Homeನ್ಯಾಯ ಪಥಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಲ್ಲಿ ಬೆಳದುಬಂದ ”ಒಡನಾಡಿ ಸಬಿಹಾ”

ಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಲ್ಲಿ ಬೆಳದುಬಂದ ”ಒಡನಾಡಿ ಸಬಿಹಾ”

- Advertisement -
- Advertisement -

ಪ್ರೊ.ಸಬಿಹಾ ಭೂಮಿಗೌಡ ಅವರು ಎಂದೂ ಪ್ರಚಾರದ ಮುನ್ನೆಲೆಯಲ್ಲಿ ಇದ್ದವರಲ್ಲ. ಕವಿತೆ, ಕತೆ, ಅಂಕಣ, ಪ್ರಬಂಧ, ವಿಮರ್ಶೆ, ಸಂಶೋಧನೆ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಅಧ್ಯಾಪನ ಮತ್ತು ಆಡಳಿತದ ಕೆಲಸಗಳನ್ನು ನಿರ್ವಹಿಸಿದವರು. ಚಳವಳಿ, ಸಂಘಟನೆಗಳಲ್ಲಿ ನಂಟು ಬೆಳೆಸಿ ಅವುಗಳಲ್ಲಿ ನಂಬಿಕೆಯಿಟ್ಟು ಬೆಳೆದವರು. ನವೆಂಬರ್ 14 ರಂದು ಮಂಗಳೂರಿನಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಅಭಿನಂದನೆಯು ಸಹೋದರಿತ್ವದ ವಿಸ್ತರಿತ ನೆಲೆಯಲ್ಲಿ ಆಗುತ್ತಿದೆ ಎಂಬುದೊಂದು ವಿಶೇಷ. ಹೆಂಗೆಳೆಯರು ಸೇರಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ “ಒಡನಾಡಿ ಸಬಿಹಾ” ಎಂಬ ಅಭಿನಂದನಾ ಹೊತ್ತಗೆಯೂ ಅನಾವರಣಗೊಳ್ಳಲಿದೆ.

ಎಂಬತ್ತರ ದಶಕದ ಅವಿಭಜಿತ ದಕ್ಷಿಣ ಕನ್ನಡದ ಬೆಚ್ಚನೆಯ ಉದಾರವಾದೀ ಸಾಮಾಜಿಕ ಪರಿಸರದಲ್ಲಿ ಬೆಳೆದವರು ಸಬಿಹಾರ ತಂದೆ ಪ್ರೊ. ಎಂ.ಆರ್.ಗಜೇಂದ್ರಗಡ ಅವರು ಉತ್ತರ ಕರ್ನಾಟಕ ಮೂಲದವರು. ವಿಜ್ಞಾನ ಪ್ರಾಧ್ಯಾಪಕರಾಗಿ, ಹುಟ್ಟಿನಿಂದ ಮುಸಲ್ಮಾನರಾಗಿದ್ದ ಅವರು ಸಂಸ್ಕೃತದ ಸಾಲನ್ನು ಪುಂಖಾನುಪುಂಖವಾಗಿ ಉದ್ಧರಿಸುತ್ತಾ ರಾಮಾಯಣ, ಮಹಾಭಾರತಗಳನ್ನು ಉದಾಹರಿಸುತ್ತಾ ಭಾಷಣ ಮಾಡಿ ಬೆರಗು ಹುಟ್ಟಿಸುತ್ತಿದ್ದರು. ಒಂದು ರೀತಿಯ ಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಂತಿದ್ದ ಮನೆಯ ವಾತಾವರಣದಲ್ಲಿ ಬೆಳೆದ ಸಬಿಹಾ, ಕನ್ನಡ ಎಂ.ಎ ಮಾಡಿದ್ದು ಅವರ ಬದುಕಿನ ತಿರುವಿಗೆ ಕಾರಣ. ಎಂ.ಎ ಮುಗಿಸುತ್ತಿದ್ದಂತೆ ಮಂಗಳೂರು ವಿ.ವಿಯಲ್ಲಿ ದೊರಕಿದ ಉಪನ್ಯಾಸಕ ವೃತ್ತಿ, ಭೂಮಿಗೌಡರೊಂದಿಗಿನ ಅಂತರ್‌ಧರ್ಮೀಯ ವಿವಾಹ, ಸಾಹಿತ್ಯ ಮತ್ತು ಚಳವಳಿಗಳೆಡೆಗಿನ ಆಸಕ್ತಿಯಿಂದ ವಿಸ್ತಾರವಾದ ಚಿಂತನೆಗಳು ಮತ್ತು ಗೆಳೆಯರ ಬಳಗ ಅವರನ್ನು ರೂಪಿಸಿದೆ.

