ತಮ್ಮ ಪಕ್ಷದ ‘ಗಡಿಯಾರ ಚಿಹ್ನೆ’ಯನ್ನು ‘ವಿಚಾರಣಾಧೀನ’ ಎಂಬುವುದನ್ನು ಸೂಚಿಸಿ ಪತ್ರಿಕೆಗಳಲ್ಲಿ ಹೊಸದಾಗಿ ಜಾಹಿರಾತುಗಳನ್ನು ಪ್ರಕಟಿಸುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು 36 ಗಂಟೆಗಳ ಒಳಗೆ ಪತ್ರಿಕೆಗಳಲ್ಲಿ ಹೊಸದಾಗಿ ಸೂಚನೆಗಳನ್ನು ಪ್ರಕಟಿಸುವಂತೆ ಅಜಿತ್ ಪವಾರ್ ಅವರ ಬಣಕ್ಕೆ ನಿರ್ದೇಶನ ನೀಡಿದೆ. ಗಡಿಯಾರ ಚಿಹ್ನೆ
“ವ್ಯಾಪಕ ಪ್ರಚಾರದೊಂದಿಗೆ ಪತ್ರಿಕೆಗಳ ಪ್ರಮುಖ ಭಾಗದಲ್ಲಿ ಇದನ್ನು ಪ್ರಕಟಿಸ ಬೇಕು” ಎಂದು ನ್ಯಾಯಾಲಯ ಹೇಳಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ “ಗಡಿಯಾರ” ಚಿಹ್ನೆಯನ್ನು ಬಳಸದಂತೆ ಅಜಿತ್ ಪವಾರ್ ಅವರ ಬಣಕ್ಕೆ ನಿರ್ದೇಶನ ನೀಡಬೇಕು ಎಂದು ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣವು ಸುಪ್ರೀಂಕೋರ್ಟ್‌ಗೆ ಕೋರಿತ್ತು. ಈ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಕ್ಟೋಬರ್ 24 ರಂದು, ನ್ಯಾಯಾಲಯವು ಅಜಿತ್ ಪವಾರ್ ಬಣಕ್ಕೆ ರಾಜ್ಯ ಚುನಾವಣೆಯ ಎಲ್ಲಾ ಪ್ರಚಾರ ಸಾಮಗ್ರಿಗಳಿಗೆ ‘ವಿಚಾರಣಾಧೀನ’ ಎಂಬ ಸೂಚನೆ ಸೇರಿಸುವಂತೆ ನಿರ್ದೇಶಿಸಿತ್ತು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದೆ. ಜಾರ್ಖಂಡ್ ಚುನಾವಣೆಯ ಜೊತೆಗೆ ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಗಡಿಯಾರ ಚಿಹ್ನೆ
ರಾಜ್ಯ ಚುನಾವಣೆಯಲ್ಲಿ ಅಜಿತ್ ಪವಾರ್ ಪಾಳಯಕ್ಕೆ ಹೊಸ ಚಿಹ್ನೆ ನೀಡಬೇಕು ಎಂದು ಕೋರಿ ಶರದ್ ಪವಾರ್ ಬಣ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಜಿತ್ ಪವಾರ್ ಬಣಕ್ಕೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ನಡುವೆ ಶರದ್ ಪವಾರ್ ಬಣದ ನಾಯಕಿ ಸುಪ್ರಿಯಾ ಸುಳೆ ಬುಧವಾರ ಅಜಿತ್ ಪವಾರ್ ಜೊತೆಗೆ ಯಾವುದೆ ಹೊಂದಾಣಿಕೆ ಇಲ್ಲ ಎಂದಿದ್ದು, ಊಹಾಪೋಹಗಳನ್ನು ತಿರಸ್ಕರಿಸಿದ್ದಾರೆ. ಎರಡು ಬಣಗಳ ನಡುವಿನ ರಾಜಕೀಯ ಜಗಳ ನಿಜವಾಗಿದ್ದು, ಅಜಿತ್ ಪವಾರ್ ಅವರು ಸ್ವಯಂಪ್ರೇರಿತವಾಗಿ ಪಕ್ಷವನ್ನು ತೊರೆದಿದ್ದಾರೆ ಎಂದು ದಿ ಹಿಂದೂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.
