ಚೀನಾ ದೇಶಕ್ಕೆ ಸಂಬಂಧಿಸಿದೆ ಎಂದು ಡ್ಯ್ರಾಗನ್ ಹಣ್ಣಿನ ಹೆಸರನ್ನು ಗುಜರಾತ್ ಸರ್ಕಾರ ಬದಲಾಯಿಸಿದೆ. ಹಣ್ಣಿನ ಹೆಸರನ್ನು ’ಕಮಲಂ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಂಗಳವಾರ ಹೇಳಿದ್ದಾರೆ.
“ಡ್ರ್ಯಾಗನ್ ಹಣ್ಣಿನ ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಣ್ಣಿನ ಹೊರ ಆಕಾರವು ಕಮಲವನ್ನು ಹೋಲುತ್ತದೆ, ಆದ್ದರಿಂದ ಡ್ರ್ಯಾಗನ್ ಹಣ್ಣನ್ನು ಕಮಲಂ ಎಂದು ಮರುನಾಮಕರಣ ಮಾಡಲಾಗುವುದು” ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
State government has decided rename Dragon Fruit. As the outer shape of the fruit resembles a lotus, hence Dragon Fruit shall be renamed as 'Kamalam': Gujarat CM Vijay Rupani (19.1) pic.twitter.com/tkWfCuUTN4
— ANI (@ANI) January 19, 2021
ಇದನ್ನೂ ಓದಿ: ಹಡಗು ಸಚಿವಾಲಯ: ಹೆಸರು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
“ಡ್ರ್ಯಾಗನ್ ಹಣ್ಣಿನ ಹೆಸರು ಚೀನಾಕ್ಕೆ ಸಂಬಂಧಿಸಿದೆ, ಆದ್ದರಿಂದ ಅದರ ಹೆಸರನ್ನು ಬದಲಾಯಿಸಿದ್ದೇವೆ” ಎಂದು ಅವರು ಹೇಳಿದ್ದಾರೆ. ಕಮಲಕ್ಕೆ ಸಂಸ್ಕೃತದಲ್ಲಿ “ಕಮಲಂ” ಎಂದು ಕರೆಯುತ್ತಾರೆ. ಇದು ಗುಜರಾತ್ ಬಿಜೆಪಿ ಕಚೇರಿಯ ಹೆಸರು ಕೂಡಾ ಆಗಿದೆ.
ಕಳೆದ ಕೆಲವು ವರ್ಷಗಳಿಂದ ಡ್ರ್ಯಾಗನ್ ಹಣ್ಣು ಗುಜರಾತ್‌ನಲ್ಲಿ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿ ಸೇರ್ಪಡೆಯಾಗಿದೆ. ಇದನ್ನು ರಾಜ್ಯದ ಭುಜ್, ಗಾಂಧಿಧಾಮ್ ಮತ್ತು ಮಾಂಡ್ವಿಗಳಲ್ಲಿ ಬೆಳೆಯಲಾಗುತ್ತದೆ.
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್” ನಲ್ಲಿ ಈ ಹಣ್ಣನ್ನು ಪ್ರಸ್ತಾಪಿಸಿದ್ದರು. ಭಾರತವು ಸ್ವಾವಲಂಬಿಯಾಗಲು ಸಾಧ್ಯವಾಗುವಂತೆ ಆಮದು ಮಾಡಿದ ಹಣ್ಣುಗಳನ್ನು ಬೆಳೆಸಿದ್ದಕ್ಕಾಗಿ ಅವರು ಕಚ್‌ನ ರೈತರನ್ನು ಶ್ಲಾಘಿಸಿದ್ದರು. ಡ್ರ್ಯಾಗನ್ ಹಣ್ಣನ್ನು ಹೆಚ್ಚಾಗಿ ದಕ್ಷಿಣ ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ತನ್ನ ಮರುನಾಮಕರಣದ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್!