ಸಬಿಹಾ ಅವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದಾಗ ಮಾಡಿದ ನೇಮಕಾತಿಗಳಲ್ಲಿದ್ದ ಪಾರದರ್ಶಕತೆ ಇಂದಿನ ದಿನಗಳಲ್ಲಿ ಬಹಳ ಮಹತ್ವದ ಸಂಗತಿಯಾಗಬೇಕಿತ್ತು. ಆದರೆ ಅದು ಪ್ರಚಾರ ಪಡೆದಿದ್ದು ಕಡಿಮೆ. ಮೂವತ್ಮೂರು ಜನ ಉಪನ್ಯಾಸಕರನ್ನು ನೇಮಿಸಿಕೊಂಡಾಗಿನ ಸಂದರ್ಶನದಿಂದ ಹಿಡಿದು ಪ್ರತಿ ವಿವರವನ್ನೂ ವಿಡಿಯೋ ಮಾಡಿ ಎಲ್ಲರಿಗೂ ಆ ಕ್ಷಣದಲ್ಲೇ ವಿವರ ಲಭ್ಯವಿರುವಂತೆ ಮಾಡಲಾಗಿತ್ತು. ಈಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಇದು ಅಪರೂಪದ ವಿದ್ಯಮಾನ. ಹಾಗೆಯೇ ತನ್ನ ಅಧಿಕಾರದ ಅವಧಿಯಲ್ಲಿ ಅಲ್ಲಿನ ಬೋಧಕೇತರ ಸಿಬ್ಬಂದಿಗಳಿಗೆ ಉಂಟಾಗುತ್ತಿದ್ದ ಆರ್ಥಿಕ ಶೋಷಣೆಯನ್ನು ತಪ್ಪಿಸಿದ್ದು ಕೂಡಾ ಅವರ ಆದ್ಯತೆಯನ್ನು ಹೇಳುತ್ತದೆ. ಇದೆಲ್ಲವೂ ಇಂದಿನ ದಿನಗಳಲ್ಲಿ ಮಹತ್ವದ ಸಂಗತಿಯಾಗಿ ಮುನ್ನೆಲೆಗೆ ಬರದೇ ಇರುವುದು ವಿಶ್ವವಿದ್ಯಾಲಯಗಳ ಒಟ್ಟಾರೆ ಕುಸಿತ ಮಾತ್ರವಲ್ಲ, ಸಾಮಾಜಿಕ ಬದುಕಿನ ಕುಸಿತವೂ ಸಾಧಾರಣ ಸಂಗತಿಯೆಂಬಂತೆ ಸ್ವೀಕೃತವಾಗಿರುವುದರ ಸಂಕೇತವೂ ಆಗಿದೆ.

