Homeಮುಖಪುಟಕರ್ನಾಟಕ ಚರ್ಚ್ ಸ್ಪೋಟ ಅಪರಾಧಿಗಳ ಮಂಧ್ಯಂತರ ಜಾಮೀನು ತಿರಸ್ಕರಿಸಿದ ಸುಪ್ರೀಂಕೋರ್ಟ್

ಕರ್ನಾಟಕ ಚರ್ಚ್ ಸ್ಪೋಟ ಅಪರಾಧಿಗಳ ಮಂಧ್ಯಂತರ ಜಾಮೀನು ತಿರಸ್ಕರಿಸಿದ ಸುಪ್ರೀಂಕೋರ್ಟ್

ದೀಂದರ್ ಅಂಜುಮಾನ್ ಸಂಘಟನೆಯ ಸದಸ್ಯರಾಗಿದ್ದು, ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯ ವಿವಿಧ ಚರ್ಚುಗಳಲ್ಲಿ ಪಿತೂರಿ ನಡೆಸಿ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.

- Advertisement -
- Advertisement -

2000 ರಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯ ವಿವಿಧ ಚರ್ಚುಗಳಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಬ್ಬರು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಜಯ್ ರಾಸ್ತೋಗಿ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠವು ಬಂಧನದ ಅವಧಿ ಸಾಕಷ್ಟು ದೀರ್ಘವಾಗಿದ್ದರೂ, ಅವರ ವಿರುದ್ಧದ ಅಪರಾಧಗಳ ಸ್ವರೂಪದಿಂದಾಗಿ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೆಲವು ವಿಶೇಷ ಸಂದರ್ಭಗಳು ಎದುರಾದರೆ ಮಾತ್ರ ಜಾಮೀನು ಅರ್ಜಿಯ ಮೇಲ್ಮನವಿಗಳಿಗೆ ಅನುಮತಿ ಇದೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ಅಪರಾಧಿಯಾದ ಶಂಶುಜಾಮಾ ಆಂಧ್ರಪ್ರದೇಶದ ಖಾಯಂ ನಿವಾಸಿಯಾಗಿದ್ದು, ಅವರ ಕುಟುಂಬದವರೆಲ್ಲರೂ ಒಂದೇ ವಿಳಾಸದಲ್ಲಿ ವಾಸಿಸುತ್ತಿದ್ದಾರೆ. ಜಾಮೀನು ನೀಡುವಾಗ ಹೇರಿದ ಯಾವುದೇ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮನವಿ ಮಾಡಿದ್ದರು.

ಮತ್ತೊಂದು ಜಾಮೀನು ಅರ್ಜಿಯಲ್ಲಿ ಅಪರಾಧಿ ಶೇಕ್ ಫರ್ದೀನ್ ವಲ್ಲಿ ಅಲಿಯಾಸ್ ಫರೀದ್ ಜುಲೈ 16, 2000 ರಿಂದ ಬಂಧನದಲ್ಲಿದ್ದಾರೆ ಎಂದು ಅವರ ತಾಯಿ ಅರ್ಜಿ ಸಲ್ಲಿಸಿದ್ದರು. ಅವರ ತಂದೆ ಮರಣ ಶಯ್ಯೆಯಲ್ಲಿದ್ದರಿಂದ ಹಾಗೂ 86% ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರಿಂದ ಮಾನವೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಕೋರಿದ್ದರು.

ಅರ್ಜಿದಾರರನ್ನು ವಕೀಲ ಕಾಮಿನಿ ಜೈಸ್ವಾಲ್ ಮತ್ತು ರಾಜ್ಯ ಸರ್ಕಾರವನ್ನು ವಕೀಲ ವಿ. ಎನ್. ರಘುಪತಿ ಪ್ರತಿನಿಧಿಸಿದ್ದರು.

ಆರೋಪಿಗಳು ದೀಂದರ್ ಅಂಜುಮಾನ್ ಸಂಘಟನೆಯ ಸದಸ್ಯರಾಗಿದ್ದು, ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯ ವಿವಿಧ ಚರ್ಚುಗಳಲ್ಲಿ ಪಿತೂರಿ ನಡೆಸಿ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜೂನ್ 8, 2000 ರಂದು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿಯ ಸೇಂಟ್ ಆನ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಸತತ ಎರಡು ಸ್ಫೋಟಗಳು ನಡೆದಿದ್ದವು. ಎರಡನೇ ಸ್ಫೋಟವು ಜುಲೈ 8, 2000 ರಂದು ಹುಬ್ಬಳ್ಳಿಯ ಸೇಂಟ್ ಲುಥೆರನ್ ಚರ್ಚ್‌ನಲ್ಲಿ ಮುಂಜಾನೆ 3:30 ರಿಂದ 4:30 ರವರೆಗೆ ನಡೆಯಿತು. ಮೂರನೇ ಬಾಂಬ್ ಸ್ಫೋಟವನ್ನು ಜುಲೈ 9, 2000 ರಂದು ರಾತ್ರಿ 10: 15 ಕ್ಕೆ ಬೆಂಗಳೂರಿನ ಜೆಜೆ ನಗರ ಮುಖ್ಯ ರಸ್ತೆಯಲ್ಲಿರುವ ಸೇಂಟ್ ಪೀಟರ್ ಮತ್ತು ಪಾಲ್ ಚರ್ಚ್‌ನಲ್ಲಿ ನಡೆಸಲಾಗಿತ್ತು.


ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿಯಿಂದ ಆತ್ಮಹತ್ಯೆ ಬೆದರಿಕೆ!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...