Homeಮುಖಪುಟಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

ಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

- Advertisement -
- Advertisement -

ಈಗ ಮಾಧ್ಯಮಗಳಲ್ಲೆಲ್ಲಾ ಪ್ರಧಾನಿಗಳ ಜನ್ಮದಿನದಂದು ತಂದು ಬಿಡಲಾದ ಕನ್ನಡದ ಸಿವಂಗಿ ಎಂದು ಹೆಸರುಳ್ಳ ಚೀತಾಗಳದ್ದೇ ಸುದ್ದಿ. ಇದಕ್ಕೆ, ನಮ್ಮ ದೇಶದಿಂದ ಅಳಿದುಹೋದ ಪ್ರಬೇಧವೊಂದನ್ನು ಮತ್ತೆ ಅವತರಿಸುವಂತೆ ಮಾಡಲು ಮೋದಿಯವರೇ ಬರಬೇಕಾಯಿತು ಎಂದೆಲ್ಲ ಪ್ರಚಾರವನ್ನೂ ಕೊಡಲಾಯಿತು. ಆದರೆ ವಾಸ್ತವದ ವಿಷಯವೆಂದರೆ ಭಾರತದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ ಮತ್ತು ಆಫ್ರಿಕಾದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ. ಹೇಗೆ ಆಫ್ರಿಕಾದ ಸಿಂಹಗಳನ್ನು ಭಾರತದ ಗಿರ್ ಅರಣ್ಯದಲ್ಲಿರುವ ಸಿಂಹಗಳೆನ್ನಲಾಗದೋ, ಹೇಗೆ ಸೈಬೀರಿಯಾದ ಹುಲಿಗಳನ್ನು ಭಾರತದ ಹುಲಿಗಳೆನ್ನಲಾಗದೋ, ಹಾಗೆಯೇ ಆಫ್ರಿಕಾದ ಸಿವಂಗಿಗಳು ಆನುವಂಶಿಕವಾಗಿ ಭಾರತದ ಅಥವಾ ಏಷ್ಯಾದ ಸಿವಂಗಿಗಳಾಗಲಾರವು. ಐತಿಹಾಸಿಕವಾಗಿ ಏಷಿಯಾದ ಸಿವಂಗಿಗಳು ಮಧ್ಯಪ್ರಾಚ್ಯದಿಂದ ಹಿಡಿದು ಭಾರತದವರೆಗಿನ ಭೂ ಪ್ರದೇಶದಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ಆವಾಸದ ಕುಗ್ಗುವಿಕೆಯ ಕಾರಣಗಳಿಂದಾಗಿ ಕಳೆದ ಶತಮಾನದ ಮಧ್ಯಭಾಗದಲ್ಲಿ ತಮ್ಮ ವ್ಯಾಪ್ತಿಯ ಬಹುಪಾಲು ಪ್ರದೇಶಗಳಲ್ಲಿ ಈ ಸಿವಂಗಿಗಳು ಅವಸಾನ ಹೊಂದಿದವು. ಈಗಲೂ ಕೂಡ ಏಷಿಯಾದ ಸಿವಂಗಿಗಳು ಇರಾನಿನ ಕೆಲ ಸಂರಕ್ಷಿತ ಪ್ರದೇಶದಲ್ಲಿ ಉಳಿದುಕೊಂಡಿವೆ. ಆದರೆ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಸುಮಾರು 80ರಷ್ಟು ಮಾತ್ರ ಇದ್ದ ಸಿವಂಗಿಗಳು ಈಗಿನ ಗಣತಿಯ ಪ್ರಕಾರ 20ಕ್ಕೂ ಕಡಿಮೆ ಎಂದು ಅಂದಾಜಿಸಲಾಗಿದೆ.