ಮಹಿಳಾ ಚರಿತ್ರೆಯನ್ನು ಮಹಿಳೆಯರೇ ಬರೆಯ ಬೇಕಿರುವ ಅನಿವಾರ್ಯತೆಯಿದೆ. ಈ ದೃಷ್ಟಿಯಿಂದ ಮಹಿಳೆಯರು ಮುಂದೆ ನಿಂತು ಮಾಡುತ್ತಿರುವ ಇಂತಹ ಕೆಲಸಗಳನ್ನು ಗುರುತಿಸಬೇಕಿದೆ. ಕನ್ನಡ ನಾಡಿನ ಬೇರೆ ಬೇರೆ ವಲಯಗಳಲ್ಲಿ ಹೀಗೆ ಮಹಿಳೆಯರೇ ಅಭಿನಂದನಾ ಗ್ರಂಥಗಳನ್ನು ಹೊರತರುತ್ತಿದ್ದಾರೆ. ಇವುಗಳಲ್ಲಿ ದಶಕಗಳ ಮಹಿಳಾ ಸಾಹಿತ್ಯವನ್ನು ಅವಲೋಕಿಸುವ ಕೆಲಸವೂ ನಡೆದಿದೆ. ಈ ಗ್ರಂಥದಲ್ಲಿ 2000ಇಸವಿಯ ನಂತರದಲ್ಲಿನ ಇಪ್ಪತ್ತು ವರ್ಷಗಳಲ್ಲಿನ ವಿವಿಧ ಪ್ರಕಾರಗಳ ಮಹಿಳಾ ಸಾಹಿತ್ಯದ ಅವಲೋಕನಕ್ಕೆ ಸಂಬಂಧಿಸಿದ ಲೇಖನಗಳಿವೆ. ಹಾಗೆಯೇ ಸಬಿಹಾರ ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳ ಅವಲೋಕನವೂ ಇದೆ. ಜೊತೆಗೆ ಅವರ ಒಡನಾಡಿಗಳ ಆತ್ಮೀಯ ಬರೆಹ, ಸಂದರ್ಶನಗಳಿವೆ ಅಭಿನಂದನಾ ಗ್ರಂಥಗಳಿಗೆ ಇಂತದೇ ಒಂದು ಸ್ವರೂಪ ಅಂತೇನೂ ಇರಬೇಕಾಗಿಲ್ಲ. ಅದು ತನ್ನಷ್ಟಕ್ಕೆ ತಾನೇ ವಿಶಿಷ್ಟತೆಯನ್ನು ಒಳಗೊಳ್ಳಬಹುದು. ಅಥವಾ ಕೇವಲ ವ್ಯಕ್ತಿಯ ವೈಭವೀಕರಣವೋ, ಭಕ್ತಿಯೋ, ಅಭಿಮಾನವೋ ಆಗಿ ಅವುಗಳ ಕುರುಹಾಗಿ ಉಳಿಯಬಹುದು. ಆದರೆ, ಅಷ್ಟೇ ಆಗಿ ಉಳಿಯಬಾರದು ಎಂಬ ಎಚ್ಚರ ಈ ಕೃತಿಯಲ್ಲಿದೆ. ಅದಕ್ಕಾಗಿ ಇದು ಇತರ ಕೃತಿಗಳಿಗಿಂತ ಭಿನ್ನವಾಗುವ ಹೆಜ್ಜೆಯೊಂದನ್ನು ಇರಿಸಿದೆ. ಅದೆಂದರೆ, ಇದರಲ್ಲಿ ಕರ್ನಾಟಕದ ಚಳವಳಿಗಳು ಎಂಬ ದೀರ್ಘವಾದ ಭಾಗವೊಂದಿದೆ. ಇದರಲ್ಲಿ ನಾಡಿನಲ್ಲಿ ನಡೆದ ಎಲ್ಲ ರೀತಿಯ ಚಳವಳಿಗಳನ್ನೂ ದಾಖಲಿಸಲಾಗಿದೆ. ಸುಮಾರು ನೂರು ಪುಟಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ ಮಹಿಳಾ ಚಳವಳಿ, ದಲಿತ ಚಳವಳಿ, ಪರಿಸರ ಚಳವಳಿ, ಸಾಹಿತ್ಯ ಚಳವಳಿ, ರೈತ ಚಳವಳಿ, ಮಾರ್ಕ್ಸ್‌ವಾದಿ ಚಳವಳಿಗಳು, ಚಳವಳಿಯಾಗಿ ಮಹಿಳಾ ಅಧ್ಯಯನ, ಕೋಮುಸೌಹಾರ್ದ ಚಳವಳಿ, ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಯ ಸಮೀಕ್ಷೆ ಹೀಗೆ ಇದು ವಿಸ್ತಾರವಾಗಿ ಹರಡಿಕೊಂಡಿದೆ.

