ಬಾಲ್ಯವಿವಾಹಕ್ಕೆ ಗುರಿಯಾಗುವ 11 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು 2023-24ರಲ್ಲಿ ಗುರುತಿಸಿರುವುದಾಗಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ(NCPCR) ಗುರುವಾರ ಹೇಳಿದೆ. ಕೌಟುಂಬಿಕ ಸಮಾಲೋಚನೆ, ಶಾಲೆಗೆ ಪುನಃ ಸೇರ್ಪಡೆಯ ಪ್ರಯತ್ನಗಳು ಮತ್ತು ಕಾನೂನು ಜಾರಿಯೊಂದಿಗೆ ಸಮನ್ವಯದ ಮೂಲಕ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.ಬಾಲ್ಯವಿವಾಹ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಾಲ್ಯ ವಿವಾಹ ನಿಷೇಧ ಕಾಯಿದೆ (PCMA)-2006 ರ ಅಡಿಯಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು (CMPOs), ಜಿಲ್ಲಾ ಅಧಿಕಾರಿಗಳು ಮತ್ತು ಇತರರ ಸಹಯೋಗದ ಮೂಲಕ ತೆಗೆದುಕೊಂಡ ಪ್ರಯತ್ನಗಳ ಬಗ್ಗೆ ಸಮಗ್ರ ವರದಿಯಲ್ಲಿ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ಒತ್ತಿಹೇಳಿದೆ.
ಇದನ್ನೂಓದಿ: FACT CHECK : ಭಾರತದ್ದು ಎಂದು ಪೆರು ರೈಲಿನ ವಿಡಿಯೋ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್
ಜಾಗೃತಿ ಅಭಿಯಾನದ ಮೂಲಕ 1.2 ಕೋಟಿಗೂ ಹೆಚ್ಚು ಜನರನ್ನು ತಲುಪಲಾಗಿದ್ದು, ಉತ್ತರ ಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಬಾಲ್ಯ ವಿವಾಹದ ವಿರುದ್ಧದ ಹೋರಾಟದಲ್ಲಿ ನಾಯಕರಾಗಿ ಹೊರಹೊಮ್ಮಿವೆ ಎಂದು ಆಯೋಗ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಬಾಲ್ಯವಿವಾಹಕ್ಕೆ ಗುರಿಯಾಗುವಂತಹ 5 ಲಕ್ಷಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದು, ಇದರ ವಿರುದ್ಧ ಹೋರಾಟದಲ್ಲಿ ರಾಜ್ಯವು ಭಾಗವಹಿಸಿದೆ ಎಂದು ಆಯೋಗ ಹೇಳಿದೆ. ಅಷ್ಟೆ ಅಲ್ಲದೆ, ಮಧ್ಯಪ್ರದೇಶ ಮತ್ತು ಒಡಿಶಾದಂತಹ ರಾಜ್ಯಗಳು ಕೂಡಾ ಬಾಲ್ಯ ವಿವಾಹದ ವಿರುದ್ಧ ತೀವ್ರವಾದ ಹೋರಾಟ ನಡೆಸಿದೆ ಎಂದು ವರದಿ ಹೇಳಿದೆ.
ಭಾರತದಾದ್ಯಂತ, 11.4 ಲಕ್ಷಕ್ಕೂ ಹೆಚ್ಚು ಮಕ್ಕಳು ಬಾಲ್ಯವಿವಾಹಕ್ಕೆ ಗುರಿಯಾಗುವ ಬಗ್ಗೆ ಗುರುತಿಸಲಾಗಿದೆ. ಯಾವುದೆ ಸೂಚನೆಯಿಲ್ಲದೆ ಸತತ 30 ದಿನಗಳವರೆಗೆ ಗೈರುಹಾಜರಾದ ಮಕ್ಕಳನ್ನು ಗುರುತಿಸಲು ಶಾಲೆಗಳನ್ನು ಮ್ಯಾಪಿಂಗ್ ಮಾಡುವುದು ಮತ್ತು ಶಾಲೆಯಿಂದ ಹೊರಗುಳಿಯುವವರನ್ನು ಮೇಲ್ವಿಚಾರಣೆ ಮಾಡಲು ಶಾಲಾ ಅಧಿಕಾರಿಗಳೊಂದಿಗೆ ಸಮನ್ವಯಗೊಳಿಸುವುದು ತಡೆಗಟ್ಟುವ ಕ್ರಮಗಳಲ್ಲಿ ಸೇರಿದೆ.
