ಛತ್ತೀಸ್‌ಗಢ ಅರಣ್ಯ ಇಲಾಖೆಯು ಜೀವವೈವಿಧ್ಯದಿಂದ ಸಮೃದ್ಧವಾಗಿರುವ ಪ್ರಾಚೀನ ಹಾಸ್ಡಿಯೊ ಅರಂಡ್ ಪ್ರದೇಶದಲ್ಲಿ ಮುಂಬರುವ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಾಗಿ ಮಂಗಳವಾರ ಮರಗಳನ್ನು ಕಡಿಯಲು ಪ್ರಾರಂಭಿಸಿದೆ. ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಪ್ರದೇಶದಲ್ಲಿ ಗಣಿಗಾರಿಕೆ ನಡೆದರೆ ಅರಣ್ಯ ನಾಶವಾಗಿ, ಮಾನವ-ಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಸುರ್ಗುಜಾ ಜಿಲ್ಲೆಯ ಉದಯಪುರ ಡೆವಲಪ್‌ಮೆಂಟ್ ಬ್ಲಾಕ್‌ನಲ್ಲಿರುವ ಪೆಂದ್ರಮಾರ್-ಘಾಟ್ಬರ್ರಾ ಗ್ರಾಮಗಳ ಬಳಿ ಮರ ಕಡಿಯುವ ಪ್ರಕ್ರಿಯೆಗೆ ಅನುಕೂಲವಾಗುವಂತೆ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಇದನ್ನು ವಿರೋಧಿಸಲು ಸ್ಥಳೀಯರನ್ನು ಪ್ರಚೋದಿಸಿದ ಆರೋಪದಲ್ಲಿ ಕನಿಷ್ಠ 10 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಇಕನಾಮಿಕ್ಸ್ ಟೈಮ್ಸ್ ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪರ್ಸಾ ಈಸ್ಟ್ ಕೆಂಟೆ ಬಸನ್ (ಪಿಇಕೆಬಿ) ಕಲ್ಲಿದ್ದಲು ಗಣಿ ಎರಡನೇ ಹಂತದ ಕಾಮಗಾರಿಗಾಗಿ ಅರಣ್ಯ ಇಲಾಖೆಯು ಪೆಂಡ್ರಮಾರ್-ಘಾಟ್‌ಬರ್ರಾ ಅರಣ್ಯದಲ್ಲಿ ಬೆಳಿಗ್ಗೆ ಮರಗಳನ್ನು ಕಡಿಯಲು ಪ್ರಾರಂಭಿಸಿತು ಎಂದು ಸುರ್ಗುಜಾ ಜಿಲ್ಲಾಧಿಕಾರಿ ಕಲೆಕ್ಟರ್ ಕುಂದನ್ ಕುಮಾರ್ ಪಿಟಿಐಗೆ ತಿಳಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಅಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅರಣ್ಯ ಕಾನೂನು ಉಲ್ಲಂಘನೆ: ಜಗ್ಗಿ ವಾಸುದೇವ್, ಅಸ್ಸಾಂ ಸಿಎಂ ವಿರುದ್ಧ ದೂರು, ಬಂಧನಕ್ಕೆ ಆಗ್ರಹ
“ಛತ್ತೀಸ್‌ಗಢದ ಹಾಸ್ಡಿಯೋ ಅರಣ್ಯದಲ್ಲಿ ಬೃಹತ್ ಮರವನ್ನು ಕಡಿಯಲಾಗುತ್ತಿದೆ. ಕಲ್ಲಿದ್ದಲು ಗಣಿಗಾಗಿ 3 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತದೆ” ಎಂದು ಆದಿವಾಸಿಗಳ ಪರ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಸ ಮಾಡುವ ಟ್ರೈಬಲ್ ಆರ್ಮಿ ಟ್ವಿಟರ್ ಹ್ಯಾಂಡಲ್ ಆತಂಕ ವ್ಯಕ್ತಪಡಿಸಿದೆ.
