Homeಮುಖಪುಟಚಂಪಾ ಎಂಬ ವಿಸ್ಮಯ

ಚಂಪಾ ಎಂಬ ವಿಸ್ಮಯ

- Advertisement -
- Advertisement -

ಪ್ರೊ. ಚಂದ್ರಶೇಖರ ಪಾಟೀಲರು ’ಚಂಪಾ’ ಎಂಬ ಕಾವ್ಯನಾಮದಿಂದ ತಮ್ಮ ಸಾಹಿತ್ಯ ರಚನೆ ಮಾಡುತ್ತಿದ್ದದ್ದು ಉದ್ದೇಶಪೂರ್ವಕವೋ ಅಲ್ಲವೋ ಎಂದು ಅನೇಕರು ಆಶ್ಚರ್ಯಪಟ್ಟಿದ್ದುಂಟು. ಚಂಪಾ ಎಂಬ ಹೆಸರಿನ ಮೂಲಕ ಬರೆಯುತ್ತಿದ್ದ ಕಾಲದಲ್ಲಿ ಅನೇಕ ಬಿಸಿರಕ್ತದ ತರುಣರು ಬೇಸ್ತುಬಿದ್ದದ್ದು ಉಂಟು. ಆದರೆ ’ಚಂಪಾ’ ಅವರಿಗೆ ಇದು ಉದ್ದೇಶಪೂರ್ವಕವಾದ ಕ್ರಿಯೆಯಾಗಿತ್ತು. ಅಂದರೆ ತನ್ನ ಹೆಸರಿನಲ್ಲಿದ್ದ ಪಾಟೀಲನನ್ನು ಮೆಟ್ಟಿ ನಿಲ್ಲಬೇಕಿತ್ತು. ಜಾತಿಸೂಚಕ ಚಂದ್ರಶೇಖರನಿಂದ ಮೀರಿ ಹೊರಬರಬೇಕಾಗಿತ್ತು. ಹುಟ್ಟಿನಿಂದ ಲಿಂಗಾಯತ ಜಂಗಮರಾಗಿದ್ದ ಚಂಪಾ, ಜಂಗಮೋ ಜಗದ್ಘಾತುಕ, ಬ್ರಾಹ್ಮಣ ಬ್ರಹ್ಮಾಂಡಘಾತುಕನೆಂದು ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿದ್ದರು. ಚಂಪಾ ಎಂಬ ಕಾವ್ಯನಾಮ ಅನೇಕ ಯುವಕರನ್ನು, ಯುವತಿಯರನ್ನು ಮರಳು ಮಾಡುತ್ತಿರುವ ಅರಿವಿದ್ದ ಪಾಟೀಲರು ಅದರ ಸವಿಯನ್ನು ಅನುಭವಿಸುತ್ತಲೇ ಕರ್ನಾಟಕದ್ಯಾಂತ ಚಂಪಾ ಎಂದೇ ಪ್ರಸಿದ್ಧರಾಗಿದ್ದರು.

