HomeಮುಖಪುಟMNREGA ಮೊತ್ತ ಮೂರುಪಟ್ಟು ಹೆಚ್ಚಾಗದೆ ಗ್ರಾಮ ಭಾರತ ಕೋವಿಡ್ ಬಿಕ್ಕಟ್ಟಿನಿಂದ ಪಾರಾಗದು..

MNREGA ಮೊತ್ತ ಮೂರುಪಟ್ಟು ಹೆಚ್ಚಾಗದೆ ಗ್ರಾಮ ಭಾರತ ಕೋವಿಡ್ ಬಿಕ್ಕಟ್ಟಿನಿಂದ ಪಾರಾಗದು..

- Advertisement -
- Advertisement -

20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜಿನ ಬಡಾಯಿಯಲ್ಲಿ ಸಂತ್ರಸ್ತ ಜನರಿಗೆ ನೇರವಾಗಿ ದಕ್ಕುವುದು ಕೇವಲ 76,000 ಕೋಟಿ ಮಾತ್ರವೆಂದು ಈಗಾಗಲೇ ಹಲವಾರು ಸ್ವತಂತ್ರ ಅಧ್ಯಯನಗಳು ಸ್ಪಷ್ಟಪಡಿಸಿವೆ. ಹೀಗಾಗಿ ಈ ಕೋವಿಡ್ ಪ್ಯಾಕೇಜು ಜನರ ಬದುಕನ್ನು ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರಲು ಕಿಂಚಿತ್ತೂ ಸಹಾಯ ಮಾಡುವುದಿಲ್ಲವೆಂದು ಮೋದಿ ಮಿತ್ರರಾದ ಹಲವಾರು ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳೇ ಹೇಳುತ್ತಿವೆ.

ಅಷ್ಟೆಲ್ಲಾ ಹತಾಶೆಯ ನಡುವೆಯೂ MNREGA ಗೆ ಮೊದಲು ನೀಡಿದ್ದ 61,500 ಕೋಟಿ ಹಾಗು ಪ್ಯಾಕೇಜಿನ ಭಾಗವಾಗಿ ಹೆಚ್ಚುವರಿಯಾಗಿ ಒದಗಿಸಲಾದ 40,000, -ಒಟ್ಟು 1,05,000 ಕೋಟಿ- ಗ್ರಾಮ ಭಾರತವನ್ನು ಉದ್ಧಾರ ಮಾಡಲು ಸಾಕಾಗುವುದೆಂದು ಸರ್ಕಾರ ಹೇಳಿದ್ದನ್ನು ಬಹುಪಾಲು ಭಾರತ ಒಪ್ಪಿಕೊಂಡಿತ್ತು

ಆದರೆ ವಾಸ್ತವವೆಂದರೆ ಕೋವಿಡ್ ನ ಆರ್ಥಿಕ ಪರಿಣಾಮಗಳಿಂದ ಹಾಲಿ ಗ್ರಾಮೀಣ ಬಿಕ್ಕಟ್ಟು ಯಾವ ಪರಿಯಲ್ಲಿ ಉಲ್ಬಣಗೊಂಡಿದೆ ಎಂದರೆ ಭಾರತದ ಗ್ರಾಮಗಳನ್ನು ಉದ್ಧಾರವಾಗುವುದಿರಲಿ, ಇರುವಂತೆ ಉಳಿಸಿಕೊಳ್ಳಬೇಕೆಂದರೂ ಈಗ MNREGA ಒದಗಿಸಿರುವ ಸಂಪನ್ಮೂಲದ ಕನಿಷ್ಠ ಪಕ್ಷ ಮೂರೂ ಪಟ್ಟು ಸಂಪನ್ಮೂಲದ ಅತ್ಯಗತ್ಯವಿದೆಯೆಂದು CGBA ಯ ಮಂಪಿ ಬೋಸ್ ಮತ್ತು TERI ಶಂತನು ರಾಯ್ ಅವರ ಜಂಟಿ ಅಧ್ಯಯನವೊಂದು ತಿಳಿಸುತ್ತದೆ.

