Homeಕರ್ನಾಟಕಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿದ್ದರೆ ಅದು ಅಪರಾಧ: ಚಂದ್ರಶೇಖರ್ ಆಝಾದ್ ರಾವಣ್

ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿದ್ದರೆ ಅದು ಅಪರಾಧ: ಚಂದ್ರಶೇಖರ್ ಆಝಾದ್ ರಾವಣ್

ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಆಗಮಿಸಿದ್ದ ದಲಿತರ ಸಿಡಿಲ ದನಿ ಚಂದ್ರಶೇಖರ್ ಆಝಾದ್ ರಾವಣ್ ಅವರ ಮಾತುಗಳನ್ನು ಕೇಳಲು ಸಾವಿರಾರು ಜನ ಮಂತ್ರಿ ಮಾಲ್ ಬಳಿಯ ಶಿರೂರ್ ಪಾರ್ಕ್ ನಲ್ಲಿ ಮಳೆ ನಡುವೆಯೂ ಆಗಮಿಸಿದ್ದರು

- Advertisement -
- Advertisement -

“ಇಲ್ಲಿನ ಪೊಲೀಸರು ನನಗೆ ಆಕ್ಷೇಪಾರ್ಯ ಭಾಷಣ ಮಾಡಬಾರದೆಂಬ ಹೇಳಿಕೆಗೆ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ ನಾನು ಏನು ಮಾತಾಡಲು ಬಂದಿದ್ದೇನೋ ಅದನ್ನು ಮಾತಾಡುತ್ತೇನೆ. ಬಂಧನಕ್ಕೋ, ಜೈಲಿಗೋ ಹೆದರಿಕೊಂಡು ನಾನು ಸುಮ್ಮನಿರಲಾರೆ. ದಲಿತರ ಪರವಾಗಿ ಹೋರಾಡಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಒಂದೂವರೆ ವರ್ಷ ಜೈಲುವಾಸ ಅನುಭವಿಸಿದ್ದೀನಿ. ಇಲ್ಲಿ ತಳಸಮುದಾಯಗಳಿಗೆ ಭೂಮಿಗಾಗಿ ಹೋರಾಡಿ ಜೈಲಿಗೆ ಹೋಗಲು ಸಿದ್ದನಿದ್ದೇನೆ. ನಾವು ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿ ಉಳಿದರೆ ಅದು ಅಪರಾಧ. ಇಂತಹ ತಪ್ಪನ್ನು ನಾವ್ಯಾರೂ ಮಾಡಬಾರದು. ಅನ್ಯಾಯದ ವಿರುದ್ದ ನಾವು ಮಾಡುವ ಹೋರಾಟ ಸಂವಿಧಾನವನ್ನು ಉಳಿಸಿಕೊಳ್ಳುವ ಕೆಲಸವಾಗಿದೆ.

ಈ ಹೋರಾಟದ ಸಂದರ್ಭದಲ್ಲಿ ನಮ್ಮ ಒಗ್ಗಟ್ಟನ್ನು ಮುರಿಯುವ ಹಲವಾರು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ನಮ್ಮ ಒಗ್ಗಟ್ಟು ಮುರಿಯಲು ನಾವು ಅವಕಾಶ ಕೊಡಬಾರದು. ಭೂಮಿ-ವಸತಿಯ ಹೋರಾಟವನ್ನು ದೇಶಮಟ್ಟದಲ್ಲಿ ಮಾಡಲು ಪ್ರಯತ್ನ ಪಡುತ್ತೇನೆ. ಸರ್ಕಾರಕ್ಕೆ ಸಂವಿಧಾನವನ್ನು, ಈ ನೆಲದ ಕಾನೂನನ್ನು ಗೌರವಿಸೋದನ್ನು ನಾವೆಲ್ಲರೂ ಸೇರಿ ಕಲಿಸಿಕೊಡಬೇಕಿದೆ.” ಈ ಕಿಡಿನುಡಿಗಳು ಹೊರಬಂದಿದ್ದು ಭೀಮ್ ಆರ್ಮಿ ಸಂಘಟನೆಯ ಚಂದ್ರಶೇಖರ್ ಆಝಾದ್ ರಾವಣ್ ರವರಿಂದ..