2023ರ ಜುಲೈ ತಿಂಗಳಲ್ಲಿ ಅಜಿತ್ ಪವಾರ್ ಅವರು ಪಕ್ಷದ ಹಲವಾರು ಶಾಸಕರೊಂದಿಗೆ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರವನ್ನು ಸೇರಿಕೊಂಡಿದ್ದರು. ಈ ವೇಳೆಗೆ ಸರ್ಕಾರವು ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವನ್ನು ಒಳಗೊಂಡಿತ್ತು. ಸಮ್ಮಿಶ್ರಕ್ಕೆ ಸೇರಿದ ನಂತರ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾದರು.
ಇದರ ನಂತರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ವಿಭಜನೆಯಾಗಿತ್ತು. ಒಂದು ಬಣ ಶರದ್ ಪವಾರ್ ಅವರ ಬೆಂಬಲಕ್ಕೆ ನಿಂತರೆ, ಇನ್ನೊಂದು ಬಣ ಅಜಿತ್ ಪವಾರ್ ಅವರನ್ನು ಬೆಂಬಲಿಸಿತ್ತು. ಅದರ ನಂತರ ಫೆಬ್ರವರಿಯಲ್ಲಿ, ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವೆಂದು ಗುರುತಿಸಿ ಗಡಿಯಾರದ ಚಿಹ್ನೆಯನ್ನು ಅವರಿಗೆ ನಿಗದಿಪಡಿಸಿತ್ತು.
ಇದೇ ವೇಳೆ ಚುನಾವಣಾ ಆಯೋಗ ಶರದ್ ಪವಾರ್ ಅವರ ಬಣಕ್ಕೆ “ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ – ಶರದ್ಚಂದ್ರ ಪವಾರ್” ಎಂಬ ಹೆಸರನ್ನು ಮತ್ತು ಲೋಕಸಭೆ ಚುನಾವಣೆಗೆ ಮುಂಚಿತವಾಗಿ “ತುತ್ತೂರು ಊದುವ ವ್ಯಕ್ತಿ”ಯ ಚಿಹ್ನೆಯನ್ನು ನಿಗದಿಪಡಿಸಿತ್ತು. ಚುನಾವಣಾ ಆಯೋಗದ ಈ ತೀರ್ಮಾನದ ವಿರುದ್ಧ ಶರದ್ ಪವಾರ್ ನೇತೃತ್ವದ ಬಣ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಮಾರ್ಚ್‌ನಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಅಜಿತ್ ಪವಾರ್ ನೇತೃತ್ವದ ಬಣವು ಲೋಕಸಭೆ ಚುನಾವಣೆಗೆ ಗಡಿಯಾರ ಚಿಹ್ನೆಯನ್ನು ಬಳಸಲು ಅನುಮತಿಸುವುದಾಗಿ ತೀರ್ಪು ನೀಡಿತು. ಆದಾಗ್ಯೂ, ಬಣವು ಚಿಹ್ನೆಯ ಬಳಕೆಯು ‘ವಿಚಾರಣಾಧೀನವಾಗಿದೆ’ ಮತ್ತು ಈ ಪ್ರಕಣದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಪತ್ರಿಕೆಗಳಲ್ಲಿ ಸಾರ್ವಜನಿಕ ನೋಟಿಸ್ ನೀಡುವಂತೆ ಹೇಳಿತ್ತು.
ಅದೇ ವೇಳೆಗೆ ಅಜಿತ್ ಪವಾರ್ ಬಣವು ತನ್ನ ಚುನಾವಣಾ ಪ್ರಚಾರ ಸಾಮಗ್ರಿಗಳಲ್ಲಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಸೇರಿದಂತೆ ಗಡಿಯಾರದ ಚಿಹ್ನೆಯ ಬಳಕೆಯನ್ನು ‘ವಿಚಾರಣಾಧೀನ’ ಎಂದು ನಮೂದಿಸುವಂತೆ ಆ ಸಮಯದಲ್ಲಿ ನಿರ್ದೇಶಿಸಲಾಗಿತ್ತು.
ಇದನ್ನೂ ಓದಿ: PMLA ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಪೂರ್ವಾನುಮತಿ ಅಗತ್ಯ: ಸುಪ್ರೀಂ ಕೋರ್ಟ್
PMLA ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಪೂರ್ವಾನುಮತಿ ಅಗತ್ಯ: ಸುಪ್ರೀಂ ಕೋರ್ಟ್