ಸಿವಂಗಿಗಳು ಕಾಣಬರುವುದು ಉಷ್ಣ ಪ್ರದೇಶದ ಹುಲ್ಲುಗಾವಲು ಮತ್ತು ಅರೆ ಮರುಭೂಮಿಯಂತಹ ಪ್ರದೇಶಗಳಲ್ಲಿ. ಅವುಗಳ ಅಳಿವಿಗೆ ಸೂಕ್ತ ಆವಾಸದ ನಾಶವೇ ಮುಖ್ಯವಾದ ಕಾರಣ. ನಮ್ಮ ದೇಶದಲ್ಲಿ ಸಿವಂಗಿಗಳು ಇರಬಹುದಾದ ಆವಾಸವು ಹೆಚ್ಚಿನ ಪ್ರಮಾಣದಲ್ಲೇನೂ ಉಳಿದಿಲ್ಲ. ಅವೆಲ್ಲ ಖರಾಬು ಅಥವಾ ಬರಡು ಭೂಮಿಗಳೆಂದು ಪರಿಗಣಿಸಲ್ಪಟ್ಟು ಕೈಗಾರಿಕೆ ಮತ್ತಿತರ ಅರಣ್ಯೇತರ ಬಳಕೆಗೆ ವಿನಿಯೋಗಿಸಲ್ಪಟ್ಟಿವೆ. ನಮ್ಮ ದೇಶದಿಂದ ಸಿವಂಗಿಗಳೇನೋ ದಶಕಗಳ ಹಿಂದೆ ನಶಿಸಿ ಹೋದವು ಆದರೆ ಲಕ್ಷಾಂತರ ವರ್ಷಗಳಿಂದ ಇದೇ ಸಿವಂಗಿಗಳ ಜೊತೆಯಲ್ಲಿಯೇ ಆವಾಸವನ್ನು ಹಂಚಿಕೊಂಡಿದ್ದ ಇತರ ಜೀವ ಪ್ರಬೇಧಗಳ ಪರಿಸ್ಥಿತಿಯೇನು? ಸಿವಂಗಿಗಳಂತೆಯೇ ಹುಲ್ಲುಗಾವಲು ಮತ್ತು ಅರೆ ಮರುಭೂಮಿ ಪ್ರದೇಶದ ಮೇಲೆ ಅವಲಂಬಿತವಾದ ಅನೇಕ ಜೀವಿ ಪ್ರಬೇಧಗಳು ಅಳಿವಿನತ್ತ ಮುಖಮಾಡಿ ನಿಂತಿವೆ.

ರಾಜಸ್ಥಾನ, ಗುಜರಾತಿನ ಅರೆ ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಮತ್ತು ಕರ್ನಾಟಕವನ್ನೂ ಒಳಗೊಂಡ ದಖ್ಖನ್ ಪ್ರಸ್ಥಭೂಮಿಯ ಒಣ ಹುಲ್ಲುಗಾವಲಿನಲ್ಲಿ ಕಂಡುಬರುವ, ಕನ್ನಡದಲ್ಲಿ ಎರ್ಲಡ್ಡು ಅಥವಾ ದೊರವಾಯನ ಹಕ್ಕಿ ಎಂದು ಕರೆಸಿಕೊಳ್ಳುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯು ಇಂಥದೇ ಹುಲ್ಲುಗಾವಲನ್ನು ಅವಲಂಬಿಸಿದ ಜೀವಿ. ಮೊದಲು ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಹಕ್ಕಿಗಳು ಆವಾಸದ ನಾಶ ಮತ್ತು ಬೇಟೆಯ ಕಾರಣಗಳಿಂದ ಅಳಿವಿನಂಚಿಗೆ ಬಂದುನಿಂತಿವೆ. ಕೆಲವೇ ನೂರರಷ್ಟು ಮಾತ್ರ ಉಳಿದುಕೊಂಡಿರುವ ಈ ಹಕ್ಕಿಗಳು ಒಮ್ಮೆ ನಾಶವಾದರೆ ಮತ್ತೆಲ್ಲಿಂದಲೂ ಇವುಗಳನ್ನು ತರಲಾಗದು. ನಿಯಂತ್ರಣ ಇಲ್ಲದ ಅಭಿವೃದ್ಧಿ, ಅಗತ್ಯವಿಲ್ಲದೆಯೂ ನಿರ್ಮಾಣಗೊಳ್ಳುವ ರಸ್ತೆಗಳು ಮತ್ತು ಹೈಟೆನ್ಷನ್ ವಿದ್ಯುತ್ ತಂತಿಗಳು ಇವುಗಳಿಗೆ ಮಾರಕವಾಗಿವೆ.