ಬುಧವಾರ ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ‘ನಡುರಾತ್ರಿ ಸ್ವಾತಂತ್ರ್ಯೋತ್ಸವ; ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ‘ನಮ್ಮ ಹೋರಾಟದ ಗಂಭೀರತೆಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಇವತ್ತು ಆಳುವವರು ಶ್ರೀಮಂತರಾಗಿದ್ದಾರೆ. ಬಡವರ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ಹಕ್ಕುಗಳನ್ನು ಜಾರಿಗೊಳಿಸಿಕೊಳ್ಳಬಹುದು. ಸರ್ಕಾರದ ನಿರ್ಲಕ್ಷ್ಯತನವನ್ನು ಬದಲಾಯಿಸಿಕೊಳ್ಳಬೇಕು ಮತ್ತು ಬಡವರ ಹಕ್ಕಗಳಿಗೆ ಸ್ಪಂದಿಸಬೇಕು. ಈ ಕಿವುಡರ ಕಿವಿಗೆ ಕೇಳಿಸಲು ನಮ್ಮ ಧ್ವನಿ ಮತ್ತಷ್ಟು ಗಟ್ಟಿಯಾಗಬೇಕು. ನಗಾರಿಯ ಮೂಲಕ ಉದ್ಘಾಟನೆಯಾದ ಈ ಸಮಾವೇಶದ ದನಿ ಕಿವುಡು ಸರ್ಕಾರಕ್ಕೆ ಎಚ್ಚರಿಕೆಯ ದನಿಯಾಗಬೇಕು’ ಎಂದರು.

