ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುತ್ತಿರುವ ಬಗ್ಗೆ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಸೋಮವಾರ ನಿರಾಶೆ ವ್ಯಕ್ತಪಡಿಸಿದ ನಂತರ, ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಕೆ ವರ್ಮಾ ಅವರು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿಷಯದ ಕುರಿತು ಮರು ಆಲೋಚಿಸುವಂತೆ ಮನವಿ ಮಾಡಿದ್ದಾರೆ.
“ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುವುದರ ಕುರಿತು ಮರುಪರಿಶೀಲಿಸುವಂತೆ ನಾನು ನಿತೀಶ್ ಕುಮಾರ್ ಅವರನ್ನು ಕೋರುತ್ತೇನೆ. ಈ ಮಸೂದೆ ಅಸಂವಿಧಾನಿಕವಾಗಿದ್ದು, ತಾರತಮ್ಯದಿಂದ ಕೂಡಿದೆ ಮತ್ತು ಜೆಡಿಯುನ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೇ ದೇಶದ ಏಕತೆ ಮತ್ತು ಸಾಮರಸ್ಯಕ್ಕೆ ವಿರುದ್ಧವಾಗಿದೆ. ಗಾಂಧೀಜಿಯವರು ಇದನ್ನು ಬಲವಾಗಿ ನಿರಾಕರಿಸುತ್ತಿದ್ದರು ”ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
Disappointed to see JDU supporting #CAB that discriminates right of citizenship on the basis of religion.
It's incongruous with the party's constitution that carries the word secular thrice on the very first page and the leadership that is supposedly guided by Gandhian ideals.
— Prashant Kishor (@PrashantKishor) December 9, 2019
ಜೆಡಿಯು ಲೋಕಸಭೆಯಲ್ಲಿ 16 ಸಂಸದರು ಮತ್ತು ರಾಜ್ಯಸಭೆಯಲ್ಲಿ 6 ಸಂಸದರನ್ನು ಹೊಂದಿದೆ.
ಇವರಿಬ್ಬರು ಸಹ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕುರಿತು ಬಹಿರಂಗ ವಿರೋಧ ವ್ಯಕ್ತಪಡಿಸಿರುವುದು ಪಕ್ಷವನ್ನು ಮುಜುಗರಕ್ಕೀಡುಮಾಡಿದೆ. ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಜಾತ್ಯತೀತತೆ ಮತ್ತು ಗಾಂಧಿವಾದಿ ಆದರ್ಶಗಳ ಹೆಸರಿನಲ್ಲಿ ಪ್ರತಿಜ್ಞೆ ತೆಗೆದುಕೊಂಡು ಈ ಅಸಂಗತವಾದ ಮಸೂದೆಯನ್ನು ಬೆಂಬಲಿಸುವುದು ದುರದೃಷ್ಟಕರ ಎಂದು ಪ್ರಶಾಂತ್ ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದ್ದರು.
“ಜೆಡಿಯು ಸಿಎಬಿಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನಿರಾಶೆಗೊಂಡೆ. ಅದು ಧರ್ಮದ ಆಧಾರದ ಮೇಲೆ ಪೌರತ್ವದ ಹಕ್ಕನ್ನು ತಾರತಮ್ಯಗೊಳಿಸುತ್ತದೆ. ಮೊದಲ ಪುಟದಲ್ಲಿ ಮೂರು ಬಾರಿ ಜಾತ್ಯತೀತ ಪದವನ್ನು ಹೊಂದಿರುವ ಪಕ್ಷದ ಸಂವಿಧಾನ ಮತ್ತು ಗಾಂಧಿವಾದಿ ಆದರ್ಶಗಳಿಂದ ಮಾರ್ಗದರ್ಶಿಸಲ್ಪಟ್ಟ ನಾಯಕತ್ವವನ್ನು ಹೊಂದಿರುವವರಿಗೆ ಇದು ಹೊಂದಿಕೆಯಾಗುವುದಿಲ್ಲ ” ರಾಜಕೀಯ ವಿಶ್ಲೇಷಕ ಮತ್ತು ರಾಜಕಾರಣಿ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ 15 ರಾಜ್ಯಗಳಿಗೂ ಹೆಚ್ಚು ಮತ್ತು ಶೇ.55% ಜನರು ವಾಸಿಸುವ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ. ಅವುಗಳಲ್ಲಿ ಎಷ್ಟು ಜನರೊಡೆನೆ ಎನ್‌ಆರ್‌ಸಿ ಜಾರಿಗೊಳಿಸುವ ಕುರಿತಾಗಿ ಕೇಂದ್ರ ಸರ್ಕಾರ ಸಮಾಲೋಚನೆ ನಡೆಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.
“ಅವರು ತಮ್ಮ ಹಾದಿಯನ್ನು ಒಮ್ಮೆ ಅಲ್ಲ ಮೂರು ಬಾರಿ ಬದಲಾಯಿಸಿದ್ದಾರೆ. ಟ್ರಿಪಲ್ ತಲಾಖ್, 370 ಮತ್ತು ಈಗ ಸಿಎಬಿಯ ವಿಷಯವಾಗಿರಲಿ, ಅವರು ಅದೇ ರೀತಿ ಮಾಡಿದರು. ಅವರು ಜನರ, ಮತದಾರರ ಮನಸ್ಸಿನಲ್ಲಿ ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ. ಜೆಡಿಯು ಅವರು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆಂದು ತೋರಿಸಿಕೊಳ್ಳುತ್ತದೆ. ಆದರೆ ಸಮಯ ಬಂದಾಗ ಅವರು ಪಾರ್ಲಿಮೆಂಟ್‌ನಿಂದ ಹೊರಗುಳಿಯುತ್ತಾರೆ ಅಥವಾ ಅವರನ್ನೇ ಬೆಂಬಲಿಸುತ್ತಾರೆ ”ಎಂದು ಎ ಎನ್ ಸಿನ್ಹಾ ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಸ್ಟಡೀಸ್‌ನ ರಾಜಕೀಯ ವಿಶ್ಲೇಷಕ ಡಿ ಎಂ ದಿವಾಕರ್ ಹೇಳಿದ್ದಾರೆ.


