ ಕಳಿಸಬೇಕಿದ್ದ ಯಂತ್ರಗಳನ್ನು ಐಸಿಎಂಆರ್ ಕೋಲ್ಕತ್ತಾಗೆ ಕಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ನಾವು ವೆಂಟಿಲೇಟರ್‌ಗಳಿಗಾಗಿ ಆದೇಶಿಸಿದ್ದೇವೆ ಆದರೆ ನೀವು ಅದನ್ನು ಕೋಲ್ಕತ್ತಾಗೆ ತಿರುಗಿಸಿದ್ದೀರಿ. ಇದು ಸರಿಯೇ ಎಂದು ತೆಲಂಗಾಣ ಆರೋಗ್ಯ ಸಚಿವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವು ನಮಗೆ ಸರಿಯಾದ ಸೌಲಭ್ಯ ಮತ್ತು ಆರ್ಥಿಕ ನೆರವು ನೀಡಿಲ್ಲ. ಆದರೂ ನಮ್ಮ ರಾಜ್ಯ ಸರ್ಕಾರ ಕೊವಿಡ್‌ ಅನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಎರಡು ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡ ನಂತರ ಐಸಿಎಂಆರ್ ಅದು ನಮ್ಮದಲ್ಲ ಎಂದು ಸ್ಪಷ್ಟನ ನೀಡಿತ್ತು.


ಇದನ್ನೂ ಓದಿ: ಕೊರೊನಾ ಕಾಲದಲ್ಲಿಯೂ ಬಡ್ಡಿಗೆ ಬಡ್ಡಿ ಸೇರಿಸಿ ಹಣ ವಸೂಲಿ: ಮುತ್ತೂಟ್ ಫೈನಾನ್ಸ್‌ನಿಂದ ಗ್ರಾಹಕರಿಗೆ ಕಿರುಕುಳ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...