ಸರಿಸುಮಾರು ನಾಲ್ಕು ದಶಕಗಳ ಕಾಲ ನಿಕಟವರ್ತಿಯಾಗಿ ಚಂಪಾ ಅವರನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ಜೊತೆ ತುಂಬಾ ಸೌಹಾರ್ದಯುತವಾದ ಸ್ನೇಹವಿತ್ತು. ವಯಸ್ಸಿನಲ್ಲಿ ಹಿರಿಯರಾದ ಚಂಪಾ ಎಂದೂ ನಮ್ಮನ್ನು ಕಿರಿಯ ವಯಸ್ಸಿನವರೆಂದು ಭಾವಿಸಿದ ಸಂಗಾತಿಗಳೆಂದೇ ತಿಳಿದಿದ್ದರು. ಸಮಾಜವಾದಿ ಚಿಂತನೆಯ ಚಂಪಾ ಅಪ್ಪಟ ಲೋಹಿಯಾವಾದಿಯಾಗಿದ್ದರು. ಕಮ್ಯುನಿಸ್ಟರ ಜೊತೆ ತಾತ್ವಿಕ ಭಿನ್ನಾಭಿಪ್ರಾಯ ಇಟ್ಟುಕೊಂಡು ಬಂಡಾಯದ ಕಾಮ್ರೆಡ್‌ಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು. ಅವರ ಜೊತೆ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕನಾಗಿ ಕೆಲಸ ಮಾಡಿದ್ದ ನನ್ನನ್ನು ಉತ್ತರ ಕರ್ನಾಟಕ ಬಂಡಾಯ ಸಾಹಿತ್ಯ ಸಮ್ಮೇಳನದ ಉದ್ಘಾಟಕನಾಗಿ ಕರೆದು ಪ್ರೀತಿ ತೋರಿಸಿದ್ದರು. ಅವರ ತಾತ್ವಿಕ ಬದ್ಧತೆ ನಮ್ಮ ಗೌರವವನ್ನು ಇಮ್ಮಡಿಗೊಳಿಸಿತ್ತು.

ಬಂಡಾಯ ಸಾಹಿತ್ಯ ಸಂಘಟನೆ ನಮ್ಮೆಲ್ಲರಿಗೆ ಬಹುದೊಡ್ಡ ಬದ್ಧತೆಯನ್ನು ಕಲಿಸಿತ್ತು. 1979ರ ಮೊದಲ ಸಮ್ಮೇಳನದಿಂದ ಸುಮಾರು ಹತ್ತಾರು ವರ್ಷಗಳು ತಾತ್ವಿಕವಾಗಿ ಸಮಾಜವಾದಿ ಚಿಂತನೆಯ ಹಾದಿಯಲ್ಲಿ ನಡೆಯಲು ಚಂಪಾ ಅವರು ಕೂಡ ಮುಖ್ಯ ಕಾರಣಕರ್ತರಾಗಿದ್ದರು. ಬಂಡಾಯ ಸಂಘಟನೆಯಲ್ಲಿ ಮೂವರನ್ನು ಸಂಚಾಲಕರನ್ನಾಗಿ ನೇಮಿಸಲು ತೀರ್ಮಾನ ಮಾಡಿ, ಒಬ್ಬರು ದಲಿತ ಸಮುದಾಯದಿಂದ, ಅಲ್ಪಸಂಖ್ಯಾತ ಲೇಖಕರೊಬ್ಬರನ್ನು ಹಾಗೂ ಉಳಿದ ಸಮುದಾಯಗಳಿಂದ ಲೇಖಕರೊಬ್ಬರು ಸದಸ್ಯರಾಗಬೇಕೆಂಬ ನಿಯಮವನ್ನು ಒಪ್ಪಿದ್ದ ಬಗೆಗೆ ನನ್ನ ವೈಯಕ್ತಿಕ ಮೆಚ್ಚುಗೆ ಈಗಲೂ ಇದೆ. ಇದರಲ್ಲಿ ಪ್ರಸಿದ್ಧ ಲೇಖಕರಲ್ಲದವರನ್ನೂ ಸಂಘಟನೆಯ ನಾಯಕರನ್ನಾಗಿ ಒಪ್ಪಿ ಅವರ ನೇತೃತ್ವದಲ್ಲಿ ಮುನ್ನಡೆಸಿದ್ದು ಸಾಮಾನ್ಯ ಸಂಗತಿಯಲ್ಲ. ತಮ್ಮ ವ್ಯಕ್ತಿಗತ ನಂಬಿಕೆಗಳಿಂದ ದೂರ ಉಳಿದವರನ್ನೂ ಕೂಡ ಗೌರವದಿಂದ ಕಾಣುತ್ತಲೇ ಎಲ್ಲರನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದು ಚಂಪಾ ಅವರಂತಹ ಲೇಖಕರ ಹೆಚ್ಚುಗಾರಿಕೆ ಆಗಿತ್ತು.