MNREGA ಬೇಡಿಕೆಯನ್ನಾಧರಿಸಿದ ಯೋಜನೆಯಾಗಿದ್ದು, ಗ್ರಾಮಗಳಲ್ಲಿ ಕೆಲಸ ಮಾಡಲು ನೋಂದಾಯಿಸಿಕೊಳ್ಳುವ ಪ್ರತಿಮನೆಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸವನ್ನು ಕಡ್ಡಾಯವಾಗಿ ಒದಗಿಸಬೇಕು. ಕಳೆದ 15 ವರ್ಷಗಳಲ್ಲಿ ಈ ಯೋಜನೆಯಿಂದಾಗಿ ಹಳ್ಳಿಗಾಡಿನಲ್ಲಿ ಭೂರಹಿತ ಕೂಲಿಗಳ ಬದುಕು ಮತ್ತು ಸ್ವಾಭಿಮಾನದ ಒಂದಷ್ಟು ರಕ್ಷಣೆಯಾದರೂ ಆಗಿದೆ. ಗ್ರಾಮೀಣ ಬಡಜನರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡು ಗ್ರಾಮಭಾರತದಲ್ಲಿ ನಡೆಯುತ್ತಿದ್ದ ಜೀತ-ಕಡಿಮೆ ಕೂಲಿಗಳ ಶೋಷಣೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗಿತ್ತು. ಹಾಗೆಯೇ ಗ್ರಾಮಕೂಲಿ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಾಗುವಂತೆ ಮಾಡಿತ್ತು.

ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ MNREGA ಪರಿಕಲ್ಪನೆಯನ್ನೇ ಪರೋಕ್ಷವಾಗಿ ರದ್ದುಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ.

ಉದಾಹರಣೆಗೆ : 2019-20ರ ಪರಿಷ್ಕೃತ ಬಜೆಟ್ಟಿನ ಪ್ರಕಾರ MNREGA ಯೋಜನೆಗೆ 71,000 ಕೋಟಿ ವೆಚ್ಚ ದಾಖಲಾಗಿದ್ದರು 2020-21 ರ ಬಜೆಟ್ಟಿನಲ್ಲಿ ಮೋದಿ ಸರ್ಕಾರ ಒದಗಿಸಿದ್ದು ಕೇವಲ 61,000 ಕೋಟಿ ಮಾತ್ರ. ಅಂದರೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಬೇಡಿಕೆಯು ಹೆಚ್ಚಿದೆಯೆಂದು ತಿಳಿದುಬಂದಿದ್ದರು ಕೂಡ ಉದ್ದೇಶಪೂರ್ವಕವಾಗಿ 10,000 ಕೋಟಿ ಯಷ್ಟು ಕಡಿಮೆ ಮಾಡಲಾಗಿದೆ.

– ಇದರಿಂದಾಗಿ 2019-20ರ ಸಾಲಿನಲ್ಲಿ 5.78 ಕೋಟಿ ಕುಟುಂಬಗಳು ಕೆಲಸಕ್ಕೆ ಅರ್ಜಿ ಹಾಕಿಕೊಂಡಿದ್ದರು ಕೆಲಸ ಕೊಟ್ಟಿದ್ದು ಮಾತ್ರ ಕೇವಲ 5.12 ಕೋಟಿ ಕುಟುಂಬಗಳಿಗೆ ಮಾತ್ರ.

– 2017-19ರ ಅವಧಿಯಲ್ಲಿ ಈ ಸಂಪನ್ಮೂಲ ಬೇಡಿಕೆಯಿದ್ದರೂ, ದುಡಿಯುವ ಕೈಗಳಿದ್ದರೂ ದೇಶದ ಯಾವ ರಾಜ್ಯಗಳಲ್ಲಿಯೂ 100 ದಿನಗಳ ಕೆಲಸವನ್ನು ಒದಗಿಸಲಾಗಿಲ್ಲ. 19 ಪ್ರಮುಖ ರಾಜ್ಯಗಳ ಪೈಕಿ 14 ರಾಜ್ಯಗಳಲ್ಲಿ 50 ದಿನಗಳ ಕೆಲಸವನ್ನೂ ಸಹ ಒದಗಿಸಲಾಗಿಲ್ಲ. ಇದರಲ್ಲಿ ಗುಜರಾತ್ ರಾಜ್ಯದದ್ದು ಎಲ್ಲಾ ರಾಜ್ಯಗಳಿಗಿಂತಲೂ ನಿಕೃಷ್ಟ ಪರಿಸ್ಥಿತಿ.

