ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ನಿಧಿ ಸಂಗ್ರಹಿಸಲು ನಿಮಗೆ ಯಾರಾದರೂ ಬೆದರಿಕೆ ಹಾಕಿದ್ದರೆ ಅವರ ವಿರುದ್ಧ ದೂರು ನೀಡಿ. ಸರ್ಕಾರ ಮತ್ತು ಸಂಘ ಪರಿವಾರ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಗೆ ಹೇಳಿದ್ದಾರೆ.
“ತಮ್ಮ ತಂದೆಯವರು ಹಿಂದೆ ಮುಖ್ಯಮಂತ್ರಿಗಳಾಗಿದ್ದವರು, ದೇಶದ ಪ್ರಧಾನ ಮಂತ್ರಿಗಳಾಗಿದ್ದವರು, ಜೊತೆಗೆ ವಿಶೇಷವಾಗಿ ದೈವಭಕ್ತಿ ಹೊಂದಿರುವ ಕುಟುಂಬವಾಗಿದೆ. ನೀವು ಎಲ್ಲಾ ಸಂದರ್ಭದಲ್ಲಿ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗುತ್ತೀರಿ, ಮಠಮಾನ್ಯಗಳಿಗೆ ಹೋಗುತ್ತೀರಿ, ಹೋಮ ಹವನ ಮಾಡಿಸುತ್ತೀರಿ. ಇಲ್ಲಿ ಭಕ್ತಿ ಸಮರ್ಪಣೆ ಮಾಡಲು ಜಾತಿ-ಧರ್ಮವಿಲ್ಲ, ನೀವು ಯಾಕೆ ಸಂಘಪರಿವಾರದ ಕಾರ್ಯಕರ್ತರನ್ನು ಹಿಟ್ಲರ್‌ಗೆ ಹೋಲಿಕೆ ಮಾಡುತ್ತೀರಿ” ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ನಮ್ಮ ಪೂಜೆಯ ಎದುರು ಇವರ ‘ರಾಮ ಜಪ’ ಕಾಲು ಭಾಗಕ್ಕೂ ಸಾಲದು; ಇವರದು ಧಾರ್ಮಿಕ ಭ್ರಷ್ಟಾಚಾರ: HDK ಕಿಡಿ
“ಇದುವರೆಗೂ ಎಲ್ಲಿಯೂ ಹಣವನ್ನು ಬಲವಂತವಾಗಿ ವಸೂಲಿ ಮಾಡಿರುವ ಉದಾಹರಣೆ ಇಲ್ಲ. ಯಾರು ಆ ರೀತಿ ನಕಲಿಯಾಗಿ ಮಾಡುತ್ತಾರೋ ಅವರ ಮೇಲೆ ಕೇಸು ನೀಡಿ. ಜನ ಸ್ವಯಂ ಪ್ರೇರಿತವಾಗಿ ರಾಮ ಮಂದಿರ ಆಗಬೇಕು ಎಂದು ಹಣ ನೀಡುತ್ತಿದ್ದಾರೆ. ಇದು ಕೇವಲ ಬಿಜೆಪಿಯ ಮಂದಿರವಲ್ಲ, ಇದು ರಾಷ್ಟ್ರೀಯ ಸ್ಮಾರಕ. ಇದಕ್ಕೆ ಉದಾರವಾಗಿ ದೇಣಿಗೆಯನ್ನು ಕೊಡುತ್ತಿದ್ದಾರೆ” ಎಂದು ರೇಣುಕಾಚಾರ್ಯ ಹೇಳಿದ್ದಾರೆ.
“ದೇಣಿಗೆ ನೀಡದ ಮನೆಯನ್ನು ಗುರುತು ಹಾಕುತ್ತಿದ್ದಾರೆ ಎಂದು ನೀವು ತೋರಿಸಿ, ಯಾರು ನಿಮಗೆ ಬೆದರಿಕೆ ಹಾಕಿದ್ದಾರೆ. ಕುಮಾರಸ್ವಾಮಿಯವರು ಯಾವುದೆ ವಿಷಯ ಇಲ್ಲದ್ದಕ್ಕೆ ವಿಷಯಾಂತರ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ: ಕುಮಾರಸ್ವಾಮಿ
ಮಾನ್ಯ @hd_kumaraswamy ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀರಾಮ ಭವ್ಯ ಮಂದಿರದ ನಿಧಿ ಸಂಗ್ರಹಿಸಲು ನಿಮಗೆ ಯಾರಾದರೂ ಬೆದರಿಕೆ ಹಾಕಿದ್ದರೆ ಅವರ ವಿರುದ್ಧ ದೂರು ನೀಡಿ.
ಸರ್ಕಾರ ಮತ್ತು ಸಂಘ ಪರಿವಾರ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತದೆ. pic.twitter.com/0BBXwrEwmG
— M P Renukacharya (@MPRBJP) February 17, 2021
ಕುಮಾರಸ್ವಾಮಿ ಅವರು ಸೋಮವಾರದಂದು ಟ್ವೀಟರ್‌ನಲ್ಲಿ, “ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದರು.
ಈ ಹೇಳಿಕೆಗೆ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಮತ್ತೇ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ, “ದೇವೇಗೌಡರು, ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು. ಪ್ರಧಾನಿ ಸ್ಥಾನ ಕೊಟ್ಟಿದ್ದೂ ದೇವರೇ, ಆ ಸ್ಥಾನದಲ್ಲಿ ಮುಂದುವರಿಯುವ ಅಥವಾ ಸ್ಥಾನ ತೊರೆಯುವ ಅವಕಾಶಗಳಿದ್ದರೂ ಸ್ಥಾನ ತೊರೆಯಬೇಕೆಂಬ ನಿರ್ಣಯ ಕೊಟ್ಟಿದ್ದೂ ದೇವರೇ. ಇದು ಶೃಂಗೇರಿ ಜಗದ್ಗುರುಗಳ ಎದುರು ದೇವೇಗೌಡರು ಪ್ರಮಾಣಿಕವಾಗಿ, ಬಹಿರಂಗವಾಗಿ ಹೇಳಿದ್ದ ಮಾತು. ಇದು ನಮ್ಮ ದೈವ ಬದ್ಧತೆಗೆ ಸಾಕ್ಷಿ. ಇದು ನಮಗಿರುವ ದೈವ ಕೃಪೆಗೂ ಸಾಕ್ಷಿ!” ಎಂದು ತಮ್ಮ ಕುಟುಂಬದ ದೈವಿಕ ಭಕ್ತಿಯ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಇದಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ನೀಡದವರ ಮನೆ ಗುರುತು ಮಾಡುತ್ತಿರುವ RSS: ಕುಮಾರಸ್ವಾಮಿ ಆತಂಕ


