ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ 1955 ರ ಪೌರತ್ವ ಕಾಯ್ದೆಯಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳನ್ನು ನೀಡುವಂತೆ ಗುಜರಾತ್‌ನ ಮೆಹ್ಸಾನಾ ಮತ್ತು ಆನಂದ್ ಜಿಲ್ಲಾಧಿಕಾರಿಗಳಿಗೆ ಒಕ್ಕೂಟ ಸರ್ಕಾರದ ಗೃಹ ಸಚಿವಾಲಯದ ಅಧಿಸೂಚನೆ ಹೊರಡಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಬಂಗಾಳದ ಮತುವಾ ಸಮುದಾಯದ ಸದಸ್ಯರು ತಮಗೆ ಕೂಡಾ ಇದೇ ರೀತಿಯ ಪ್ರಯೋಜನವನ್ನು ಒದಗಿಸದಿದ್ದರೆ “ಬಿಜೆಪಿಯನ್ನು ನಂಬುವುದನ್ನು ನಿಲ್ಲಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
ಪಶ್ಚಿಮ ಬಂಗಾಳದ ಮತುವಾ ಸಮುದಾಯವು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ-2019(ಸಿಎಎ) ಅಡಿಯಲ್ಲಿ ತಮಗೆ ಪೌರತ್ವ ನೀಡುವ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಬಿಜೆಪಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಪೌರತ್ವದ ಬೇಡಿಕೆಯನ್ನು ಈಡೇರಿಸದಿದ್ದರೆ ಬೀದಿಗಿಳಿಯುವುದಾಗಿ ಸಮುದಾಯದ ಮುಖಂಡರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ನಮಗೂ ಶೀಘ್ರದಲ್ಲೇ ಪೌರತ್ವವನ್ನು ನೀಡಲಾಗುವುದು ಎಂದು ನಾವು ಭಾವಿಸುತ್ತೇವೆ, ಆದರೆ ಅದು ಸಂಭವಿಸದಿದ್ದರೆ, ಮತುವಾಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ” ಎಂದು ಅಖಿಲ ಭಾರತ ಮತುವಾ ಮಹಾಸಂಘದ ಹಿರಿಯ ಮುಖಂಡ ಮುಕುತ್ ಮೋನಿ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಸಿಎಎ ಹೋರಾಟಗಾರರಿಂದ ವಸೂಲಿ ಮಾಡಿದ್ದ ನಷ್ಟ ಪರಿಹಾರ ವಾಪಸ್ ನೀಡಿ: ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ
ರಾಜ್ಯದ ಪರಿಶಿಷ್ಟ ಜಾತಿಯ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಹೊಂದಿರುವ ಮತುವಾ ಸಮುದಾಯವು, 1950 ರ ದಶಕದಿಂದ ಧಾರ್ಮಿಕ ಕಿರುಕುಳ ಎಂದು ಆರೋಪಿಸಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದರು. ಮಾರ್ಚ್ 1971 ರವರೆಗೆ ವಲಸೆ ಬಂದವರೆಲ್ಲರೂ 1955 ರ ಪೌರತ್ವ ಕಾಯ್ದೆಯ ಪ್ರಕಾರ ಭಾರತದ ಕಾನೂನುಬದ್ಧ ನಾಗರಿಕರಾಗುತ್ತಾರೆ. ಈ ಕಾಯಿದೆಯ ನಿಬಂಧನೆಗಳ ಪ್ರಕಾರ, 1971 ರ ನಂತರ ಬಂದವರು ಏಳು ವರ್ಷಗಳ ನಂತರ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕು.
ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ತೊರೆದು ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ, ಸಿಖ್ಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ಕಾಯ್ದೆ-1955 ರ ಅಡಿಯಲ್ಲಿ ಭಾರತೀಯ ಪೌರತ್ವ ನೀಡಲು ಒಕ್ಕೂಟ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ.
