Homeಮುಖಪುಟಕೃಷಿ ಕಾಯ್ದೆಗಳ ಪರ ಇರುವವರ ಅಭಿಪ್ರಾಯ ಬದಲಾಗಬಹುದು: ಸುಪ್ರೀಂ ಸಮಿತಿ ಪರ ಬ್ಯಾಟಿಂಗ್ ಮಾಡಿದ ಎಸ್.ಎ.ಬೋಬಡೆ!

ಕೃಷಿ ಕಾಯ್ದೆಗಳ ಪರ ಇರುವವರ ಅಭಿಪ್ರಾಯ ಬದಲಾಗಬಹುದು: ಸುಪ್ರೀಂ ಸಮಿತಿ ಪರ ಬ್ಯಾಟಿಂಗ್ ಮಾಡಿದ ಎಸ್.ಎ.ಬೋಬಡೆ!

ಕೃಷಿ ಕ್ಷೇತ್ರಗಳಲ್ಲಿ ಸುಧಾರಣೆಗಳು ಅಗತ್ಯ. ಈಗ ಈ ಕಾನೂನುಗಳನ್ನು ಹಿಂಪಡೆದುಕೊಂಡರೆ, ಮುಂದಿನ 50 ವರ್ಷಗಳಲ್ಲಿ ಇಂತಹ ಕಾನೂನುಗಳನ್ನು ಯಾವುದೆ ರಾಜಕೀಯ ಪಕ್ಷಗಳು ಮರಳಿ ತರಲಾರವು- ಅನಿಲ್ ಘನ್ವತ್ (ಸಮಿತಿ ಸದಸ್ಯ)

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಬಗ್ಗೆ ರೈತರಿಗಿರುವ ಗೊಂದಲಗಳನ್ನು ನಿವಾರಿಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಯು ಮಂಗಳವಾರ ತನ್ನ ಮೊದಲ ಸಭೆಯನ್ನು ನಡೆಸಿದ್ದು, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಸೇರಿದಂತೆ ರೈತರು ಮತ್ತು ಕೃಷಿ ತಜ್ಞರಿಂದ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಉದ್ದೇಶಿಸಲಾಗಿದೆ” ಎಂದು ಸಮಿತಿಯ ಸದಸ್ಯರಲ್ಲೊಬ್ಬರಾದ ಅನಿಲ ಘನ್ವತ್ ಅವರು ತಿಳಿಸಿದ್ದಾರೆ.

“ಸಮಿತಿಯು ವಸ್ತುನಿಷ್ಠತೆಯನ್ನು ಕಾಯ್ದುಕೊಳ್ಳಲಿದೆ ಮತ್ತು ಚರ್ಚೆಗಳ ನಡುವೆ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶ ನೀಡುವುದಿಲ್ಲ. ಜೊತೆಗೆ ಸಮಿತಿಯ ಸದಸ್ಯರು ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಪರವಾಗಿರುವುದಿಲ್ಲ” ಎಂದು ಘನ್ವತ್ ಒತ್ತಿ ಹೇಳಿದ್ದಾರೆ.

“ನಮ್ಮೊಂದಿಗೆ ಮಾತುಕತೆಗೆ ಬರುವಂತೆ ರೈತರ ಮನವೊಲಿಸುವುದೇ ಸಮಿತಿಯ ಪಾಲಿಗೆ ದೊಡ್ಡ ಸವಾಲು ಆಗಿದೆ. ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ. ರೈತರು ಮತ್ತು ಇತರ ಪಾಲುದಾರರೊಂದಿಗೆ ಮೊದಲ ಸುತ್ತಿನ ಮಾತುಕತೆಯನ್ನು ಗುರುವಾರ ನಡೆಸಲು ನಿಗದಿಗೊಳಿಸಲಾಗಿದೆ. ನಮ್ಮೊಂದಿಗೆ ಮಾತನಾಡಿ. ನಾವು ನಿಮ್ಮ ಅಹವಾಲುಗಳನ್ನು ಆಲಿಸಿ, ನಿಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯದ ಮುಂದಿಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ’ಪಂಜಾಬ್‌‌ಗೆ ಬಂದು ಕೃಷಿ ಕಾನೂನನ್ನು ವಿವರಿಸಿ’- BJP ಸಂಸದೆ ಹೇಮಾ ಮಾಲಿನಿಯನ್ನು ಆಹ್ವಾನಿಸಿದ ರೈತರು

“ಆದರೆ, ಕೃಷಿ ಕ್ಷೇತ್ರಗಳಲ್ಲಿ ಸುಧಾರಣೆಗಳು ಅಗತ್ಯ. ಈಗ ಈ ಕಾನೂನುಗಳನ್ನು ಹಿಂಪಡೆದುಕೊಂಡರೆ, ಮುಂದಿನ 50 ವರ್ಷಗಳಲ್ಲಿ ಇಂತಹ ಕಾನೂನುಗಳನ್ನು ಯಾವುದೆ ರಾಜಕೀಯ ಪಕ್ಷಗಳು ಮರಳಿ ತರಲಾರವು” ಎಂದು ಅನಿಲ್ ಘನ್ವತ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಹೇಳಿದ್ದಾರೆ.

ಕೃಷಿ ಆರ್ಥಿಕ ತಜ್ಞರಾದ ಅಶೋಕ್ ಗುಲಾಟಿ ಮತ್ತು ಪ್ರಮೋದ್ ಕುಮಾರ್ ಜೋಶಿ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ. ಬೂಪಿಂದರ್ ಸಿಂಗ್ ಈ ಹಿಂದೆಯೇ ಸಮಿತಿಯಿಂದ ಹೊರ ಬಂದು, ತಾನು ರೈತರ ಪರವಾಗಿರುವುದಾಗಿ ಘೋಷಿಸಿದ್ದರು.

ಸರ್ವೋಚ್ಚ ನ್ಯಾಯಾಲಯವು ನೇಮಿಸಿರುವ ಸಮಿತಿಯ ಸದಸ್ಯರು ಈ ಕೃಷಿ ಕಾನೂನುಗಳ ಪರವಾಗಿದ್ದಾರೆ ಎಂಬ ರೈತರ ದೂರುಗಳ ನಡುವೆಯೇ ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬಡೆ ಪ್ರತಿಕ್ರಿಯಿಸಿ, “ಸಮಿತಿಯ ಸದಸ್ಯರು ಆಯ್ಕೆಗೆ ಮುನ್ನ ಕೃಷಿ ಕಾನೂನುಗಳ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಅವರ ಅನರ್ಹತೆಗೆ ಕಾರಣವಾಗುವುದಿಲ್ಲ. ಜೊತೆಗೆ ಅವರ ಅಭಿಪ್ರಾಯಗಳು ಮುಂದೆ ಬದಲಾಗಲೂಬಹುದು” ಎಂದು ಹೇಳಿದ್ದಾರೆ.

ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 2 ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.


ಇದನ್ನೂ ಓದಿ: 2024 ರವರೆಗೂ ಪ್ರತಿಭಟನೆ ಮುಂದುವರಿಸಲು ಸಿದ್ಧರಿದ್ದೇವೆ: ರೈತ ನಾಯಕ ರಾಕೇಶ್ ಟಿಕಾಯತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read