– ದೇಶದ ಬಹುಪಾಲು ಪ್ರಮುಖ ರಾಜ್ಯಗಳಲ್ಲಿ MNREGA ಕೂಲಿ ದರವು ಆಯಾ ರಾಜ್ಯಗಳು ನಿಗದಿ ಮಾಡಿರುವ ಕನಿಷ್ಠ ಕೂಲಿಗಿಂತ ಕಡಿಮೆ ಇದೆ.

ಉದಾಹರಣೆಗೆ ಉತ್ತರಪ್ರದೇಶದಲ್ಲಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಕೂಲಿ ದರ 318 ರು. ಗಳಾಗಿದ್ದರೂ ಆ ರಾಜ್ಯದಲ್ಲಿ ಕೊಡುತ್ತಿರುವ MNREGA ಕೂಲಿ ದರ ಮಾತ್ರ ಕೇವಲ 182 ರೂ.

ಅದೇ ರೀತಿ ಕರ್ನಾಟಕದಲ್ಲಿ ಘೋಷಿತ ಕನಿಷ್ಠ ಕೂಲಿ ರೂ. 350 ಆಗಿದ್ದರೂ MNREGA ಕೂಲಿ 246 ರೂ . ಮಾತ್ರ.

ಇದು ಕೋವಿಡ್ ಪೂರ್ವ ಪರಿಸ್ಥಿತಿ. ಈಗ..?

ಕೇಂದ್ರ ಸರ್ಕಾರವು ಮೊನ್ನೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರವೇ ಅಂದಾಜು 1 ಕೋಟಿ ಯಷ್ಟು ವಲಸೆ ಕಾರ್ಮಿಕರು ಹಳ್ಳಿಗಳಿಗೆ ಮರಳಿದ್ದಾರೆ. ಹಾಗು ಎಲ್ಲಾ ಬಗೆಯ ಆದಾಯ, ಉಳಿತಾಯವೂ ಕಳೆದುಕೊಂಡು ಕಂಗೆಟ್ಟಿದ್ದಾರೆ. ಹಾಗೂ ಅವರಲ್ಲಿ ಬಹುಪಾಲು ಜನ ಈ ಸದ್ಯಕ್ಕೆ ನಗರಗಳಿಗೆ ಮರಳುವ ಪರಿಸ್ಥಿತಿಯಲ್ಲೂ -ಮನಸ್ಥಿತಿಯಲ್ಲೂ ಇಲ್ಲ. ನಗರಗಳೂ ಕೂಡಾ ಈ ಸದ್ಯಕ್ಕೆ ಅವರಿಗೆ ಕೆಲಸ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ಹಾಗು ನಗರಗಳಲ್ಲಾಗಲಿ ಅಥವಾ ಗ್ರಾಮಗಳಲ್ಲಾಗಲಿ ಖಾಸಗಿ ಬಂಡವಾಳವು ಈ ಹೆಚ್ಚುವರಿ ಶ್ರಮಜೀವಿಗಳಿಗೆ ಜೀವನೋಪಾಯಗಳನ್ನು ಒದಗಿಸುವ ಪರಿಸ್ಥಿತಿಯಲ್ಲಿ ಇಲ್ಲ.

ಹೀಗಾಗಿ ಇಂದು ಭಾರತದ ಗ್ರಾಮಗಳು ಈ ಹೆಚ್ಚುವರಿ ಕೋವಿಡ್ ಭಾರವನ್ನು ತಡೆದುಕೊಳ್ಳಬೇಕೆಂದರೆ ಕಡ್ಡಾಯವಾಗಿ ಸರ್ಕಾರವೇ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳ ಮೇಲೆ ವೆಚ್ಚವನ್ನು ಮಾಡಬೇಕಿದೆ.

ಹೀಗಾಗಿ ಸರ್ಕಾರವು ಕೋವಿಡ್ ಸಂದರ್ಭದಲ್ಲಿ ಹೆಚ್ಚುವರಿ ಜನರಿಗಾಗಿ ಮತ್ತು ಹೆಚ್ಚುವರಿ ದಿನಗಳಿಗಾಗಿ ಅಂದರೆ ಕನಿಷ್ಠ ಮುಂದಿನ 200 ದಿನಗಳಿಗಾಗಿ ಘನತೆಯಿಂದ ಬದುಕಲು ಕನಿಷ್ಠ ಕೊಲಿ ಯನ್ನು ಒದಗಿಸುವಂತೆ MNREGA ವನ್ನು ಸಜ್ಜುಗೊಳಿಸಬೇಕಿದೆ.