“ಈ ಗಣಿಗಾಗಿ 100 ರಷ್ಟು ಆದಿವಾಸಿಗಳನ್ನು ಸ್ಥಳಾಂತರಿಸಲಾಗುತ್ತದೆ. ಅಪಾಯದಲ್ಲಿರುವ ಅನೇಕ ವನ್ಯಜೀವಿ ಪ್ರಭೇದಗಳಿಗೆ ಈ ಪ್ರಾಚೀನ ಅರಣ್ಯ ನೆಲೆಯಾಗಿದೆ. ದಯವಿಟ್ಟು ನಮ್ಮ ಹಾಸ್ಡಿಯೊ ಅರಣ್ಯವನ್ನು ಉಳಿಸಿ” ಎಂದು ಟ್ರೈಬಲ್ ಆರ್ಮಿ ವಿನಂತಿಸಿದೆ.
Massive tree cut underway at Chattisgarh's Hasdeo forest, Over 3lakh trees are to be felled for a COAL MIne..100s of Adivasis to be displaced & a pristine forest home to many wildlife species under threat..Pls save our hasdeo forest @RahulGandhi @bhupeshbaghel #Save_Hasdeo_Forest pic.twitter.com/CbPdPBaYTv
— Tribal Army (@TribalArmy) September 28, 2022
ಇದನ್ನೂ ಓದಿ: ಗುಬ್ಬಿ: ಫಲ ನೀಡುತ್ತಿದ್ದ ಅಡಕೆ, ತೆಂಗು ಧ್ವಂಸ ಮಾಡಿದ ಅರಣ್ಯ ಇಲಾಖೆ; ಭುಗಿಲೆದ್ದ ಆಕ್ರೋಶ
ಹಾಸ್ಡಿಯೊ ಪ್ರದೇಶದಲ್ಲಿ ಯಾವುದೇ ಹೊಸ ಗಣಿಗಳನ್ನು ತೆರೆಯುವುದಿಲ್ಲ ಎಂಬ ರಾಜ್ಯ ಸರ್ಕಾರ ನೀಡಿದ್ದ ಭರವಸೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಪಿಇಕೆಬಿ ಹಳೆಯ ಗಣಿಯಾಗಿದ್ದು, ಅದಕ್ಕೆ ಈಗಾಗಲೇ ಅಗತ್ಯ ಅನುಮತಿಗಳನ್ನು ನೀಡಲಾಗಿದೆ” ಎಂದು ಹೇಳಿದ್ದಾರೆ.
ಅಧೀಕೃತ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಮರ ಕಡಿಯುವ ಪ್ರಕ್ರಿಯೆಯ ವಿರುದ್ಧ ಸ್ಥಳೀಯರನ್ನು ಪ್ರಚೋದಿಸಿದ ಆರೋಪದ ಮೇಲೆ ಕನಿಷ್ಠ 10 ಗ್ರಾಮಸ್ಥರನ್ನು ಬಂಧಿಸಲಾಗಿದೆ ಎಂದು ಜಿಲ್ಲಾಡಳಿತದ ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಪರಿಸರದ ವಿಚಾರಗಳು ಮತ್ತು ಬುಡಕಟ್ಟು ಜನಾಂಗದವರ ಹಕ್ಕುಗಳಿಗಾಗಿ ಕೆಲಸ ಮಾಡುವ ಛತ್ತೀಸ್‌ಗಢ ಬಚಾವೋ ಆಂದೋಲನದ ಸಂಚಾಲಕ, ಹೋರಾಟಗಾರ ಅಲೋಕ್ ಶುಕ್ಲಾ ಅವರು,“ಪರಿಸರ ಸೂಕ್ಷ್ಮ ಹಸ್ದಿಯೋ ಅರಂದ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ 1,70,000 ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಅಲ್ಲದೆ ಮಾನವ-ಆನೆ ಸಂಘರ್ಷಕ್ಕೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಮುಖಭಂಗ: ಮಹಿಳಾ ಅರಣ್ಯಾಧಿಕಾರಿ ಸಂಧ್ಯಾ ವರ್ಗಾವಣೆ ಆದೇಶಕ್ಕೆ ತಡೆ
ರಾಜ್ಯ ಸರ್ಕಾರವು 841.538 ಹೆಕ್ಟೇರ್ ಅರಣ್ಯ ಭೂಮಿಯನ್ನು ಪಾರ್ಸಾ ಗಣಿಗಾಗಿ ಸುರ್ಗುಜಾ ಮತ್ತು ಸೂರಜ್‌ಪುರ ಜಿಲ್ಲೆಗಳ 1,136.328 ಹೆಕ್ಟೇರ್‌ಗಳನ್ನು, PEKB ಹಂತ-II ಗಣಿ (ಸುರ್ಗುಜಾ) ಗಾಗಿ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮಕ್ಕೆ (RVUNLMITED) ಮಂಜೂರು ಮಾಡಲು ಅರಣ್ಯೇತರ ಬಳಕೆಗೆ ಅನುಮತಿ ನೀಡಿದೆ.