ಸರಿಸುಮಾರು ಇದೇ ರೀತಿಯ ಆವಾಸದಲ್ಲಿ ಕಂಡುಬರುವ ಮತ್ತು ಮುಂಚೆ ವ್ಯಾಪಕವಾಗಿದ್ದ ಲೆಸ್ಸರ್ ಫ್ಲೋರಿಕನ್ ಅಥವಾ ಚೊಟ್ಟಿ ನವಿಲಕ್ಕಿ ಎಂದು ಕರೆಯಲ್ಪಡುವ ಹಕ್ಕಿಯು ಕೂಡ ಇಂದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹತ್ತಿರದ ಹೆಸರಘಟ್ಟದ ಹುಲ್ಲುಗಾವಲಿನಲ್ಲಿ ಅಕಸ್ಮಾತ್ತಾಗಿ ಕಂಡ ಈ ಹಕ್ಕಿಯು ಸ್ಥಳೀಯ ಪಕ್ಷಿ ವೀಕ್ಷಕರಲ್ಲಿ ರೋಮಾಂಚನವನ್ನೇ ಸೃಷ್ಟಿಸಿತ್ತು. ಯಾಕೆಂದರೆ ದಶಕಗಳಿಂದೀಚೆಗೆ ಆ ಹಕ್ಕಿಯು ಸ್ಥಳೀಯವಾಗಿ ಕಾಣಿಸಿರಲೇ ಇಲ್ಲ. ಇದೇ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಣೆ ಮಾಡುವಂತೆ ಸ್ಥಳೀಯ ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಬೆಂಗಳೂರಿಗೆ ಈ ಹಕ್ಕಿಗಳು ಬರುವ ಸಾಧ್ಯತೆಯು ಶಾಶ್ವತವಾಗಿ ಇಲ್ಲವಾಗುತ್ತದೆ. ಹಾಗೆಯೇ, ಒಣ ಪ್ರದೇಶದ ಹುಲ್ಲುಗಾವಲಿನಲ್ಲಿ ಮಾತ್ರ ಕಂಡುಬರುತ್ತಿದ್ದ ಜೇರ್ಡನ್ಸ್ ಕೋರ್ಸರ್ ಎಂಬ ಹಕ್ಕಿ ಕೂಡ ಬಹುಪಾಲು ನಾಶವಾಗಿದೆ. ಇದು ಈಗ ಆಂಧ್ರದ ಲಂಕಾಮಲ್ಲೇಶ್ವರ ವನ್ಯಜೀವಿಧಾಮದಲ್ಲಿ ಮಾತ್ರ ಇರಬಹುದೆಂದು ನಂಬಲಾಗಿದೆ. ಕೊನೆಯ ಬಾರಿಗೆ ಈ ಹಕ್ಕಿಯನ್ನು ನೋಡಿ ದಶಕಗಳೇ ಕಳೆದಿವೆ. ಹೀಗೆ ಸಿವಂಗಿಯ ಜೊತೆಗೆ ಇವೆಲ್ಲ ಪ್ರಬೇಧದ ಜೀವಿಗಳು ಒಂದೊಂದಾಗಿ ಅಳಿವಿನತ್ತ ನಡೆದಿವೆ.

