Homeಮುಖಪುಟದೇಶಭಕ್ತ ಲಡಾಖ್‌ ಜನರು ಮಾತನಾಡುತ್ತಿದ್ದಾರೆ; ಆ ಮಾತುಗಳನ್ನು ಕೇಳಿ: ರಾಹುಲ್ ಗಾಂಧಿ

ದೇಶಭಕ್ತ ಲಡಾಖ್‌ ಜನರು ಮಾತನಾಡುತ್ತಿದ್ದಾರೆ; ಆ ಮಾತುಗಳನ್ನು ಕೇಳಿ: ರಾಹುಲ್ ಗಾಂಧಿ

ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ರಾಹುಲ್‌ ಗಾಂಧಿ ಎಚ್ಚರಿಸಿದ್ದಾರೆ.

- Advertisement -
- Advertisement -

ದೇಶಭಕ್ತ ಲಡಾಖ್‌ ಜನರು ಚೀನಾದ ಒಳನುಸುಳುವಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸುವುದರಿಂದ ಭಾರತಕ್ಕೆ ಬಹಳ ನಷ್ಟವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಲಡಾಖ್‌ನಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಕೆಲವು ಲಡಾಖ್‌ ಜನರು ಆರೋಪಿಸಿರುವ ಮಾಧ್ಯಮ ವರದಿಯನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

“ದೇಶಭಕ್ತ ಲಡಾಖಿಗಳು ಚೀನಾದ ಒಳನುಗ್ಗುವಿಕೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಅವರ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಭಾರತ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ಭಾರತದ ಸಲುವಾಗಿ, ದಯವಿಟ್ಟು ಅವರ ಮಾತುಗಳನ್ನು ಕೇಳಿ” ಎಂದು ಅವರು ಹೇಳಿದರು.

“ತಮ್ಮ ತಾಯಿನಾಡನ್ನು ಪ್ರೀತಿಸುವ ಲಡಾಖ್‌ನ ಅಸಂಖ್ಯಾತ ನಿವಾಸಿಗಳು ಚೀನಾ ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಮಾತೃಭೂಮಿಯನ್ನು ರಕ್ಷಿಸುವ ಸಲುವಾಗಿ ಸರ್ಕಾರವು ಲಡಾಕ್ ಮತ್ತು ಇಡೀ ಭಾರತದ ಜನರ ಭಾವನೆಗಳನ್ನು ಆಲಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ ಮತ್ತು ಕಳೆದ ಎರಡು ತಿಂಗಳಲ್ಲಿ ಇದು ಹೆಚ್ಚಾಗಿದೆ ಎಂದು ಲಡಾಖ್‌ನ ವ್ಯಕ್ತಿಯೊಬ್ಬರ ವಿಡಿಯೋವನ್ನೂ ಅವರು ಟ್ಯಾಗ್ ಮಾಡಿದ್ದಾರೆ.

ಪೂರ್ವ ಲಡಾಕ್‌ನಲ್ಲಿನ ಚೀನಾ-ಭಾರತ ಗಡಿ ವಿವಾದದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಕೇಂದ್ರ ಸರ್ಕಾರದ ಮೇಲೆ ತೀವ್ರವಾಗಿ ದಾಳಿ ನಡೆಸುತ್ತಿದೆ.

ನಿನ್ನೆ ಹಿಂಸಾಚಾರ ನಡೆದ ಪ್ಯಾಂಗೋಗ್ ಸರೋವರಕ್ಕಿಂತ 200 ಕಿ.ಮಿ ದೂರದ ಲೇಹ್‌ಲ್ಲಿ ಚೀನಾವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ವಿಸ್ತರಣೆಯ ಯುಗ ಮುಗಿದಿದೆ” ಎಂದು ಹೇಳಿದ್ದಾರೆ.


ಓದಿ: ವಿಸ್ತರಣಾವಾದಿಗಳ ಕಾಲ ಮುಗಿದಿದೆ, ಇದು ಪ್ರಗತಿಯ ಯುಗ: ನರೇಂದ್ರ ಮೋದಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...