Homeಮುಖಪುಟಗುರ್ಗಾಂವ್‌ನಲ್ಲಿ ಕ್ರಿಸ್‌ಮಸ್ ಪ್ರಾರ್ಥನೆಗೆ ಅಡ್ಡಿ: ವೇದಿಕೆಗೆ ನುಗ್ಗಿ ದಾಂಧಲೆ

ಗುರ್ಗಾಂವ್‌ನಲ್ಲಿ ಕ್ರಿಸ್‌ಮಸ್ ಪ್ರಾರ್ಥನೆಗೆ ಅಡ್ಡಿ: ವೇದಿಕೆಗೆ ನುಗ್ಗಿ ದಾಂಧಲೆ

ಬಲಪಂಥೀಯ ಕಾರ್ಯಕರ್ತರು ವೇದಿಕೆಗೆ ನುಗ್ಗಿ, ಅಲ್ಲಿದ್ದವರನ್ನು ಕೆಳಗೆ ತಳ್ಳಿ, ಮೈಕ್ ಕಿತ್ತುಕೊಂಡು ಜೈ ಶ್ರೀರಾಮ್ ಮತ್ತು ಭಾರತ್ ಮಾತಾಕೀ ಜೈ ಎನ್ನುವ ಘೋಷಣೆಗಳನ್ನು ಕೂಗಿದ್ದಾರೆ.

- Advertisement -
- Advertisement -

ಇತ್ತೀಚಿಗಷ್ಟೇ ಹರಿಯಾಣದ ಗುರ್ಗಾಂವ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುವುದಕ್ಕೆ ಅಡ್ಡಿಪಡಿಸಿದ್ದ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ನಿನ್ನೆ ಪಟೌಡಿಯ ಚರ್ಚ್ ಒಂದಕ್ಕೆ ನುಗ್ಗಿ ದಾಂಧಲೆ ನಡೆಸಿ, ಕ್ರಿಸ್‌ಮಸ್ ಪ್ರಾರ್ಥನೆಗೆ ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ.

ಈ ಕುರಿತು ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಲಪಂಥೀಯ ಕಾರ್ಯಕರ್ತರು ವೇದಿಕೆಗೆ ನುಗ್ಗಿ, ಅಲ್ಲಿದ್ದವರನ್ನು ಕೆಳಗೆ ತಳ್ಳಿ, ಮೈಕ್ ಕಿತ್ತುಕೊಂಡು ಜೈ ಶ್ರೀರಾಮ್ ಮತ್ತು ಭಾರತ್ ಮಾತಾಕೀ ಜೈ ಎನ್ನುವ ಘೋಷಣೆಗಳನ್ನು ಕೂಗುವುದನ್ನು ನೋಡಬಹುದು.

ವ್ಯಕ್ತಿಯೊಬ್ಬ ಮೈಕ್ ಕಿತ್ತುಕೊಂಡು ನೀವು ಭಾರತೀಯ ಸಂಸ್ಕೃತಿಯನ್ನು ಸರ್ವನಾಶ ಮಾಡುತ್ತಿದ್ದೀರಿ, ಇದನ್ನು ಸಹಿಸುವುದಿಲ್ಲ, ಈ ಮಕ್ಕಳು ನಿಮ್ಮಂತಾಗಲು ಬಿಡುವುದಿಲ್ಲ, ಈ ಕೆಲಸವನ್ನು ನಾವು ಒಪ್ಪುವುದಿಲ್ಲ ಮಾತ್ರವಲ್ಲ ಇನ್ನು ಮುಂದೆ ಈ ರೀತಿ ನಡೆಯಲು ಬಿಡುವುದಿಲ್ಲ ಎಂಬ ಸಂಕಲ್ಪ ತೊಡುತ್ತೇವೆ, ಸತ್ಯ ಸನಾತನ ಧರ್ಮಕ್ಕೆ ಜಯವಾಗಲಿ ಎಂದು ಮಾತನಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಸ್ಥಳೀಯ ಪಾದ್ರಿಯೊಬ್ಬರು ಪಿಟಿಐನೊಂದಿಗೆ ಮಾತನಾಡಿ “ನಾವು ಚರ್ಚ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಕ್ರಿಸ್‌ಮಸ್ ಪ್ರಾರ್ಥನೆ ಮಾಡುತ್ತಿದ್ದೆವು. ಏಕಾಏಕಿ ನುಗ್ಗಿ ದಾಂಧಲೆ ನಡಿಸಿದ್ದಾರೆ. ದಿನದಿಂದ ದಿನಕ್ಕೆ ಈ ಕಿರುಕುಳ ಹೆಚ್ಚುತ್ತಿದೆ. ಇದು ಧರ್ಮ ಪಾಲಿಸುವ ಮತ್ತು ಪ್ರಾರ್ಥಿಸುವ ನಮ್ಮ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ದೂರಿದ್ದಾರೆ. ಪಟೌಡಿ ಠಾಣಾಧಿಕಾರಿ ಅಮಿತ್ ಕುಮಾರ್ ಮಾತನಾಡಿ, ಪೊಲೀಸರು ಇದುವರೆಗೆ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.