ಹಾಗೆಯೇ ಎರಡು ದಶಕಗಳ ಮಹಿಳಾ ಸಾಹಿತ್ಯದ ಅವಲೋಕನವೂ ಕೂಡಾ, ಹೇಗೆ ಮಹಿಳಾ ಸಾಹಿತ್ಯವು ಭಿನ್ನ ಜೀವನ ನೋಟವನ್ನು ಕಟ್ಟಿಕೊಟ್ಟಿತು ಎಂಬೆಡೆಗೆ ಗಮನ ಹರಿಸುತ್ತದೆ. ಇಲ್ಲಿ ಎಲ್ಲಾ ಪ್ರಕಾರಗಳ ಕುರಿತು ಲೇಖನಗಳಿಲ್ಲವಾದರೂ, ಮಹಿಳೆಯು ಯಾವುದೇ ಪ್ರಕಾರದಲ್ಲಿ ಬದುಕಿನೆಡೆಗೆ ಹರಿಸುವ ನೋಟವು ಅಂತಿಮವಾಗಿ ಜೀವ ಕಾರುಣ್ಯವನ್ನು ಕಾಪಿಡುವೆಡೆಗೇ ಇರುವುದನ್ನು ಕಂಡುಕೊಳ್ಳುತ್ತವೆ. ತನ್ನ ಬದುಕೇ ಒಂದು ಅಗ್ನಿದಿವ್ಯವಾಗಿರುವಾಗಲೂ, ಆಕೆ ಹಣತೆಯಾದರೂ ಆದೇನು, ಕಾಡ್ಗಿಚ್ಚು ಆಗುವುದಿಲ್ಲ, ಕಿಚ್ಚು ಹಚ್ಚುವುದೂ ಇಲ್ಲ ಎಂಬ ನಿಲುವಿನವಳೇ ಆಗುವುದನ್ನು ಗುರುತಿಸುವುದು ಕೂಡಾ ಸ್ತ್ರೀಯರೇ ಬರೆದ ವಿಮರ್ಶೆಯಲ್ಲಿರುವುದನ್ನು ಕಾಣಬಹುದು. ನಿಜ. ಇದು ಅವಳ ಇದುವರೆಗಿನ ಆದ್ಯತೆ. ಇದು ಮುಂದೆಯೂ ಹೀಗೇ ಇರಬೇಕು ಎನ್ನುವುದಾದರೆ, ಸಾಮಾಜಿಕವಾದ ವಿಷಮ ವಿಷವು ಬಹಳ ವೇಗವಾಗಿ ಅವಳೆಡೆಗೆ ದಾಳಿ ಇಡುತ್ತಿರುವುದನ್ನು ಗುರುತಿಸಿ ಸ್ವತಃ ಅವಳೇ ಆ ಉರಿಗೆ ತುತ್ತಾಗದಂತೆ ತಡೆಯಬೇಕಾದ ಜರೂರು ಇಂದು ಅತಿ ಅಗತ್ಯವಾಗಿದೆ. ಇಂತಹ ಸನ್ನಿವೇಶವೂ ನಮ್ಮ ಮುಂದಿದೆ ಎಂಬ ಎಚ್ಚರವನ್ನೂ ಈ ಲೇಖನಗಳು ಹೊಂದಿವೆ.

