Homeಮುಖಪುಟವೈವಾಹಿಕ ಅತ್ಯಾಚಾರ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಅತಿದೊಡ್ಡ ರೂಪ: ದೆಹಲಿ ಹೈಕೋರ್ಟ್‌ಗೆ ಅರ್ಜಿದಾರರು

ವೈವಾಹಿಕ ಅತ್ಯಾಚಾರ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಅತಿದೊಡ್ಡ ರೂಪ: ದೆಹಲಿ ಹೈಕೋರ್ಟ್‌ಗೆ ಅರ್ಜಿದಾರರು

- Advertisement -
- Advertisement -

ವೈವಾಹಿಕ ಅತ್ಯಾಚಾರ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಅತಿದೊಡ್ಡ ರೂಪವಾಗಿದೆ ಎಂದು ಅರ್ಜಿದಾರರು ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಹೇಳಿದ್ದಾರೆ. ಆದರೆ, ದೆಹಲಿ ಸರ್ಕಾರವು, ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಇದನ್ನು “ಕ್ರೌರ್ಯದ ಅಪರಾಧ” ಎಂದು ಈಗಾಗಲೇ ಪರಿಗಣಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದೆ. ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್‌ಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

“ವೈವಾಹಿಕ ಅತ್ಯಾಚಾರ ನಮ್ಮ ಮನೆಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದ ದೊಡ್ಡ ರೂಪವಾಗಿದೆ. ಮದುವೆಯ ಪದ್ದತಿಯಲ್ಲಿ ಎಷ್ಟು ಬಾರಿ ಅತ್ಯಾಚಾರ ನಡೆಯುತ್ತದೆ? ಅದು ಯಾಕೆ ವರದಿಯಾಗುವುದಿಲ್ಲ? ಈ ಅಂಕಿಅಂಶವನ್ನು ವರದಿ ಮಾಡಲಾಗಿಲ್ಲ ಅಥವಾ ವಿಶ್ಲೇಷಿಸಲಾಗಿಲ್ಲ” ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಹೇಳಿದ್ದಾರೆ. ಸಂತ್ರಸ್ತರ ಸಹಾಯಕ್ಕೆ ಕುಟುಂಬಗಳು ಅಥವಾ ಪೊಲೀಸ್ ಅಧಿಕಾರಿಗಳು ಬರುವುದಿಲ್ಲ ಎಂದು ಅವರು ವಾದಿಸಿದರು.

ಇದನ್ನೂ ಓದಿ:ಶಬರಿಮಲೆ ಪ್ರವೇಶಿಸಿದ್ದ ಮೊದಲ ಮಹಿಳೆ ಬಿಂದು ಅಮ್ಮಿನಿ ಮೇಲೆ ಮತ್ತೆ ಹಲ್ಲೆ: ಆರೋಪಿ ಬಂಧನ

ಭಾರತೀಯ ಅತ್ಯಾಚಾರ ಕಾನೂನಿನಡಿಯಲ್ಲಿ ಅತ್ಯಾಚಾರದ ಬಗ್ಗೆ ಗಂಡಂದಿರಿಗೆ ನೀಡಿರುವ ವಿನಾಯಿತಿಯನ್ನು ರದ್ದುಪಡಿಸುವಂತೆ ಕೋರಿ ಆರ್‌ಐಟಿ ಫೌಂಡೇಶನ್ ಎಂಬ ಎನ್‌ಜಿಒ, ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ ಸೇರಿದಂತೆ ಒಬ್ಬ ಮಹಿಳೆ ಮತ್ತು ಪುರುಷ ಈ ಸಾರ್ವಜನಿಯ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.

ಅರ್ಜಿದಾರ ಮಹಿಳೆಯನ್ನು ಪ್ರತಿನಿಧಿಸಿದ ಗೊನ್ಸಾಲ್ವೆಸ್, “ಪ್ರಪಂಚದಾದ್ಯಂತದ ನ್ಯಾಯಾಲಯಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಗುರುತಿಸಿವೆ” ಎಂದು ವಾದಿಸಿದ್ದಾರೆ.

ಪ್ರತಿ ಕಾನೂನಿನ ಅಡಿಯಲ್ಲಿ ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರನ್ನು ವಿಭಿನ್ನವಾಗಿ ಇರಿಸಲಾಗಿದೆ ಎಂದು ದೆಹಲಿ ಸರ್ಕಾರದ ವಕೀಲರಾದ ನಂದಿತಾ ರಾವ್ ಹೇಳಿದ್ದಾರೆ.

“ಭಾರತದಲ್ಲಿ ವೈವಾಹಿಕ ಅತ್ಯಾಚಾರವು ಕ್ರೌರ್ಯದ ಅಪರಾಧವಾಗಿದೆ. ವಿವಾಹಿತ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರು ಪ್ರತಿಯೊಂದು ಕಾನೂನಿನ ಅಡಿಯಲ್ಲಿ ವಿಭಿನ್ನರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಹೆಣ್ಣುಮಕ್ಕಳ ಮದುವೆ ವಯಸ್ಸು ಹೆಚ್ಚಿಸುವ ಮಸೂದೆ ಪರಿಶೀಲಿಸುವ 31 ಸದಸ್ಯರ ಸಮಿತಿಯಲ್ಲಿ ಕೇವಲ ಒಬ್ಬರೇ ಮಹಿಳೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...