ಆದರೆ ಬಿಜೆಪಿ 2019 ರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಡಿಯಲ್ಲಿ ಮತುವಾಗಳಿಗೆ ಪೌರತ್ವದ ಭರವಸೆ ನೀಡಿತ್ತು. “1955 ರ ಕಾಯಿದೆಯಡಿಯಲ್ಲಿ ಗುಜರಾತ್‌ನಲ್ಲಿ ಪೌರತ್ವವನ್ನು ನೀಡಲಾಗುತ್ತಿದೆ ಎಂದು ನಮಗೆ ತಿಳಿದಿದೆ. CAA-2019 ಅನ್ನು ಸಾಧ್ಯವಾದಷ್ಟು ಬೇಗ ಜಾರಿಗೊಳಿಸಬೇಕೆಂದು ನಾವು ಬಯಸುತ್ತೇವೆ” ಎಂದು ಸಮುದಾಯದ ನಾಯಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟಗಾರರಿಗೆ ದಂಡ: ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ
ನೆರೆಯ ಸಾರ್ಕ್ ದೇಶಗಳಿಂದ ಧಾರ್ಮಿಕ ಕಿರುಕುಳದಿಂದ ಓಡಿಹೋದ ಎಲ್ಲಾ ಹಿಂದೂ, ಜೈನ, ಸಿಖ್ಖ್ ಮತ್ತು ಕ್ರಿಶ್ಚಿಯನ್ನರಿಗೆ ವಿವಾದಾತ್ಮಕ ಸಿಎಎ-2019 ಪೌರತ್ವವನ್ನು ನೀಡುತ್ತದೆ. ಆದರೆ ಅದರ ವಿರುದ್ಧ ನಡೆದ ವ್ಯಾಪಕವಾದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ವಿಶೇಷವಾಗಿ ಈಶಾನ್ಯದಲ್ಲಿ ಈ ಕಾನೂನು ಇನ್ನೂ ಜಾರಿಗೆ ಬಂದಿಲ್ಲ.
ಸುಮಾರು ಮೂರು ವರ್ಷಗಳಿಂದ ಜಾರಿಯಾಗಬೇಕಿದ್ದ ಸಿಎಎ ಕಾನೂನಿನ ಭವಿಷ್ಯದ ಬಗ್ಗೆ ಸಮುದಾಯದ ಸದಸ್ಯರು ಆತಂಕಗೊಂಡಿದ್ದಾರೆ ಎಂದು ಮತುವಾ ಮುಖಂಡರು ಆತಂಕಗೊಂಡಿದ್ದಾರೆ. ಮತುವಾ ಸಮುದಾಯಗಳು ಪ್ರಾಬಲ್ಯವಿರುವ ರಾಣಾಘಾಟ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಮುಕುಟ್‌ಮಣಿ ಅಧಿಕಾರಿ, ಕೇಂದ್ರದ ಬಿಜೆಪಿ ಸರ್ಕಾರವು ತನ್ನ ಭರವಸೆಯನ್ನು ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
“CAA 2019 ರ ಅಡಿಯಲ್ಲಿ ಪೌರತ್ವವನ್ನು ನೀಡಬೇಕೆಂದು ಮತುವಾಗಳು ಬಯಸುತ್ತಾರೆ. CAA 2019, ಒಮ್ಮೆ ಜಾರಿಗೆ ಬಂದರೆ ಮತುವಾ ಸಮುದಾಯಕ್ಕೆ ಸರಿಯಾದ ಮನ್ನಣೆಯನ್ನು ನೀಡುತ್ತದೆ” ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಹಳೆಯ ಪ್ರಕರಣ ಕೆದಕಿದ ಯುಪಿ ಪೊಲೀಸರು: ಸಿಎಎ ವಿರೋಧಿ ನಾಲ್ವರು ಪ್ರತಿಭಟನಾಕಾರರ ಬಂಧನ; ಜಾಮೀನು
“2019 ರ ಲೋಕಸಭಾ ಚುನಾವಣೆಯಲ್ಲಿ ನೀಡಲಾಗಿರುವ ಭರವಸೆಯಂತೆ, 2024 ರ ಮೊದಲು CAA ಅನ್ನು ಜಾರಿಗೊಳಿಸದಿದ್ದರೆ ಸಮುದಾಯದ ಸದಸ್ಯರು ಇನ್ನು ಮುಂದೆ ಬಿಜೆಪಿಯ ಮೇಲೆ ನಂಬಿಕೆ ಇಡುವುದಿಲ್ಲ. ಬಿಜೆಪಿ ನಾಯಕತ್ವವು ಅದನ್ನು ಉಳಿಸಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಮತುವಾ ಮಹಾಸಂಘದ ಮತ್ತೊಬ್ಬ ಹಿರಿಯ ನಾಯಕ ಅಸೀಮ್ ಸರ್ಕಾರ್ ಹೇಳಿದ್ದಾರೆ.