ಶ್ರೀಮಂತರು ಈ ದೇಶವನ್ನು ತಮ್ಮ ಹಣದ ಶಕ್ತಿಯಿಂದ ಆಳುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಭೂಮಿ ಕಸಿಯಲು ಸಾಧ್ಯವಿಲ್ಲ ಎಂಬುದನ್ನು ಈ ಸರ್ಕಾರಗಳಿಗೆ ತೋರಿಸಬೇಕಿದೆ. ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸಬಹುದು ಆದರೆ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ. ಅವರು ನಮ್ಮನ್ನು ಬೆದರಿಸಿ ಓಡಿಸಲು ಸಾಧ್ಯವಿಲ್ಲ. ಬಡವರ ಹಕ್ಕುಗಳ ಸಾಕಾರಕ್ಕಾಗಿ ಭೀಮ್ ಆರ್ಮಿ ಸಂಘರ್ಷಕ್ಕೆ ಮುಂದಾಗಲಿದೆ ನಿಮ್ಮೊಡನೆ ಯಾವಾಗಲೂ ಜೊತೆಗಿರುತ್ತೇನೆ ಎಂದರು. ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಆಗಮಿಸಿದ್ದ ದಲಿತರ ಸಿಡಿಲ ದನಿ ಚಂದ್ರಶೇಖರ್ ಆಝಾದ್ ರಾವಣ್ ಅವರ ಮಾತುಗಳನ್ನು ಕೇಳಲು ಸಾವಿರಾರು ಜನ ಮಂತ್ರಿ ಮಾಲ್ ಬಳಿಯ ಶಿರೂರ್ ಪಾರ್ಕ್ ನಲ್ಲಿ ಮಳೆ ನಡುವೆಯೂ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೋರಾಟಗಾರ ನೂರ್ ಶ್ರೀಧರ್ ಅವರು “ಹಳ್ಳಿ ಬಿಟ್ಟು ನಗರಕ್ಕೆ ಜನ ವಲಸೆ ಬಂದರೆ ಗಟಾರಗಳ ಪಕ್ಕ ಕೆಟ್ಟ ವಾಸನೆಯ ಜೊತೆ ಬದುಕುವ ಪರಿಸ್ಥಿತಿ ಇದೆ. ಆ ಗಟಾರದ ಪಕ್ಕ ಇರುವ ಜಾಗವನ್ನೂ ಸಹ ಸರ್ಕಾರ ಬಡವರಿಗೆ ಬಿಟ್ಟು ಕೊಡುತ್ತಿಲ್ಲ. ಇಡೀ ದಿಡ್ಡಳ್ಳಿ ಜನ ಕೇಳಿದ್ದು ಏನು? ಕೂಲಿ ಮಾಡಲು ಸ್ವಾತಂತ್ರ್ಯ ಕೊಡಿ ಎಂದು. ಕೂಲಿಗೆ ಹೋಗಲು ನನ್ನದೇ ಒಂದು ಜಾಗ ಬೇಕು ಎಂದು ಕೇಳಿದರೆ ಅದನ್ನು ಕೊಡಲು ಆಗಲ್ಲ ಅಂದಿತು ಸರ್ಕಾರ. ಬೆಂಗಳೂರಿನ ಜಗಮಗಿಸುವ ಬೆಳಕಿನ ಕೆಳಗೆ ಗಂಭೀರವಾದ ಕತ್ತಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂತೋಷದಿಂದ ಆಚರಿಸಬೇಕಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ದುಃಖ ಹಾಗೂ ನೋವಿನಿಂದ ಆಚರಿಸುತ್ತಿದ್ದೇವೆ. ಈ ದೇಶದ ಶೋಷಿತರಿಗೆ, ದಲಿತರಿಗೆ, ಮಹಿಳೆಯರಿಗೆ ನೈಜ ಸ್ವಾತಂತ್ರ್ಯ ಕೈಗೆಟುಕಿಲ್ಲ. ಈ ವರ್ಗಗಳಿಗೆ ಗೌರವಯುತವಾಗಿ ಹಾಗೂ ಸ್ವಾಭಿಮಾನದಿಂದ ಜೀವನ ನಡೆಸಲು ಸಾಧ್ಯವಾದಾಗ ಮಾತ್ರ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ. ಇದು ಕೇವಲ ಗ್ರಾಮೀಣ, ಬುಡಕಟ್ಟು ಜನಗಳ ಸಮಸ್ಯೆಯಲ್ಲ. ನಗರವಾಸಿಗಳಾದ ಶ್ರಮಿಕನಗರವಾಸಿಗಳು (ಸ್ಲಂ ನಿವಾಸಿಗಳು) ಕೂಡಾ ದಿನನಿತ್ಯ ನರಳುತ್ತಿದ್ದಾರೆ. ಅವರು ಕೇಳುತ್ತಿರುವುದು ಸಾವಿರಾರು ಎಕರೆ ಭೂಮಿಯನ್ನಲ್ಲ ಬದಲಿಗೆ ಸ್ವಾಭಿಮಾನದಿಂದ ಬದುಕು ನಡೆಸಲು ಬೇಕಾದ ‘ತುಂಡು ಭೂಮಿ ಮತ್ತು ವಸತಿ ಮಾತ್ರ’ ಎಂದರು.

ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ: ಸಭೆ ಕರೆಯಲು ನಿರ್ಧಾರ

ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಡಾ.ಎ.ಲೋಕೇಶ್, ಸಂಪುಟ ರಚನೆಯಾದ 2 ದಿನಗಳಲ್ಲಿ ಭೂಮಿ ವಸತಿಯ ಹೈಪವರ್ ಸಮಿತಿಯ ಸಭೆ ಕರೆಯುವುದಾಗಿ ಭರವಸೆ ನೀಡಿದರು. ಅಲ್ಲಿ ಈ ಎಲ್ಲಾ ವಿಚಾರಗಳು ಕುರಿತು ಸವಿವರವಾಗಿ ಚರ್ಚೆ ನಡೆಸಿ ಪರಿಹಾರಕ್ಕೆ ಮುಂದಾಗೋಣ ಎಂದರು.

