ಪಶ್ಚಿಮ ಬಂಗಾಳ ಬಿಜೆಪಿಯ ಯುವ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಕಾರಿನಲ್ಲಿ ಕೊಕೇನ್(ಮಾದಕ ದ್ರವ್ಯ) ಹೊಂದಿದ್ದ ಆರೋಪದ ಮೇಲೆ ಪೊಲೀಸರು ಶುಕ್ರವಾರ ಬಂಧಿಸಿದ್ದಾಗಿ ವರದಿಯಾಗಿದೆ.
ಬಿಜೆಪಿ ಯುವ ನಾಯಕಿಯಾಗಿರುವ ಪಮೇಲಾ ಗೋಸ್ವಾಮಿ ಮತ್ತು ಅವರ ಸ್ನೇಹಿತ ಪ್ರೋಬೀರ್ ಕುಮಾರ್ ಡೇ ಅವರನ್ನು ಕಲ್ಕತ್ತಾದ ನ್ಯೂ ಅಲಿಪುರ್ ಪ್ರದೇಶದ ಎನ್‌ಆರ್ ಅವೆನ್ಯೂ ಎಂಬಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ಕಾರಿನಲ್ಲಿ ಕೊಕೇನ್ ಸಾಗಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಸ್ಥಳೀಯ ಚುನಾವಣಾ ಫಲಿತಾಂಶ ತಿರಸ್ಕರಿಸುತ್ತೇವೆ ಎಂದ ಬಿಜೆಪಿ
ಪಮೇಲಾ ಗೋಸ್ವಾಮಿ ಅವರ ಕಾರಿನಲ್ಲಿ ಸೆಕ್ಯುರಿಟಿ ಗಾರ್ಡ್ ಕೂಡ ಇದ್ದರು ಎಂದು ವರದಿಯಾಗಿದೆ. ಪೊಲೀಸರು ಈ ಹಿಂದೆಯೆ ಅವರ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು ಎನ್ನಲಾಗಿದೆ. ಶುಕ್ರವಾರ ಅವರು ತನ್ನ ಕಾರಿನಲ್ಲಿ ಕೊಕೇನ್ ಸಾಗಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅವರು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ, ಕಾರಿನ ಸೀಟು ಮತ್ತು ಬ್ಯಾಗಿನಲ್ಲಿ ಮಾದಕ ವಸ್ತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ- ನರೇಶ್ ಟಿಕಾಯತ್


