Homeಮುಖಪುಟಚಂಡೀಗಡ: ಆಯುಕ್ತರ ಸಹಾಯಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ

ಚಂಡೀಗಡ: ಆಯುಕ್ತರ ಸಹಾಯಕನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ

- Advertisement -
- Advertisement -

ಕಚೇರಿಯ ಒಳಗೆ ಬಿಡಲು ನಿರಾರಿಸಿದರೆಂಬ ಕಾರಣಕ್ಕೆ ಚಂಡೀಗಡ ಮುನಿಸಿಪಲ್ ಕಾರ್ಪೋರೇಷನ್ ಆಯುಕ್ತರ ಸಹಾಯಕನ ಮೇಲೆ ಬಿಜೆಪಿ ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಬಿಜೆಪಿ ಮುಖಂಡ ಗೌರವ್ ಗೋಲ್ ಮತ್ತು ಆತನ ಸಂಗಡಿಗರು ಚಂಡೀಗಡ ಮುನಿಸಿಪಲ್ ಆಯುಕ್ತರನ್ನು ನೋಡಲು ಬಂದಿದ್ದರು. ಆಗ ಆಯುಕ್ತರ ಸಹಾಯಕ ಜತಿನ್ ಸೈನಿ ಬಿಜೆಪಿ ಮುಖಂಡರನ್ನು ಒಳಗೆ ಹೋಗಲು ಬಿಡಲಿಲ್ಲ ಎನ್ನಲಾಗಿದೆ.

ಆಯುಕ್ತರನ್ನು ಕಾಣಲು ಸ್ವಲ್ಪ ಕಾಲ ಕಾಯುವಂತೆ ಖಾಸಗಿ ಸಹಾಯಕ ಹೇಳಿದ್ದು, ಇದರಿಂದ ಕುಪಿತಗೊಂಡ ಬಿಜೆಪಿ ಮುಖಂಡ ಗೌರವ್ ಗೋಲ್ ಸಹಾಯಕನ ಮೇಲೆ ದೈಹಿಕ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಭಾರತದ ದುಡಿಯುವ ವರ್ಗವನ್ನು ಬಿಜೆಪಿ ಹೇಗೆ ನೋಡುತ್ತಿದೆ? – ಸಂಜಯ್ ಸಿಂಘ್ವಿ

ಆಯುಕ್ತರ ಸಹಾಯಕನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ನಾಗರಿಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಬಿಜೆಪಿ ಮುಖಂಡ ಗೌರವ್ ಗೋಲ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತ ಬಿಜೆಪಿ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದ್ದು ಎರಡು ಕಡೆ ಪರಸ್ಪರ ದೂರು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸೈನಿ “ಗೋಯಲ್ ಮತ್ತು ಬೆಂಬಲಿಗರಿಗೆ ಕಾಯುವಂತೆ ಹೇಳಿದೆ. ಆಯುಕ್ತರು ಸಭೆ ನಡೆಸುತ್ತಿದ್ದರು. ಆದರೆ ದಿಢೀರ್  ಕಛೇರಿಗೆ ಬಂದ ಗೌರವ್ ಮತ್ತು ಬೆಂಬಲಿಗರು ಘೋಷಣೆ ಕೂಗತೊಡಗಿದರು. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಜೀವಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ

ಈ ಸಂಬಂಧ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಚಂಡೀಗಡ ಮುನಿಪಲ್ ಕಾರ್ಪೋರೇಷನ್ ಆಯುಕ್ತರ ಕೆಕೆ ಯಾದವ್, ” ಇದೊಂದು ಪೂರ್ವಯೋಜಿತ ಕೃತ್ಯವಾಗಿದೆ. ಭಿತ್ತಿಪತ್ರಗಳನ್ನು ಮುಂಚಿತವಾಗಿ ತಂದು ಪ್ರದರ್ಶಿಸಿದ್ದಾರೆ. ಘೋಷಣೆಗಳನ್ನೂ ಕೂಗಿದರು. ಉದ್ದೇಶಪೂರ್ವಕವಾಗಿಯೇ ಪ್ರತಿಭಟನೆ ನಡೆಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: 13 ಕ್ವಿಂಟಾಲ್‌ ಗಾಂಜಾ‌ ವಶ: ಆರೋಪಿ ಬಿಜೆಪಿ ಕಾರ್ಯಕರ್ತ

ಹೋರಾಟ ನಿರತ ಆಶಾ ಕಾರ್ಯಕರ್ತರ ಹಕ್ಕೊತ್ತಾಯಗಳೇನು ? ವಿಡಿಯೋ ನೋಡಿ

ಆಶಾ ಕಾರ್ಯಕರ್ತರು ಹಕ್ಕೊತ್ತಾಯಗಳೇನು? ಅವರ ಬಾಯಲ್ಲೇ ಕೇಳಿ

Posted by Naanu Gauri on Wednesday, September 23, 2020

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...