ಈ ನಿಟ್ಟಿನಲ್ಲಿ CGBA ಯ ಮಂಪಿ ಬೋಸ್ ಮತ್ತು TERI ಶಂತನು ರಾಯ್ ಅವರು ಇಂದಿನ ಪರಿಸ್ಥಿತಿಯಲ್ಲಿ MNREGA ಯೋಜನೆಯ ಮೂಲಕ ಗ್ರಾಮಭಾರತವನ್ನು ಉಳಿಸಲು ಮತ್ತು ಬೆಳೆಸಲು ಎಷ್ಟು ಹಣ ಬೇಕಾಗಬಹುದೆಂದು ಅಂದಾಜು ಮಾಡಿದ್ದಾರೆ.

ಆ ಅಧ್ಯಯನದ ಪ್ರಕಾರ:

– ಈಗ ಕೊಡಲಾಗುತ್ತಿರುವ ಕೂಲಿ ದರದಲ್ಲೇ ಕನಿಷ್ಠ 100 ದಿನಗಳ ಕೆಲಸವನ್ನು ಒದಗಿಸಬೇಕೆಂದರೂ 1,05, 242 ಕೋಟಿ ರೂ . ಬೇಕಾಗುತ್ತದೆ. ಎಂದರೆ ಈಗ MNREGA ಗೆ ಕೋವಿಡ್ ಪ್ಯಾಕೇಜನ್ನು ಒಳಗೊಂಡು ಒದಗಿಸಲಾಗಿರುವ ಮೊತ್ತಕ್ಕಿಂತ 4000 ಕೋಟಿ ಹೆಚ್ಚು ಹಣ ಬೇಕಾಗುತ್ತದೆ.

– ಅಥವಾ ಇಂದಿನ ಬಿಕ್ಕಟ್ಟನ್ನು ಗಮನದಲ್ಲಿರಿಸಿಕೊಂಡು ಕೆಲಸ ಕೇಳುವ ಎಲ್ಲಾ ಕುಟುಂಬಗಳಿಗೂ ಆಯಾ ರಾಜ್ಯಗಳು ನಿಗದಿ ಮಾಡಿರುವ ಕನಿಷ್ಠ ಕೂಲಿ ದರವನ್ನು ನೀಡುವುದಾದರೆ ಈ ವರ್ಷ MNREGA ಯೋಜನೆಗೆ 1,56, 871 ಕೋಟಿ ಯನ್ನು ಒದಗಿಸಬೇಕಾಗುತ್ತದೆ. ಅಂದರೆ ಈಗ ಒದಗಿಸಿರುವುದಕ್ಕಿಂತ 55,371 ಕೋಟಿ ಹಣ ಹೆಚ್ಚಿಗೆ ಬೇಕಾಗುತ್ತದೆ.

– ಒಂದು ವೇಳೆ ಕೋವಿಡ್ ಬಿಕ್ಕಟ್ಟಿನ ದೀರ್ಘಾವಧಿ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು MNREGA ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಿ ಈಗ ಕೊಡುತ್ತಿರುವ ಸರಾಸರಿ MNREGA ಕೂಲಿಯನ್ನೇ ಕೊಡುವುದಾದರೆ ಈ ವರ್ಷ 2,10,483 ಕೋಟಿ ಅಗತ್ಯ ಬೀಳುತ್ತದೆ.

– MNREGA ಯೋಜನೆಯನ್ನು 200 ವಿಸ್ತರಿಸಿ ಆಯಾ ರಾಜ್ಯಗಳಲ್ಲಿ ನಿಗದಿ ಪಡಿಸಿರುವ ಹೆಚ್ಚುವರಿ ಕನಿಷ್ಠ ಕೂಲಿಯನ್ನು ಕೊಡುವುದಾದರೆ 3,13,741 ಕೋಟಿ ಬೇಕಾಗುತ್ತದೆ.

ಅಂದರೆ ಈಗ ಒಟ್ಟಾರೆಯಾಗಿ ಒದಗಿಸಿರುವುದಕ್ಕಿಂತ 2,08,741 ಕೋಟಿ ರೂ.ಗಳು ಮಾತ್ರ.

