ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಯಾವುದೇ ಕಾರ್ಯಕ್ರಮಗಳಿಗೆ ಬಿಜೆಪಿ ನಾಯಕರನ್ನು ಆಹ್ವಾನಿಸಬೇಡಿ ಎಂದು ರೈತರಿಗೆ ಸಲಹೆ ನೀಡಿದ್ದಾರೆ.
ಒಂದು ವೇಳೆ ನೀವು ಬಿಜೆಪಿ ಮುಖಂಡರನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಮರುದಿನ 100 ಜನರಿಗೆ ಆಹಾರವನ್ನು ನೀಡಲು ಸಿದ್ಧರಾಗಿರಿ ಎಂದು ಉತ್ತರ ಪ್ರದೇಶದ ಸಿಸೋಲಿಯಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಟಿಕಾಯತ್ ಹೇಳಿದರು.
ಬಿಜೆಪಿ ಮುಖಂಡರು ಮತ್ತು ಬಿಜೆಪಿ ರೈತರ ಮಾತನ್ನು ಕೇಳುತ್ತಿಲ್ಲ ಆದ್ದರಿಂದ ರೈತರು ಕೂಡ ಕೇಸರಿ ಪಕ್ಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಬಾರದು ಎಂದು ನರೇಶ್ ಟಿಕಾಯತ್ ರೈತರಿಗೆ ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ತಡೆಗೆ ಹಲವು ಕುತಂತ್ರಗಳು, ಜಗ್ಗದ ಅನ್ನದಾತರು: ವಿಶೇಷ ವರದಿ
Consider this an order or advice but nobody should send them (BJP leaders) invitations (for functions). Tell us about it & the next day that person (who sends an invitation) will have to send food for 100 people: Naresh Tikait, Bharatiya Kisan Union chief, in Muzaffarnagar(17.02) pic.twitter.com/7ExgzqdwKA
— ANI UP (@ANINewsUP) February 19, 2021
“ನೀವು ಇದನ್ನು ನನ್ನ ಆದೇಶ ಅಥವಾ ಸಲಹೆ ಎಂದು ಬೇಕಾದರೆ ತೆಗೆದುಕೊಳ್ಳಿ. ಬಿಜೆಪಿಯವರನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ. ಒಂದು ವೇಳೆ ಯಾರಾದರೂ ಆಹ್ವಾನಿಸಿದರೆ ಅವರಿಗೆ ಹೇಳಿ, ಮಾರನೇ ದಿನ 100 ಜನರಿಗೆ ಊಟ ಕಳಿಸಲು ಸಿದ್ದರಿರಬೇಕು” ಎಂದು ನರೇಶ್ ಟಿಕಾಯತ್ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.
ಇದೇ ಸಂದರ್ಭದಲ್ಲಿ ’ಬಿಜೆಪಿ ನಾಯಕರು ತಮ್ಮ ಸ್ವಂತ ಮನೆಗಳಲ್ಲಿ ಸಂತೋಷವಾಗಿರಬೇಕು ಎಂದು ನಾನು ಹೇಳಿದೆ. ನೀವು ಇದನ್ನು ಬಹಿಷ್ಕಾರವೆಂದು ಪರಿಗಣಿಸಬಹುದು. ಬಿಜೆಪಿ ತಮ್ಮ ಸಂಘಟನೆಯಿಂದ ಕೆಲವು ಜನರನ್ನು ಮಾನಸಿಕವಾಗಿ ಬಂಧಿಸಿದೆ ಎಂದು ಹೇಳಿದ್ದಾರೆ.
ನರೇಶ್ ಟಿಕಾಯತ್, ಹಿರಿಯ ದಿವಂಗತ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್ ಅವರ ಹಿರಿಯ ಮಗ. ಟಿಕಾಯತ್ ಸಹೋದರರು ನವೆಂಬರ್ 26 ರಿಂದ ರೈತ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತ ಹೋರಾಟಕ್ಕಾಗಿ, ಮಹಾಪಂಚಾಯತ್‌ಗಳ ಮೂಲಕ ರೈತರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಇದನ್ನೂ ಓದಿ: 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ!
