Homeಮುಖಪುಟಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿ!

ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿ!

- Advertisement -
- Advertisement -

ಭಾರತೀಯ ಸೇನೆಯ ಆಯ್ಕೆ ಮಂಡಳಿಯು ಐವರು ಮಹಿಳಾ ಅಧಿಕಾರಿಗಳನ್ನು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಇದೇ ಮೊದಲು ಆಯ್ಕೆ ಮಾಡಿದೆ. 26 ವರ್ಷಗಳ ‘ಗಣನೀಯ ಸೇವೆ’ ಪೂರ್ಣಗೊಳಿಸಿದ ನಂತರ ಅವರಿಗೆ ಬಡ್ತಿ ನೀಡುವ ಬಗ್ಗೆ ಸೇನೆ ಸ್ಪಷ್ಟಪಡಿಸಿದೆ.

ನಿರ್ಧಾರವನ್ನು ಪ್ರಕಟಿಸಿದ ಭಾರತೀಯ ಸೇನೆಯು ಸೋಮವಾರ, “ಕಾರ್ಪ್ ಆಫ್ ಸಿಗ್ನಲ್, ಕಾರ್ಪ್ ಆಫ್ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ (ಇಎಂಇ) ಹಾಗೂ ಕಾರ್ಪ್ ಆಫ್ ಇಂಜಿನಿಯರ್‌ಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳು ಕರ್ನಲ್ ಹುದ್ದೆಗೆ ಅನುಮೋದನೆ ಪಡೆಯುತ್ತಿರುವುದು ಇದೇ ಮೊದಲು” ಎಂದು ಹೇಳಿದೆ.

ಇದನ್ನೂ ಓದಿ: ಮಹಿಳೆಯರು ಎನ್‌ಡಿಎ ಪರೀಕ್ಷೆ ಬರೆಯಬಹುದು: ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು

ಕಾರ್ಪ್ ಆಫ್‌ ಸಿಗ್ನಲ್‌ನ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದನ, ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್, ಕಾರ್ಪ್ ಆಫ್‌ ಇಎಂಇ ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್, ಕಾರ್ಪ್‌ ಆಫ್‌ ಇಂಜಿನೀರ್‌ಸ್‌ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಮತ್ತು ಲೆಫ್ಟಿನೆಂಟ್ ಕರ್ನಲ್ ರಿಚ ಸಾಗರ್‌‌, ಒಟ್ಟು ಐವರು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಆಯ್ಕೆಯಾದ ಮಹಿಳಾ ಅಧಿಕಾರಿಗಳು ಎಂದು ಸೇನೆಯು ಹೇಳಿದೆ.

16 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕರ್ನಲ್ ಹುದ್ದೆಗೆ ಮೊದಲ ಆಯ್ಕೆ ನಡೆಯುತ್ತದೆ, ಇದರಲ್ಲಿ ಉಳಿದವರಿಗೆ 26 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕರ್ನಲ್ ಶ್ರೇಣಿಯನ್ನು ನೀಡಲಾಗುತ್ತದೆ.

ಸೈನ್ಯಕ್ಕೆ ಖಾಯಂ ಆಯೋಗವನ್ನು ನೀಡಿದ್ದರಿಂದ ಮಹಿಳೆಯರು ಕರ್ನಲ್ (ಟೈಮ್ ಸ್ಕೇಲ್) ಶ್ರೇಣಿಗೆ ಅರ್ಹರಾಗಿದ್ದಾರೆ.

ಖಾಯಂ ಆಯೋಗ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ವಿಶೇಷ ಮಂಡಳಿಯಿಂದ 615 ರಲ್ಲಿ 424 ಮಹಿಳೆಯರನ್ನು ಖಾಯಂ ಆಯೋಗಕ್ಕೆ ಪರಿಗಣಿಸಲಾಗಿದೆ.

ಹಿಂದೆ, ಕರ್ನಲ್ ಹುದ್ದೆಗೆ ಬಡ್ತಿ ಪಡೆಯುವುದು ಕೇವಲ ಸೇನಾ ವೈದ್ಯಕೀಯ ದಳ (AMC), ನ್ಯಾಯಾಧೀಶ ಅಡ್ವೋಕೇಟ್ ಜನರಲ್ (JAG) ಮತ್ತು ಸೇನಾ ಶಿಕ್ಷಣ ದಳ (AEC) ದ ಮಹಿಳಾ ಅಧಿಕಾರಿಗಳಿಗೆ ಮಾತ್ರ ಸಾಧ್ಯವಾಗುತ್ತಿತ್ತು.

ಇದನ್ನೂ ಓದಿ: ಮಹಿಳೆಯರನ್ನು ನೇಮಿಸಿಕೊಳ್ಳಿ, ಇಲ್ಲಿದಿದ್ದರೆ ನಾವು ಆದೇಶಿಸಬೇಕಾಗುತ್ತದೆ: ಸೇನೆಗೆ ಸುಪ್ರೀಂ ತಾಕೀತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...