ಈ ವರ್ಷದ ಮಾರ್ಚ್‌ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಭೇಟಿಯಾದ ನಂತರ ಈ ಹಿಂದೆ ರಾಜ್ಯಕ್ಕೆ ಮಂಜೂರು ಮಾಡಲಾದ ಕಲ್ಲಿದ್ದಲು ಬ್ಲಾಕ್‌ಗಳ ಅಭಿವೃದ್ಧಿಯಲ್ಲಿನ ಅಡೆತಡೆಗಳನ್ನು ತೆರವುಗೊಳಿಸಲು ಅನುಮತಿ ನೀಡಲಾಯಿತು.
ಗಣಿಗಳ ಹಂಚಿಕೆಯನ್ನು ವಿರೋಧಿಸಿ ಕಳೆದ ಹಲವು ತಿಂಗಳುಗಳಿಂದ ಸ್ಥಳೀಯರು ಹಸ್ದಿಯೋ ಅರಂದ್ ಬಚಾವೋ ಸಂಘರ್ಷ ಸಮಿತಿಯ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಅರಣ್ಯ ಇಲಾಖೆಯು ಪಿಇಕೆಬಿ ಹಂತ II ಕಲ್ಲಿದ್ದಲು ಗಣಿ ಪ್ರಾರಂಭಕ್ಕೆ ದಾರಿ ಮಾಡಿಕೊಡಲು ಮರ ಕಡಿಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಸ್ಥಳೀಯ ಗ್ರಾಮಸ್ಥರಿಂದ ತೀವ್ರ ವಿರೋಧವನ್ನು ಉಂಟಾಗಿದ್ದು, ಅಧಿಕಾರಿಗಳು ತಮ್ಮ ಕ್ರಮವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಜಾರ್ಖಂಡ್: ಅರಣ್ಯ ಉಳಿಸಲು ’ಜಂಗಲ್ ಬಚಾವೋ’ ತಂಡ ರಚಿಸಿ ಬಿದಿರು ಕೋಲು ಹಿಡಿದ ದಿಟ್ಟ ಮಹಿಳೆಯರು
ಇದರ ನಂತರ, ರಾಜ್ಯ ಸರ್ಕಾರವು ಜೂನ್‌ನಲ್ಲಿ ಈ ಮೂರು ಪ್ರಸ್ತಾವಿತ ಕಲ್ಲಿದ್ದಲು ಗಣಿ ಯೋಜನೆಗಳ ವಿಚಾರಣೆಯನ್ನು ಸ್ಥಗಿತಗೊಳಿಸಿತು.
ಈ ಕಲ್ಲಿದ್ದಲು ಗಣಿಗಳ ಹಂಚಿಕೆಯ ವಿರುದ್ಧ ಪ್ರತಿಭಟನೆಯ ಮುಂಚೂಣಿಯಲ್ಲಿರುವ ಹೋರಾಟಗಾರ ಅಲೋಕ್ ಶುಕ್ಲಾ, “ಹಸ್ಡೆಯೋ ಅರಂದ್ ಪ್ರದೇಶದಲ್ಲಿ ಯಾವುದೇ ಹೊಸ ಗಣಿಗಳನ್ನು ತೆರೆಯುವುದಿಲ್ಲ ಎಂದು ಭರವಸೆ ನೀಡಿದೆ. ಆದರೂ ಕಾಂಗ್ರೆಸ್ ಸರ್ಕಾರವು ಮರಗಳನ್ನು ಕಡಿಯಲು ಪ್ರಾರಂಭಿಸಿ ಪ್ರತಿಭಟನಾಕಾರರನ್ನು ಬಂಧಿಸಿರುವುದು ಅತ್ಯಂತ ದುರದೃಷ್ಟಕರ” ಎಂದು ಹೇಳಿದ್ದಾರೆ. ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರ ಕಾರ್ಪೊರೇಟ್‌ಗಳ ಪರವಾಗಿದೆ ಎಂದು ಅವರು ಆರೋಪಿಸಿದ್ದಾರೆ.