ಚಂಪಾ ಮತ್ತು ಸಂಕ್ರಮಣ ಪತ್ರಿಕೆ ಬೇರೆ ಬೇರೆಯಲ್ಲ ಎನ್ನುವಷ್ಟು ಅವಿನಾಭಾವ ಸಂಬಂಧವಿದ್ದದ್ದು ನಾಡಿಗೆ ತಿಳಿದ ಸಂಗತಿಯೇ. ಸಿದ್ದಲಿಂಗ ಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ ಮತ್ತು ಚಂಪಾ, ಈ ಮೂರು ಜನ ಸೇರಿ ಆರಂಭಿಸಿದ ಸಂಕ್ರಮಣ ಕೊನೆಗೆ ಚಂಪಾ ಅವರ ಹೆಗಲಿಗೆ ಬಿತ್ತು. ಅದನ್ನು ಚೊಕ್ಕವಾಗಿ ಸಂಪಾದಿಸಿ ಅನೇಕ ಯುವ ಬರಹಗಾರರಿಗೆ ಸ್ಫೂರ್ತಿಯ ಸೆಲೆಯಾದದ್ದು ಮಹತ್ವದ ಸಂಗತಿ. ಚಂಪಾ ಎಂದೂ ಅಹಮ್ಮಿಗೆ ಬೀಳದೆ ಪತ್ರಿಕೆಯನ್ನು ಅದ್ಭುತವಾಗಿ ಸಂಪಾದಿಸುತ್ತಿದ್ದುದು ಅನುಕರಣೀಯ ಸಂಗತಿ. ಸಂಕ್ರಮಣ ಪತ್ರಿಕೆಯ ಅಂಬೇಡ್ಕರ್ ವಿಶೇಷಾಂಕ, ಲೋಹಿಯಾ ವಿಶೇಷಾಂಕ ಮತ್ತು ಮೀಸಲಾತಿ ಕುರಿತ ವಿಶೇಷಾಂಕಗಳು ಎಲ್ಲ ಲೇಖಕರ ಗ್ರಂಥಾಲಯಗಳಲ್ಲಿರಬೇಕಾದ ಸಂಗ್ರಹಯೋಗ್ಯ ಸಂಚಿಕೆಗಳು. ಯುವಪೀಳಿಗೆಯ ಅನೇಕ ಲೇಖಕರಿಗೆ ಸಂಕ್ರಮಣದಲ್ಲಿ ತಮ್ಮ ಕಥೆ, ಕವಿತೆ ಪ್ರಕಟವಾಗುವುದು ಪ್ರತಿಷ್ಠೆಯ ವಿಷಯವಾಗಿದ್ದ ಕಾಲವದು. ಯಾವ ಮುಲಾಜೂ ಇಲ್ಲದೆ ನಮ್ಮ ಲೇಖಕರಿಂದ ಚಂದಾ ಪಡೆಯುತ್ತಿದ್ದ ಚಂಪಾ ಅವರನ್ನು ’ಚಂದಮಾಮ’ ಎಂದು ರೇಗಿಸುತ್ತಿದ್ದದ್ದುಂಟು. ಅದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದ ಚಂಪಾ ಅವರು, ಸಮಯ ಬಂದಾಗ ಛೇಡಿಸಿ ಆನಂದಿಸುತ್ತಿದ್ದರು. ಕನ್ನಡ ಸಾಹಿತ್ಯ-ಸಾಂಸ್ಕೃತಿಕ-ರಾಜಕೀಯ ಲೋಕಕ್ಕೆ ಸಂಕ್ರಮಣದ ಕೊಡುಗೆಯನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಅನೇಕ ಸಾಹಿತ್ಯ ಪತ್ರಿಕೆಗಳನ್ನು ಆರಂಭಿಸಿದ ನಮ್ಮ ಲೇಖಕ-ಸಂಪಾದಕರನ್ನು ನೋಡಿದ ಮೇಲೆ, ಸಾಹಿತ್ಯ ಪತ್ರಿಕೆಯೊಂದನ್ನು ಯಶಸ್ವಿಯಾಗಿ ನಡೆಸಿದವರು ’ಚಂಪಾ’ ಎಂದು ನಿರ್ವಿವಾದವಾಗಿ ಹೇಳಬಹುದು.

