ಹೊಸ ಪಿಂಚಣಿ ಯೋಜನೆ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಗೆ ( ಎನ್ ಪಿಎಸ್ ) ಗೆ ತೀವ್ರ ವಿರೋಧ ವ್ಯಕ್ತವಾಗಿರುವ ನಡುವೆ, ಏಕೀಕೃತ ಪಿಂಚಣಿ ಯೋಜನೆಗೆ ( ಯುಪಿಎಸ್) ಕೇಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ.
ಈ ಮೂಲಕ ಸರ್ಕಾರಿ ನೌಕರರಿಗೆ ನಿವೃತ್ತಿಯ ಬಳಿಕ ಮೂಲ ವೇತನದ ಕನಿಷ್ಠ 50% ಪಿಂಚಣಿಯಾಗಿ ನೀಡಲು ಸರ್ಕಾರ ನಿರ್ಧರಿಸಿದೆ.
ಸಚಿವ ಸಂಪುಟದ ನಿರ್ಧಾರಗಳನ್ನು ಪ್ರಕಟಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ “ಏಕಿಕೃತ ಪಿಂಚಣಿ ಯೋಜನೆ ( ಯುಪಿಎಸ್ ) ಅಡಿ ಸರ್ಕಾರಿ ನೌಕರರು ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಕನಿಷ್ಠ ಶೇ. 50ರಷ್ಟನ್ನು ಪಿಂಚಣಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಎನ್ ಪಿಎಸ್ ಆಯ್ಕೆ ಮಾಡಿಕೊಂಡವರಿಗೆ ಈಗ ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಕನಿಷ್ಠ 25 ವರ್ಷ ಕೆಲಸ ಮಾಡಿದವರಿಗೆ ಮೂಲ ವೇತನದ ಶೇ.50ರಷ್ಟು ಪಿಂಚಣಿಯಾಗಿ ಸಿಗಲಿದೆ. ಅದಕ್ಕಿಂತ ಕಡಿಮೆ ವರ್ಷ ಕೆಲಸ ಮಾಡಿದವರಿಗೆ ಸಿಗುವ ಮೊತ್ತ ಕಡಿಮೆಯಾಗಲಿದೆ.
ಯುಪಿಎಸ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಿಯೋಜಿತ ಸಂಪುಟ ಕಾರ್ಯದರ್ಶಿ ಟಿ.ವಿ ಸೋಮನಾಥ್ ಅವರು ಹೊಸ ಯೋಜನೆಯು 2025ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ವ್ಯವಸ್ಥೆಯಿಂದ ಹೊರಗುಳಿದಿರುವ ಶೇ.90ರಷ್ಟು ಜನರಿಗಾಗಿ ಜಾತಿ ಗಣತಿಯ ಅಗತ್ಯವಿದೆ : ರಾಹುಲ್ ಗಾಂಧಿ


