Homeಮುಖಪುಟದೆಹಲಿ ವಾಯುಮಾಲಿನ್ಯ: ಒಂದು ವಾರ ಶಾಲೆ ಬಂದ್, ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಕೇಜ್ರಿವಾಲ್...

ದೆಹಲಿ ವಾಯುಮಾಲಿನ್ಯ: ಒಂದು ವಾರ ಶಾಲೆ ಬಂದ್, ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಕೇಜ್ರಿವಾಲ್ ಆದೇಶ

- Advertisement -
- Advertisement -

ಕಳೆದೊಂದು ವಾರದಿಂದ ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಹೊಗೆ ತುಂಬಿಕೊಂಡಿದ್ದು ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಗಾಳಿಯ ಗುಣಮಟ್ಟ ಸೂಚ್ಯಂಕವು ತೀರಾ ಕೆಳಕ್ಕಿಳಿದಿರುವುದರ ಕುರಿತು ಇಂದು ಸಭೆ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ವಾರ ಶಾಲೆಗಳನ್ನು ಮುಚ್ಚಿ ಆನ್‌ಲೈನ್ ಮೂಲಕ ತರಗತಿ ನಡೆಸಲು ಆದೇಶಿಸಿದ್ದಾರೆ.

ನವೆಂಬರ್ 17ರವರೆಗೆ ಯಾವುದೇ ಕಟ್ಟಡ ಕಾಮಗಾರಿಗಳು ನಡೆಯುವಂತಿಲ್ಲ, ಒಂದು ವಾರಗಳ ಕಾಲ ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ನಿರ್ವಹಿಸಬೇಕು ಸೇರಿದಂತೆ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.

ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದು ನಿಮಗೆ ತಿಳಿದಿದೆಯೇ? ನಾವು ಮನೆಯಲ್ಲಿಯೂ ಮಾಸ್ಕ್ ಧರಿಸಬೇಕಾಗ ಪರಿಸ್ಥಿತಿ ಬಂದಿದೆ. ಇದು ರಾಜ್ಯಗಳ ಜವಾಬ್ದಾರಿ, ಇಲ್ಲ ಕೇಂದ್ರ ಜವಾಬ್ದಾರಿ ಎಂದು ನುಣಚಿಕೊಳ್ಳುವ ಸಂದರ್ಭದ ಇದಲ್ಲ. ಕೂಡಲೇ ಪಂಜಾಬ್ ಹರಿಯಾಣ ರಾಜ್ಯಗಳೊಂದಿಗೆ ತುರ್ತು ಸಭೆ ನಡೆಸಿ. ಮುಂದಿನ ಎರಡು ಮೂರು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಎಂದು ನಮಗೆ ಅನ್ನಿಸುವ ರೀತಿ ಕ್ರಮ ಕೈಗೊಳ್ಳಿ ಎಂದು ಸಿಜೆಐ ರಮಣ ಕೇಂದ್ರ ಮತ್ತು ರಾಜ್ಯಗಳಿಗೆ ಸೂಚಿಸಿದ್ದರು.

ಮಕ್ಕಳು ಉಸಿರಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಂದು ವಾರ ಆನ್‌ಲೈನ್ ತರಗತಿಗಳು ನಡೆಯಲಿ. ಸರ್ಕಾರಿ ಕಚೇರಿಗಳು 100% ಮನೆಯಿಂದಲೇ ಕೆಲಸ ನಿರ್ವಹಿಸಲಿ. ಖಾಸಗಿ ಕಂಪನಿಗಳು ಸಹ ಇದನ್ನೆ ಅನುಸರಿಸಿದರೆ ಒಳ್ಳೇಯದು. ಸುಪ್ರೀಂ ಕೋರ್ಟ್ ಎದುರು ಲಾಕ್‌ಡೌನ್ ಪ್ರಸ್ತಾಪವನ್ನು ಮಂಡಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ, ಗುರುಗಾವ್, ನೋಯ್ಡಾ ಸೇರಿದಂತೆ ಹಲವು ನಗರಗಳಲ್ಲಿ ಹವಾಮಾನ ತೀವ್ರ ಹದಗೆಟ್ಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಸಂಜೆ 6.30ಕ್ಕೆ ದೆಹಲಿಯಲ್ಲಿ ಒಟ್ಟಾರೆ ಎಕ್ಯೂಐ 427 ಆಗಿದೆ.

ಶುಕ್ರವಾರದ ದೆಹಲಿಯ ಪರಿಸ್ಥಿತಿ ಈ ಅವಧಿಯಲ್ಲಿಯೇ ಅತಿ ಕೆಟ್ಟ ಪರಿಸ್ಥಿತಿ ತಲುಪಿತ್ತು. ಪರಿಸ್ಥಿತಿ ಗಂಭೀರತೆ ನಮಗೆ ಅರ್ಥವಾಗಿದೆ. ದೆಹಲಿಯ ಗಾಳಿಯನ್ನು ಉಸಿರಾಡುವುದು ದಿನಕ್ಕೆ 20 ಸಿಗರೇಟ್ ಸೇದುವಂತೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಕವು ಜನರು ಮನೆಯಲ್ಲಿಯೇ ಇರುವಂತೆ ಸೂಚಿಸಿದೆ.


ಇದನ್ನೂ ಓದಿ: ದೆಹಲಿಯಲ್ಲಿ ಹದಗೆಟ್ಟ ಗಾಳಿ ಪರಿಸ್ಥಿತಿ ಸುಧಾರಿಸಲು 2 ದಿನ ಲಾಕ್‌ಡೌನ್? – ಸುಪ್ರೀಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...