ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬರೇಲ್ವಿಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆರೋಪಿಯನ್ನ ಅನಿಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿಎಂ ಆದಿತ್ಯನಾಥ್‌ಗೆ
ಆರೋಪಿ ಅನಿಲ್ ತುರ್ತು ಸೇವಾ ಸಂಖ್ಯೆ 112 ಅನ್ನು ಡಯಲ್ ಮಾಡಿ, ಜನವರಿ 26 ರಂದು ಮುಖ್ಯಮಂತ್ರಿಯನ್ನು ಶೂಟ್ ಮಾಡುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಇಜ್ಜತ್‌ನಗರ ಪೊಲೀಸ್ ಠಾಣೆಯ ಠಾಣಾ ಉಸ್ತುವಾರಿ ಮತ್ತು ಇತರ ಅಧಿಕಾರಿಗಳಿಗೆ ಕೂಡಾ ಬೆದರಿಕೆ ಹಾಕಿದ್ದಾನೆ ಎಂದು ಅವರು ಹೇಳಿದ್ದಾರೆ. ಸಿಎಂ ಆದಿತ್ಯನಾಥ್‌ಗೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಮಂಗಳವಾರ ರಾತ್ರಿ ಬೆದರಿಕೆ ಕರೆ ಬಂದ ನಂತರ, ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೆ ಆರೋಪಿಯ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿಯಿಡೀ ನಡೆಸಿದ ವ್ಯಾಪಕ ಪ್ರಯತ್ನದ ನಂತರ, ಅನಿಲ್‌ನನ್ನು ಪತ್ತೆ ಮಾಡಿ ಬುಧವಾರ ಬಂಧಿಸಲಾಯಿತು” ಎಂದು ಇಜ್ಜತ್‌ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಧನಂಜಯ್ ಪಾಂಡೆ ಹೇಳಿದ್ದಾರೆ.
ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಗುರುವಾರದ ನಂತರ ಅವರನ್ನು ಬರೇಲ್ವಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಬೆದರಿಕೆ ಕರೆಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದಯ, ಕೋಮು ಅಶಾಂತಿಯ ಭಯವನ್ನು ಸೃಷ್ಟಿಸಿತ್ತು.
“ಅಶಾಂತಿ ಉಲ್ಭಣಗೊಳ್ಳುವುದನ್ನು ತಡೆಯಲು ಮತ್ತು ಶಾಂತಿಯನ್ನು ಕಾಪಾಡಲು ತ್ವರಿತ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಆರೋಪಿಯ ಉದ್ದೇಶ ಮತ್ತು ಮಾನಸಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ” ಎಂದು ಎಸ್‌ಎಚ್‌ಒ ಹೇಳಿದ್ದಾರೆ.
ರಾತ್ರಿ 11 ಗಂಟೆ ಸುಮಾರಿಗೆ ಅನಿಲ್ 112ಕ್ಕೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ | ಅಮಿತ್ ಶಾ ವಿರುದ್ಧ ಟಿಎಂಸಿಯಿಂದ ಹಕ್ಕುಚ್ಯುತಿ ನೋಟಿಸ್


