Homeಮುಖಪುಟಭಾರತದ ದುಡಿಯುವ ವರ್ಗವನ್ನು ಬಿಜೆಪಿ ಹೇಗೆ ನೋಡುತ್ತಿದೆ? - ಸಂಜಯ್ ಸಿಂಘ್ವಿ

ಭಾರತದ ದುಡಿಯುವ ವರ್ಗವನ್ನು ಬಿಜೆಪಿ ಹೇಗೆ ನೋಡುತ್ತಿದೆ? – ಸಂಜಯ್ ಸಿಂಘ್ವಿ

ಮುಂಚೆ ಇದ್ದ ಕಾಂಗ್ರೆಸ್ ಸರಕಾರವೂ ತರಲು ಇಚ್ಛಿಸಿದ್ದ ಆದರೆ ಸಾಂವಿಧಾನಿಕವಾಗಿ ಸಾಧ್ಯವಾಗಿರದಿದ್ದ ಕಾರ್ಮಿಕ ವಿರೋಧಿ ನೀತಿಗಳನ್ನು ಬಿಜೆಪಿಯು ಅಸಂವಿಧಾನಿಕವಾಗಿ ತಂದಿತು.

- Advertisement -
- Advertisement -

ದೇಶಾದ್ಯಂತ ಕಳೆದ ಆರು ವರ್ಷಗಳಲ್ಲಿ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಅತ್ಯಂತ ಮಹತ್ವದ ಬದಲಾವಣೆಗಳು ಆಗಿವೆ. ಅದನ್ನು ಅರ್ಥ ಮಾಡಿಕೊಳ್ಳಲು ನಾವು ಜಾಗತಿಕ ಆರ್ಥಿಕತೆಯಿಂದ ಪ್ರಾರಂಭಿಸಬೇಕು. ಈಗಾಗಲೇ ಸುಮಾರು ಸಮಯದಿಂದಲೇ ಜಾಗತಿಕ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ. ವಿಶ್ವದೆಲ್ಲೆಡೆಯ ಬಂಡವಾಳಶಾಹಿಗಳು, ತಮ್ಮ ಜತೆಗಾರರೊಂದಿಗೆ ಆಳುವ ವರ್ಗದ ಸ್ಥಾನದಲ್ಲಿದ್ದುಕೊಂಡು, ತಮ್ಮ ಮೇಲಿರುವ ಭಾರವನ್ನು ದುಡಿಯುವ ಜನರ ಬೆನ್ನ ಮೇಲೆ ಹೊರೆಸುವ ಪ್ರಯತ್ನದಲ್ಲದ್ದು ಅದಕ್ಕೆ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಅನೇಕ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿಗಳನ್ನು ತರಲಾಗಿದೆ ಹಾಗೂ ಇಂದಿಗೂ ಹೆಚ್ಚಿನ ಬದಲಾವಣೆಗಳನ್ನು ತರುವಂತೆ ಅಪೇಕ್ಷಿಸಲಾಗುತ್ತಿದೆ, ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆಯೂ ಆಗುತ್ತಿರುವ ವಿದ್ಯಮಾನ. ಈ ಉದ್ದೇಶಕ್ಕಾಗಿಯೇ, ಕಳೆದ ಕೆಲವು ದಶಕಗಳಲ್ಲಿ ದೊಡ್ಡಮಟ್ಟದ ಹೊರಗುತ್ತಿಗೆಯ ಕ್ರಮವನ್ನು ಕೈಗೊಳ್ಳಲಾಗಿದೆ. ಅವರು ಬಳಸಿದ ಇನ್ನೊಂದು ವಿಧಾನವೆಂದರೆ ವಿಶ್ವದಾದ್ಯಂತ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸುವುದು ಹಾಗೂ ಸಾಮಾನ್ಯ ಜನರ ಮೇಲೆ ತೆರಿಗೆಯ ಭಾರವನ್ನು ಹೆಚ್ಚಿಸಿರುವುದು.

