Homeಕೊರೊನಾಕೊರೊನಾ ಸಾಂಕ್ರಾಮಿಕದಿಂದ ಮಾರಾಟದಲ್ಲಿ ದಾಖಲೆ ಬರೆದ ಡೋಲೊ-650

ಕೊರೊನಾ ಸಾಂಕ್ರಾಮಿಕದಿಂದ ಮಾರಾಟದಲ್ಲಿ ದಾಖಲೆ ಬರೆದ ಡೋಲೊ-650

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಆರಂಭದಿಂದಲೂ ಎಲ್ಲರೂ ಮೇಡ್ ಇನ್ ಇಂಡಿಯಾ ಡೋಲೊ-650 ಮಾತ್ರೆಯನ್ನು ಸೇವಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕು ಆರಂಭವಾದಗಿನಿಂದ ಇಲ್ಲಿಯವರೆಗೆ ಮಾರಾಟವಾದ ಮಾತ್ರೆಗಳ ಸಂಖ್ಯೆ 350 ಕೋಟಿ ಎಂದು ಡೇಟಾ ತೋರಿಸಿದೆ.

ಭಾರತದಲ್ಲಿ ಡೋಲೊ ಪ್ಯಾರಿಸಿಟಮೊಲ್ ಮಾತ್ರೆಗಳು ಕಳೆದ ಎರಡು ವರ್ಷಗಳಿಂದ ಹೆಚ್ಚು ಮಾರಾಟವಾಗಿವೆ. IQVA ಸಂಶೋದನೆಯ ಪ್ರಕಾರ, 2019 ರ ನಂತರ ಭಾರತದಲ್ಲಿ ಕಂಪನಿಯು 7.5 ಕೋಟಿ ಡೋಲೊ ಮಾತ್ರೆಗಳನ್ನು ಮಾರಾಟ ಮಾಡಿದೆ. 2019 ಮತ್ತು 2021 ರ ಅವಧಿಯಲ್ಲಿ 350 ಕೋಟಿಗೂ ಹೆಚ್ಚು ಮಾತ್ರೆಗಳು ಮಾರಾಟವಾಗಿವೆ.

ಶೀತ ಮತ್ತು ಜ್ವರದ ವಿರುದ್ದ ಜನರು ಪ್ಯಾರಿಸಿಟಮೊಲ್ ಮಾತ್ರೆಗಳನ್ನು ಹೆಚ್ಚು ಸೇವಿಸಿದ್ದಾರೆ. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಸೇವಿಸಿಸುವ ಅಷ್ಟೂ (350 ಕೋಟಿ)  ಮಾತ್ರೆಗಳನ್ನು ನೇರವಾಗಿ ಜೋಡಿಸಿದರೆ, ಮೌಂಟ್ ಎವರೆಸ್ಟ್‌ಗಿಂತ 600 ಪಟ್ಟು ಎತ್ತರವಾಗುತ್ತದೆ ಅಥವಾ 63,000 ಅಡಿಗಳಷ್ಟು ಎತ್ತರವಿರುವ ಬುರ್ಜಾ ಖಲೀಫಾಕ್ಕೆ ಸಮವಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಬಲವಂತವಾಗಿ ಯಾರಿಗೂ ಲಸಿಕೆ ನೀಡುವುದಿಲ್ಲ: ಸುಪ್ರೀಂಗೆ ಕೇಂದ್ರದ ಹೇಳಿಕೆ