ಈ ಮೊತ್ತವು ನಮ್ಮ ಜಿಡಿಪಿಯ ಕೇವಲ ಶೇ. 1.41 ಭಾಗ ಮಾತ್ರ ಆಗುತ್ತದೆ. ಆದರೆ ಮೋದಿ ಸರ್ಕಾರ ಹೆಚ್ಚುವರಿಯಾಗಿ ಕೊಟ್ಟಿರುವುದು ಜಿಡಿಪಿಯ ಕೇವಲ ಶೇ. 0.26 ಮಾತ್ರ. ಆದರೂ ಪ್ರಚಾರ ಮಾತ್ರ ಜಿಡಿಪಿಯ ಶೇ. 10 ರಷ್ಟು..

ಈ ದೇಶದ 5000 ದೊಡ್ಡ ಉದ್ದಿಮೆಪತಿಗಳು ತಮ್ಮ ಲಾಭದ ದರ ಕಡಿಮೆಯಾಗುತ್ತಿದೆ ಎಂದು ಗೊಣಗಾಡಿದ್ದಕ್ಕೆ ಕಳೆದ ಸೆಪ್ಟೆಂಬರ್ ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಶೇ. 10 ರಷ್ಟು ಇಳಿಸಿ 1.46,000 ಕೋಟಿ ವರ್ಗಾವಣೆ ಮಾಡಿದ್ದು ಇದೆ ಮೋದಿ ಸರ್ಕಾರ…

ಅದು ಸಾಧ್ಯವಾಗಬಹುದಾದಲ್ಲಿ ಈ ದೇಶದ 80 ಕೋಟಿ ಯಷ್ಟಿರುವ ರೈತಾಪಿ ಮತ್ತು ಗ್ರಾಮೀಣ ಬಡಜನ ಕೋವಿಡ್ ಆಘಾತದಿಂದ ಬದುಕುಳಿಯಲು ಬೇಕಾಗಿರುವ 2,08,741 ಕೋಟಿ ರೂ ಅನ್ನು ಭಾರತ ಸರ್ಕಾರ ಕೊಡಲಾಗದೆ?

ಖಂಡಿತಾ ಸಾಧ್ಯ..

ಕೋವಿಡ್ ಅವಧಿಯಲ್ಲಿ ಅನಗತ್ಯವಾಗಿ ಹೆಚ್ಚಿಸಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಳೆಯಿಂದ ಭಾರತ ಸರ್ಕಾರ ಈ ವರ್ಷ 4 ಲಕ್ಷ ಕೋಟಿ ರೂ ಗಳನ್ನೂ ಸಂಗ್ರಹಿಸಲಿದೆ. ರೈತರ ಬದುಕಿಗೆ ಬೇಕಿರುವುದು ಅದರ ಅರ್ಧ ಭಾಗ ಅಷ್ಟೇ..

ಈ ದೇಶದ ಕೇವಲ 100 ದೊಡ್ಡ ಉದ್ದಿಮೆಪತಿಗಳ ಬಳಿ ಈ ದೇಶದ ರೈತ-ಕಾರ್ಮಿಕರ ಶ್ರಮವನ್ನು ಲೂಟಿ ಮಾಡಿ ಸಂಪಾದಿಸಿರುವ 25 ಲಕ್ಷ ಕೋಟಿ ರೂ.ಗಳಷ್ಟು ಸಂಪತ್ತಿದೆ. ಅದರ ಮೇಲೆ ಕೇವಲ ಶೇ. 1 ರಷ್ಟು ಸೆಸ್ ಹಾಕಿದರೂ ಗ್ರಾಮಭಾರತದ ಉಸಿರಿಗೆ ಬೇಕಿರುವ ಮೊತ್ತಕ್ಕಿಂತ ಹೆಚ್ಚಿಗೆ ಸಂಪನ್ಮೂಲವೇ ದೊರಕುತ್ತದೆ.

ಆದರೆ ಅದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ…ಅದು ಮೋದಿಗಿದೆಯೇ?


ಇದನ್ನೂ ಓದಿ: ಲಾಕ್‌ಡೌನ್ ಸಮಯದಲ್ಲಿ ವೇತನ ಪಾವತಿಸದ ಕಂಪೆನಿಗಳ ವಿರುದ್ಧ ಯಾವುದೇ ಕ್ರಮವಿಲ್ಲ: ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...