ಭಾರತೀಯ ಬಿಸಿನೆಸ್‍ಗಳು ಇದನ್ನು ಬಳಸಿಕೊಳ್ಳಲು ಹಾಗೂ ವಿದೇಶಿ ಹೂಡಿಕೆಯನ್ನು ತರಲು ಪ್ರಯತ್ನಿಸಿವೆ. ವಾಸ್ತವದಲ್ಲಿ, ಎಲ್ಲಾ ಸರಕಾರಗಳು ಭಾರತದ ಅಭಿವೃದ್ಧಿಗೆ ಇದೊಂದೇ ಏಕೈಕ ಪ್ರಮುಖ ಮೂಲ ಎಂದು ಪರಿಗಣಿಸಿವೆ. ಕಳೆದ ಕೆಲವು ದಶಕಗಳಲ್ಲಿ ಪರಿಗಣಿಸಲಾಗುತ್ತಿರುವ ಒಂದು ಪ್ರಮುಖ ಮಾನದಂಡವೆಂದರೆ, ಎಷ್ಟು ವಿದೇಶಿ ಹೂಡಿಕೆಯನ್ನು ಆಕರ್ಷಿಸಲಾಗಿದೆ ಎಂಬುದು. ಸಮಸ್ಯೆ ಏನೆಂದರೆ, ಜಗತ್ತಿನ ಇತರ ಎಲ್ಲ ಆರ್ಥಿಕತೆಗಳೂ ಇದೇ ತಂತ್ರವನ್ನು ಅಳವಡಿಸಲು ಬಯಸಿದರು. ಇದರಲ್ಲಿ ಯಶಸ್ವಿಯಾಗಲು, ಭಾರತದ ಕಾರ್ಪೋರೇಟ್ ವರ್ಗಕ್ಕೆ ಎರಡು ಅಗತ್ಯಗಳಿದ್ದವು. ಕಡಿಮೆ ತೆರಿಗೆ ದರಗಳು ಹಾಗೂ ಕಡಿಮೆ ವೇತನ ದರಗಳು. ಭಾರತ ಇಂದು ಹೊರಗುತ್ತಿಗೆಗೆ ಅತ್ಯಂತ ಅನುಕೂಲಕರವಾದ ತಾಣವಾಗಿರವುದು, ಇಲ್ಲಿನ ಸಾಮಾನ್ಯ ಜನರು ಎಷ್ಟರ ಮಟ್ಟಿಗೆ ಶೋಷಣೆಗೆ ಒಳಗಾಗಿದ್ದಾರೆ ಎಂಬುದರ ಸಂಕೇತ ಮತ್ತು ಅಳತೆಯಾಗಿದೆ.

ದುಡಿಯುವ ವರ್ಗವನ್ನು ಶೋಷಿಸಲು ಬಳಸಿದ ವಿಧಾನಗಳು ಎರಡು – ಒಂದು ಶತಮಾನಕ್ಕಿಂತಲೂ ಹೆಚ್ಚಿನ ದೀರ್ಘ ಹೋರಾಟದಿಂದ ಗಳಿಸಿಕೊಂಡಿದ್ದ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ರಕ್ಷಣೆಯನ್ನು ಇಲ್ಲವಾಗಿಸುವುದು ಮತ್ತು ಉದ್ಯೋಗದ ಹೊಸ ಸ್ವರೂಪಗಳನ್ನು ಸೃಷ್ಟಿಸಿ, ಅದರಿಂದಲೇ ಇಂತಹ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಬರುವ ಕಾರ್ಮಿಕರ ರಕ್ಷಣೆಯನ್ನು ಗಾಳಿಗೆ ತೂರುವುದು. ಈ ಎರಡೂ ಪ್ರಕ್ರಿಯೆಗಳು 1990ರಿಂದ ವೇಗ ಪಡೆದುಕೊಂಡವು.