ಇದನ್ನೂಓದಿ: ಗ್ರೇಟ್ ನಿಕೋಬಾರ್ ಯೋಜನೆ ನಿಲ್ಲಿಸಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆಗ್ರಹ
ಕರ್ನಾಟಕ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಅಧಿಕಾರಿಗಳು ಧಾರ್ಮಿಕ ಮುಖಂಡರು, ವಿವಾಹ ಸಮಾರಂಭಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರು ಮತ್ತು ಅಂಗನವಾಡಿ ಕಾರ್ಯಕರ್ತೆಯರಂತಹ ಪ್ರಮುಖ ಸ್ಥಳೀಯ ವ್ಯಕ್ತಿಗಳೊಂದಿಗೆ ಜಾಗೃತಿ ಮೂಡಿಸಲು ಮತ್ತು ಅಪ್ರಾಪ್ತ ವಯಸ್ಕರನ್ನು ಒಳಗೊಂಡ ವಿವಾಹಗಳನ್ನು ತಡೆಗಟ್ಟಲು 40,000 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ ಎಂದು ಗುರುವಾರ ಬಿಡುಗಡೆಯಾದ ವರದಿ ತಿಳಿಸಿದೆ.ಬಾಲ್ಯವಿವಾಹ
ಈ ಪ್ರಯತ್ನಗಳ ಹೊರತಾಗಿಯೂ, ಗೋವಾ ಮತ್ತು ಲಡಾಖ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಡೇಟಾ ಸಂಗ್ರಹಣೆ ಮತ್ತು ಜಾರಿಯಲ್ಲಿನ ಅಂತರವನ್ನು ಎನ್‌ಸಿಪಿಸಿಆರ್ ವರದಿಯು ಎತ್ತಿ ತೋರಿಸಿದೆ. ದೇಶದ ಕೆಲವು ಜಿಲ್ಲೆಗಳಲ್ಲಿ ಇರುವ ಸಾಂಸ್ಕೃತಿಕ ಆಚರಣೆಗಳ ಕಾರಣಕ್ಕೆ ಇದು ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತೊಡೆದುಹಾಕಲು ಕಷ್ಟಕರವಾಗಿದೆ ಎಂದು ವರದಿ ಹೇಳಿದೆ.
NCPCR ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಬಾಲ್ಯ ವಿವಾಹದ ವಿರುದ್ಧದ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ, ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಈ ಸಮಸ್ಯೆಗೆ ಆದ್ಯತೆ ನೀಡಬೇಕು ಮತ್ತು ಬಾಲ್ಯ ವಿವಾಹಗಳ ನಿರ್ಮೂಲನೆಗೆ ಜಿಲ್ಲಾ ಮಟ್ಟದ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸುವುದನ್ನು ಮುಂದುವರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ವಿಡಿಯೊ ನೋಡಿ: ಎಲ್ಲರಿಗಾಗಿ ಸ್ತ್ರೀವಾದ: ಒಗ್ಗೂಡಿದ ಚಳವಳಿಯನ್ನು ಮಾಡಲು ಸಾಧ್ಯವೇ?
ವಿಡಿಯೊ ನೋಡಿ: ಎಲ್ಲರಿಗಾಗಿ ಸ್ತ್ರೀವಾದ: ಮಹಿಳಾ ದೃಷ್ಟಿಕೋನದಲ್ಲಿ ಸ್ವತಂತ್ರವಾಗಿರೋದು ಅಂದರೆ ಏನು?
ವಿಡಿಯೊ ನೋಡಿ: ಅವ್ವ, ನನ್ನವ್ವ ಫಲವತ್ತಾದ ಕಪ್ಪು ನೆಲ: ಪಿ.ಲಂಕೇಶರ ಪದ್ಯವನ್ನು ಹಾಡಿನ ರೂಪಕ್ಕೆ ತಂದ ಜನಾರ್ದನ್ ಜನ್ನಿ