ವರ್ಷದ ಬಹುಪಾಲು ಮೇಲ್ನೋಟಕ್ಕೆ ಒಣಗಿದಂತೆ ಕಾಣುವ ಹುಲ್ಲುಗಾವಲುಗಳ ಆವಾಸದ ವಿಶೇಷತೆಯೇ ಬೇರೆ, ಇವುಗಳು ಪೋಷಿಸುವ ಜೀವವೈವಿಧ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು. ಇವುಗಳ ಕುರಿತು ನಮ್ಮ ಅರಿವು ಕೂಡ ಕಡಿಮೆಯೇ; ಏಕೆಂದರೆ ಈ ಆವಾಸವನ್ನು ನಾವೀಗಾಗಲೇ ಬರಡು ಭೂಮಿಯೆಂದೂ ಕೃಷಿಗೆ ಯೋಗ್ಯವಲ್ಲದ ಭೂಮಿಯೆಂದೂ ವರ್ಗೀಕರಿಸಿಯಾಗಿದೆ. ಈ ಪ್ರದೇಶಗಳಲ್ಲಿ ನಾವು ಮಾಡುವ ಎಲ್ಲ ಚಟುವಟಿಕೆಗಳೂ ಅಲ್ಲಿನ ಜೀವ ಪ್ರಬೇಧಕ್ಕೆ ಕಂಟಕವೇ ಆಗುತ್ತದೆ. ಉದಾಹರಣೆಗೆ, ಅತ್ಯಂತ ಜನಪ್ರಿಯವಾದ ಪರಿಸರ ಪ್ರೇಮಿ ಚಟುವಟಿಕೆಯೆಂದು ಕರೆಸಿಕೊಳ್ಳಲ್ಪಡುವ ಗಿಡ ನೆಡುವ ಚಟುವಟಿಕೆ ಹುಲ್ಲುಗಾವಲಿಗೆ ಮತ್ತು ಅಲ್ಲಿನ ಜೀವಿಗಳಿಗೆ ಮಾರಕ. ಹುಲ್ಲುಗಾವಲನ್ನು ನಾವು ಅರಣ್ಯವಾಗಿ ಪರಿವರ್ತಿಸಿದರೆ ಅಲ್ಲಿನ ಸ್ಥಳೀಯ ಜೀವಪ್ರಬೇಧಗಳು ಅಲ್ಲಿಂದ ಮಾಯವಾಗುತ್ತವೆ. ಅದೇ ರೀತಿ ಜಾಗತಿಕ ತಾಪಮಾನದಿಂದ ರಕ್ಷಿಸುವ ಮತ್ತು ಪರಿಸರ ಸ್ನೇಹಿ ಎಂದು ನಂಬಲ್ಪಡುವ ಸೌರ ವಿದ್ಯುತ್ ಕೂಡ ಹುಲ್ಲುಗಾವಲಿನ ಆವಾಸಕ್ಕೆ ಕಂಟಕವೇ ಆಗಿದೆ. ನಮ್ಮದೇ ನಾಡಿನ ಪಾವಗಡದಲ್ಲಿ ಸ್ಥಾಪಿಸಲಾದ ಏಷಿಯಾದ ಅತಿದೊಡ್ಡ ಸೌರ ವಿದ್ಯುತ್ ಘಟಕವು ಇಂತಹುದೇ ಹುಲ್ಲುಗಾವಲು ಮತ್ತು ಮಳೆಯಾಧಾರಿತ ಒಣ ಕೃಷಿ ಭೂಮಿಯಲ್ಲಿಯೇ ಇದೆ. ಶಾಶ್ವತವಾಗಿ ಹುಲ್ಲುಗಾವಲನ್ನು ಮುಚ್ಚಿಹಾಕುವ ಸೌರ ಫಲಕಗಳು, ಅವುಗಳ ಸುತ್ತ ಹುಲ್ಲು ಮತ್ತಿತರ ಸಸ್ಯಗಳು ಬೆಳೆಯದಂತೆ ಸಿಂಪಡಿಸುವ ಕಳೆನಾಶಕಗಳು ಮತ್ತು ಈ ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ಬಳಸುವ ಕೋಟಿಗಟ್ಟಲೆ ಲೀಟರ್‌ನಷ್ಟು ನೀರು, ಇವೆಲ್ಲವೂ ಈ ಯೋಜನೆಗಳು ಎಷ್ಟು ಪರಿಸರ ಸ್ನೇಹಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತವೆ.

ವನ್ಯಜೀವಿ ಸಂರಕ್ಷಣೆಯೆಂಬುದು, ಹಿಂದಿನ ಅಂಕಿ ಅಂಶಗಳನ್ನು ನೋಡಿ ಅದರ ಆಧಾರದ ಮೇಲೆ ದಶಕಗಳಷ್ಟು ಮುಂದಿನ ಯೋಜನೆಯನ್ನಿಟ್ಟುಕೊಂಡು ಮಾಡುವ ಒಂದು ವೈಜ್ಞಾನಿಕ ಪ್ರಕ್ರಿಯಯಾಗಿದೆ. ಈ ಹಿಂದೆ ಮಾಡಿದ ತಪ್ಪುಗಳಿಂದ ನಾವು ಎಷ್ಟು ಜೀವ ಸಂಪತ್ತನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಮರುಕಳಿಸದಂತೆ ನಾವು ಕೈಗೊಳ್ಳಬೇಕಾದ ಕ್ರಮಗಳೇನೆಂಬ ಸಂಗತಿಗಳು, ಯಾವುದೋ ಪ್ರದೇಶದ, ಬೇರೊಂದು ಉಪ ಪ್ರಬೇಧದ ಜೀವಿಯೊಂದನ್ನು ನಮ್ಮಲ್ಲಿಗೆ ತಂದು ಬಿಡುವುದಕ್ಕಿಂತ ಹೆಚ್ಚಿನ ಮಹತ್ವ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿದ್ದ ಒಂದೊಂದೇ ಜೀವಪ್ರಬೇಧಗಳನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....