1972ರ ಗ್ರ್ಯಾಚುಯಿಟಿ ಕಾಯಿದೆಯನ್ನು ದುಡಿಯುವ ವರ್ಗಕ್ಕೆ ಸಮಗ್ರವಾಗಿ ರಕ್ಷಣೆ ನೀಡಲು ತಂದ ಕೊನೆಯ ಕಾನೂನು ಎನ್ನಬಹದು. ಇದಾದ ನಂತರ, 80ರ ದಶಕದ ಪ್ರಾರಂಭದಲ್ಲಿ ಐಡಿ(ಕೈಗಾರಿಕಾ ವ್ಯಾಜ್ಯ ಕಾಯಿದೆ) ಆ್ಯಕ್ಟ್‌ನ 5ಬಿ ಅಧ್ಯಾಯವನ್ನು ಜಾರಿಗೊಳಿಸಲಾಯಿತು. ಅದರಿಂದ ಅತಿದೊಡ್ಡ ಉದ್ಯಮಗಳ ಕಾರ್ಮಿಕರಿಗೆ ಬೇಕಾಬಿಟ್ಟಿಯಾಗಿ ವಜಾ ಮಾಡುವುದು, ಉದ್ಯೋಗ ಕಡಿತಗೊಳಿಸುವುದು ಹಾಗೂ ಸಂಪೂರ್ಣ ಮುಚ್ಚುವಿಕೆಯಿಂದ ರಕ್ಷಣೆ ನೀಡಿದಂತಾಯಿತು. ಅದಾದ ನಂತರವೂ ಕೆಲವು ಕಾನೂನುಗಳನ್ನು ತರಲಾಯಿತು, (ದುಡಿಯುವ ವರ್ಗಕ್ಕೆ ಸಂಪೂರ್ಣವಾಗಿ ಅನ್ವಯವಾಗುವಲ್ಲ) 1996ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆ ಹಾಗೂ 2008ರ ಅಸಂಘಟಿತ ವಲಯದ ಕಾರ್ಮಿಕರ ಕಾಯಿದೆ ಇತ್ಯಾದಿ. ಈ ಕಾನೂನುಗಳು ಕೇವಲ ಹಾಳೆಯ ಮೇಲೆಯೇ ಉಳಿದಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಆದರೆ ತದ್ವಿರುದ್ಧವಾಗಿ, ಒಂದು ರಿವರ್ಸ್ ಪ್ರಕ್ರಿಯೆ ಶುರುವಾಗಿದೆ – ಕಾರ್ಮಿಕರು ಈ ಮೊದಲು ಗಳಿಸಿಕೊಂಡಿದ್ದ ರಕ್ಷಣೆಗಳನ್ನು ಕಿತ್ತುಹಾಕುವ ಪ್ರಕ್ರಿಯೆ.

ನಾವು ಈ ಅವಧಿಯ ಪ್ರಾರಂಭವನ್ನು ಎರಡನೆಯ ಕಾರ್ಮಿಕ ಆಯೋಗದ ವರದಿಯೊಂದಿಗೆ 90ರ ದಶಕದ ಅಂತ್ಯದಲ್ಲಿ ಬಂದದ್ದು ಎಂದು ನಿಗದಿಪಡಿಸಬಹುದು. ಅದೊಂದು ಸ್ಪಷ್ಟವಾದ ತಿರುವಾಗಿತ್ತು. ಅದಕ್ಕಿಂತ ಮುನ್ನ, ಗುತ್ತಿಗೆ ಕಾರ್ಮಿಕ ಪದ್ಧತಿಯ ನಿರ್ಮೂಲನೆ, ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸುವ ಹಾಗೂ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವ ಹಾಗೂ ಕಾರ್ಮಿಕರು ಸಂಘಟಿಸುವ ಮತ್ತು ಪ್ರತಿಭಟಿಸುವ ಹಕ್ಕುಗಳ ಬಗ್ಗೆ ಸರಕಾರ ಮತ್ತು ನ್ಯಾಯಾಲಯಗಳು ಸ್ಪಷ್ಟವಾಗಿ ಮಾತನಾಡಿದ್ದವು ಆದರೆ ಎರಡನೇ ಲೇಬರ್ ಆಯೋಗವು ಇದಕ್ಕೆ ತದ್ವಿರುದ್ಧ ಪರಿಕಲ್ಪನೆಯನ್ನು ನೀಡಿತು. ಅದು ಹೇಳಿದ್ದು, ಕಾರ್ಮಿಕರು ತಮ್ಮ ಜೀವನದುದ್ದಕ್ಕೂ ಒಂದೇ ಉದ್ಯೋಗದಲ್ಲಿ ಮುಂದುವರೆಯುವ ಕಲ್ಪನೆ ಇರುವುದರಿಂದ ಕಾರ್ಮಿಕರು ಸಂತೃಪ್ತರಾಗಿದ್ದಾರೆ(ಕಾಂಪ್ಲಸೆಂಟ್). ಅವರನ್ನು ಈ ಕಲ್ಪನೆಯ ಭ್ರಾಂತಿಯಿಂದ ಹೊರತರಬೇಕಾಗಿದೆ ಎಂದು. ಅವರು ಕಾರ್ಮಿಕ ನೀತಿಗಳಿಗೆ ಉದ್ಯೋಗದಾತರು ಬಯಸುತ್ತಿದ್ದ ಬದಲಾವಣೆಗಳನ್ನು ಶಿಫಾರಸು ಮಾಡಿದರು, ಉದಾಹರಣೆಗೆ, ವಜಾ ಮಾಡುವುದರ, ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುವ ಮತ್ತು ಉದ್ಯಮಗಳನ್ನು ಮುಚ್ಚುವುದರಿಂದ ಕಾರ್ಮಿಕರಿಗೆ ಇರುವ ರಕ್ಷಣೆಗಳನ್ನು ದುರ್ಬಲಗೊಳಿಸುವುದು ಹಾಗೂ ಗುತ್ತಿಗೆ ಪದ್ಧತಿಯನ್ನು ಹೆಚ್ಚು ಸಾಮಾನ್ಯವಾಗಿಸುವುದು ಆ ಆಯೋಗದ ಶಿಫಾರಸ್ಸುಗಳಾಗಿದ್ದವು. ಇಂದಿನ ನಾಲ್ಕು ಕೋಡ್‍ಗಳಲ್ಲಿ ಕಾರ್ಮಿಕ ನೀತಿಗಳ ಕ್ರೋಢೀಕರಣವೂ 2ನೇ ಲೇಬರ್ ಆಯೋಗದ ವರದಿಯಿಂದಲೇ ತನ್ನ ಸಿಂಧುತ್ವವನ್ನು ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ.

ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳೊಂದಿಗೆ, 2000ದ ಸುಮಾರಿಗೆ ಉದ್ಯೋಗದ ಹೊಸ ಸ್ವರೂಪಗಳು ಸೃಷ್ಟಿಯಾದವು. ಉದ್ಯೋಗದಾತರಿಗೆ ಕಾರ್ಮಿಕರನ್ನು ಅಪ್ರೆಂಟಿಸ್ (ಕಡಿಮೆ ವೇತನಕ್ಕೆ ಕಡಿಮೆ ಅವಧಿಗೆ ದುಡಿಯುವ ಖಾಯಂ ಅಲ್ಲದ ನೌಕರರು) ಆಗಿ ನೇಮಿಸಿಕೊಳ್ಳಲು ಹೆಚ್ಚಿನ ಅವಕಾಶ ನೀಡಲಾಯಿತು. ಆ್ಯಮ್‍ವೇ ಸೇಲ್ಸ್‍ಮನ್ ಮತ್ತು ಊಬರ್, ಓಲಾಗಳಂತಹ ಗಿಗ್ ಕಾರ್ಮಿಕರಿಗೆ ಗುರುತಿಸಿಕೊಳ್ಳಬಹುದಾದ ಉದ್ಯೋಗದಾತ ಇಲ್ಲದಿರುವ ಆರ್ಥಿಕತೆಯನ್ನು ಪರಿಚಯಿಸಲಾಯಿತು. ಇತ್ತೀಚಿನ ಸಮಯದಲ್ಲಿ ಸರಕಾರವು ನೀಮ್ (ಎನ್‍ಇಇಎಮ್ – ನ್ಯಾಷನಲ್ ಎಂಪ್ಲಾಯ್‍ಮೆಂಟ್ ಎನ್‍ಹಾನ್ಸ್‍ಮೆಂಟ್ ಮಿಷನ್) ಎಂಬ ಯೋಜನೆಯನ್ನು ಪ್ರಾರಂಭಿಸಿದೆ, ಇದರಡಿ ‘ಕಲಿಯಿರಿ ಮತ್ತು ಸಂಪಾದಿಸಿ’ ಎಂಬ ಭವ್ಯ ನುಡಿಗಟ್ಟಿನ ಅಡಿಯಲ್ಲಿ ಕಾರ್ಮಿಕರನ್ನು ಹಲವಾರು ವರ್ಷಗಳ ಕಾಲ ಶೋಷಣೆ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತ ತರಬೇತಿ ಪಡೆಯುವ ಪ್ರಕ್ರಿಯೆ ಇದ್ದು, ಆದರೆ ಈ ತರಬೇತಿಯ ಅವಧಿಯಲ್ಲಿ ಕಾರ್ಮಿಕರಿಗೆ ಇರಬೇಕಾದ ಇತರ ಯಾವುದೇ ವೇತನ ಅಥವಾ ಕಾರ್ಮಿಕರಿಗೆ ಇರಬೇಕಾದ ಹಕ್ಕುಗಳಿಗೆ ಮತ್ತು ಸವಲತ್ತುಗಳಿಗೆ ಅರ್ಹರಾಗಿರುವುದಿಲ್ಲ. ಇದರಲ್ಲಿರುವ ಅಡಗಿರುವ ಸಮಸ್ಯೆಯೆಂದರೆ, ಇಂತಹ ‘ತರಬೇತಿ’ಯು ಎಷ್ಟು ವರ್ಷ ಬೇಕಾದರೂ ಮುಂದುವರೆಯಬಹುದು.