ಹಣತೆಯ ಮೆರವಣಿಗೆ

ಆಗಸ್ಟ್ 14ರ ಬುಧವಾರ ಸಂಜೆ 6 ಗಂಟೆಗೆ ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ‘ಹಣತೆಯೊಂದಿಗೆ ಮೆರವಣಿಗೆ’ಯನ್ನು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷರಾದ ಕೆಜೆಎಸ್ ಮರಿಯಪ್ಪನವರು ಉದ್ಘಾಟಿಸಿದರು. ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಭೂಮಿ-ವಸತಿ ವಂಚಿತ ಬಡಜನರು ಮೇಣದ ಹಣತೆಯೊಂದಿಗೆ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಂತ್ರಿ ಮಾಲ್ ಬಳಿಯ ಸಿರೂರ್ ಪಾರ್ಕ್ ಮೈದಾನದಲ್ಲಿ ಸೇರಿ ಅಹೋರಾತ್ರಿ ಸತ್ಯಾಗ್ರಹವನ್ನು ನಡೆಸಿದರು.

ಹಿರಿಯ ಸ್ವಾತಂತ್ರ್ಯ ಸೇನಾನಿ, ಶತಾಯುಶಿ ಎಚ್.ಎಸ್.ದೊರೆಸ್ವಾಮಿಯವರು ನಡುರಾತ್ರಿ 12 ಗಂಟೆಗೆ ಧ್ವಜಾರೋಹಣವನ್ನು ನೆರವೇರಿಸಿ ಭೂಮಿ-ವಸತಿ ಹಕ್ಕು ವಂಚಿತರನ್ನು ಉದ್ದೇಶಿಸಿ ಬಡವರ ವಿಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಅದಕ್ಕಾಗಿ ಕೊನೆಯುಸಿರು ಇರುವವರೆಗೂ ಹೋರಾಡುತ್ತೇನೆ ಎಂದು ಶಪಥ ಮಾಡಿದರು.

ಸಿರೂರ್ ಪಾರ್ಕ್ ಮೈದಾನದಲ್ಲಿ ನಡುರಾತ್ರಿ ಸ್ವಾತಂತ್ರ್ಯದ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ನೆರೆದ ಹೋರಾಟಗಾರರು ಉದ್ಘಾಟಿಸಿದರು. ಉದ್ಘಾಟನೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಭೀಮ್ ಆರ್ಮಿಯ ಸಂಸ್ಥಾಪಕರಾದ ಚಂದ್ರಶೇಖರ್ ರಾವಣ್, ಡಾ.ವಿಜಯ, ನೂರ್ ಶ್ರೀಧರ್, ಡಿ.ಎಚ್.ಪೂಜಾರ್, ಸಿದ್ದನಗೌಡ ಪಾಟೀಲ್, ಆರ್. ಮಾನಸಯ್ಯ, ಇಂದಿರಾ ಕೃಷ್ಣಪ್ಪ, ಕುಮಾರ್ ಸಮತಳ, ಸಿರಿಮನೆ ನಾಗರಾಜ್, ಹೆಗ್ಗೋಡು ಪ್ರಸನ್ನ, ಸಿದ್ಧನಗೌಡ ಮೋದಿಗೆ, ವೆಂಕಟೇಶ್ ಅಗಲಗಂಚಿ, ವಿಶ್ವಶಾಂತಿ ಸೌಹಾರ್ದ ಪೀಠದ ಸಂಸ್ಥಾಪಕರಾದ ವಿಜಯಾನಂದ ಸ್ವಾಮೀಜಿಗಳು ಮುಂತಾದವರು ಉಪಸ್ಥಿತರಿದ್ದರು.

ರಾತ್ರಿಯೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಡಜನರ ಪರ ಘೋಷಣೆಗಳು ಮೊಳಗಿದವು. ಬೆಳಿಗ್ಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಪೇರೇಡ್ ಮೈದಾನದ ಕಡೆಗೆ ಮೆರವಣಿಗೆ ಮಾಡಲು ಸಮಿತಿಯು ಸಿದ್ಧತೆ ನಡೆಸಿತ್ತು. ಆದರೆ ಸರ್ಕಾರದ ವತಿಯಿಂದ ಪ್ರತಿನಿಧಿಗಳು ಬಂದು ಬಡಜನರ ಸಮಸ್ಯೆಯನ್ನು ಆಲಿಸಿ ಸಭೆ ನಿಗಧಿ ಮಾಡಿದ್ದರಿಂದ ಹೋರಾಟವನ್ನು 12 ಗಂಟೆಗೆ ಅಂತ್ಯಗೊಳಿಸಲಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...