Homeಮುಖಪುಟ’ನಾವಿಬ್ಬರು ನಮಗಿಬ್ಬರು’ ಹೇಳಿಕೆಗೆ ’ಗೊ ಕೊರೊನಾ ಗೊ’ ಖ್ಯಾತಿಯ ಸಚಿವ ಅಠಾವಳೆ ಹೇಳಿದ್ದೇನು?

’ನಾವಿಬ್ಬರು ನಮಗಿಬ್ಬರು’ ಹೇಳಿಕೆಗೆ ’ಗೊ ಕೊರೊನಾ ಗೊ’ ಖ್ಯಾತಿಯ ಸಚಿವ ಅಠಾವಳೆ ಹೇಳಿದ್ದೇನು?

- Advertisement -
- Advertisement -

ರಾಹುಲ್‌‌‌ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಲು ಹೇಳಿದ್ದ ‘ನಾವಿಬ್ಬರು, ನಮಗಿಬ್ಬರು’ ಹೇಳಿಕೆಗೆ ’ಗೋ ಕೊರೊನಾ ಗೋ’ ಖ್ಯಾತಿಯ ಕೇಂದ್ರ ಸಚಿವ ರಾಮದಾಸ್ ಅಠಾವಳೆ ತಿರುಗೇಟು ನೀಡಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ ದಲಿತ ಯುವತಿಯನ್ನು ವಿವಾಹವಾಗಲಿ ಎಂದು ಆಗ್ರಹಿಸಿದ್ದಾರೆ.

ರೈತ ಹೋರಾಟವನ್ನು ಬೆಂಬಲಿಸಿ ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕುಟುಂಬ ಯೋಜನೆಯೊಂದರ ಘೋಷಣೆಯಾದ ’ನಾವಿಬ್ಬರು ನಮಗಿಬ್ಬರು’ ಎಂಬ ಆಧಾರದಲ್ಲಿ, ದೇಶವನ್ನು ನಾಲ್ಕು ಜನರು ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿಗಳಾದ ಅಂಬಾನಿ-ಅದಾನಿಯ ಹೆಸರನ್ನು ಉಲ್ಲೇಖಿಸದೆ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ನಾವಿಬ್ಬರು, ನಮಗಿಬ್ಬರು ಎಂದು 4 ಜನರು ದೇಶ ಆಳುತ್ತಿದ್ದಾರೆ: ರಾಹುಲ್ ಗಾಂಧಿ

ಅವರು, “ಕುಟುಂಬ ಯೋಜನೆಗಾಗಿ ‘ನಾವಿಬ್ಬರು ನಮಗಿಬ್ಬರು’ ಎಂಬ ಘೋಷಣೆ ಇತ್ತು. ಕೊರೊನಾ ಮತ್ತೊಂದು ರೂಪದಲ್ಲಿ ಬಂದಂತೆ ಈ ಘೋಷಣೆಯು ಬೇರೆ ರೂಪದಲ್ಲಿ ಬಂದಿದೆ. ’ನಾವಿಬ್ಬರು ನಮಗಿಬ್ಬರು’ ಎಂಬಂತೆ ದೇಶವನ್ನು 4 ಜನರು ನಡೆಸುತ್ತಿದ್ದಾರೆ. ಎಲ್ಲರಿಗೂ ಅವರ ಹೆಸರು ತಿಳಿದಿದೆ, ಇದು ‘ನಾವಿಬ್ಬರು ನಮಗಿಬ್ಬರು’ ಸರ್ಕಾರ” ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಠಾವಳೆ, “ಹಿಂದೆ ನಾವಿಬ್ಬರು ನಮಗಿಬ್ಬರು ಘೋಷವಾಕ್ಯವನ್ನು ಕುಟುಂಬ ಯೋಜನೆಗಾಗಿ ಬಳಸಲಾಗುತ್ತಿತ್ತು. ಇದನ್ನು ಪ್ರೋತ್ಸಾಹಿಸಬೇಕೆಂದಿದ್ದರೆ ರಾಹುಲ್ ಗಾಂಧಿ ವಿವಾಹವಾಗಬೇಕಾಗುತ್ತದೆ. ಅವರು ದಲಿತ ಯುವತಿಯನ್ನು ವಿವಾಹವಾಗಿ ಜಾತಿ ವ್ಯವಸ್ಥೆಯನ್ನು ಅಂತ್ಯಗೊಳಿಸುವ ಮಹಾತ್ಮ ಗಾಂಧಿ ಕಂಡಿದ್ದ ಕನಸನ್ನು ಸಾಕಾರಗೊಳಿಸಬೇಕು” ಎಂದು ಹೇಳಿದ್ದಾರೆ

“ಇಂತಹ ಕ್ರಮ ಯುವಜನತೆಗೂ ಸ್ಫೂರ್ತಿದಾಯಕವಾಗಿದೆ. ಅಲ್ಲದೆ ನಮ್ಮ ಸಚಿವಾಲಯವು ಅಂತರ್ಜಾತಿ ವಿವಾಹಕ್ಕೆ ನೀಡುವ 2.5 ಲಕ್ಷ ರೂ.ಗಳ ಸಹಾಯಧನವನ್ನೂ ರಾಹುಲ್ ಗಾಂಧಿಗೆ ನೀಡುತ್ತೇವೆ” ಎಂದ ಅಠಾವಳೆ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ: ಉತ್ತರಪ್ರದೇಶ ತೊರೆಯುತ್ತಿರುವ ಅಂತರ್‌ಧರ್ಮೀಯ ಸಂಗಾತಿಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಹೆಸರು ಹೇಳದಿದ್ದರೆ ಈ ಮುಟ್ಟಾಳ ನಿಗೆ ಆ ನಾಲ್ಕು ಜನರ ಹೆಸರು ಹೇಗೆ ಗೊತ್ತಾಯ್ತು
    ಅಂದಹಾಗೆ ರಾಹುಲ್ ಗಾಂಧಿ ಹೇಳಿದ್ದು ಸತ್ಯ ವಂತಾಯಿತು

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...