ಇದು, 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪರಿಸ್ಥಿತಿ ಇನ್ನಷ್ಟು ಬದಲಾಯಿತು. ಅಧಿಕಾರಕ್ಕೆ ಬಂದ ಒಂದು ವಾರದೊಳಗೆ ಸಚಿವ ಸಂಪುಟವು ಕಾರ್ಮಿಕ ನೀತಿಗಳನ್ನು ಬದಲಿಸಬೇಕೆಂದು ನಿರ್ಣಯಿಸಿತು. ಇದಕ್ಕೆ ಬೃಹತ್ ಪ್ರತಿರೋಧ ವ್ಯಕ್ತವಾಯಿತು, 2014ರ ಸೆಪ್ಟೆಂಬರ್ 2ರಂದು ಬೃಹತ್ ಮುಷ್ಕರ ಆಯೋಜಿಸಲಾಗುತ್ತು. ಆಗ ಸರಕಾರವು ಯುನಿಯನ್‍ಗಳೊಂದಿಗೆ ಸಮಾಲೋಚನೆ ಮಾಡದೇ ಕೇಂದ್ರ ಸರಕಾರವು ಕಾರ್ಮಿಕ ನೀತಿಗಳಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಭರವಸೆ ನೀಡಿತು. ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಸರಕಾರಕ್ಕೆ ವಿಶೇಷವಾಗಿ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ಇರಲಿಲ್ಲವಾದ್ದರಿಂದ, ಇದು ಕೇವಲ ತನ್ನ ಮರ್ಯಾದೆ ಉಳಿಸಿಕೊಳ್ಳುವ ಸಾಧನ ಆಗಿತ್ತು. ಲೋಕಸಭೆಯಲ್ಲಿ ಎನ್‍ಡಿಎದ ಹಲವು ಮಿತ್ರಪಕ್ಷದವರೂ ಕಾರ್ಮಿಕ ನೀತಿಗಳ ಬದಲಾವಣೆಯ ಪರವಾಗಿರಲಿಲ್ಲ ಹಾಗೂ ಬಿಜೆಪಿಯ ಟ್ರೇಡ್ ಯುನಿಯನ್ (ಬಿಎಂಎಸ್) ಕೂಡ ಈ ತಿದ್ದುಪಡಿಗಳನ್ನು ವಿರೋಧಿಸಿತು. ಹಾಗಾಗಿ ಅವರು ತಮ್ಮ ಪ್ರಸ್ತಾವಿತ ತಿದ್ದುಪಡಿಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿತು ಮತ್ತು ಆ ಸಮಿತಿಯು ಈ ತಿದ್ದುಪಡಿಗಳ ವಿರುದ್ಧ ತನ್ನ ವರದಿಯನ್ನು ಸಲ್ಲಿಸಿತು.

