Homeಮುಖಪುಟಟ್ವೀಟ್‌ಗಳ ನಿರ್ಬಂಧಕ್ಕೆ 2022ರಲ್ಲಿ ಕೇಂದ್ರದಿಂದ 3,417 ಆದೇಶ: ಆರ್‌ಟಿಐ ವರದಿ

ಟ್ವೀಟ್‌ಗಳ ನಿರ್ಬಂಧಕ್ಕೆ 2022ರಲ್ಲಿ ಕೇಂದ್ರದಿಂದ 3,417 ಆದೇಶ: ಆರ್‌ಟಿಐ ವರದಿ

- Advertisement -
- Advertisement -

ಕೇಂದ್ರ ಸರ್ಕಾರವು 2022ರಲ್ಲಿ ಟ್ವಿಟರ್‌ ಲಿಂಕ್‌ಗಳನ್ನು ನಿರ್ಬಂಧಿಸಲು 3,417 ಆದೇಶಗಳನ್ನು ಹೊರಡಿಸಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ ಕೇವಲ ಎಂಟು ಬಾರಿ ಆದೇಶಿಸಲಾಗಿತ್ತು ಎಂದು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಮಾಹಿತಿ ಬಹಿರಂಗಪಡಿಸಿದೆ.

ಮಾಹಿತಿ ಪಡೆದ ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್, “ಈ ಪ್ರವೃತ್ತಿಯು ಅಂತಹ ವೇದಿಕೆಗಳ ದುರುಪಯೋಗದ ಹೆಚ್ಚಳವನ್ನು ಸೂಚಿಸುತ್ತದೆ ಅಥವಾ ಕೇಂದ್ರ ಸರ್ಕಾರದ ಚಿಂತನೆಗೆ ಹೊಂದಿಕೆಯಾಗದ ಅಭಿಪ್ರಾಯಗಳ ಸಂಬಂಧ ಸರ್ಕಾರದ ಕ್ರಮವನ್ನು ಸೂಚಿಸುತ್ತದೆ ಅಥವಾ ಎರಡನ್ನೂ ಸೂಚಿಸುತ್ತದೆ” ಎಂದಿದ್ದಾರೆ.

‘ಐಟಿ ನಿಯಮಗಳು 2021’ರ ಅಡಿಯಲ್ಲಿ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಷಯಗಳನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡುವ ‘ಅಂತರ ಇಲಾಖಾ ಸಮಿತಿಯ ನಡಾವಳಿ’ಗಳನ್ನು ಪ್ರಕಟಿಸಬೇಕೆಂಬ ವಿನಂತಿಯನ್ನು ಐಟಿ ಸಚಿವಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಈ ಹಿಂದೆ ತಿರಸ್ಕರಿಸಿದ್ದರು.

ಪರಿಶೀಲನಾ ಸಮಿತಿಯ ನಡಾವಳಿಗಳು ‘ಗೌಪ್ಯತೆ’ಯನ್ನು ಹೊಂದಿವೆ ಎಂದಿದ್ದ ಸಿಪಿಐಒ, ಆರ್‌ಟಿಐ ಕಾಯಿದೆ ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸಲು ಹಿಂದೇಟು ಹಾಕಿದ್ದರು. ಆದಾಗ್ಯೂ, 40 ದಿನಗಳ ವಿಳಂಬದ ನಂತರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಿಪಿಐಒ ಕೆಲವು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಿರ್ಬಂಧಿಸುವ ವಿನಂತಿ/ದೂರುಗಳನ್ನು ಪರಿಶೀಲಿಸಲು ಸಮಿತಿಯನ್ನು ನಿಯಮ 7ರ ಅಡಿಯಲ್ಲಿ ರಚಿಸಲಾಗಿದೆ ಎಂದಿದ್ದಾರೆ.

ನಿರ್ಬಂಧಿಸುವ ಆದೇಶಗಳಲ್ಲಿ ಹೆಚ್ಚಳ

ನಿರ್ಬಂಧಕ್ಕೆ ಸಂಬಂಧಪಟ್ಟ 1,385 ಆದೇಶಗಳನ್ನು 2017ರಲ್ಲಿ ಟ್ವಿಟರ್, ಇತರ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಸಚಿವಾಲಯ ನೀಡಿದೆ. ಈ ಆದೇಶಗಳು ಕೋವಿಡ್ ಬಿಕ್ಕಟ್ಟು ಆರಂಭವಾದ 2020ರಲ್ಲಿ 9,849ಕ್ಕೆ ಏರಿಕೆಯಾಗಿದೆ ಎಂದು ಆರ್‌ಟಿಐ ಮಾಹಿತಿ ಹೇಳಿದೆ.

ನಾಯಕ್ ಅವರು ಈ ವಿಷಯದ ಕುರಿತು ತಿಳಿಯಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳಿಗೆ ಅನೇಕ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದರು.

“2021ರಲ್ಲಿ ಟ್ವಿಟರ್ ಲಿಂಕ್‌‌ಗಳನ್ನು ನಿರ್ಬಂಧಿಸಲು 2,851 ಪ್ರಕರಣಗಳಲ್ಲಿ ಆದೇಶಗಳನ್ನು ಮತ್ತು 1,122 ಪ್ರಕರಣಗಳಲ್ಲಿ ಜೂನ್ 2022 ರವರೆಗೆ ಆದೇಶಗಳನ್ನು ನೀಡಲಾಗಿದೆ. ರಾಜ್ಯಸಭೆಯಲ್ಲಿ 2022ರ ಜುಲೈನಲ್ಲಿ ಅಂಕಿ ಅಂಶಗಳನ್ನೂ ನೀಡಲಾಗಿತ್ತು” ಎಂದು ನಾಯಕ್ ಹೇಳಿದ್ದಾರೆ.

ಮಾರ್ಚ್ 25, 2022 ರಂದು ರಾಜ್ಯಸಭೆಯಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ, 2021ರಲ್ಲಿ ಒಟ್ಟು 6,096 ಯುಆರ್‌ಎಲ್‌ಗಳನ್ನು (ಟ್ವಿಟರ್ ಮತ್ತು ಇತರ) ನಿರ್ಬಂಧಿಸಲು ನಿರ್ದೇಶಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿರಿ: ಬಿಬಿಸಿ ಸಾಕ್ಷ್ಯಾಚಿತ್ರ: ಭಾಗ ಎರಡರಲ್ಲಿ ಪ್ರಧಾನಿ ಮೋದಿ ಕುರಿತು ಹೇಳಿರುವುದೇನು?

ನಿಯಮ 7ರ ಅಡಿಯಲ್ಲಿ ರಚಿಸಲಾದ ಸಮಿತಿಯು ಜನವರಿ 1, 2021 ಮತ್ತು ಡಿಸೆಂಬರ್ 31, 2022ರ ನಡುವೆ,  ಒಟ್ಟು 6,268 ಟ್ವಿಟರ್ ಲಿಂಕ್‌ಗಳನ್ನು ನಿರ್ಬಂಧಿಸುವ ಆದೇಶಗಳನ್ನು ನೀಡಿದೆ ಎಂದು ಆರ್‌ಟಿಐ ವರದಿ ತಿಳಿಸಿದೆ.

2021ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ, 2,851 ಟ್ವಿಟರ್ ಲಿಂಕ್‌ಗಳನ್ನು ನಿರ್ಬಂಧಿಸಲು ನಿರ್ದೇಶಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ಆದ್ದರಿಂದ 2022 ರಲ್ಲಿ, ನಿರ್ಬಂಧಿಸಲಾದ ಟ್ವಿಟರ್‌ ಲಿಂಕ್‌ಗಳ ಸಂಖ್ಯೆ 3,417 ಆಗಿರುತ್ತದೆ (ಅಂದರೆ, 6,268 ಮೈನಸ್ 2,851). ಇದು 2021ರ ಅಂಕಿಅಂಶಗಳಿಗಿಂತ 19.85% ಹೆಚ್ಚಳವಾಗಿದೆ.

2021ರಲ್ಲಿ ಒಟ್ಟು 6,096 ಲಿಂಕ್‌ಗಳನ್ನು ಮತ್ತು 2022ರಲ್ಲಿ 6,775 ಲಿಂಕ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ವರದಿ ಹೇಳಿದೆ. ನಾಯಕ್ ಅವರ ವಿಶ್ಲೇಷಣೆಯ ಪ್ರಕಾರ 2021ರಲ್ಲಿ, ಟ್ವಿಟರ್ ಹೊರತುಪಡಿಸಿ ಇತರ ವೇದಿಕೆಗಳಲ್ಲಿ 3,245 ಪ್ರಕರಣಗಳಲ್ಲಿ ನಿರ್ಬಂಧಿಸಲಾಗಿದೆ (ಅಂದರೆ, 6,096 ಮೈನಸ್ 2,851). 2022ರಲ್ಲಿ, ಈ ಅಂಕಿ ಅಂಶವು 3,358 ಆಗಿತ್ತು (ಅಂದರೆ, 6,775 ಮೈನಸ್ 3,417). 2021ರಿಂದ ನಿರ್ಬಂಧಿಸುವ ಆದೇಶಗಳ ಸಂಖ್ಯೆಯಲ್ಲಿ 3.48% ಹೆಚ್ಚಳವಾಗಿದೆ.

(ವರದಿ ಕೃಪೆ: ದಿ ವೈರ್‌)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಬಡವರೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಮುಸ್ಲಿಮರ ಬಗ್ಗೆ ಮಾತ್ರ ಏಕೆ ಮಾತನಾಡುತ್ತಾರೆ..’; ಪ್ರಧಾನಿ ಮೋದಿ...

0
'ದೇಶದ ಬಡವರು ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಟೀಕಿಸಿದ್ದಾರೆ. 'ಪ್ರತಿಪಕ್ಷಗಳ ಇಂಡಿಯಾ...