Homeಮುಖಪುಟರಾಜಸ್ಥಾನ: ವಾಯುಪಡೆಯ ಮಿಗ್-21 ಪತನ, ಪೈಲಟ್ ಸಾವು

ರಾಜಸ್ಥಾನ: ವಾಯುಪಡೆಯ ಮಿಗ್-21 ಪತನ, ಪೈಲಟ್ ಸಾವು

- Advertisement -
- Advertisement -

ಶುಕ್ರವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯುಪಡೆಯ ಮಿಗ್-21 ವಿಮಾನ ಪತನಗೊಂಡಿದ್ದು, ಪೈಲಟ್ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಸಾವನ್ನಪ್ಪಿದ್ದಾರೆ. ಇದು ಈ ವರ್ಷ ಸಂಭವಿಸಿದ ಐದನೇ ಅಪಘಾತವಾಗಿದೆ.

ಸುದ್ದಿಯನ್ನು ದೃಢೀಕರಿಸಿರುವ ವಾಯುಪಡೆಯ ಅಧಿಕೃತ ಹ್ಯಾಂಡಲ್, “ಇಂದು ಸಂಜೆ ಸಂಭವಿಸಿದ ವಿಮಾನ ಅಪಘಾತದಲ್ಲಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರ ನಿಧನವನ್ನು ತೀವ್ರ ದುಃಖದಿಂದ ತಿಳಿಸುತ್ತಿದ್ದವೆ. ಐಎಎಫ್ ಅವರ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ.” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ‘ಮಿಗ್-17 ವಿಮಾನ ಹೊಡೆದುರುಳಿಸಿದ್ದು ನಾವೇ’: ತಪ್ಪೊಪ್ಪಿಕೊಂಡ ವಾಯುಸೇನೆ ಮುಖ್ಯಸ್ಥ

ಸ್ಯಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಡೆಸರ್ಟ್ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಜಯ್ ಸಿಂಗ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತಾನು ಕೂಡ ಅಪಘಾತ ಸ್ಥಳಕ್ಕೆ ತೆರಳುತ್ತಿರುವುದಾಗಿ ಎಂದು ಎಸ್ಪಿ ತಿಳಿಸಿದ್ದಾರೆ.

ಡೆಸರ್ಟ್‌‌ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಕುಗ್ರಾಮದಲ್ಲಿ ವಾಸಿಸುವ ಪ್ರತ್ಯಕ್ಷದರ್ಶಿಯೊಬ್ಬರು, ವಿಮಾನವು ಸ್ಫೋಟಗೊಂಡಿರುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿದೆ. ವಿಮಾನವು ನೆಲಕ್ಕೆ ಬೀಳುವ ಮೊದಲು ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ವರ್ಷ ಹಲವಾರು MiG-21 ಅಪಘಾತಗಳು ವರದಿಯಾಗಿವೆ. ಈ ವಿಮಾನವನ್ನು ‘ಹಾರಾಡುವ ಶವಪೆಟ್ಟಿಗೆ’ ಎಂದು ಕರೆಯಲಾಗುತ್ತಿದ್ದರು, ಈ ಮಾದರಿಯ ವಿಮಾನಗಳು ಅಪಘಾತಗಳಿಗೆ ಈಡಾಗುತ್ತಿರುವುದು ನಿಯಮಿತವಾಗಿ ಸುದ್ದಿಯಾಗುತ್ತಿದೆ. 1971 ರಿಂದ ಏಪ್ರಿಲ್ 2012 ರವರೆಗೆ, 482 ಮಿಗ್ ವಿಮಾನಗಳು ಅಪಘಾತಕ್ಕೀಡಾಗಿದ್ದು, 171 ಪೈಲಟ್‌ಗಳು, 39 ನಾಗರಿಕರು, ಎಂಟು ಸೇವಾ ಸಿಬ್ಬಂದಿ ಮತ್ತು ಒಬ್ಬ ವಿಮಾನ ಸಿಬ್ಬಂದಿಯನ್ನು ಮೃತಪಟ್ಟಿದ್ದಾರೆ ಎಂದು ಸರ್ಕಾರವು ಮೇ 2012 ರಲ್ಲಿ ಸಂಸತ್ತಿಗೆ ತಿಳಿಸಿತ್ತು.

ಇದನ್ನೂ ಓದಿ:Fact Check: ಬಿಪಿನ್ ರಾವತ್‌ರವರ ಹೆಲಿಕಾಪ್ಟರ್ ಪತನ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...