ಇಂತಹ ಸಂದರ್ಭದಲ್ಲಿ ಬಿಜೆಪಿಯು ಸಂವಿಧಾನಕ್ಕೆ ವಂಚನೆ ಬಗೆಯಿತು. ಅವರು ತಾವು ಆಡಳಿತದಲ್ಲಿದ್ದ ರಾಜ್ಯಗಳಲ್ಲಿ ಈ ಕಾರ್ಮಿಕ ನೀತಿಗಳಿಗೆ ತಿದ್ದುಪಡಿ ತಂದು, ರಾಷ್ಟ್ರಪತಿ (ಕ್ಯಾಬಿನೆಟ್‍ನ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.) ಒಪ್ಪಿಗೆಯನ್ನು ನೀಡುವಂತೆ ಮಾಡಿತು. ಹಾಗಾಗಿ, ಐಡಿ (ಕೈಗಾರಿಕಾ ವ್ಯಾಜ್ಯ) ಕಾಯಿದೆ, ಕಾರ್ಖಾನೆಗಳ ಕಾಯಿದೆ ಮತ್ತು ಗುತ್ತಿಗೆ ಕಾರ್ಮಿಕ ಕಾಯಿದೆ (ಇದರೊಂದಿಗೆ ಇನ್ನೂ ಕೆಲವು ಕಾಯಿದೆಗಳೂ ಸಹ)ಗಳಿಗೆ ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಇತ್ತೀಚಿಗೆ ಗೋವಾ ಮತ್ತು ಕರ್ನಾಟಕದಲ್ಲಿ ತಿದ್ದುಪಡಿಗಳನ್ನು ತರಲಾಯಿತು. ನೀಮ್(ಎನ್‍ಇಇಎಮ್)ನಂತಹ ಯೋಜನೆಯನ್ನು ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜ್ಯುಕೇಷನ್‍ನ(ಎಐಸಿಟಿಇ) ಅಧಿಸೂಚನೆಯ ಅನುಗುಣವಾಗಿ ಜಾರಿಗೆ ತರಲಾಯಿತು. ಎಐಸಿಟಿಇ ನ ಅಧಿಸೂಚನೆಯು ನೀಮ್ ಪ್ರಶಿಕ್ಷಣಾರ್ಥಿಗಳು ‘ಕೆಲಸಗಾರರು’ ಅಲ್ಲ ಎಂಬ ತೀರ್ಮಾನವನ್ನು ಹೊರಡಿಸಿತು. ಪರಿಣಾಮವಾಗಿ, ಎಐಸಿಟಿಇನ ಈ ಅಧಿಸೂಚನೆಯು ಕಾನೂನಿನ ತಿದ್ದುಪಡಿ ಮಾಡಿದೆ.

ಒಟ್ಟಾರೆಯಾಗಿ, ಮುಂಚೆ ಇದ್ದ ಕಾಂಗ್ರೆಸ್ ಸರಕಾರವೂ ತರಲು ಇಚ್ಛಿಸಿದ್ದ ಆದರೆ ಸಾಂವಿಧಾನಿಕವಾಗಿ ಸಾಧ್ಯವಾಗಿರದಿದ್ದ ಕಾರ್ಮಿಕ ವಿರೋಧಿ ನೀತಿಗಳನ್ನು ಬಿಜೆಪಿಯು ಅಸಂವಿಧಾನಿಕವಾಗಿ ತಂದಿತು.

ನ್ಯಾಯಾಲಯಗಳು ಕಾರ್ಮಿಕರ ಹಕ್ಕುಗಳ ರಕ್ಷಕನ ಕೆಲಸ ಮಾಡಬೇಕಿತ್ತು. ಆದರೆ ಕಾರ್ಮಿಕರು ನ್ಯಾಯಾಲಯಗಳಲ್ಲಿ ಇಟ್ಟಿದ್ದ ಭರವಸೆ ವ್ಯರ್ಥವಾಯಿತು. ಸರ್ವೋಚ್ಚ ನ್ಯಾಯಾಲಯಗಳ ಇತ್ತೀಚಿನ ತೀರ್ಪುಗಳ ಬಗ್ಗೆ ಹೆಚ್ಚು ಹೇಳಬೇಕಿಲ್ಲ; ವಲಸೆ ಕಾರ್ಮಿಕರ ಮತ್ತು ಇತರ ಕಾರ್ಮಿಕರ ವಿಷಯದಲ್ಲಿ ಹಾಗೂ ಪ್ರಶಾಂತ್ ಭೂಷಣ್ ಮತ್ತು ವಿದ್ಯಾರ್ಥಿಗಳ ಪರೀಕ್ಷೆಯ ವಿಷಯದಲ್ಲಿ ಸುಪ್ರೀಮ್ ಕೋರ್ಟ್ ವರ್ತಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಕೇವಲ ಕಾರ್ಮಿಕರ ಮುಂದಷ್ಟೇ ಅಲ್ಲ, ಭಾರತದ ಸಾಮಾನ್ಯ ಜನರ ಕಣ್ಣಿಗೂ ಸರ್ವೋಚ್ಚ ನ್ಯಾಯಾಲಯದ ಸಂಪೂರ್ಣವಾಗಿ ಬಯಲಾಗಿದೆ.