ಬಹಳ ಹಿಂದಿನಿಂದಲೂ ಗುರುಗ್ರಾಮದ ಹಲವು ಖಾಲಿ ನಿವೇ‍ಶನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ವಾರದಲ್ಲಿ ಒಂದು ದಿನ ನಮಾಜ್ ಮಾಡುತ್ತಿದ್ದರು. ಆದರೆ ಅಕ್ಟೋಬರ್ ಆರಂಭದಿಂದ ಕೆಲವು ಹಿಂದುತ್ವವಾದಿ ಸಂಘಟನೆಗಳು ಅದಕ್ಕೆ ಅಡ್ಡಿಪಡಿಸಿದ್ದವು. ಮುಸ್ಲಿಮರು ನಮಾಜ್ ಮಾಡುವ ಜಾಗದಲ್ಲಿಯೇ ಈ ಸಂಘಟನೆಗಳು ಗೋವರ್ಧನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಅಲ್ಲಿ ಹಿಂದೂ ವಿರೋಧಿಗಳಿಗೆ ಗುಂಡು ಹೊಡೆಯಿರಿ ಎಂದು ಘೋಷಣೆಗಳನ್ನು ಕೂಗಲಾಗಿತ್ತು. ಕಾರ್ಯಕ್ರಮದಲ್ಲಿ ದೆಹಲಿ ಗಲಭೆಯ ಪ್ರಚೋದನಾಕಾರಿ ಭಾಷಣಕಾರರದ ಕಪಿಲ್ ಮಿಶ್ರಾ ಭಾಗವಹಿಸಿದ್ದರು. ನಂತರ ಅದೇ ಜಾಗದಲ್ಲಿ ಸಗಣಿಗಳನ್ನು ತಂದು ಹಾಕಿ ನಮಾಜ್ ಮಾಡಲು ಅಡ್ಡಿಪಡಿಸಲಾಗಿತ್ತು. ಹಾಗಾಗಿ ಜಿಲ್ಲಾಡಳಿತ ಅಲ್ಲಿ ನಮಾಜ್ ಮಾಡಲು ಅನುಮತಿ ನಿರಾಕರಿಸಲಾಗಿತ್ತು. ಈಗ ಸಿಖ್ ಮತ್ತು ಕೆಲ ಹಿಂದೂ ಜನರು ಮಸ್ಲಿಮರು ನಮ್ಮ ಸ್ಥಳಗಳಿಗೆ ಬಂದು ನಮಾಜ್ ಮಾಡಿ ಎಂದು ಆಹ್ವಾನ ನೀಡುವ ಮೂಲಕ ಸಾಮರಸ್ಯ ಮೆರೆದಿದ್ದಾರೆ. ಸದ್ಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುವುದಕ್ಕೆ ಅಡ್ಡಿಪಡಿಸಲಾಗುತ್ತಿದೆ. ಅದು ಈಗ ಕ್ರಿಶ್ಚಿಯನ್ ಚರ್ಚ್‌ಗಳಿಗೂ ವ್ಯಾಪಿಸಿದೆ.


ಇದನ್ನೂ ಓದಿ: ಗುರುಗ್ರಾಮದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡಲು ಹಿಂದುತ್ವ ಸಂಘಟನೆಗಳ ಅಡ್ಡಿ: ನಮ್ಮಲ್ಲಿಗೆ ಬನ್ನಿ ಎಂದ ಸಿಖ್ ಗುರುದ್ವಾರಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...