ಭಾರತೀಯ ಉಪಗ್ರಹ ಚಿತ್ರಗಳು ಹಾಗೂ ಭಾರತದ ಸ್ನೇಹಿತ ದೇಶಗಳು ಸಂಗ್ರಹಿಸಿದ ಚಿತ್ರಗಳಲ್ಲಿ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಚೀನಾವು ಭಾರಿ ಸಂಖ್ಯೆಯ ಸೈನ್ಯವನ್ನು ನೇಮಿಸಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ರಕ್ಷಣಾ ಹಾಗೂ ಭದ್ರತಾ ಮೂಲಗಳ ಪ್ರಕಾರ ಚೀನಾ ದೇಶವು ಹೆಚ್ಚುವರಿಯಾಗಿ ಸೈನಿಕರು ಮತ್ತು ಸಲಕರಣೆಗಳನ್ನು ಅದರಲ್ಲೂ ವಿಶೇಷವಾಗಿ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಸೈನಿಕರ ಪ್ರಮಾಣವನ್ನು ಗಣನೀಯ ಹೆಚ್ಚಿಸಿರುವುದು ಭಾರತೀಯ ಸೈನ್ಯವೂ ಜಾಗರೂಕತೆಯಿಂದ ಇರುವಂತೆ ಮಾಡಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ ಚೀನಾ ಸೈನ್ಯವು ದೀರ್ಘ ಮತ್ತು ಕಠಿಣ ಚಳಿಗಾಲಕ್ಕೆ ತಯಾರಾಗುತ್ತಿದೆ ಎನ್ನಲಾಗಿದೆ. ಹೆಲಿಪ್ಯಾಡ್‌ಗಳನ್ನು ರಚಿಸಲಾಗಿದ್ದು, ಹೊಸ ನಿರ್ಮಾಣ ನಡೆಯುತ್ತಿದೆ ಎಂದು ಎಡೆಟ್ರೆಸ್ಪಾ ಎಂಬ ಟ್ವಿಟ್ಟರ್ ಖಾತೆ ಟ್ವೀಟ್ ಮಾಡಿದೆ.
ಜುಲೈ 21 ರಂದು ಟಿಬೆಟ್‌ನ ಶಿಕ್ವಾನ್ಹೆಯಿಂದ ಪಿಎಲ್‌ಎ ನಿರ್ಮಾಣವನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಪೋಸ್ಟ್ ಮಾಡಿ, ಲಡಾಖ್‌ನ ಎಲ್‌ಎಸಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಗಳ ಪೋಷಕ ಪಾತ್ರದ ಭಾಗವೆಂದು ಶಂಕಿಸಲಾಗಿದೆ” ಎಂದು ಎಡೆಟ್ರೆಸ್ಫಾ ಹೇಳಿದೆ.
Images from Shiquanhe, Gar County, #Tibet spot a possible #China PLA deployment (large) suspected to be part of supporting role to the ongoing #IndiaChinaFaceoff
Location :- https://t.co/y871eYZVNq pic.twitter.com/pFYaqDAHol
— d-atis☠️ (@detresfa_) July 21, 2020
ಚೀನಾ ಸೈನ್ಯದ ನಿರ್ಮಾಣ ಕಾರ್ಯವು ನಡೆಯುತ್ತಿರುವುದು ನಿಜ ಎಂದು ಮೂಲಗಳು ದೃಢಪಡಿಸಿದೆ, ಅಲ್ಲಿ ಕನಿಷ್ಠ ಸುಮಾರು 5,000 ಸೈನಿಕರು ಮತ್ತು ಉಪಕರಣಗಳ ಇವೆ ಎಂದು ನಂಬಲಾಗಿದೆ. ಈ ಪ್ರದೇಶದಲ್ಲಿ ಹೆಲಿಪ್ಯಾಡ್‌ಗಳು ಸಹ ಕಂಡು ಬಂದಿದ್ದು, ಹೊಸ ನಿರ್ಮಾಣ ನಡೆಯುತ್ತಿದೆ ಎನ್ನಲಾಗಿದೆ.
ಈ ಹಿಂದೆ ಸಂಘರ್ಷ ನಡೆದ ತಾಣಗಳಲ್ಲಿ ಒಂದು ಮಟ್ಟದ ಶಾಂತಿ ಸ್ಥಾಪಿಸಲಾಗಿದೆಯಾದರೂ, ಚೀನಾ ಸೇನೆ ಅದರ ಹಿಂಭಾಗದ ಪ್ರದೇಶಗಳಲ್ಲಿ ತನ್ನ ಸ್ಥಾನಗಳನ್ನು ಬಲಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ಕೂಡ ಚಳಿಗಾಲಕ್ಕೆ ಭರದಿಂದ ಸಜ್ಜಾಗುತ್ತಿದೆ. ಎಲ್‌ಎಸಿಯ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ನಿಯೋಜಿಸಲಾಗಿರುವ 30,000 ಕ್ಕೂ ಹೆಚ್ಚು ಹೆಚ್ಚುವರಿ ಸೈನಿಕರಿಗೆ ಸಮರ್ಪಕ ಪಡಿತರ ಹಾಗೂ ತಡೆಸಾಧನಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಓದಿ: ದೇಶಭಕ್ತ ಲಡಾಖ್ ಜನರು ಮಾತನಾಡುತ್ತಿದ್ದಾರೆ; ಆ ಮಾತುಗಳನ್ನು ಕೇಳಿ: ರಾಹುಲ್ ಗಾಂಧಿ


