Homeಮುಖಪುಟಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ: ಪ್ರಧಾನಿ ಮೋದಿ

ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ: ಪ್ರಧಾನಿ ಮೋದಿ

ನಮ್ಮ ಸರ್ಕಾರವು ಮಧ್ಯಮ ವರ್ಗದವರ ಬಗ್ಗೆ ಸಂವೇದನಾಶೀಲಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ

- Advertisement -
- Advertisement -

ರಾಜಸ್ಥಾನದಲ್ಲಿ ಪೆಟ್ರೋಲ್ ಒಂದು ಲೀಟರ್‌ಗೆ 100 ರೂ.ಗಳು ದಾಟಿದ್ದು, ಭಾರತದಲ್ಲಿ ಸಾರ್ವಕಾಲಿಕ ಹೆಚ್ಚಳ ಕಂಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಇಂಧನದ ಬೆಲೆ ಹೆಚ್ಚಳಕ್ಕೆ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರದತ್ತ ಕೈ ತೋರಿಸಿದ್ದಾರೆ. ಅವರು, “ಹಿಂದಿನ ಸರ್ಕಾರಗಳು ಇಂಧನ ಆಮದು ಪ್ರಮಾಣ ತಗ್ಗಿಸುವತ್ತ ಗಮನ ನೀಡಿದ್ದರೆ ಮಧ್ಯಮ ವರ್ಗಕ್ಕೆ ಹೊರೆ ಆಗುತ್ತಿರಲಿಲ್ಲ’’ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ತೈಲ ಮತ್ತು ಅನಿಲ ಯೋಜನೆಗಳನ್ನು ಉದ್ಘಾಟಿಸುವ ಆನ್‌ಲೈನ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಮೋದಿ, “2019–20 ರಲ್ಲಿ ಭಾರತಕ್ಕೆ ಅಗತ್ಯವಿದ್ದ 85% ಕ್ಕಿಂತ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲಾಯಿತು, ನೈಸರ್ಗಿಕ ಅನಿಲದ ಅಗತ್ಯತೆಯ ಶೇ 53ರಷ್ಟನ್ನು ಆಮದು ಮಾಡಿಕೊಳ್ಳಲಾಯಿತು” ಎಂದು ಹೇಳಿದ್ದಾರೆ.

ಆದರೆ ಅವರು ತಮ್ಮ ಮಾತಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳ ಆಗುತ್ತಿರುವುದರ ಬಗ್ಗೆ ಮಾತನಾಡಲಿಲ್ಲ.

ಇದನ್ನೂ ಓದಿ: ದೆಹಲಿ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ

‘‘ನಮ್ಮಷ್ಟು ವೈವಿಧ್ಯತೆ ಹೊಂದಿರುವ, ಇಷ್ಟೊಂದು ಪ್ರತಿಭೆ ಹೊಂದಿರುವ ದೇಶವು ಇಂಧನದ ಅಗತ್ಯಗಳಿಗೆ ಈ ರೀತಿಯಲ್ಲಿ ಆಮದನ್ನು ಅವಲಂಬಿಸಿರಬೇಕೆ?. ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ. ಆದರೆ, ಈ ವಿಚಾರ ಇಂಧನ ಬೆಲೆ ಹೆಚ್ಚಳದ ಹೊಣೆಯನ್ನು ಹಿಂದಿನ ಸರ್ಕಾರದ ಮೇಲೆ ಹೊರಿಸಿದ್ದಾರೆ.

“ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ನಮ್ಮ ಸರ್ಕಾರವು ಮಧ್ಯಮ ವರ್ಗದವರ ಬಗ್ಗೆ ಸಂವೇದನಾಶೀಲಕಾರಿಯಾಗಿದೆ. ಹಾಗಾಗಿ ದೇಶವು ಇಂದು ಎಥೆನಾಲ್ ಬಳಕೆಗೆ ಆದ್ಯತೆ ನೀಡುತ್ತಿದೆ. ಇದು ಗ್ರಾಹಕರಿಗೂ ರೈತರಿಗೂ ಸಹಾಯ ಮಾಡುತ್ತದೆ. ಇಂಧನ ಆಮದನ್ನು ತಗ್ಗಿಸಲು ದೇಶ ಯತ್ನಿಸುತ್ತಿದೆ’’ ಎಂದು ಪ್ರಧಾನಿ ಹೇಳಿದ್ದಾರೆ.

“2014 ರಿಂದ, ನಾವು ತೈಲ ಮತ್ತು ಅನಿಲ ವಲಯದಾದ್ಯಂತ ವಿವಿಧ ಸುಧಾರಣೆಗಳನ್ನು ತಂದಿದ್ದೇವೆ. ಪರಿಶೋಧನೆ ಮತ್ತು ಉತ್ಪಾದನೆ, ನೈಸರ್ಗಿಕ ಅನಿಲ ಮಾರುಕಟ್ಟೆ ಮತ್ತು ವಿತರಣೆಯನ್ನು ಒಳಗೊಂಡಿದೆ. ಹೂಡಿಕೆದಾರ ಸ್ನೇಹಿ ಕ್ರಮಗಳ ಮೂಲಕ ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆಯನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದೇವೆ. ಭಾರತದ ಶಕ್ತಿಯ ಮೇಲೆ ಹೂಡಿಕೆ ಮಾಡಬೇಕೆಂದು ಜಗತ್ತಿಗೆ ಹೇಳಲು ನಾನು ಬಯಸುತ್ತೇನೆ” ಎಂದು ಮೋದಿ ಹೇಳಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೆಟ್ರೋಲ್ ಬೆಲೆಯಲ್ಲಿ 60% ದಷ್ಟು ಹಾಗೂ ಡೀಸೆಲ್ ಬೆಲೆಯಲ್ಲಿ 54% ದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ವಿವಿಧ ಸುಂಕ, ತೆರಿಗೆಗಳಿಗೆ ಪಾವತಿಯಾಗುತ್ತವೆ.

ಇದನ್ನೂ ಓದಿ: ಲೀ ಪೆಟ್ರೋಲ್ ದರ ರೂ. 06!, ರಾಮದೇವ್ ಯೋಗ ಭಂಗಿಯಲ್ಲಿ ನೋಡಿದರೆ: ತರೂರ್ ವ್ಯಂಗ್ಯ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...