2020 ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ್, ಬಾಲ ಸಾಹಿತ್ಯ ಪುರಸ್ಕಾರ್ ಘೋಷಣೆಯಾಗಿದ್ದು ಕನ್ನಡ ಭಾಷೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಸಾಹಿತಿ ಕೆ.ಎಸ್. ಮಹಾದೇವಸ್ವಾಮಿ( ಸ್ವಾಮಿ ಪೊನ್ನಾಚಿ) ಮತ್ತು ಹೆಚ್.ಎಸ್. ಬ್ಯಾಕೋಡ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಎಂ. ವೀರಪ್ಪ ಮೊಯಿಲಿ ಅವರ ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ’ ಕೃತಿಗೆ 2020 ರ ಸಾಲಿನ ಕನ್ನಡ ಭಾಷೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಕ್ಕಿದೆ. ಸಾಹಿತಿಗಳಾದ ಅರವಿಂದ ಮಾಲಗತ್ತಿ, ಪದ್ಮಪ್ರಸಾದ್ ಹಾಗೂ ಎಸ್ ಜಿ ಸಿದ್ದರಾಮಯ್ಯ ಅವರಿದ್ದ ತೀರ್ಪುಗಾರರ ಮಂಡಳಿ ಈ ಆಯ್ಕೆಯನ್ನು ಮಾಡಿದೆ ಎಂದು ಸಾಹಿತ್ಯ ಅಕಾಡೆಮಿ ಹೇಳಿದೆ.
ಡಾ. ಹಫೀಜ್ ಕರ್ನಾಟಕಿ ಅವರು ಬರೆದಿರುವ ‘ಫಕ್ರ್-ಇ-ವತನ್’ ಸಣ್ಣಕತೆಗಳ ಸಂಕಲನಕ್ಕೆ ಉರ್ದು ಸಾಹಿತ್ಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಾಹಿತಿ ಕೆ.ಎಸ್. ಮಹಾದೇವಸ್ವಾಮಿ( ಸ್ವಾಮಿ ಪೊನ್ನಾಚಿ) ಅವರ ‘ದೂಪದ ಮಕ್ಕಳು’ ಸಣ್ಣ ಕತೆಗಳ ಕೃತಿಗೆ 2020 ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ್ ಘೋಷಣೆಯಾಗಿದೆ. ಪ್ರಶಸ್ತಿ ತೀರ್ಪುಗಾರರ ಮಂಡಳಿಯಲ್ಲಿ ಸಾಹಿತಿಗಳಾದ ಡಾ.ಕುಂ.ವೀರಭದ್ರಪ್ಪ, ಡಾ.ಎಚ್.ಎಲ್. ಪುಷ್ಪಾ, ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಇದ್ದರು.

2020 ರ ಬಾಲ ಸಾಹಿತ್ಯ ಪುರಸ್ಕಾರ್‌ಗೆ ಹೆಚ್.ಎಸ್. ಬ್ಯಾಕೋಡ ಅವರ ‘ನಾನೂ ಅಂಬೇಡ್ಕರ್’ ಕಾದಂಬರಿ ಆಯ್ಕೆಯಾಗಿದ್ದು, ತೀರ್ಪುಗಾರರಾಗಿ ಸಾಹಿತಿಗಳಾದ ಬೇಲೂರು ರಘುನಂಧನ್, ಸಿದ್ದಲಿಂಗ ಪಟ್ಟಣಶೆಟ್ಟಿ, ಟಿ.ಪಿ ಅಶೋಕ್ ಅವರು ಇದ್ದರು.
ಇದನ್ನೂ ಓದಿ: ‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ


