HomeUncategorizedಪೌರತ್ವ ತಿದ್ದುಪಡಿ ಮಸೂದೆ ಇಂದು ರಾಜ್ಯಸಭೆಗೆ: ಯಾರಿಗಿದೆ ಬಹುಮತ??

ಪೌರತ್ವ ತಿದ್ದುಪಡಿ ಮಸೂದೆ ಇಂದು ರಾಜ್ಯಸಭೆಗೆ: ಯಾರಿಗಿದೆ ಬಹುಮತ??

- Advertisement -
- Advertisement -

ಬಹುಚರ್ಚಿತ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿರುವುದು ಸರಿಯಷ್ಟೇ. ಆದರೆ ಅಸಲಿ ಅಗ್ನಿಪರೀಕ್ಷೆ ಇಂದು ರಾಜ್ಯಸಭೆಯಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ರಾಜ್ಯಸಭೆಯಲ್ಲಿ ಚರ್ಚೆಯ ನಂತರ ಬಹುಮತಕ್ಕೆ ಬೀಳುವ ಸಂಭವವಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಮಸೂದೆಯನ್ನು ಮೇಲ್ಮನೆಯಲ್ಲಿ ಸಹ ಸರಾಗವಾಗಿ ಪಾಸುವ ಮಾಡುವ ಬಗ್ಗೆ ಪಕ್ಷಕ್ಕೆ ವಿಶ್ವಾಸವಿದೆ ಎಂದು ಆಡಳಿತಾರೂಡ BJP ಬಿಜೆಪಿ ಮೂಲಗಳು ತಿಳಿಸಿವೆ.

ಎನ್‌ಡಿಎಯು ಲೋಕಸಭೆಯಲ್ಲಿ ಅಗಾಧ ಬಹುಮತವನ್ನು ಹೊಂದಿತ್ತು. ಹಾಗಾಗಿಯೇ ಅಲ್ಲಿ ಮಸೂದೆಯ ಪರವಾಗಿ 311 ಮತಗಳನ್ನು ಪಡೆಯಲು ಸಾಧ್ಯವಾದರೆ ಅದರ ವಿರುದ್ಧ 80 ಮತಗಳಷ್ಟೇ ಬಿದ್ದಿದ್ದವು.

ಪ್ರಸ್ತುತ ರಾಜ್ಯಸಭೆಯಲ್ಲಿ 240 ಸದಸ್ಯರ ಬಲವಿದೆ. ಬಹುಮತ 121 ಆಗಿದೆ. ಎಐಎಡಿಎಂಕೆ, ಜನತಾದಳ-ಯುನೈಟೆಡ್ ಮತ್ತು ಅಕಾಲಿ ದಳದಂತಹ ಪಕ್ಷಗಳನ್ನು ಒಳಗೊಂಡ ಎನ್‌ಡಿಎ 116 ಸದಸ್ಯರನ್ನು ಹೊಂದಿದೆ ಮತ್ತು ಇತರ 14 ಜನರ ಬೆಂಬಲವನ್ನು ಅದು ನಿರೀಕ್ಷಿಸುತ್ತಿದೆ. ಆಗ ಅದರ ಸಂಖ್ಯೆ 130 ಆಗಲಿದ್ದು ಮಸೂದೆ ಮಂಡನೆ ಸಹಾಯಕವಾಗಲಿದೆ.

ಈ 14 ಜನ ಹೊರಗಿನ ಸದಸ್ಯರಲ್ಲಿ ಲೋಕಸಭೆಯಲ್ಲಿ ಮಸೂದೆಯ ಪರವಾಗಿ ಮತ ಚಲಾಯಿಸಿದ ಬಿಜೆಪಿಯ ಮಾಜಿ ಮಿತ್ರ ಶಿವಸೇನೆಯೂ ಮೂವರು ಸದಸ್ಯರನ್ನು ಒಳಗೊಂಡಿದೆ. ಆದರೆ ರಾಜ್ಯಸಭೆಯಲ್ಲಿ ಅದರ ಬೆಂಬಲ ಖಚಿತವಾಗಿಲ್ಲ ಎಂದು ಹೇಳಿದ್ದಾರೆ. ಶಿವಸೇನೆ ಬೆಂಬಲ ನೀಡದಿದ್ದರೂ ಸಹ ಬಿಜೆಪಿಗೆ 127 ಸದಸ್ಯರ ಬೆಂಬಲ ದೊರಕಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿಯ ಏಳು ಸದಸ್ಯರು, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್‌ಸಿಪಿಯಿಂದ ಇಬ್ಬರು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿಯಿಂದ ಇಬ್ಬರು ಮತ್ತು ಶಿವಸೇನೆಯ ಮೂವರು ಸದಸ್ಯರು ಬಿಜೆಪಿಗೆ ಹೊರಗಿನಿಂದ ಬೆಂಬಲ ಸೂಚಿಸಬಹುದಾದ 14 ರಾಜ್ಯಸಭಾ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) 64 ಸದಸ್ಯರನ್ನು ಹೊಂದಿದೆ. ಮತ್ತು ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ದಂತಹ ಇತರ 46 ರಾಜ್ಯಸಭಾ ಸದಸ್ಯರು ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಅವರ ಒಟ್ಟು ಸಂಖ್ಯೆ 110 ಆಗಲಿದೆ.

ಈ ನಡುವೆ ನಿತೀಶ್‌ ಕುಮಾರ್‌ರವರ ಜೆಡಿಯು ಮಸೂದೆಯನ್ನು ಬೆಂಬಲಿಸಬಾರದು ಎಂದು ಅದರ ಉಪಾಧ್ಯಕ್ಷರಾದ ಪ್ರಶಾಂತ್‌ ಕಿಶೋರ್‌ ಒತ್ತಾಯಿಸಿದ್ದರೆ. ಹಾಗಾಗಿ ಏನಾದರೂ ಸಂಭವಿಸಬಹುದೆಂಬ ನಿರೀಕ್ಷೆಯಲ್ಲಿ ವಿರೋಧ ಪಕ್ಷಗಳಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಅಸ್ಟ್ರಾಜೆನೆಕಾ

0
ಜಾಗತಿಕವಾಗಿ ತನ್ನ ಕೋವಿಡ್-19 ಲಸಿಕೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ 'ಕೋವಿಶೀಲ್ಡ್' ಲಸಿಕೆ ತಯಾರಕ ಕಂಪನಿ ಅಸ್ಟ್ರಾಜೆನೆಕಾ ಹೇಳಿದೆ. ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಅಸ್ಟ್ರಾಜೆನೆಕಾ ಒಪ್ಪಿಕೊಂಡ ಬೆನ್ನಲ್ಲೇ ಲಸಿಕೆ ಹಿಂಪಡೆಯಲು ಮುಂದಾಗಿರುವುದು...