ಮಂಗಳವಾರ ಮಣಿಪುರದ ಚುರಾಚಂದ್‌ಪುರದ ಹೊರವಲಯದಲ್ಲಿ ಹ್ಮಾರ್ ಮತ್ತು ಝೋಮಿ ಬುಡಕಟ್ಟು ಜನಾಂಗದವರ ನಡುವೆ ಹೊಸ ಘರ್ಷಣೆಗಳು ಭುಗಿಲೆದ್ದವು. ಈ ವೇಳೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಲಾಲ್ರೋಪುಯಿ ಪಖುಮಾತೆ (53) ಎಂದು ಗುರುತಿಸಲಾಗಿದೆ. ಹ್ಮಾರ್ ಗುಂಪುಗಳು ತಮ್ಮ ಸಮುದಾಯದ ಧ್ವಜವನ್ನು ಹಾರಿಸುವುದನ್ನು ಜೋಮಿ ಬಣ ವಿರೋಧಿಸಿದಾಗ ಹಿಂಸಾಚಾರ ಭುಗಿಲೆದ್ದಿತು ಎಂದು ವರದಿ ಹೇಳಿವೆ. ಮಣಿಪುರದಲ್ಲಿ ಮತ್ತೆ ಘರ್ಷಣೆ
ವಾಗ್ವಾದ ಪ್ರಾರಂಭವಾಗುತ್ತಿದ್ದಂತೆ ಲಾಠಿಗಳಿಂದ ಶಸ್ತ್ರಸಜ್ಜಿತರಾದ ಗುಂಪು ಕಲ್ಲು ತೂರಾಟದಲ್ಲಿ ತೊಡಗಿದ್ದು, ಇದರಿಂದಾಗಿ ಭದ್ರತಾ ಸಿಬ್ಬಂದಿಗಳು ಜನಸಮೂಹವನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಮತ್ತು ಗಾಳಿಯಲ್ಲಿ ಹಲವಾರು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದಲ್ಲಿ ಮತ್ತೆ ಘರ್ಷಣೆ
ಭಾನುವಾರ ಝೆನ್‌ಹಾಂಗ್‌ನಲ್ಲಿ ಹ್ಮಾರ್ ಇನ್‌ಪುಯಿ ಪ್ರಧಾನ ಕಾರ್ಯದರ್ಶಿ ರಿಚರ್ಡ್ ಹ್ಮರ್ ಮೇಲೆ ದಾಳಿ ನಡೆಸಿದ ನಂತರ ಚುರಾಚಂದ್‌ಪುರದಲ್ಲಿ ಕರ್ಫ್ಯೂ ವಿಧಿಸಲಾಯಿತು, ಇದು ಎರಡು ಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಯಿತು ಎಂದು ವರದಿಯಾಗಿದೆ. ಮಂಗಳವಾರ, ಹ್ಮಾರ್ ಇನ್‌ಪುಯಿ ಮತ್ತು ಝೋಮಿ ಕೌನ್ಸಿಲ್ ಬಂದ್ ತೆಗೆದುಹಾಕಲು ಶಾಂತಿ ಒಪ್ಪಂದಕ್ಕೆ ಬಂದ ಗಂಟೆಗಳ ನಂತರ ಪರಿಸ್ಥಿತಿ ಉಲ್ಬಣಗೊಂಡಿದೆ.
ಮತ್ತೆ ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ, ಜೋಮಿ ವಿದ್ಯಾರ್ಥಿ ಒಕ್ಕೂಟವು ಬುಧವಾರದಿಂದ “ಅನಿರ್ದಿಷ್ಟಾವಧಿ ತುರ್ತು ಬಂದ್” ಘೋಷಿಸಿದ್ದು, ಈ ಪ್ರದೇಶದಲ್ಲಿನ ಅಸ್ಥಿರ ಪರಿಸ್ಥಿತಿಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಎಲ್ಲಾ ಸಾಮಾನ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ. ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಟ್ಟಿರುತ್ತವೆ. ಎಲ್ಲಾ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಹ ಮುಚ್ಚಲ್ಪಟ್ಟಿರುತ್ತವೆ. ಎಲ್ಲಾ ಜನರು ತಮ್ಮ ಮನೆಗಳಲ್ಲಿಯೇ ಇರಬೇಕೆಂದು ನಾವು ಸಲಹೆ ನೀಡುತ್ತೇವೆ. ಪರಿಸ್ಥಿತಿ ಸುಧಾರಿಸುವವರೆಗೆ ಈ ತುರ್ತು ಬಂದ್ ಜಾರಿಯಲ್ಲಿರುತ್ತದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಈ ಮಧ್ಯೆ, ಜಿಲ್ಲಾಡಳಿತವು ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದೆ. “ಎಲ್ಲಾ ವ್ಯಕ್ತಿಗಳು, ಸಮುದಾಯ ಮುಖಂಡರು ಮತ್ತು ಗುಂಪುಗಳು ಮತ್ತಷ್ಟು ಹಿಂಸಾಚಾರದಿಂದ ದೂರವಿರಬೇಕು ಮತ್ತು ಶಾಂತಿ ಮತ್ತು ಸಾಮರಸ್ಯಕ್ಕಾಗಿ ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಧರುಣ್ ಕುಮಾರ್ ಎಸ್ ಹೇಳಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಪ್ರಯತ್ನವು ಕಠಿಣ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಅನುಮತಿ ನೀಡುವುದಿಲ್ಲ ಮತ್ತು ಅಂತಹ ಯಾವುದೇ ಕೃತ್ಯಗಳನ್ನು ನಡೆಸಿದರೆ ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು ಸಮುದಾಯದ ನಾಯಕರು ಅಧಿಕಾರಿಗಳೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳುವಂತೆ ಕೇಳಿಕೊಂಡಿದ್ದು, ಜಿಲ್ಲಾಡಳಿತವು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಕಲ್ಲು ತೂರಾಟದಲ್ಲಿ ತೊಡಗಿದ್ದ ಗುಂಪುಗಳನ್ನು ಚದುರಿಸಲು ಭದ್ರತಾ ಪಡೆಗಳು ಧ್ವಜ ಮೆರವಣಿಗೆಗಳನ್ನು ನಡೆಸಿ, ಅಶ್ರುವಾಯು ಮತ್ತು ಎಚ್ಚರಿಕೆ ಗುಂಡು ಹಾರಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ. ಗುಂಪಿನಲ್ಲಿದ್ದ ಕೆಲವು ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಆದರೆ ಅದಕ್ಕೆ ಯಾರು ಹೊಣೆಗಾರರು ಎಂಬುದು ಸ್ಪಷ್ಟವಾಗಿಲ್ಲ. ಗಲಭೆಯಲ್ಲಿ ಹಲವಾರು ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಇಸ್ರೇಲ್ ಸರ್ಕಾರಕ್ಕೆ ಮಾನವೀಯತೆ ಏನೇನೂ ಅಲ್ಲ..’; ಗಾಜಾ ಮೇಲಿನ ದಾಳಿ ಖಂಡಿಸಿದ ಪ್ರಿಯಾಂಕಾ ಗಾಂಧಿ
‘ಇಸ್ರೇಲ್ ಸರ್ಕಾರಕ್ಕೆ ಮಾನವೀಯತೆ ಏನೇನೂ ಅಲ್ಲ..’; ಗಾಜಾ ಮೇಲಿನ ದಾಳಿ ಖಂಡಿಸಿದ ಪ್ರಿಯಾಂಕಾ ಗಾಂಧಿ

