Homeಮುಖಪುಟಹಡಗು ಸಚಿವಾಲಯ: ಹೆಸರು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಹಡಗು ಸಚಿವಾಲಯ: ಹೆಸರು ಮರುನಾಮಕರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್‌ನ ಸೂರತ್ ಮತ್ತು ಸೌರಾಷ್ಟ್ರ ನಡುವೆ ರೋಪಾಕ್ಸ್ ಹಡಗು ಸೇವೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಮೋದಿ "ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ" ಎಂದು ಮರುನಾಮಕರಣ ಮಾಡಿದರು

- Advertisement -
- Advertisement -

ಹಡಗು ಸಚಿವಾಲಯವನ್ನು “ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ” ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಮರುನಾಮಕರಣ ಮಾಡಿದ್ದಾರೆ.

ಗುಜರಾತ್‌ನ ಸೂರತ್ ಮತ್ತು ಸೌರಾಷ್ಟ್ರ ನಡುವೆ ರೋಪಾಕ್ಸ್ ದೋಣಿ ಸೇವೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದ ಮೋದಿ ಈ ಘೋಷಣೆ ಮಾಡಿದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ’ಕನ್ನಡ ಕಾಯಕ ವರ್ಷ’: ಲಾಂಛನ ಬಿಡುಗಡೆ ಮಾಡಿದ ಟಿ.ಎಸ್. ನಾಗಾಭರಣ

ಈ ದೋಣಿ ಸೇವೆಯು ಸೂರತ್ ಮತ್ತು ಸೌರಾಷ್ಟ್ರ ನಡುವಿನ ಅಂತರವನ್ನು ರಸ್ತೆಯ ಮೂಲಕ 317 ಕಿ.ಮೀ ಅಂತರದ ಪ್ರಯಾಣವನ್ನು ಕೇವಲ 60 ಕಿಲೋಮೀಟರ್‌ಗೆ ಇಳಿಸಿದೆ ಎಂದು ಕೇಂದ್ರ ಹಡಗು ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಮಾಹಿತಿ ನೀಡಿದರು.

ಸೌರಾಷ್ಟ್ರದ ಹೆಚ್ಚಿನ ಸಂಖ್ಯೆಯ ಜನರು ಸೂರತ್‌ನಲ್ಲಿ ನೆಲೆಸಿದ್ದು, ವಜ್ರ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 10 ರಿಂದ 12 ಗಂಟೆಗಳ ಸಮಯ ತೆಗೆದುಕೊಳ್ಳುವ ಈ ಮಾರ್ಗದ ನಡುವೆ ಪ್ರತಿದಿನ ಸುಮಾರು 5,000 ಬಸ್‌ಗಳು ಚಲಿಸುತ್ತಿವೆ ಎಂದು ಮಾಂಡವಿಯಾ ಮಾಹಿತಿ ನೀಡಿದರು.


ಇದನ್ನೂ ಓದಿ: ಶಿರಾ ಉಪಚುನಾವಣೆ: ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...