Homeಕರ್ನಾಟಕ‘ಲೈಂಗಿಕ ಕಿರುಕುಳದ ತನಿಖೆ ನಡೆಸುವ ಬದಲು ಸಚಿವನ ರಕ್ಷಣೆಗೆ ನಿಂತ ಸರ್ಕಾರ’ - ಮಹಿಳಾ ಹೋರಾಟಗಾರರ...

‘ಲೈಂಗಿಕ ಕಿರುಕುಳದ ತನಿಖೆ ನಡೆಸುವ ಬದಲು ಸಚಿವನ ರಕ್ಷಣೆಗೆ ನಿಂತ ಸರ್ಕಾರ’ – ಮಹಿಳಾ ಹೋರಾಟಗಾರರ ಆಕ್ರೋಶ

- Advertisement -
- Advertisement -

ರಮೇಶ್‌‌ ಜಾರಕಿಹೊಳಿ ಲೈಂಗಿಕ ಹಗರಣದಲ್ಲಿ ಮಹಿಳೆ ಕಿರುಕುಳಕ್ಕೆ ಬಲಿಯಾಗಿದ್ದಾರೆಯೆ ಎಂದು ತನಿಖೆ ಮಾಡುವ ಬದಲು ಆಪಾದಿತ “ರಾಜಕೀಯ ಪಿತೂರಿ” ಕೋನವನ್ನು ಮಾತ್ರ ಕೇಂದ್ರೀಕರಿಸುವ ಉದ್ದೇಶದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ನೇಮಿಸಿದ ಕರ್ನಾಟಕ ಸರ್ಕಾರದ ಕ್ರಮವು ಪ್ರಶ್ನಾರ್ಹವಾಗಿದೆ ಎಂದು ಮಹಿಳಾ ಸಂಘಟನೆಗಳು ಕಿಡಿಕಾರಿವೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದಲ್ಲಿ ಲೈಂಗಿಕ ದೃಶ್ಯಾವಳಿಯಿರುವ ವಿಡಿಯೊಗಳು ಸಾಮಾಜಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಇದರ ನಂತರ ರಾಜ್ಯದ ಬೃಹತ್ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಮಾರ್ಚ್ 3 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಮ್ಮ ರಾಜೀನಾಮೆ ಪತ್ರದಲ್ಲಿ, ತನ್ನ ಮೇಲಿನ ಆರೋಪಗಳು ಸುಳ್ಳು ಎಂದು ಪ್ರತಿಪಾದಿಸಿದ್ದು, ಬಿಜೆಪಿಯನ್ನು ಮುಜುಗರದಿಂದ ತಪ್ಪಿಸಲು ಅವರು ಸಂಪುಟಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಜಾರಕಿಹೊಳಿ ಸಿಡಿ ಮಾಡಿದವರನ್ನು ಪತ್ತೆ ಹಚ್ಚಲು SIT ರಚಿಸಿದ ರಾಜ್ಯ ಸರ್ಕಾರ

ರೈತ ನಾಯಕಿ ಮತ್ತು ದಲಿತ ಮಹಿಳಾ ಒಕ್ಕೂಟದ ಮಾಜಿ ರಾಜ್ಯ ಕಾರ್ಯದರ್ಶಿ ಆಗಿರುವ ಜಯಶ್ರೀ ಗುರನ್ನಾನವರ್, “ರಾಜ್ಯ ಸರ್ಕಾರ ಕೇವಲ ತನ್ನ ಸಚಿವ ಪ್ರತಿಷ್ಠೆಯನ್ನು ರಕ್ಷಿಸಲು ಮಾತ್ರ ಆಸಕ್ತಿ ಹೊಂದಿದೆ. ಮಾಧ್ಯಮಗಳು ಯುವತಿಯ ಗುರುತು ಪತ್ತೆಗೆ ಮತ್ತು ಸಚಿವರ ಮನೆಗೆ ಅವರು ಯಾಕೆ ಪದೆ ಪದೆ ಎಂಬುವುದನ್ನು ಪತ್ತೆ ಹಚ್ಚಲು ತೊಡಗಿಕೊಂಡಿದೆ. ಆದರೆ ಯಾರೂ ಕೂಡಾ ಮಾಜಿ ಸಚಿವ ತನ್ನ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆಯೆ ಇಲ್ಲವೆ ಎಂದು ಪತ್ತೆ ಹಚ್ಚುತ್ತಿಲ್ಲ” ಎಂದು ಹೇಳಿದ್ದಾರೆಂದು ದಿ ಹಿಂದು ವರದಿ ಮಾಡಿದೆ.

ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಅವರು ಇದು ಮೊದಲೇ ಊಹಿಸಲಾಗಿದ್ದ ಪಿತೃಪ್ರಧಾನ ಮನಸ್ಥಿತಿ, ರಾಜ್ಯ ಸರ್ಕಾರದ ಕ್ರಮಗಳಿಂದೇನು ಆಶ್ಚರ್ಯವಾಗಿಲ್ಲ ಎಂದು ಹೇಳಿದ್ದು, “ಲೈಂಗಿಕ ಕಿರುಕುಳದ ಆರೋಪದ ಎಲ್ಲಾ ಸಂದರ್ಭಗಳಲ್ಲಿ, ಮಹಿಳೆಯರದ್ದೇ ತಪ್ಪು ಎಂದು ಭಾವಿಸಲಾಗಿದೆ. ಇದು ಸರ್ಕಾರವು ಜಾರಕಿಹೊಳಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಸಂವಿಧಾನವನ್ನು ಧಿಕ್ಕರಿಸಿ ಮಹಿಳೆಯರನ್ನು ಖಳನಾಯಕರು, ಅವರು ಬಲಿಪಶುಗಳಲ್ಲ ಎಂದು ಕಾಣುವ ಉತ್ತರ ಪ್ರದೇಶದ ಮಾದರಿಯತ್ತ ಕರ್ನಾಟಕ ಚಲಿಸುತ್ತಿದೆ” ಎಂದು ಕಿಡಿಕಾರಿದ್ದಾರೆ ಎಂದು ಹಿಂದೂ ವರದಿ ಮಾಡಿದೆ.

ಪ್ರಕರಣದ ಬಗ್ಗೆ ಬಿಜೆಪಿ ಶಾಸಕ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಹಿಳೆಯು ಬಲಿಪಶು ಅಲ್ಲ, ಇದು ಬ್ಲ್ಯಾಕ್ಮೇಲ್ ಮತ್ತು ರಾಜಕೀಯ ಪಿತೂರಿ ಪ್ರಕರಣ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಸಿಡಿ ಪ್ರಕರಣ: ಸಿಡಿ ನಕಲಿ, ನಾನು ನಿರಪರಾಧಿ ಎಂದು ರಮೇಶ್ ಜಾರಕಿಹೊಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷವನ್ನು ಸೋಲಿಸುವ ಮೂಲಕ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ: ರಾಹುಲ್ ಗಾಂಧಿ

0
ಇಂದಿನಿಂದಆರಂಭವಾಗುತ್ತಿರುವ 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆಮೂಲೆಗಳಲ್ಲಿ 'ಪ್ರೀತಿಯ ಅಂಗಡಿ' (ಮೊಹಬ್ಬತ್...