ಡೋಲೊ-650 ಮಾತ್ರೆಯನ್ನು ಎರಡು ಲಕ್ಷ ಮಂದಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅಂದಾಜು 307 ಕೋಟಿ ರೂಪಾಯಿ ವಹಿವಾಟು ನಡೆಸುವುದರ ಮೂಲಕ ಡೋಲೊ ಮಾತ್ರೆಯು ಭಾರತದಲ್ಲಿ ಎರಡನೇ ದೊಡ್ಡ ನೋವು ನಿವಾರಕ ಮಾತ್ರೆಯಾಗಿದೆ. ಒಟ್ಟಾರೆಯಾಗಿ, 2019 ರಲ್ಲಿ, ಪ್ಯಾರಿಸಿಟಮೊಲ್ ವರ್ಗದ ಅಡಿಯಲ್ಲಿ ಎಲ್ಲಾ ಬ್ರ್ಯಾಂಡ್‌ಗಳ ಮಾರಾಟವು ಸುಮಾರು 530 ಕೋಟಿ ರೂ. ಇತ್ತು. ಆದರೆ ಕೊರೊನಾ ಆರಂಭವಾದ ಬಳಿಕ ಮಾರಾಟವು 70% ರಷ್ಟು ಹೆಚ್ಚಾಗಿದೆ ಮತ್ತು 2021 ರ ವೇಳೆಗೆ ಅವರು 924 ಕೋಟಿ ರೂ. ರೂಪಾಯಿಗೆ ಏರಿಕೆಯಾಗಿದೆ.

ಪ್ಯಾರಸಿಟಮೊಲ್ ಮಾತ್ರೆ 1960 ರಿಂದಲೂ ಅಸ್ತಿತ್ವದಲ್ಲಿದೆ. ಕ್ರೋಸಿನ್ ಮತ್ತು ಡೋಲೊ ಒಂದೇ ಬ್ರಾಂಡ್ ಮಾತ್ರೆಗಳಾಗಿವೆ. 2010 ರಲ್ಲಿ ಡೋಲೋವನ್ನು ಅತ್ಯುತ್ತಮ ನೋವು ನಿವಾರಕ ಮಾತ್ರೆಯೆಂದು ಪರಿಗಣಿಸಲಾಗಿತ್ತು.

ನೋವು ಮತ್ತು ಶೀತದಿಂದ ಗುಣಪಡಿಸುವುದೇ ಡೋಲೊ ಜನಪ್ರಿಯತೆಗೆ ಕಾರಣ ಎಂದು ಮಹಾತ್ಮ ಗಾಂಧಿ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ಎ.ಪಿ ಕಲಾಂತ್ರಿಯವರು ಹೇಳಿದ್ದಾರೆ.

ಯಾವುದೇ ಜ್ವರ, ಶೀತ, ಕೆಮ್ಮು, ಮೈ-ಕೈ ನೋವಿಗೆ ಡೋಲೊ-650ಯನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತೇವೆ ಎಂದು ವೈದರು ಹೇಳಿದ್ದಾರೆ. ಡೋಲೊ-650 ಯ ಉತ್ಪಾದನೆಯು ಕೊರೊನಾ ಅವಧಿಯಲ್ಲಿ 25 ಪಟ್ಟು ಹೆಚ್ಚಾಗಿದೆ ಎಂದು ಕಂಪನಿಯ ಸಿಇಒ 2021ರ ಜನವರಿಯಲ್ಲಿ ನಡೆದ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಡೋಲೊ ಮಾರಾಟ ಮತ್ತು ಅದರ ಜನಪ್ರಿಯತೆ ಆಧರಿಸಿ ಹಲವು ಮೀಮ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.


ಇದನ್ನೂ ಓದಿ: ಕೊರೊನಾ ಮಾತ್ರೆಗಳು: ಉಪಯುಕ್ತವೇ..? ವೈದ್ಯರು ಹೇಳುವುದೇನು…?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕಲ್ಕತ್ತಾ ಹೈಕೋರ್ಟ್ ಮಾರಾಟ ಆಗಿದೆ’ ಎಂದ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮಕ್ಕೆ ವಕೀಲರ ಗುಂಪು...

0
‘ಹೈಕೋರ್ಟ್ ಮಾರಾಟ ಆಗಿದೆ' ಎಂದು ಹೈಕೋರ್ಟ್‌ ವಿರುದ್ಧ ಟೀಕೆಯನ್ನು ಮಾಡಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಬೇಕೆಂದು ವಕೀಲರ ಗುಂಪು ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಒತ್ತಾಯಿಸಿದೆ. ಶಾಲಾ ಉದ್ಯೋಗಿಗಳ...