ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಅವರು, ದಕ್ಷಿಣದ ರಾಜ್ಯದ ಕುರಿತಾದ ‘ಮಿನಿ ಪಾಕಿಸ್ತಾನ’ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. “ಈ ಹೇಳಿಕೆಗಳು ದುರುದ್ದೇಶಪೂರಿತ, ಸಂಪೂರ್ಣವಾಗಿ ಖಂಡನೀಯ, ಇದು ಕೇರಳದ ವಿರುದ್ಧ ದ್ವೇಷದ ಅಭಿಯಾನಗಳನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.
“ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ ಅವರು ಕೇರಳವನ್ನು ‘ಮಿನಿ-ಪಾಕಿಸ್ತಾನ’ ಎಂದು ಲೇಬಲ್ ಮಾಡುವ ಅವಹೇಳನಕಾರಿ ಹೇಳಿಕೆಯು ತೀವ್ರ ದುರುದ್ದೇಶಪೂರಿತ; ಸಂಪೂರ್ಣವಾಗಿ ಖಂಡನೀಯವಾಗಿದೆ. ಇಂತಹ ಹೇಳಿಕೆಗಳು ಜಾತ್ಯತೀತತೆ ಮತ್ತು ಕೋಮು ಸೌಹಾರ್ದತೆಯ ಭದ್ರಕೋಟೆಯಾಗಿರುವ ಕೇರಳದ ವಿರುದ್ಧ ಸಂಘ ಪರಿವಾರ ನಡೆಸುತ್ತಿರುವ ದ್ವೇಷದ ಅಭಿಯಾನಗಳನ್ನು ಪ್ರತಿಬಿಂಬಿಸುತ್ತದೆ. ಕೇರಳದ ಮೇಲಿನ ಈ ಹೀನ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂಘಪರಿವಾರದ ದ್ವೇಷಪೂರಿತ ಪ್ರಚಾರದ ವಿರುದ್ಧ ಎಲ್ಲ ಪ್ರಜಾಸತ್ತಾತ್ಮಕ ಮತ್ತು ಸೆಕ್ಯುಲರ್ ಶಕ್ತಿಗಳು ಒಂದಾಗಬೇಕು” ಎಂದು ವಿಜಯನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
The derogatory remark by Maharashtra Fisheries and Ports Minister @NiteshNRane, labelling Kerala as ‘mini-Pakistan’, is deeply malicious & utterly condemnable. Such rhetoric reflects the hate campaigns orchestrated by the Sangh Parivar against Kerala, a bastion of secularism &…
— Pinarayi Vijayan (@pinarayivijayan) December 31, 2024
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ನಾರಾಯಣ ರಾಣೆ ಅವರ ಪುತ್ರ, 42 ವರ್ಷದ ನಿತೇಶ್ ರಾಣೆ ಅವರು ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಮೀನುಗಾರಿಕೆ ಮತ್ತು ಬಂದರುಗಳ ಅಭಿವೃದ್ಧಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಸಭೆಯೊಂದರಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಗುರಿಯಾಗಿಸಿದ ರಾಣೆ, ಕೇರಳದ ವಯನಾಡಿನಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ, ಕೇರಳ ಮಿನಿ ಪಾಕಿಸ್ತಾನ ಆಗಿದೆ ಎಂದು ಹೇಳಿದ್ದರು.
“ಕೇರಳವು ಮಿನಿ ಪಾಕಿಸ್ತಾನವಾಗಿದೆ, ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಅಲ್ಲಿಂದ ಆಯ್ಕೆಯಾಗಿದ್ದಾರೆ. ಎಲ್ಲ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ಸತ್ಯ, ಅವರು ತಮ್ಮೊಂದಿಗೆ ಭಯೋತ್ಪಾದಕರನ್ನು ಕರೆದೊಯ್ದ ನಂತರ ಸಂಸದರಾಗಿದ್ದಾರೆ” ರಾಣೆ ಹೇಳಿದರು.
ಇದನ್ನೂ ಓದಿ; ತೆಲಂಗಾಣ| ದಲಿತ ಮುಖ್ಯೋಪಾಧ್ಯಾಯರ ಮೇಲೆ ಅಯ್ಯಪ್ಪ ಭಕ್ತರಿಂದ ಹಲ್ಲೆ