ಸಬಿಹಾ ಅವರ ಸಾಹಿತ್ಯದ ಅವಲೋಕನದ ಲೇಖನಗಳೂ ಕೂಡ ಇಂತಹ ಜೀವನ್ಮುಖಿ ಆಶಯವನ್ನು ಗುರುತಿಸುತ್ತವೆ. ಅವರ ಕವಿತೆಗಳು ವ್ಯಕ್ತಿನೆಲೆಯಿಂದ ಹೊರಟು ಸಮಷ್ಟಿ ನೆಲೆಗೆ ಹೊರಳಿಕೊಳ್ಳುತ್ತವೆ. ಸುತ್ತಲಿನ ಅನುಭವಗಳೇ ರೂಪಕಗಳಾಗುತ್ತವೆ. ಮೂಕವಾಗಿರುವ ಅಡುಗೆ ಮನೆಯ ವಸ್ತುಗಳು, ಪರಿಕರಗಳು ಮಾತಾಡತೊಡಗಿ ಪ್ರತಿಮೆಗಳಾಗುತ್ತವೆ. ಹೆಣ್ಣಿನ ಸ್ವಗತವೇ ಸಂಗಾತವಾಗುವ ಪರಿಯದು. ಕುಕ್ಕರ್ ಎಂಬ ಅವರ ಕವಿತೆಯು ಧ್ವನಿಸುವುದು ಇದನ್ನೇ. ತನ್ನೆಲ್ಲಾ ಒತ್ತಡವನ್ನೂ ತನ್ನವರ ಹಸಿವನ್ನು ತಣಿಸುವುದಕ್ಕೇ ಬಳಸುವ ಕುಕ್ಕರ್ ಕೂಡಾ ಒಂದು ದಿನ ಸ್ಫೋಟಿಸುವ ಸಾಧ್ಯತೆಯನ್ನೂ, ಅದನ್ನು ಗ್ರಹಿಸದ ಜಡತೆಯನ್ನೂ ಒಟ್ಟಿಗೇ ಹೇಳುವ ಕವಿತೆಯಿದು. ಅವರ ಕವಿತೆಗಳಿಗಿಂತ ಭಿನ್ನವಾಗಿ ಅವರ ಕತೆಗಳಿವೆ. ಈ ಕತೆಗಳು ಒಂದು ಸಾಮುದಾಯಿಕ ಬದುಕನ್ನು ಧ್ಯಾನಿಸುತ್ತಿರುತ್ತವೆ. ಸಂಘರ್ಷವೇ ಮೌಲ್ಯವಾಗಿ ಹೊರಳಿಕೊಳ್ಳುತ್ತಿರುವ ಅಥವಾ ಹಾಗೆ ಹೊರಳಿಸಲಾಗುತ್ತಿರುವ ಸುತ್ತಲಿನ ವಿದ್ಯಮಾನದಿಂದ ಆತಂಕಿತವಾದ ಮನಸ್ಸು, ಇದಕ್ಕೆಲ್ಲ ಹದವಾದ ನೆಲ ಇಲ್ಲೇ ಇತ್ತಲ್ಲವೇ, ಅದರ ವಿಸ್ಮೃತಿಯು ತಂದೊಡ್ಡುವ ದುರಂತಗಳೇನು ಎಂಬೆಡೆಗೆ ಹೆಚ್ಚು ಆಸಕ್ತವಾಗುತ್ತದೆ. ಕೆಡಹುವ ದೈತ್ಯ ಶಕ್ತಿಯೆದುರು, ಕಟ್ಟುವ ಮೆಲುಧ್ವನಿಯೊಂದು ಇಲ್ಲಿ ಮುನ್ನೆಲೆಗೆ ಬರುತ್ತದೆ. ಇಂದಿಗೂ ಸೌಹಾರ್ದದ ಬೇರು ಉಳಿಸಿಕೊಂಡಿರುವ ಇಲ್ಲಿಯದೇ ನೆಲದ ಜೊತೆಗೆ, ತನ್ನೊಂದಿಗೇ ಬೆಳೆಯುತ್ತ ಬಂದ ತನ್ನದೇ ಪರಿಸರದಲ್ಲಿ ಹಿಂದೆ ಇದ್ದ ಬೇರು ಇಂದು ಟೊಳ್ಳಾಗಿ ಗೆದ್ದಲು ಹಿಡಿಸಿಕೊಳ್ಳುತ್ತಿರುವುದನ್ನು ದಿಗ್ಭ್ರಾಂತಿಯಿಂದ, ಹತಾಶೆಯಿಂದ ನೋಡುತ್ತಲೇ ಒಳಿತಿಗೆ ಕನಸುವ ಮನಸ್ಸು ಇಲ್ಲಿದೆ. ಪ್ರಬಂಧಗಳೂ ಕೂಡಾ ತನ್ನ ಸುತ್ತಲಿನ ಸಣ್ಣಸಣ್ಣ ಸಂಗತಿಯನ್ನೂ ಆಹ್ಲಾದಿಸುವ, ಆ ಆಹ್ಲಾದತೆಯೇ ಪ್ರತಿ ಬದುಕಿನ ಸೆಲೆಯಾಗಲಿ ಎಂದು ಬಯಸುವ ನೆಲೆಯಲ್ಲಿರುವುದನ್ನು ಕಾಣಬಹುದು.

ಸಬಿಹಾ ಅವರ ವ್ಯಕ್ತಿತ್ವವನ್ನು ರೂಪಿಸಿದ್ದು ಸ್ತ್ರೀವಾದದ ಓದು. ಅಕಡೆಮಿಕ್ ಆಸಕ್ತಿ ಮತ್ತು ಅವಶ್ಯಕತೆಯಾಗಿ ಜೊತೆಯಾದ ಸ್ತ್ರೀವಾದವು ಅವರ ಜೀವನ ನೋಟವನ್ನು ರೂಪಿಸುತ್ತಾ ಹೋಗಿದ್ದನ್ನು ಈ ಕೃತಿಯ ಬೇರೆ ಬೇರೆ ಬರಹಗಳು ದಾಖಲಿಸುತ್ತವೆ. ಸಬಿಹಾ ಅವರು ತಾವೇ ಹೇಳಿಕೊಂಡಂತೆ ’ತಾನೊಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದು ಸುತ್ತಲನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಪ್ರಜ್ಞಾಪೂರ್ವಕವಾಗಿ ತನ್ನನ್ನು ತಾನು ಕಟ್ಟಿಕೊಳ್ಳುತ್ತಾ ಹೋದೆ’ ಎನ್ನುವ ಮಾತು ಮುಖ್ಯವಾದುದು. ಯಾಕೆಂದರೆ, ಹೆಣ್ಣನ್ನು ಪ್ರಧಾನವಾಗಿ ಆಕ್ರಮಿಸಿಕೊಳ್ಳುವುದು ಕೀಳರಿಮೆ.