ಇಂತಹ ಕ್ಲಿಷ್ಟ ಸ್ಥಿತಿಯಲ್ಲಿ ಬಂದಿದ್ದು, ಕೋವಿಡ್ ಸಾಂಕ್ರಾಮಿಕ. ಈ ಸಾಂಕ್ರಾಮಿಕದ ಸಮಯದಲ್ಲೂ ಕಾರ್ಮಿಕರ ಮೇಲೆಯೇ ಸಾಂಕ್ರಾಮಿಕ ರೋಗದ ಸಂಪೂರ್ಣ ಭಾರವನ್ನು ಹೊರೆಸುವ ಪ್ರಯತ್ನ ಮಾಡಲಾಗುತ್ತಿದೆ. ಸಿಎಮ್‍ಐಇ (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ)ಯ ಒಂದು ಅಧ್ಯಯನದ ಪ್ರಕಾರ, ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 1ಕೋಟಿ 89 ಲಕ್ಷ ಉದ್ಯೋಗಳು ನಷ್ಟವಾಗಿವೆ. ಉದ್ಯಮಗಳನ್ನು ಉತ್ತೇಜಿಸುವ ನೆಪದಲ್ಲಿ ಕಾರ್ಮಿಕರಿಗೆ ಇರುವ ರಕ್ಷಣೆಗಳನ್ನು ತೆಗೆದುಹಾಕಲು ಕಾರ್ಮಿಕ ಕಾನೂನುಗಳನ್ನು ಬೇಕಾಬಿಟ್ಟಿಯಾಗಿ ಬದಲಿಸಲಾಗುತ್ತದೆ. ಕೋವಿಡ್‍ನ ಕವಚವನ್ನು ಬಳಸಿ, ಹಲವಾರು ಸಾರ್ವಜನಿಕ ಸೆಕ್ಟರ್‍ಗಳನ್ನು, ಕಲ್ಲಿದ್ದಲು ಗಣಿಗಳನ್ನು, ಬಿಪಿಸಿಎಲ್, ಏರ್ ಇಂಡಿಯಾ, ಬ್ಯಾಂಕುಗಳು ಇತ್ಯಾದಿಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇರುವ ದಾರಿ ಒಂದೆ; ದುಡಿಯುವ ವರ್ಗವನ್ನು, ಇತರ ಶೋಷಿತ ಸಮುದಾಯಗಳಾದ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ವಿದ್ಯಾರ್ಥಿಗಳು ಮುಂತಾದವರೆಲ್ಲರನ್ನೂ ಒಗ್ಗೂಡಿಸಿ, ಫ್ಯಾಸಿಸ್ಟ್ ಧೋರಣೆಯ ಮೋದಿ ಸರಕಾರವನ್ನು ಸೋಲಿಸುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವದ ಸಲುವಾಗಿ ಹೋರಾಟ ಮಾಡುವುದು. ಇದರಿಂದ ಮಾತ್ರ ಗೌರಿ ಲಂಕೇಶ್‍ಗೆ ಗೌರವ ಸಲ್ಲಿಸಿದಂತಾಗುವುದು ಹಾಗೂ ಅವರ ಕಾರ್ಯದ ಮುಂದುವರಿಕೆಯಾಗುವುದು.

  • ಸಂಜಯ್ ಸಿಂಘ್ವಿ ಮುಂಬೈ ಕೈಕೋರ್ಟಿನಲ್ಲಿ ವಕೀಲರಾಗಿ ಕೆಲಸ ಮಾಡುತ್ತಲೇ ದೇಶದ ಕಾರ್ಮಿಕರ ಪರವಾದ ಹೋರಾಟಗಳಲ್ಲಿ ನಿರಂತರ ಸುತ್ತುವ ಸಂಜಯ್ ಸಿಂಘ್ವಿ, ಟಿಯುಸಿಐನ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು

ಇದನ್ನು ಓದಿ: ಪ್ರಶಾಂತ್ ಭೂಷಣ್‌ಗೆ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...