ತಮ್ಮ ಸಾಹಿತ್ಯದ ತೀವ್ರ ಮೊನಚಿನಂತೆಯೇ, ಚಂಪಾ ಅವರು ವೈಯಕ್ತಿಕವಾಗಿ ತಮ್ಮನ್ನೇ ಗೇಲಿ ಮಾಡಿಕೊಂಡು ಸ್ನೇಹಿತರ ಜೊತೆ ಹಂಚಿಕೊಳ್ಳುತ್ತಿದ್ದರು. ಕನ್ನಡದ ಲೇಖಕಿಯೊಬ್ಬರ ಕುರಿತು ಮಾತನಾಡುವಾಗ ಅವರು ತಮ್ಮ ಆತ್ಮಕಥೆ ಬರೆದರೆ ಕರ್ನಾಟಕದ ವಿವಿಧ ಭಾಗದ ಕೆರೆಗಳಲ್ಲಿ ಅನೇಕ ಹೆಣಗಳು ತೇಲುತ್ತವೆ ಎಂದು ತಮಾಷೆ ಮಾಡುತ್ತಿದ್ದೆವು. ಎಲ್ಲಿ ಹೆಣ ತೇಲುತ್ತದೋ ಇಲ್ಲವೋ ಧಾರವಾಡದ ಕೆರೆಯಲ್ಲಿ ಒಂದು ಹೆಣ ತೇಲುವುದು ಗ್ಯಾರಂಟಿ ಎಂದು ಹೇಳಿದಾಗ ಇಡೀ ದಿನ ನಕ್ಕಿದ್ದೇವೆ. ತಾವು ನಂಬಿದ ತತ್ವಗಳನ್ನು ಬಿಟ್ಟು ಚಂಪಾ ರಾಜಿ ಮಾಡಿಕೊಂಡಿದ್ದಿಲ್ಲ. ಬಂಡಾಯ ಸಾಹಿತ್ಯ ಸಂಘಟನೆಯು ಕೋಲಾರದಲ್ಲಿ ನಡೆಸಿದ ಸಮ್ಮೇಳನದಲ್ಲಿ, ರಾತ್ರಿ ನಡೆದ ಒಂದು ಚರ್ಚೆಯ ವೇಳೆ, ಗೋಕಾಕ್ ಚಳವಳಿ ಕುರಿತ ಮುಂದೇನು ಎಂಬ ಮಾತುಕತೆ ರಂಗೇರಿ, ಇಡೀ ಬಂಡಾಯದ ಲೇಖಕರೆಲ್ಲ ಒಂದು ಕಡೆ ನಿಂತರೆ, ಚಂಪಾ ಒಬ್ಬರೇ ಗೋಕಾಕ್ ಚಳವಳಿಯ ಪರ ನಿಲುವು ತಳೆದು ಹೊರನಡೆದರು. ಎಲ್ಲರಿಗೂ ಗಾಬರಿ ತಂದ ಅವರ ನಿರ್ಧಾರ, ಮುಂದೆ ಬಂಡಾಯದ ಜೊತೆಗೆ ಸೇರಿ ಹೆಜ್ಜೆ ಹಾಕಿದಾಗ ಸರಿಯಾಯಿತು. ಚಂಪಾ ಅವರಿಗೆ ಸಾಹಿತ್ಯ ಕೃಷಿ ಎಷ್ಟು ಗಂಭೀರವಾದದ್ದೋ ಸಾಮಾಜಿಕ ಸಂಗತಿಗಳೂ ಅಷ್ಟೇ ಮಹತ್ವದ್ದಾಗಿದ್ದವು. ಭಾಷೆಯ ಹೋರಾಟ, ಕೋಮುವಾದಿ ವಿರೋಧದ ಚಳವಳಿ ಮತ್ತು ಜಾತಿ ವಿರೋಧಿ ಹೋರಾಟಗಳಲ್ಲಿ ಸದಾ ಮುಂದಿರುತ್ತಿದ್ದ ಚಂಪಾ ಎಲ್ಲ ಜನಪರ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದರು.