ಎಲ್ಲಾ ಅಕಡೆಮಿಕ್ ವಲಯದಲ್ಲೂ ಈ ಮೂವತ್ತು ನಲವತ್ತು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡ ಹೆಂಗಸರಿಗೆ ಆರಂಭದಲ್ಲಿ ತಮ್ಮನ್ನು ಇನ್ನೊಬ್ಬರೊಂದಿಗೆ, ಅದರಲ್ಲೂ ಗಂಡಸರ ಸಾಧನೆಗಳೊಂದಿಗೆ ಹೋಲಿಕೆ ಮಾಡಿ ಕೀಳರಿಮೆಗೆ ತಳ್ಳುವುದು ಅನುಭವಕ್ಕೆ ಬಂದೇ ಇರುತ್ತದೆ. ಆ ಅಂಗಿಯ ಅಳತೆಗೆ ತಮ್ಮನ್ನು ಹೊಂದಿಸಿಕೊಳ್ಳುವುದರಲ್ಲೇ ಕೆಲವು ವರ್ಷಗಳು ಕಳೆದುಹೋಗುತ್ತವೆ. ಆಮೇಲೆಯೇ ಇದಲ್ಲ ನಾನು ಆಗಬೇಕಾಗಿರುವುದು, ನನ್ನ ಅಳತೆ ನಾನೇ ಕಂಡುಕೊಳ್ಳಬೇಕು ಎಂಬಲ್ಲಿಗೆ ಅವಳು ತನ್ನದೇ ಪಥ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದು. ಈ ಸವಾಲುಗಳು ವಿಭಾಗದಲ್ಲಿ ಉದ್ದಕ್ಕೂ ಒಬ್ಬಳೇ ಮಹಿಳೆಯಾಗಿ ತಾನು ಅನುಭವಿಸಿದ್ದನ್ನು ಅವರು ಹೇಳಿಕೊಂಡಿದ್ದಾರೆ. ಬಹುಶಃ ಅಚ್ಚುಕಟ್ಟುತನದ ಕೃತಿಯ ಮೂಲಕ ಅವರು ಇದನ್ನು ಗೆದ್ದಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸಬಿಹಾ ಅವರನ್ನೂ ಸೇರಿಸಿಕೊಂಡು ಮಹಿಳೆಯರ ಅಭಿನಂದನಾ ಗ್ರಂಥಗಳ ಭಿನ್ನ ನಡೆಗಳು ಮುಖ್ಯವಾಗಿದೆ.

ಈ ಕೃತಿಯನ್ನು ದು.ಸರಸ್ವತಿ, ಆರ್.ಸುನಂದಮ್ಮ, ಓಂಕಾರ ಕಾಕಡೆ, ಎಚ್.ಎಸ್.ಅನುಪಮಾ ಸಂಪಾದಿಸಿಕೊಟ್ಟಿದ್ದಾರೆ. ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಂಗಳೂರು ಹಾಗೂ ಕವಿ ಪ್ರಕಾಶನ, ಕವಲಕ್ಕಿಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಡಾ. ಸಬಿತಾ ಬನ್ನಾಡಿ

(ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಬಿತಾ ಅವರು ಕವಿ, ಲೇಖಕಿ ಮತ್ತು ಅಂಕಣಕಾರ್ತಿ. ’ಆಲಯವು ಬಯಲಾಗಿ’, ’ನಿರಿಗೆ’, ’ಗೂಡು ಮತ್ತು ಆಕಾಶ’ ಅವರ ಕೆಲವು ಪ್ರಕಟಿತ ಪುಸ್ತಕಗಳು.)


ಇದನ್ನೂ ಓದಿ: ಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ ‘ಒಂದು ಕುರ್ಚಿಯ ಸಾವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೊಸಹೊಸ ಚಿಂತನಶೀಲ ವಿಷಯಗಳನ್ನು
    ಒಳಗೊಂಡ ವರದಿಯನ್ನು ಪ್ರಸ್ತುತ ಪಡಿಸುವಲ್ಲಿ
    ತಮ್ಮ. ಪ್ರಯತ್ನ ಕ್ಕೆ ಧನ್ಯವಾದಗಳು .

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....