“2024 ರ ಲೋಕಸಭಾ ಚುನಾವಣೆಯ ಮೊದಲು ಇದನ್ನು ಜಾರಿಗೆ ತರದಿದ್ದರೆ, ಮತುವಾಗಳು ಬಿಜೆಪಿಯನ್ನು ನಂಬುವುದನ್ನು ನಿಲ್ಲಿಸುತ್ತಾರೆ. ನೀವು 1955 ರ ಕಾಯಿದೆಯ ಅಡಿಯಲ್ಲಿ ಪೌರತ್ವವನ್ನು ನೀಡುತ್ತಿದ್ದರೆ 2019 ರಲ್ಲಿ ಹೊಸ ಕಾನೂನನ್ನು ಅಂಗೀಕರಿಸುವ ಅಗತ್ಯವೇನು? ಇದಕ್ಕೆ ಸ್ಪಷ್ಟೀಕರಣ ಇರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಹರಿಂಗಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಆಸೀಮ್ ಸರ್ಕಾರ್ ಪಿಟಿಐಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸುಮಾರು 30 ಲಕ್ಷ ಮತುವಾಗಳು ವಾಸಿಸುತ್ತಿದ್ದು, ಸಮುದಾಯವು ಕನಿಷ್ಠ ಐದು ಲೋಕಸಭಾ ಸ್ಥಾನಗಳಲ್ಲಿ ಮತ್ತು ನಾಡಿಯಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ಸುಮಾರು 40 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದೆ ಎಂದು ಸರ್ಕಾರ ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಸಿಎಎ ಜಾರಿಯಾಗುವುದಿಲ್ಲ: ಸಿಎಂ ಪಿಣರಾಯಿ ವಿಜಯನ್ ಪುನರುಚ್ಚಾರ
ಕಳೆದ ಲೋಕಸಭೆ ಮತ್ತು ಅಸೆಂಬ್ಲಿ ಚುನಾವಣೆಯಲ್ಲಿ ಸಿಎಎ ಜಾರಿಗೊಳಿಸುವ ಭರವಸೆಯು ಬಿಜೆಪಿಗೆ ಪ್ರಮುಖ ಚುನಾವಣಾ ವಿಚಾರವಾಗಿತ್ತು. ಬಿಜೆಪಿಯ ಈ ಘೋಷಣೆಯಿಂದಾಗಿ 2019 ರಲ್ಲಿ ಎಲ್ಲಾ ಐದು ಮತುವಾ ಪ್ರಾಬಲ್ಯವಿರುವ ಲೋಕಸಭಾ ಸ್ಥಾನಗಳು ಮತ್ತು 2021 ರಲ್ಲಿ ಕನಿಷ್ಠ 29 ವಿಧಾನಸಭಾ ಸ್ಥಾನಗಳನ್ನು ಗಳಿಸಲು ಪಕ್ಷಕ್ಕೆ ಸಹಾಯ ಮಾಡಿತ್ತು.