ಚಂಪಾ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಾನು ಅದರ ಕಾರ್ಯಕಾರಿ ಸಮಿತಿಗೆ ನಾಮಕರಣಗೊಂಡ ಸದಸ್ಯನಾಗಿದ್ದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಸಬೇಕೆಂಬ ಒತ್ತಾಯದ ಜೊತೆಗೆ ಅದನ್ನು ಒಂದನೇ ತರಗತಿಯಿಂದಲೇ ಕಲಿಸಬೇಕು ಎಂಬುದು ನಮ್ಮ ಆಗ್ರಹವಾಗಿತ್ತು. ಚಂಪಾ ಅವರು ಮೂರನೇ ತರಗತಿಯಿಂದ ಕಲಿಸಬೇಕು ಎಂದು ಹೇಳುತ್ತಿದ್ದರು. ನಾನು ಇದರಿಂದ ಕೊಂಚ ವಿಚಲಿತನಾಗಿ ಕಾರ್ಯಕಾರಿ ಸಮಿತಿಗೆ ರಾಜಿನಾಮೆ ನೀಡುತ್ತೇನೆಂದು ತಿಳಿಸಿದೆ. ಇದಕ್ಕೆ ಒಪ್ಪದ ಚಂಪಾ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಒಟ್ಟಿಗೆ ಕೆಲಸ ಮಾಡುವುದಕ್ಕೆ ಸಾಧ್ಯ, ರಾಜೀನಾಮೆಯ ಅಗತ್ಯವಿಲ್ಲವೆಂದು ನನಗೆ ತಿಳಿಸಿ ಮುಂದುವರೆಯುವಂತೆ ಮಾಡಿದರು. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ಚಂಪಾ ಅವರು ಸದಾ ಜನಪರವಾಗಿರುವುದಕ್ಕೆ ಈ ಘಟನೆ ಸಾಕ್ಷಿ. ಸಮಕಾಲೀನ ದಿಗ್ಗಜ ಲೇಖಕರ ಜೊತೆ ಜಗಳವಾಡುತ್ತಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡವರು ಅವರು. ಅನಂತಮೂರ್ತಿ, ಲಂಕೇಶ್‌ರಂತಹ ಲೇಖಕರನ್ನು ಎದುರು ಹಾಕಿಕೊಂಡು ತಾವೆಂದೂ ಒಂಟಿಯಲ್ಲವೆಂದು ಭಾವಿಸಿಕೊಂಡು ಬಂಡಾಯ ಸಾಹಿತ್ಯ ಸಂಘಟನೆಯ ಚಾಲಕರಾಗಿ ಕೊನೆವರೆಗೆ ಇದ್ದವರು.

ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಘೋಷಣೆಯಾದ ಸಂದರ್ಭ; ನಾವೆಲ್ಲ ಒಂದಷ್ಟು ಜನ ಹಿರಿಯೂರಿನ ರಂಗೇನಹಳ್ಳಿಯ ಸಭೆಯೊಂದರಲ್ಲಿ ಭಾಗವಹಿಸಿದ್ದೆವು. ಅಲ್ಲಿದ್ದವರೊಬ್ಬರು ಹನುಮಂತಯ್ಯ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗ್ತಿದ್ದಾರೆ ಎಂದರು. ಸದಾ ವಿರೋಧ ಪಕ್ಷದ ನಾಯಕನಂತೆ ಚಂಪಾ, ಹನುಮಂತಯ್ಯ ಒಳ್ಳೆ ಕೆಲಸ ಮಾಡಿದರೆ ನಮ್ಮ ಬೆಂಬಲ, ಇಲ್ಲವಾದರೆ ಪ್ರತಿಭಟನೆ ಇದ್ದದ್ದೆ ಎಂದರು. ಅವರಿಗೆ ಪ್ರತಿಭಟನೆಯ ಅವಕಾಶ ಸಿಗಲಿಲ್ಲವೆಂಬುದು ಬೇರೆ ಮಾತು. ಚಂಪಾ ನನಗಿಂತಲೂ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು. ನಾನು ಅವರ ಜೊತೆಯಲ್ಲಿದ್ದೆ. ಆಗಿನ ಮಂತ್ರಿಯಾಗಿದ್ದ ಎಂ.ಪಿ ಪ್ರಕಾಶ್ ನೋಡಲು ಹೋಗುತ್ತಿದ್ದೆವು. ಹೋಗುವ ದಾರಿಯಲ್ಲಿ ಅವರು ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿದೆ. ಇನ್ನು ಮೂರುವರ್ಷಗಳು ನನ್ನ ಕವಿತೆಗಳಲ್ಲಿ ಹೂವು, ಹಣ್ಣು, ತಾರೆಗಳನ್ನು ಕುರಿತೇ ಬರೆಯಬೇಕೆಂದೆನಿಸುತ್ತದೆ ಎಂದರು. ಅವರ ಸಮಯಪ್ರಜ್ಞೆ, ಸಾಹಿತ್ಯ ಬದ್ಧತೆಯ ಕುರಿತು ಮೆಚ್ಚುಗೆಯಾಯಿತು.

ಅಪಾರ ತಾತ್ವಿಕ ಬದ್ಧತೆಯ ಮಹತ್ವದ ಕವಿ ನಾಟಕಕಾರ ಚಂಪಾ 83ರ ತುಂಬು ಜೀವನ ನಡೆಸಿದ್ದಾರೆ. ಕೊನೆಯರಡು ವರ್ಷಗಳು ಅನಾರೋಗ್ಯದಿಂದ ನರಳಿದ್ದು ದುಃಖ ತಂದಿದೆ. ಬಹುಶಃ ಚಂಪಾ ಎಂದೊಡನೆ ನಮ್ಮ ಕಣ್ಮುಂದೆ ಬರುವ ಅವರ ಕವಿತೆಯ ಸಾಲು:
ನಾವು ಹೂವಿನ ಬಗ್ಗೆ ನಾವು ಹೆಣ್ಣಿನ ಬಗ್ಗೆ
ನಾವು ತಾರೆಯ ಬಗ್ಗೆ ಹಾಡುವುದು ಬೇಡ
ಅಂತ ಹೇಳುವುದು ಬೇಡ ಗೆಳೆಯಾ

ಡಾ. ಎಲ್. ಹನುಮಂತಯ್ಯ

ಡಾ. ಎಲ್. ಹನುಮಂತಯ್ಯ
ಕವಿ, ಬರಹಗಾರ ಮತ್ತು ರಾಜ್ಯಸಭಾ ಸದಸ್ಯರು. ’ಬಂಡಾಯ ಕತೆಗಳಲ್ಲಿ ದಲಿತ ಪ್ರಜ್ಞೆ’ ಸಂಶೋಧನಾ ಪ್ರಭಂದ, ’ಕಪ್ಪು ಕಣ್ಣಿನ ಹುಡುಗಿ’, ’ಅವ್ವ ಅವ್ವನ ಕವಿತೆ’, ’ಜೀವಗಾನ’, ’ಕರ್ಣರಾಗ’ ಕವನ ಸಂಕಲನಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.


ಇದನ್ನೂ ಓದಿ: ಛಲಬಿಡದ ಕನ್ನಡ ಪ್ರೇಮಿ ಸೈಯದ್ ಇಸಾಕ್‌: ಗಣರಾಜ್ಯ ದಿನದಂದು ಗ್ರಂಥಾಲಯ ಓಪನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....